Latest posts by ಬೊಳುಂಬು ಮಾವ° (see all)
- ಉಪ್ಪುಸೊಳೆಯ ಸುತ್ತ - May 1, 2020
- ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ” - May 1, 2017
- ಶಪಥಪರ್ವ – ಕ್ಯಾಮರಲ್ಲಿ - October 9, 2016
ನಿನ್ನೆ ಕೊಡೆಯಾಲದ ಪುರಭವನಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯವರ ಯಕ್ಷತ್ರಿವೇಣಿಯ ಎರಡನೆಯ ದಿನದ ಕಾರ್ಯಕ್ರಮ ನೆಡದತ್ತು. ಅದರಲ್ಲಿ ಪಂಚವಟಿ ಪ್ರಸಂಗ ಭರ್ಜರಿ ಆತು. ಭಾಗವತರು, ಹಿಮ್ಮೇಳ, ರಾಮ ಲಕ್ಷಣ ಸೀತೆ, ಶಾರ್ಪ್ ಉಗುರಿನ ಶೂರ್ಪನಖಿ, ಸುಂದರ ಮುಖದ ಶೂರ್ಪನಖಿ ಎಲ್ಲೋರು ಚೆಂದಕೆ ಪಂಚವಟಿಗೆ ರಂಗು ತುಂಬಿದವು. ಆನು ಸಭೆಲಿ ರಜಾ ಹಿಂದೆ ಕೂದ ಕಾರಣ ಹೆಚ್ಚು ಲಾಯಕಿನ ಫೊಟೋ ತೆಗವಲಾತಿಲ್ಲೆ. ಆನು ತೆಗದ ಪಂಚವಟಿಯ ಕೆಲವು ನೋಟಂಗೊ ಇಲ್ಲಿದ್ದು. ಶೂರ್ಪನಖಿಯ ರೌದ್ರ, ಮಾಯಾ ಶೂರ್ಪನಖಿಯ ಲಾಸ್ಯ, ಅದು ಕನ್ನಟಿಲಿ ಮೋರೆ ನೋಡುವದು, ರಾಮ ಬೆನ್ನಿಲ್ಲಿ ಬರದ್ದರ ಲಕ್ಶ್ಮಣಂಗೊ ತೋರುಸುವದು, ಲಕ್ಷ್ಮಣ ಅದರ ಮೂಗು ಕೊಯಿವದು ಎಲ್ಲ ಸೀನುಗಳುದೆ ಇಲ್ಲಿದ್ದು. ಹೆಚ್ಚಿನ ವಿವರ ಸುವರ್ಣಿನಿಯಕ್ಕ ಕೊಡುಗು.
ಲಾಯಕಾಯ್ದು ಭಾವಾ. ಪುಕ್ಕಟೆ ಯಕ್ಷಗಾನ ನೋಡಿದಾ೦ಗೆ ಆತನ್ನೇ 🙂
ಅಲ್ಲಿಗೆ ಬಂದಿದ್ದರೆ ಇನ್ನೂ ಚೆಂದಕೆ ನೋಡ್ಳಾವ್ತಿತು ನಿನಗೆ. ಅಲ್ಲಿ ಟಿಕೇಟು ಎಂತೂ ಮಡಗಿದ್ದವಿಲ್ಲೆ. ಫ್ರೀ. . . . .
ಒ೦ದು ಸಲ ಬರೆಕ್ಕು ಮಾವಾ. ಅಂಬಾಗ ಯೆನ್ನ ಪಟವೂ ಬಕ್ಕನ್ನೇ ಇಲ್ಲಿ.. 😉
ಬಂದಷ್ಟು ಪಟಂಗೊ ಒಪ್ಪ.