Latest posts by ಬಂಡಾಡಿ ಅಜ್ಜಿ (see all)
- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ಶೀತ-ಗೆಂಟ್ಳುಬೇನೆ ಆವುತ್ತ ಸೂಚನೆ ಇಪ್ಪಾಗಳೇ ಹಾಲಿಂಗೆ ರಜ ಅರಿಶಿನ ಹೊಡಿ ಹಾಕಿ ಬೆಶಿಮಾಡಿ ಕುಡಿಯೆಕು. ಮಕ್ಕೊಗೆ ಚೀಪೆ ಆಯೆಕಾರೆ ಒಂದು ರಜ ಬೆಲ್ಲ ಹಾಕಲಕ್ಕು. ದಿನಲ್ಲಿ ಮೂರ್ನಾಕು ಸರ್ತಿ ಕುಡಿಯೆಕು ಇದರ. ಕಾಪಿ ಚಾಯ ಕುಡಿವ ಹೊತ್ತಿಂಗೆಲ್ಲ ಇದರನ್ನೇ ತೆಕ್ಕೊಂಡ್ರಾತು, ಅಲ್ದೋ..?
ಹೇಳಿದಾಂಗೆ ಅರಿಶಿನ ಹೊಡಿ, ಕೊಡೆಯಾಲಂದ ತಪ್ಪದರಿಂದಲೂ ಮನೆಲೆ ಮಾಡಿದ್ದದಾದರೆ ಒಳ್ಳೆದು. ನೆಟ್ಟ ಅರಿಶಿನ ಡಿಸೆಂಬರು ಅಕೇರಿ-ಜನವರಿ ಮದಲಿಂಗಪ್ಪಗ ಸಾಯ್ತು. ಅಂಬಗ ಅದರ ಒಕ್ಕಿ, ಲಾಯಿಕ ತೊಳವದು. ನೀರು ಆರಿಯಪ್ಪಗ ಕೊರದು, ಪಲ್ಲೆ ಪಲ್ಲೆ (ತೆಳೂವಿಂಗೆ) ಮಾಡಿ ಒಣಗ್ಸುದು. ಅಲ್ಲದ್ರೆ, ಸೆಕೆ ಬರುಸಿ ಒಣಗ್ಸುದು. ಅದರನ್ನೆ ಗುದ್ದಿ ಹೊಡಿಮಾಡಿ ಮಡಿಕ್ಕೊಂಡ್ರಾತು. ಬಂಡಾಡಿ ಮಜಲಿಲಿ ಬೆಳೆಶುಲಿದ್ದು ಪ್ರತೀ ವರ್ಷ. ಇತ್ಲಾಗಿ ಬಂದರೆ ಕೊಡ್ಳಕ್ಕು ಆತೋ..?
ಅರಿಶಿನ ಹಾಲು ಅಷ್ಟು ಕುಡುದರೆ ಉಷ್ಣ ಆಗದಾ?
ಶೀತಕ್ಕೆ ಉಷ್ಣವೇ ಅಯೆಕ್ಕು
Kudidu nodeku. Ondu vaaranda ona kemmu iddu 🙁
gena menasina kashayanda akku edu.
ಹ್ಹೆ ಹ್ಹೆ ಎಂತ ಪುಟ್ಟೊ… ಗೆಣ ಮೆಣಸಿನ ಕಷಾಯ ಕಾರ ಆವುತ್ತೋ…? ಪುಳ್ಯಕ್ಕೊ ಎಲ್ಲ ಹೀಂಗೇ ಕಷಾಯ ಕಂಡ್ರೆ ಮೈಲು ದೂರ ಓಡುಗು. ಅದಕ್ಕೇ ಇದರ ಮಾಡಿಕೊಡುದು.