Oppanna.com

ಕಣ್ಣಿಲಿ ಕುರು ಅಪ್ಪದಕ್ಕೆ ಮದ್ದು

ಬರದೋರು :   ಬಂಡಾಡಿ ಅಜ್ಜಿ    on   11/11/2013    8 ಒಪ್ಪಂಗೊ

ಮದ್ದಿನ ಸೆಸಿಕಣ್ಣು ನಮ್ಮ ದೇಹದ ಬಹು ಮುಖ್ಯವಾದ ಅಂಗ. ಕಣ್ಣಿಂಗೆ ಸಣ್ಣ ಕಸವು ಬಿದ್ದರೂ ತಡವಲೆ ಎಡಿತ್ತಿಲ್ಲೇ.ಕಣ್ಣಿನ ರೆಪ್ಪೆಯ ಬುಡಲ್ಲಿ ಒಂದೊಂದ್ಸರ್ತಿ ಸಣ್ಣ ಕುರು ಆವ್ತು.ಇದು ತುಂಬಾ ಬೇನೆಂದ ಕೂಡಿರ್ತು.ಈ ರೀತಿಯ ಕುರು ಕಮ್ಮಿ ಅಪ್ಪಲೆ ಒಂದು ಸುಲಾಭಲ್ಲಿ ನವಗೆ ಸಿಕ್ಕುವಾಂಗಿಪ್ಪ ಹಳ್ಳಿ ಮದ್ದಿನ ಬೈಲಿಲಿ ಒಂದು ಶುದ್ಧಿಯಾಗಿ ಹೇಳ್ತೆ.
ಇದೊಂದು ಹುಲ್ಲಿನ ಹಾಂಗೆ ಕಾಂಬ ಸೆಸಿ.ಬಳ್ಳಿಯ ಹಾಂಗೆ ನೆಲಲ್ಲಿ ಹಬ್ಬುತ್ತು. ಇದರಲ್ಲಿ ಆಕಾಶ ನೀಲಿ ಬಣ್ಣದ ಸಣ್ಣ ಹೂಗು ಆವ್ತು.ಸೆಸಿಯ ದಂಡಿನ ಮುರುದು ಒತ್ತಿಯಪ್ಪಗ ಬಪ್ಪ ಎಸರಿನ ಕಣ್ಣು ಬೇನೆ ಇಪ್ಪ ಜಾಗೆಗೆ ಕಿಟ್ಟೆಕ್ಕು.ಕಿಟ್ಟಿಯಪ್ಪಗ ಸಣ್ಣಕೆ ತೊರುಸುಗು.ಸಣ್ಣಕೆ ಉರಿವಲೂ ಸಾಕು. ಆದರೆ ತಡವಲೆ ಎಡಿಗಪ್ಪ ಹಾಂಗೆ ಇರ್ತು.ದಿನಲ್ಲಿ ಎರಡು ಅಥವಾ ಮೂರು ಸರ್ತಿ ಕಿಟ್ಟಿದರೆ ಮೂರು ಅಥವಾ ನಾಲ್ಕು ದಿನಲ್ಲಿ ಕಮ್ಮಿ ಆವ್ತು. ಈ ಸೆಸಿಯ ಹೆಸರು ಎನಗೆ ಗೊಂತಿಲ್ಲೆ. ಗೊಂತಿಪ್ಪವು ಈ ಚಿತ್ರವ ಗುರುತಿಸಿ ಹೇಳುವಿರಾ?
ಸುಮಾರು ಇಪ್ಪತ್ತೈದು ವರ್ಷದ ಹಿಂದೆ ಆಚಕರೆ ಶಂಕರಪ್ಪಚ್ಚಿ ಮನಗೆ ಬಂದಿಪ್ಪಗ ಎಂಗಳ ಮಗಳಿಂಗೆ ಹೀಂಗೇ ಕಣ್ಣು ಬೇನೆ ಆದಿಪ್ಪಗ ಈ ಮದ್ದಿನ ಬಗ್ಗೆ ಹೇಳಿತ್ತವು.ಎಂಗೊಗೆ ಇದು ಒಳ್ಳೆ ಪ್ರಯೋಜನ ಆಯಿದು.ನೆರೆಕರೆಯವಕ್ಕೆ,ಗುರ್ತದವಕ್ಕೆ ಈ ಮದ್ದಿನ ತಿಳಿಶಿದ್ದೆಯ.ಒಳ್ಳೆಯ ಮದ್ದು ಹೇಳುವ ಮಾತು ಹೇಳಿ ಕೇಳಿ ಬಯಿಂದು. ಕಣ್ಣು ತೊರುಸುದಕ್ಕೆ ಕಣ್ಣಿಲಿ ನೀರು ಬಪ್ಪದಕ್ಕೆ ಈ ಮದ್ದು ತುಂಬಾ ಗುಣ ಕೊಡ್ತು. ಈ ರೀತಿಯ ಕಣ್ಣು ಬೇನೆಗೆ ಗ್ರಾಮ್ಯವಾಗಿ ಕಣ್ಣಕಳುವ ಹೇಳಿಯೂ ಹೇಳುದರ ನಿಂಗ ಕೇಳಿಪ್ಪಲೂ ಸಾಕು. ಇದು ಹೆಚ್ಚಾಗಿ ಗೆದ್ದೆ ಕರೇಲಿ ತೋಟಲ್ಲಿ ಹೆಚ್ಚು ನೀರ ಪಸೆ ಇಪ್ಪ ಜಾಗೆಲಿ ಕಾಂಬಲೆ ಸಿಕ್ಕುತ್ತು.

8 thoughts on “ಕಣ್ಣಿಲಿ ಕುರು ಅಪ್ಪದಕ್ಕೆ ಮದ್ದು

  1. ನಮ್ಮ ಈ ಬೈಲಿಲಿ ಒಂದು ನಾಲ್ಕೈದು ಜೆನ ಡಾಕುಟ್ರುಗ ಇತ್ತಿದ್ದವು… ಈಗ ಒಬ್ಬನನ್ನೂ ಕಾಣ್ತಿಲ್ಲೆ…. 🙁

  2. ಉಗುರಿನಕೊಡಿಲಿ ಕೆಮಿಂದ ಕಲ್ಮಶ ತೆಗದು ಇಡ್ಕುಲಕ್ಕು… ಆದರೆ ಮದು ಕೈಟಬರು ಹುಟ್ಟಿದರೆ ಹೇಳಿ ಹೆದರಿಕೆ… 😉

    1. ಶಾಮಣ್ಣಾ ,ಹಾಂಗೆಲ್ಲಾ ಎಲ್ಲಾದರೂ ಮಾಡಿಕ್ಕೆಡಿ ಮಿನಿಯಾ..ಇಲ್ಲಿ ಮಧು ಕೈಟಭರಿಂದಲುದೆ ಮೇಗಾಣವು ಇದ್ದವು ,(ಇಲ್ಲಿ ಕಾಸರಗೋಡಿಲಿ)

  3. ಕೆಮಿ ಒಳ ತೊರುಸುದಕ್ಕೆ ಎಂತಾರೂ ಮದ್ದಿದ್ದಾ?

  4. ದನ ಕರವಗ ಬೆಶಿ (ಫ್ರೆಶ್) ಹಾಲಿನ ನೊರೆ ಎರಡು ದಿನ ಎರಡು ಹೊತ್ತು ಕಿಟ್ಟಿದರೆ ಗುಣ ಆವುತ್ತು.

  5. ಎಂಗಳ ಊರಿಲಿ ಇನ್ನೊಂದು ಮದ್ದು ಬಳಕೆಲಿ ಇದ್ದು,ಹಾಡೆ ಸೊಪ್ಪಿನ ಗೂಂಚಿ ಅದರ ಗೊಂಪಿನ ಸೊಪ್ಪು ಸಮೇತ ಕಣ್ನು ಮುಚ್ಚಿ ರೆಪ್ಪೆಯ
    ಮೇಗೆ ಮಡುಗೆಕು.ಇದು ತುಂಬಾ ಪ್ರಯೋಜನಕಾರಿ ಮದ್ದು.

  6. ಈ ಹುಲ್ಲಿನಾಂಗೆ ಕಾಂಬ ಸೆಸಿಯ ಕಂಡಾಂಗೆ ಆವ್ತನ್ನೇ. ಮದ್ದಿಂಗಾವ್ತು ಹೇದು ಗೊಂತಿತ್ತಿಲ್ಲೆ. ಇದರ ಹೆಸರು – ಎನಗೊಂತಿಲ್ಲೆ
    ಶುದ್ದಿಗೊಂದು ಖಂಡಿತ ಒಪ್ಪ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×