Latest posts by ಗಣೇಶ ಮಾವ° (see all)
- ಸಪ್ತಪದಿ - August 1, 2011
- 15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ - June 15, 2011
- ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ - April 2, 2011
ಬಟ್ಟಮಾವನ ಮಾತಾಡ್ಸದ್ದೆ ಸುಮಾರು ದಿನ ಆತು.
ಆಟಿ ತಿಂಗಳು ಹೊಡಾಡಿಕೆ ಉತ್ಥಾನಕ್ಕೆ ಒಂದರಿ ಹೋಗಿತ್ತೆ. ಅಂಬಗ ಬೈಲಿಂಗೆ ಒಂದು ವಿಷಯ ಕೊಡುವಿರೋ ಹೇಳಿ ಕೇಳಿದ್ದಕ್ಕೆ – ಇಂದು ಗೋಕರ್ಣ ಮುದ್ರೆಯ ಬಗ್ಗೆ ಹೇಳ್ತೆ ಹೇಳಿದವು..
ಗೋಕರ್ಣ ಮುದ್ರೆ ಹೇಳಿರೆ, ನಾವು ಯಾವುದೇ ಧಾರ್ಮಿಕ ಕಾರ್ಯ ಮಾಡುವಾಗ ದೇವರ ಸ್ವರೂಪಂಗಳ ಮುದ್ರೆಯ ಮೂಲಕ ಮಾಡುವ ಪದ್ಧತಿ ಇದ್ದು. ಮುದ್ರೆ ಮತ್ತೆ ಮಂತ್ರಂಗ ಒಂದೇ ನಾಣ್ಯದ ಎರಡು ಮುಖಂಗ.
ಅದರಲಿ ಗೋಕರ್ಣ ಮುದ್ರೆ ಹೇಳಿರೆ ಎಂತರ ಹೇಳಿ ಹೇಳ್ತೆ – ದನದ ಕೆಮಿ ಹೇಳಿರೆ ಗೋಕರ್ಣ ಹೇಳಿ ಅರ್ಥ.
ನಾವು ತೀರ್ಥ ಪ್ರಾಶನ,ಆಚಮನ,ಅಥವಾ ವೈದಿಕ ,ಆಯುರ್ವೇದ ಸಂಬಂಧವಾದ ಯಾವುದೇ ಪ್ರಾಶನಂಗ ಇದ್ದರೆ ಅದರ ಗೋಕರ್ಣ ಮುದ್ರೆಲಿ ತೆಕ್ಕೊಳೆಕ್ಕು ಹೇಳಿ ಮುದ್ರಾ ಸಂಹಿತೆಲಿ ಹೇಳಿದ್ದವು.
ಆಟಿ ತಿಂಗಳು ಹೊಡಾಡಿಕೆ ಉತ್ಥಾನಕ್ಕೆ ಒಂದರಿ ಹೋಗಿತ್ತೆ. ಅಂಬಗ ಬೈಲಿಂಗೆ ಒಂದು ವಿಷಯ ಕೊಡುವಿರೋ ಹೇಳಿ ಕೇಳಿದ್ದಕ್ಕೆ – ಇಂದು ಗೋಕರ್ಣ ಮುದ್ರೆಯ ಬಗ್ಗೆ ಹೇಳ್ತೆ ಹೇಳಿದವು..
ಗೋಕರ್ಣ ಮುದ್ರೆ ಹೇಳಿರೆ, ನಾವು ಯಾವುದೇ ಧಾರ್ಮಿಕ ಕಾರ್ಯ ಮಾಡುವಾಗ ದೇವರ ಸ್ವರೂಪಂಗಳ ಮುದ್ರೆಯ ಮೂಲಕ ಮಾಡುವ ಪದ್ಧತಿ ಇದ್ದು. ಮುದ್ರೆ ಮತ್ತೆ ಮಂತ್ರಂಗ ಒಂದೇ ನಾಣ್ಯದ ಎರಡು ಮುಖಂಗ.
ಅದರಲಿ ಗೋಕರ್ಣ ಮುದ್ರೆ ಹೇಳಿರೆ ಎಂತರ ಹೇಳಿ ಹೇಳ್ತೆ – ದನದ ಕೆಮಿ ಹೇಳಿರೆ ಗೋಕರ್ಣ ಹೇಳಿ ಅರ್ಥ.
ನಾವು ತೀರ್ಥ ಪ್ರಾಶನ,ಆಚಮನ,ಅಥವಾ ವೈದಿಕ ,ಆಯುರ್ವೇದ ಸಂಬಂಧವಾದ ಯಾವುದೇ ಪ್ರಾಶನಂಗ ಇದ್ದರೆ ಅದರ ಗೋಕರ್ಣ ಮುದ್ರೆಲಿ ತೆಕ್ಕೊಳೆಕ್ಕು ಹೇಳಿ ಮುದ್ರಾ ಸಂಹಿತೆಲಿ ಹೇಳಿದ್ದವು.
ಅಂಗುಷ್ಠಾಗ್ರಂ ಸಮಾಕುಂಚ್ಯ ಮಧ್ಯಮಾ ಮಧ್ಯ ಪರ್ವಣೀ |
ಮಧ್ಯಮಾoಗುಲಿಭಿಸ್ತಸ್ಯ ತದ್ಗೋಕರ್ಣಂ ಪ್ರಚಕ್ಷತೀ ||
ಮಧ್ಯಮಾoಗುಲಿಭಿಸ್ತಸ್ಯ ತದ್ಗೋಕರ್ಣಂ ಪ್ರಚಕ್ಷತೀ ||
ಹೇಳಿರೆ, ನಮ್ಮ ಬಲದ ಕೈಯ ಮಧ್ಯಮ ಬೆರಳಿನ ಮಧ್ಯಕ್ಕೆ ಹೆಬ್ಬರಳಿನ ಜೋಡ್ಸಿಅಪ್ಪಗ ಗೋಕರ್ಣ ಮುದ್ರೆ ಹೇಳಿ ಆವ್ತು.
ಈ ಗೋಕರ್ಣ ಮುದ್ರೆಲಿ ಪ್ರಾಶನ ಮಾಡುವಾಗ ಕೈ ಮಧ್ಯಂದ ಪ್ರಾಶನ ಮಾಡ್ಲೆ ಆಗ.
ಪ್ರಾಶನ ಮಾಡುವಾಗ ಶಬ್ದ ಮಾಡ್ಲೆ ಆಗ.
ಅಂಗುಷ್ಠ ಬೆರಳಿನ ಬುಡಂದ ಪ್ರಾಶನ ಮಾಡೆಕ್ಕು.
ಪ್ರಾಶನ ಮಾಡುವಾಗ ಶಬ್ದ ಮಾಡ್ಲೆ ಆಗ.
ಅಂಗುಷ್ಠ ಬೆರಳಿನ ಬುಡಂದ ಪ್ರಾಶನ ಮಾಡೆಕ್ಕು.
ಇನ್ನು ತೀರ್ಥ ತೆಕ್ಕೊಂಬಗ ಕೈ ಒಂದರಿ ನೋಡಿಕ್ಕಿ ಆತೋ?
ಸಂಧ್ಯಾವಂದನಂ ಮಂತ್ರ ಬೇಕಾಗಿತ್ತು… ದಯಮಾಡಿ ಸಹಾಯ ಮಾಡಿ ? ನಾನು ದಿನಕ್ಕೆ 2 ಸಮಯ ಸಂಧ್ಯಾವಂದನಂ ಮಾಡುತಿದ್ದು, ಚಿಕ್ಕವನಿರುವಾಗ ಏನು ಕಲಿತಿದ್ನೋ, ನೆನಪಿರುವಸ್ಟು ವಿಧಾನದಲ್ಲಿ ಮಾಡುತಿದ್ದೇನೆ.. I think 85% ಸರಿಯಾದ ಕ್ರಮದಲ್ಲೇ ಮಾಡುತಿದ್ದೇನೆ ಅನ್ನಿಸುತ್ತೆ… ಆದ್ರೆ ಅನುಮಾನಿಸುತಿದ್ದೇನೆ. ದಯಮಾಡಿ ಸಹಾಯ ಮಾಡಿ
ಮಾಹಿತಿ ಲಾಯಕ್ಕಿದ್ದು.
ಏ ಗಣೇಶ ಮಾವ,
ಮಾವ, ಭಾವ, ಅಪ್ಪಚ್ಚಿ,ಅಣ್ಣ, ತಮ್ಮ, ಅತ್ತೆ, ಅಕ್ಕ ತಂಗೆಕ್ಕೊ ಎಲ್ಲಾ ಆನು ಬೈಲಿಲಿ ನಡವಗ ಜಾಲಿಂದಲೇ ಬಗ್ಗಿ ನೋಡುತ್ತಾ ಇದ್ದವು.ಎನ್ನ ಗುರ್ತ ಎಲ್ಲೋರಿಂಗೆ ಇರ. ದೆನಿಗೋಳಿ ಈಗಳೇ ಹೇಳಿಗುತೆ; = ಎನ್ನ “ಸುಬ್ಬಣ್ಣ”,”ಜೋಇಷರು” ಹೇಳಿ ಎಲ್ಲಾ ದೆನಿಗೋಳುತ್ತವು.ಕುಂಬ್ಳೆ ಸೀಮೆಯ ಪೆರ್ಲದ ಹತ್ರೆ ಒರುಂಬುಡಿಲಿ ಇಪ್ಪದು. ಕೊಳೆಂಜಿಗೆ ಇಳುದು ಡಿಗುರಿ ಆಯಿದು.ಮತ್ತೆ ಗೆದ್ದೆ ಕೊಳಂಜಿಗೇ ಇಳುದ್ದದು.ಈಗ “ವಾಸ್ತು ಶಕ್ತಿ ವಿಜ್ನಾನ” ಹೇಳಿಗೊಂಡು ಕಾಲಿಂಗೆ ಚಕ್ರ ಕಟ್ಟಿದ್ದೆ. ಮದಲಿಂದಲೇ ನಮ್ಮ ಶಾಸ್ತ್ರಂಗಳ ಕೆಣಿ ಎಂತಾ ? ಹೇಳಿ ತಿಳಿವ ಕುತೂಹಲ, ಈಗ ಅದು ಸಾರ್ಥಕ ಆವುತ್ತ ಇದ್ದು.ಒಪ್ಪಣ್ಣನ ಬೈಲಿಂಗೆ ಬಂದು ಕೇಳಿದ್ದದರ-ಗೊಂತಿಪ್ಪದರ ಹೇಳುಲಕ್ಕು; (ಗುರಿಕ್ಕಾರ ಒಪ್ಪಿದರೆ).
Subbayya Bhat
Varmudi Hosamane
PO Perla-671552
Kasaragod dt
Ph: 09645 31 64 11 ; 09449 90 36 52
email: vsb.ssuthra@gmail.com (Proff)
subbayyabhat@gmail.com (Perso)
subbayyabhat@yahoo.com (Perso)
http://www.mudrasforhealing.com/mudras.php ಹೀಂಗೆ ಹುಡುಕ್ಕುವಗ ಒಂದು ಸಂಕೊಲೆ ಸಿಕ್ಕಿತ್ತು…ಅದರ ನೋಡಿಕ್ಕಿ ಆಗದಾ….
ಇವರ ಪುಸ್ತಕವೂ ಇದ್ದು ಮಾವ°
“ಸುಬ್ಬಯ್ಯ ಭಟ್ಟ ವರ್ಮುಡಿಹೊಸಮನೆ” = ಸುರೂ ಬರವಗ ಅಕ್ಷರ ತಪ್ಪು ಆವುತ್ತಲ್ಲದೊ? ತಿದ್ದಿ ಓದಿಕ್ಕಿ.ಒಪ್ಪಣ್ಣನ ಬೈಲಿಂಗೆ ಸುರೂ ಇಳಿವದಿದ.
ಅಪ್ಪು,ನಿಂಗ ಹೇಳಿದ್ದು ಸರಿ.ತ್ರಿಪುಂಡ್ರ ರೇಖೆ ಹಾಕುಗ ಸುರುವಿಂಗೆ ಪವಿತ್ರ,ತೋರು ಬೆರಳು ಸೇರ್ಸಿ ಉತ್ತರಂದ ದಕ್ಷಿಣಕ್ಕೆ ಮಧ್ಯ ಬೆರಳು ಬಿಟ್ಟು ಹಾಕೆಕ್ಕು.ಮತ್ತೆ ಹೆಬ್ಬೆರಳು ಉಪಯೋಗಿಸಿಗೊಂಡು ದಕ್ಷಿಣ ದಿಕ್ಕಿಂದ ಉತ್ತರಕ್ಕೆ ರೇಖೆ ಹಾಕೆಕ್ಕು.ಅಷ್ಟೊತ್ತಿಂಗೆ ತ್ರಿಪುಂಡ್ರ ರೇಖೆ ಆವ್ತು. ನಿಂಗೋಗೆ ಬೈಲಿಂಗೆ ಸ್ವಾಗತ…ಅಂಬಗಂಬಗ ಬೈಲಿಂಗೆ ಬಂದುಗೊಂಡಿರಿ..ಹಾಂಗೆ ನಿಂಗಳ ಕಿರು ಪರಿಚಯವ ಬೈಲಿಲಿ ತಿಳಿಶುತ್ತೀರೋ?
ಗಣೇಶ ಮಾವ, ತ್ರಿಪುನ್ಡ್ರ ಹಾಕುವಗ ಮಧ್ಯದ ಬೆರಳು ಬೇಡ ಹೇಳಿ ಕಾಣುತ್ತು.ಪವಿತ್ರ,ತೋರು ಬೆರಳುಗಳ ಉಪಯೋಗ್ಸಿ ಎಡಂದ ಬಲಕ್ಕೆ,ಈ ಎರಡರ ಮಧ್ಯಲ್ಲಿ ಬಲಂದ ಎಡಕ್ಕೆ ಭಸ್ಮವ ತ್ರ್ಯಂಬಕ ಮನ್ತ್ರಂದ ಅಭಿಮನ್ತ್ರಣ ಮಾಡಿ ಹಾಕುದೋ ಹೇಳಿ ಕಾಣುತ್ತು.ತಪ್ಪಿದ್ದರೆ ತಿದ್ದಿ ಬರದಿಕ್ಕಿ.
Theertha ellinda kudiyakku? Enage artha ayiddille.
Chandana, kumkuma, vibhuthi mukhakke hakuvaga yava beralu upayogisekku?
Theertha kudida mele, thalege kai hakallaga adu nijavo?
ನಮ್ಮ ಬಲದ ಕೈಯ ಗೆಂಟು ಇದ್ದಲ್ದಾ?ಅದರಿಂದ ರಜ್ಜ ಮೇಗೆ.ಹೆಬ್ಬೆರಳು ಸುರು ಅಪ್ಪಲ್ಲಿಂದ=ಅಂಗುಷ್ಠಾಗ್ರಂ,
ಹೆಚ್ಚಾಗಿ ಗೆಂಡು ಮಕ್ಕಗೆ ತ್ರಿಪುಂದ್ರ ರೇಖೆ ಹಾಕೆಕ್ಕು ಹೇಳಿ ಹೇಳ್ತವು…ತ್ರಿಪುಂದ್ರ ಹೇಳಿರೆ ಮೂರು ಬೆರೆಳಿಲಿ ಹಾಕುವನ್ಥಾದ್ದು.ಪವಿತ್ರ,ಮಧ್ಯಮ,ತೋರು ಬೆರಳು.
ಹೆಮ್ಮಕ್ಕ ಬೊಟ್ಟು ಹಾಕುವಾಗ ಪವಿತ್ರ ಬೆರಳು ಮತ್ತೆ ಹೆಬ್ಬೆರಳು ಸೇರ್ಸಿ ಹಾಕೆಕ್ಕು…ಹೆಮ್ಮಕ್ಕೊಗೆ ಒಂದೇ ರೇಖೆ,ಗೆಂಡು ಮಕ್ಕೊಗೆ ಮೂರು ರೇಖೆ ಮಾಡಿ ಹಣೆಲಿ ಧಾರಣೆ ಮಾಡ್ತಾ ಕ್ರಮ…
ತೀರ್ಥ ಕುಡುದ ಮೇಲೆ ತಲಗೆ ಹಾಕುಲೆ ಆಗ,ತಲಗೆ ಹಾಕುವದರ ಕುಡಿವಲೂ ಆಗ.ಶಿವನ ಅಭಿಷೇಕ ತೀರ್ಥ ಪ್ರೋಕ್ಷಣೆ,ವಿಷ್ಣುವಿನ ಅಭಿಷೇಕ ತೀರ್ಥ ಪ್ರಾಶನ..ಅದಕ್ಕಾಗಿ ಪಂಚಾಯತನ ಪೂಜಾ ಪದ್ಧತಿಲಿ ರುದ್ರ ಹೇಳಿದ ಮೇಲೆ ಪುರುಷಸೂಕ್ತ ಹೇಳುವ ಕ್ರಮ ಬಂತು.
ತೀರ್ಥ ಕುಡುದ ಮೇಲೆ ತಲಗೆ ಪ್ರೋಕ್ಷಣೆ ಮಾಡಿದರೆ ಶರೀರ ಅಶುದ್ಧಿ ಆವ್ತು..ಎಂಜಲು ಕೈ ತಲಗೆ ಮಡುಗಿದ ಹಾಂಗೆ ಆವ್ತು…
ಆದರಿಂದ ಪೂಜಾ ಕ್ರಮಲ್ಲಿ ಪ್ರಸಾದ ವಿತರಣೆ ಮಾಡುವಾಗ ಬಟ್ಟ ಮಾವ ತೀರ್ಥ ನವಗೆ ಕುಡಿವಲೆ ಕೊಟ್ಟ ಮೇಲೆ ಒಂದು ಸಕ್ಕಣ ನೀರು ನಾವು ತೀರ್ಥ ಕುಡುದ ಕೈಗೆ ಹಾಕುತ್ತವು…
ಒಂದು ವೇಳೆ ಅವಕ್ಕೆ ಅದು ಬಿಟ್ಟು ಹೋದಲ್ಲಿ ನಮ್ಮ ಶರೀರವ ಶುದ್ಧಿ (ತೀರ್ಥ ಕುಡುದ ಕೈಗೆ ನೀರು ಮುಟ್ಸಿಗೊಂಡು) ಮಾಡಿಗೊಂಡು ನಟರ ಹೋಗು,ತಿಂಬ ಪ್ರಸಾದ ಸ್ವೀಕಾರ ಮಾಡೆಕ್ಕು.
ಒಳ್ಳೆ ಪ್ರಶ್ನೆ ಕೇಳಿದ್ದಿ..ಧನ್ಯವಾದ…ಚಿಂತನದ ಮಥನ ಆದರೆ ಮಾತ್ರ ಸಮಾಜಲ್ಲಿ ನಮ್ಮ ಹಿರಿಯವು ಆಚರಣೆ ಮಾಡಿಗೊಂಡು ಇದ್ದ ಪದ್ಧತಿಗಳ ನವಗೆ ಅರ್ಥ ಮಾಡ್ಲೆ ಸಾಧ್ಯ
ಸಮಯೋಚಿತ ಉತ್ತಮ ಲೇಖನ. ಆದರೆ ಎನಗೊಂದು ಸಂಶಯ….. ಅಧಿಕೃತ ಮಂತ್ರ ಪುಸ್ತಕ (ಪುಟ ೨೪, ಸಂಧ್ಯಾವಂದನಂ, ಅನುಷ್ಠಾನ ದೀಪಿಕಾ ಪ್ರಥಮ ಭಾಗ, ಪ್ರಕಾಶನ: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಥಾನ) ಪ್ರಕಾರ, ಕೋಲು ಬೆರಳು ಬಿಟ್ಟಿರೆಕ್ಕು ಹೇಳಿ ಕಂಡತ್ತು. ಪುಸ್ತಕ ವಾಕ್ಯದ ಯಥಾ ನಕಲು ” ತೋರುಬೆರಳನ್ನು ದೂರಮಾಡಿ ಹೆಬ್ಬೆಟ್ಟಿನ ತುದಿಯನ್ನು ನಿಮ್ಮ ನಡುಬೆರಳಿನ ಮಧ್ಯದ ಗಂಟಿಗೆ ಜೋಡಿಸಿರಿ. ಆಗ ನಿಮ್ಮ ಕೈಯು ಗೊಕರ್ಣಾಕೃತಿ ಹಸ್ತವೆಂದಾಗುವದು.” ತಿಳುದವು ವಿವರುಸೆಕ್ಕು .. ತಪ್ಪಿದ್ದರೆ ಎನ್ನ ತಿದ್ದೆಕ್ಕು.
ನಿಂಗ ಹೇಳಿದ್ದು ಪೂರಕವಾಗಿದ್ದು..ತೋರು ಬೆರಳು ಮತ್ತೆ ಹೆಬ್ಬೆರಳು ಪರಸ್ಪರ ಸಂಪರ್ಕ ಅಪ್ಪಲೆ ಆಗ ಹೇಳುವ ಸ್ಪಷ್ಟತೆಯ ಅದರ್ಲಿ ತೋರ್ಸಿದ್ದವು ಭಾವ…
ಒಳ್ಳೆ ಮಾಹಿತಿ. ಚಿತ್ರದೊಟ್ಟಿಂಗೆ ಕೊಟ್ಟ ವಿವರಣೆ ಸುಲಬವಾಗಿ ಅರ್ಥ ಆವ್ತು. ಹೀಂಗಿಪ್ಪ ವಿಷಯಂಗಳ ಬಗ್ಗೆ ಬರೆತ್ತಾ ಇರಿ.
ಒಪ್ಪಣ್ಣ.. ಗೋಕರ್ಣ ಮುದ್ರೆಲಿ ಗೋವುನ ಕೆಮಿಯ ಆಕಾರ ಅಥವಾ ಒಂದು ಶ೦ಖದ ಹಾ೦ಗೆ ನಮ್ಮ ಕೈಯ ಆಕಾರ ಅವುತಿದ… ಇದು ಕೂಡ ಒ೦ದು ಪ್ರಮುಕ ಕಾರಣ ಅವ್ತು ಹೆಳಿ ಎನಗೆ ಆರೊ ಹೇಳಿದ್ದು ನೆಮ್ಪಿದ್ದು…. ಎಷ್ಟು ಸತ್ಯ ಗೊಂತಿಲೆ ಮಾತ್ರ, ತಪ್ಪು ಆದರೆ ತಿದ್ದಿಕಿ 😛
ಖಂಡಿತಾ!!!!!!!!!ನಿಂಗ ಹೇಳಿದ್ದು ಸರಿ…ಶಂಖದ ಹಾಂಗೆ ಅಪ್ಪದು ಸರಿ.ಆದರೆ ಶಂಖ ಮುದ್ರೆ ಮಾಡ್ಲೆ ಎರಡು ಕೈ ಬೇಕಾವ್ತು…ಈ ಬಗ್ಗೆ ಮುಂದೆ ಲೇಖನಲ್ಲಿ ತಿಳಿಶುತ್ತೆ…ನಿಂಗ ಹೇಳಿದ್ದು ಪೂರಕವಾಗಿದ್ದು…
ಗಣೇಶ ಮಾವ.. ಧನ್ಯವಾದಗಳು… 😛
ಒಳ್ಳೆ ಮಾಹಿತಿಗೆ ಧನ್ಯವಾದಂಗೊ.
ಅಂಗುಷ್ಠ ಬೆರಳು ಹೇಳಿರೆ ಹೆಬ್ಬೆಟ್ಟು ಬೆರಳು ಹೇಳುವದರ ಬಂಙಲ್ಲಿ ನೆಂಪು ಮಾಡ್ಯೊಂಡೆ – ಪಾಪ ಎಷ್ಟು ಜನಕ್ಕೆ ಮರದೋಗಿತ್ತೋ ಎನ್ತ್ಸೋ ಈ ಸಂಗತಿ 🙁
olle maahithi kottadakke ondu oppa oppa.
ಗೋಕರ್ಣ ಮುದ್ರೆ ಬಗ್ಗೆ ಒಳ್ಳೆ ಮಾಹಿತಿ
ಮುದ್ರೆಗೊ ಮಾಡುವಾಗ ಅದಕ್ಕೆ ಸಂಬಂಧ ಪಟ್ಟ ಹಾಂಗೆ pressure point ಗೊ ಪ್ರಚೋದನೆಗೊಳ್ಳುತ್ತು. ಇದು ಆರೋಗ್ಯದ ದೃಷ್ಟಿಂದ ಒಳ್ಳೆದು.