ಆತ್ಮೀಯ ಬೈಲಿಂಗೆ,
ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ “ ಕಠೋಪನಿಷತ್ “ ಇದರ ತೃತೀಯ ವಲ್ಲೀ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.
ಶರ್ಮಪ್ಪಚ್ಚಿ
~~~~
ಕಠೋಪನಿಷತ್ (ತೃತೀಯ ವಲ್ಲೀ)
ಋತಂ ಪಿಬಂತೌ ಸುಕೃತಸ್ಯ ಲೋಕೇ ಗುಹಾಂ ಪ್ರವಿಷ್ಟೌ ಪರಮೇ ಪರಾರ್ಧೇ |
ಛಾಯಾತಪೌ ಬ್ರಹ್ಮವಿದೋ ವದಂತಿ
ಪಂಚಾಗ್ನಯೋ ಯೇ ಚ ತ್ರಿಣಾಚಿಕೇತಾಃ ||೧||
ಯಃ ಸೇತುರೀಜಾನಾನಾಮಕ್ಷರಂ ಬ್ರಹ್ಮ ಯತ್ ಪರಮ್ |
ಅಭಯಂ ತಿತೀರ್ಷತಾಂ ಪಾರಂ ನಾಚಿಕೇತಂ ಶಕೇಮಹಿ ||೨||
ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು |
ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ ||೩||
ಇಂದ್ರಿಯಾಣಿ ಹಯಾನಾಹುರ್ವಿಷಯಾಂಸ್ತೇಷು ಗೋಚರಾನ್ |
ಆತ್ಮೇಂದ್ರಿಯಮನೋಯುಕ್ತಂ ಭೋಕ್ತೇತ್ಯಾಹುರ್ಮನೀಷಿಣಃ ||೪||
ಯಸ್ತ್ವ ವಿಜ್ಞಾನವಾನ್ ಭವತ್ಯಯುಕ್ತೇನ ಮನಸಾ ಸದಾ|
ತಸ್ಯೇಂದ್ರಿಯಾಣ್ಯವಶ್ಯಾನಿ ದುಷ್ಟಾಶ್ವಾ ಇವ ಸಾರಥೇಃ ||೫||
ಯಸ್ತು ವಿಜ್ಞಾನವಾನ್ ಭವತಿ ಯುಕ್ತೇನ ಮನಸಾ ಸದಾ |
ತಸ್ಯೇಂದ್ರಿಯಾಣಿ ವಶ್ಯಾನಿ ಸದಶ್ವಾ ಇವ ಸಾರಥೇಃ ||೬||
ಯಸ್ತ್ವವಿಜ್ಞಾನವಾನ್ ಭವತ್ಯಮನಸ್ಕಃ ಸದಾSಶುಚಿಃ |
ನ ಸ ತತ್ಪದಮಾಪ್ನೋತಿ ಸಂಸಾರಂ ಚಾಧಿಗಚ್ಛತಿ ||೭||
ಯಸ್ತು ವಿಜ್ಞಾನವಾನ್ ಭವತಿ ಸಮನಸ್ಕಃ ಸದಾSಶುಚಿಃ |
ಸ ತು ತತ್ಪದಮಾಪ್ನೋತಿ ಯಸ್ಮಾದ್ಭೂಯೋ ನ ಜಾಯತೇ ||೮||
ವಿಜ್ಞಾನಸಾರಥಿರ್ಯಸ್ತು ಮನಃಪ್ರಗ್ರಹವಾನ್ ನರಃ |
ಸೋSಧ್ವನಃ ಪಾರಮಾಪ್ನೋತಿ ತದ್ವಿಷ್ಣೋಃ ಪರಮಂ ಪದಮ್ ||೯||
ಇಂದ್ರಿಯೇಭ್ಯಃ ಪರಾ ಹ್ಯರ್ಥಾ ಅರ್ಥೇಭ್ಯಶ್ಚ ಪರಂ ಮನಃ |
ಮನಸಸ್ತು ಪರಾ ಬುದ್ಧಿರ್ಬುದ್ಧೇರಾತ್ಮಾ ಮಹಾನ್ ಪರಃ ||೧೦||
ಮಹತಃ ಪರಮವ್ಯಕ್ತಮವ್ಯಕ್ತಾತ್ ಪುರುಷಃ ಪರಃ |
ಪುರುಷಾನ್ನ ಪರಂ ಕಿಂಚಿತ್ ಸಾ ಕಾಷ್ಠಾ ಸಾ ಪರಾ ಗತಿಃ ||೧೧||
ಏಷ ಸರ್ವೇಷು ಭೂತೇಷು ಗೂಢೋSSತ್ಮಾ ನ ಪ್ರಕಾಶತೇ |
ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ಸೂಕ್ಷ್ಮ ದರ್ಶಿಭಿಃ ||೧೨||
ಯಚ್ಛೇದ್ವಾಙ್ಮನಸೀ ಪ್ರಾಜ್ಞಸ್ತದ್ಯಚ್ಚೇಜ್ಜ್ಞಾನ ಆತ್ಮನಿ |
ಜ್ಞಾನಮಾತ್ಮನಿ ಮಹತಿ ನಿಯಚ್ಛೇತ್ ತದ್ಯಚ್ಛೇಚ್ಛಾಂತ ಆತ್ಮನಿ ||೧೩||
ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ ನಿಬೋಧತ |
ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ
ದುರ್ಗಂ ಪಥಸ್ತತ್ ಕವಯೋ ವದಂತಿ ||೧೪||
ಅಶಬ್ದಮಸ್ಪರ್ಶಮರೂಪಮವ್ಯಯಂ ತಥಾSರಸಂ ನಿತ್ಯಮಗಂಧವಚ್ಚ ಯತ್ |
ಅನಾದ್ಯನಂತಂ ಮಹತಃ ಪರಂ ಧ್ರುವಂ
ನಿಚಾಯ್ಯ ತನ್ಮೃತ್ಯುಮುಖಾತ್ ಪ್ರಮುಚ್ಯತೇ ||೧೫||
ನಾಚಿಕೇತಮುಪಾಖ್ಯಾನಂ ಮೃತ್ಯುಪ್ರೋಕ್ತಂ ಸನಾತನಮ್ |
ಉಕ್ತ್ವಾ ಶ್ರುತ್ವಾ ಚ ಮೇಧಾವೀ ಬ್ರಹ್ಮ ಲೋಕೇ ಮಹೀಯತೇ ||೧೬||
ಯ ಇಮಂ ಪರಮಂ ಗುಹ್ಯಂ ಶ್ರಾವಯೇದ್ಬ್ರಹ್ಮಸಂಸದಿ |
ಪ್ರಯತಃ ಶ್ರಾದ್ಧಕಾಲೇ ವಾ ತದಾನಂತ್ಯಾಯ ಕಲ್ಪತೇ ||
ತದಾನಂತ್ಯಾಯ ಕಲ್ಪತ ಇತಿ ||೧೭||
ಕಠೋಪನಿಷತ್ (ಮೂರನೆಯ ವಲ್ಲಿ)-ಕನ್ನಡ ಗೀತೆ
ನಿಯಮ ನಿರತರು ಪುಣ್ಯವಂತರು ಸೇರಿ ಹೃದಯದ ಗುಹೆಯನು
ನೆರಳು ಬಿಸಿಲುಗಳಂತೆಯಿರುವರು ಜೀವನೂ ಪರಮಾತ್ಮನು ||೧||
ನಾಚಿಕೇತವು ಸೇತು ಸ್ವರ್ಗಕೆ ಪರಮ ಅಕ್ಷರ ಪದವಿದು
ಜಗವ ದಾಟಲು ಅಭಯ ಹೊಂದಲು ಇಂದು ನಾವು ಸಮರ್ಥರು ||೨||
ಆತ್ಮನೊಡೆಯನು ರಥದಿ ಕುಳಿತಿಹ ರಥ ಶರೀರವು ಸ್ಥೂಲವು
ಬುದ್ಧಿ ಸಾರಥಿ ನಡೆಸುತಿರುವನು ಮನವು ಕೈ ಕಡಿವಾಣವು ||೩||
ಇಂದ್ರಿಯಂಗಳು ಹಯಗಳೆಂಬರು ವಿಷಯ ಗಮನವೆ ಗೊಡವೆಯು
ಬೋಗಿಯೆಂಬರು ಈ ಸಮೂಹವ ದೇಹವಿಂದ್ರಿಯ ಮನವನು ||೪||
ಯೋಗವಿಲ್ಲದೆ ಜ್ಞಾನವಿಲ್ಲದೆ ಮನವು ಚಲಿಸಲು ಎಲ್ಲೆಡೆ
ವಶದಿ ಸಾರಥಿ ಇರದೆ ಇಂದ್ರಿಯ ತುಂಟ ಕುದುರೆಗಳಂತೆಯೆ ||೫||
ಯೋಗಯುಕ್ತನು ಜ್ಞಾನಯುಕ್ತನು ಮನದ ದಾರವ ಹಿಡಿಯುತ
ಇಂದ್ರಿಯಂಗಳು ವಶದಿ ಬರುವವು ಕುದುರೆ ತೆರದಲಿ ಶಿಸ್ತಿನ ||೬||
ಜ್ಞಾನವಿರದವ ಮನದ ದಾಸನು ನಿತ್ಯ ಶುಚಿಯಿರದವನಿಗೆ
ಹೊಂದಲಾಗದು ಪರಮ ಪದವನು ಲೋಕ ಜೀವನವಾತಗೆ ||೭||
ಜ್ಞಾನ ಪಡೆದವ ಮನವ ಗೆದ್ದವ ನಿತ್ಯ ಶುಚಿಯಿರುವಾತನು
ಹೊಂದುತಿರುವನು ಪರಮ ಪದವನು ಆತನೆಂದಿಗು ಅಮರನು ||೮||
ಯಾರಿಗಿದೆ ವಿಜ್ಞಾನಿ ಸಾರಥಿ ಮನದ ಮೇಲಿನ ಹಿಡಿತವು
ಯಾತ್ರೆಯಂತಿಮ ಗುರಿಯ ಸೇರುವನದುವೆ ವಿಷ್ಣುವ ಪಾದವು ||೯||
ಇಂದ್ರಿಯಗಳಿಗು ಹಿರಿದು ವಿಷಯವು ಹಿರಿದು ವಿಷಯಕೆ ಮನವದು
ಮನಸಿಗಿಂತಲು ಹಿರಿದು ಬುದ್ಧಿಯು ಹಿರಿದು ಶ್ರೇಷ್ಠವು ಆತ್ಮವು ||೧೦||
ಮಹತ್ ಗಿಂತಲು ಹಿರಿದವ್ಯಕ್ತವು ಹಿರಿದು ಅಂತಿಮ ಪುರುಷನು
ಹಿರಿದು ಪುರುಷನಿಗಿಲ್ಲ ಯಾವುದು ಅಲ್ಲೆ ಕೊನೆಯದು ಶ್ರೇಷ್ಠವು ||೧೧||
ಸರ್ವ ಪ್ರಾಣಿಗಳಲ್ಲಿ ಅಡಗಿದ ಆತ್ಮನೆಂದಿಗು ತೋರನು
ಸೂಕ್ಷ್ಮ ಬುದ್ಧಿಯ ಸೂಕ್ಷ್ಮ ಜನರಿಂ ಧ್ಯಾನ ಸೂಕ್ಷ್ಮದಿ ಕಾಂಬನು ||೧೨||
ಪ್ರಾಜ್ಞ ಹಿಡಿಯಲಿ ಮಾತು ಮನವನು ಮತ್ತೆ ಜ್ಞಾನವ ಆತ್ಮದಿ
ತತ್ವ ಜ್ಞಾನವ ಮಹತ್ ನಲ್ಲಿಯು ಮಹತ್ ಶಾಂತದ ಆತ್ಮದಿ ||೧೩||
ಎದ್ದು ನಿಲ್ಲಿರಿ! ಕೊಳ್ಳಿರೆಚ್ಚರ!ಹೊಂದಿಕೊಳ್ಳಿರಿ ಶ್ರೇಷ್ಠರ
ಋಷಿಗಳೆನುವರು ದಾರಿ ದುರ್ಗಮ ಅಲಗಿನಂತಿದೆ ಕತ್ತಿಯ ||೧೪||
ಶಬ್ದ ಸ್ಪರ್ಶವು ರಸವು ರೂಪವು ಗಂಧವಿಲ್ಲದೆ ಶಾಶ್ವತ
ಆದಿಯಿರದಾನಂತ ಶ್ರೇಷ್ಠನ ತಿಳಿದು ಜಯಿಪರು ಮೃತ್ಯುವ ||೧೫||
ಮೃತ್ಯುವಿಂ ನಚಿಕೇತ ಪಡೆದಿಹ ಹಳೆಯ ಶಾಶ್ವತ ಕಥೆಯಿದು
ಹೇಳಿ ಕೇಳಿದ ಬುದ್ಧಿವಂತನು ಬ್ರಹ್ಮ ಲೋಕದಿ ಪೂಜ್ಯನು ||೧೬||
ಶುಚಿಯ ಮನದಲಿ ಬ್ರಹ್ಮ ಸದನದಿ ಪರಮ ಗೌಪ್ಯವ ಪಠಿಸಲು
ಶ್ರಾದ್ಧ ಕಾಲದಿ ಶ್ರವಣಗೊಂಡರೆ ಫಲಗಳಕ್ಷಯ ಪ್ರಾಪ್ತಿಯು ||೧೭||
||ಓಂ ಶಾಂತಿಃ ಶಾಂತಿಃ ಶಾಂತಿಃ ||
ಚತುರ್ಥ ವಲ್ಲೀ ಇನ್ನಾಣ ವಾರಕ್ಕೆ
ಫ್ರಥಮ ವಲ್ಲೀ – ಇಲ್ಲಿ ನೋಡಿ
ಸಂಗ್ರಹ- ಉಪನಿಷತ್ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಕಠೋಪನಿಷತ್.. ಇದು ಕಠಿಣ ಹೇಳ್ವ ಅರ್ಥಲ್ಲಿ ಆದಿಕ್ಕೋ ಈ ಹೆಸರು ಬಂದದು ಹೇಳಿ ಗ್ರೇಶಿ ಹೋತು. ಗಹನವೂ ಸ್ವಾರಸ್ಯವೂ ಆಗಿದ್ದು ಹೇಳಿ -‘ಚೆನ್ನೈವಾಣಿ’.
ವಿವೇಕಾನಂದರ ಪ್ರಿಯವಾದ ವಾಕ್ಯಂಗಳ [ಉತ್ತಿಷ್ಠತ,ಜಾಗ್ರತ] ಮೂಲ ಎಲ್ಲಿ ಹೇಳಿ ಗೊಂತಾತು.
ಧನ್ಯವಾದ.