Oppanna.com

ಕೇನೋಪನಿಷತ್ (ತೃತೀಯ ಖಂಡ)

ಬರದೋರು :   ಶರ್ಮಪ್ಪಚ್ಚಿ    on   02/01/2012    5 ಒಪ್ಪಂಗೊ

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕೇನೋಪನಿಷತ್ ಇದರ ತೃತೀಯ ಖಂಡ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕೇನೋಪನಿಷತ್ (ತೃತೀಯ ಖಂಡ)

ಬ್ರಹ್ಮ ವ ದೇವೇಭ್ಯೋ ವಿಜಿಗ್ಯೇ, ತಸ್ಯ ಹ ಬ್ರಹ್ಮಣೋ

ವಿಜಯೇ ದೇವಾ ಅಮಹೀಯಂತ|

ತ ಐಕ್ಷಂತಾಸ್ಮಾಕಮೇವಾಯಂ

ವಿಜಯೋSಸ್ಮಾಕಮೇವಾಯಂ ಮಹಿಮೇತಿ ||೧||

ತದ್ಧೈಷಾಂ ವಿಜಜ್ಞೌ,  ತೇಭ್ಯೋ ಹ ಪ್ರಾದುರ್ಬಭೂವ,

ತನ್ನ ವ್ಯಜಾನತ ಕಿಮಿದಂ ಯಕ್ಷಮಿತಿ ||೨||

ತೇSಗ್ನಿಮಬ್ರುವನ್ ಜಾತವೇದ ಏತದ್ವಿಜಾನೀಹಿ

ಕಿಮೇತದ್ಯಕ್ಷಮಿತಿ ತಥೇತಿ ||೩||

ತದಭ್ಯದ್ರವತ್, ತಮಭ್ಯವದತ್ ಕೋSಸೀತಿ, ಅಗ್ನಿರ್ವಾ

ಅಹಮಸ್ಮೀತ್ಯಬ್ರವೀಜ್ಜಾತವೇದಾ  ವಾ ಅಹಮಸ್ಮೀತಿ ||೮||

ತಸ್ಮಿಂಸ್ತ್ವಯಿ ಕಿಂ ವೀರ್ಯಮಿತ್ಯಪೀದಂ

ಸರ್ವಂ ದಹೇಯಂ ಯದಿದಂ ಪೃಥಿವ್ಯಾಮಿತಿ ||೫||

ತಸ್ಮೈ ತೃಣಂ ನಿದಧಾವೇತದ್ದಹೇತಿ, ತದುಪಪ್ರೇಯಾಯ

ಸರ್ವಜವೇನ, ತನ್ನ ಶಶಾಕ ದಗ್ಧುಂ, ಸ ತತ ಏವ ನಿವವೃತೇ

ನೈತದಶಕಂ ವಿಜ್ಞಾತುಂ ಯದೇತದ್ಯಕ್ಷಮಿತಿ ||೬||

ಅಥ ವಾಯುಮಬ್ರುವನ್ ವಾಯವೇತದ್ವಿಜಾನೀಹಿ,

ಕಿಮೇತದ್ಯಕ್ಷಮಿತಿ ತಥೇತಿ ||೭||

ತದಭ್ಯದ್ರವತ್, ತಮಭ್ಯವದತ್ ಕೋSಸೀತಿ, ವಾಯುರ್ವಾ

ಅಹಮಸ್ಮೀತ್ಯಬ್ರವೀನ್ಮಾತರಿಶ್ವಾ ವಾ ಅಹಮಸ್ಮೀತಿ ||೮||

ತಸ್ಮಿಂಸ್ತ್ವಯಿ ಕಿಂ ವೀರ್ಯಮಿತ್ಯಪೀದಂ

ಸರ್ವಮಾದದೀಯ ಯದಿದಂ ಪೃಥಿವ್ಯಾಮಿತಿ ||೯||

ತಸ್ಮೈ ತೃಣಂ ನಿದಧಾವೇತದಾದತ್ಸ್ವೇತಿ, ತದುಪಪ್ರೇಯಾಯ

ಸರ್ವಜವೇನ, ತನ್ನ ಶಶಾಕಾದಾತುಂ, ಸ ತತ ಏವ ನಿವವೃತೇ

ನೈತದಶಕಂ ವಿಜ್ಞಾತುಂ ಯದೇತದ್ಯಕ್ಷಮಿತಿ ||೧೦||

ಅಥೇಂದ್ರಮಬ್ರುವನ್ ಮಘವನ್ನೇತದ್ವಿಜಾನೀಹಿ,

ಕಿಮೇತದ್ಯಕ್ಷಮಿತಿ; ತಥೇತಿ|

ತದಭ್ಯದ್ರವತ್, ತಸ್ಮಾತ್ ತಿರೋದಧೇ ||೧೧||

ಸ ತಸ್ಮಿನ್ನೇವಾಕಾಶೇ ಸ್ತ್ರಿಯಮಾಜಗಾಮ ಬಹುಶೋಭಮಾನಾಮುಮಾಂ ಹೈಮವತೀಮ್ |

ತಾಂ ಹೋವಾಚ ಕಿಮೇತದ್ಯಕ್ಷಮಿತಿ ||೧೨||


ಕೇನೋಪನಿಷತ್ (ಮೂರನೆಯ ಖಂಡ)-ಕನ್ನಡ ಗೀತೆ

ಈಶನಿಂದಲೆ ವಿಜಯ ಮಹಿಮೆಯು ದೇವತೆಗಳಿಗೆ ಲಭಿಸಿತು

ಅದನು ಮರೆಯುತ ತಮ್ಮ ವಿಜಯವಿದೆಂಬ ಗರ್ವದಿ ಮೆರೆದರು ||೧||

ಪರಮ ಈಶ್ವರನಿದನು ವೀಕ್ಷಿಸಿ ಯಕ್ಷರೂಪದಿ ಬಂದನು

ಅರಿಯದಾದರು ತತ್ತ್ವವಿದರಲಿ, ತಿಳಿಯಲೇ ಬೇಕೆಂದರು|೨||

ಸುರರು ಅಗ್ನಿಯ ಬರಿಸಿ ಕೇಳ್ದರು “ಯಕ್ಷ ರೂಪವು ಯಾರದು?”

ತಿಳಿದು ತಿಳಿಸಲು ಆಜ್ಞೆಗೈದರು ಅಗ್ನಿ  ’ಆಗಲಿ’ ಎಂದನು ||೩||

ಬರಲು ಅಗ್ನಿಯು ಯಕ್ಷ ಹೇಳಿದ ಯಾರು ನೀನೆಂದರುಹಲು

ನಾನು ಅಗ್ನಿಯು ವೇದ ತಿಳಿದವ ಎಂದು ಅಗ್ನಿಯು ನುಡಿದನು ||೪||

’ ಶಕ್ತಿ ಯಾವುದು ನಿನ್ನೊಳಿರುವುದು?’ ಎಂದು ಕೇಳ್ದನು ಯಕ್ಷನು

’ಜಗದೊಳೇನಿದೆ ಸುಡುವೆನೆಲ್ಲವ’ ಎಂದು ನುಡಿದನು ಅಗ್ನಿಯು ||೫||

ಹುಲ್ಲು ಕಡ್ಡಿಯನೆದುರಿಗಿಡುತಲಿ ’ದಹಿಸು’ ಎಂದನು ಯಕ್ಷನು

ಸರ್ವಶಕ್ತಿಯ ಕೂಡಿ ಹಿಡಿದರು ಸುಡಲಸಾಧ್ಯವೆ ಆಯಿತು

ಸೋತು ಮರಳುತ ಅಗ್ನಿ ನುಡಿದನು ಯಕ್ಷ ಯಾರೆಂದರಿಯೆನು ||೬||

ಮತ್ತೆ ವಾಯುವ ಕರೆದು ಪೇಳ್ದರು ’ಈತನಾವನು ಯಕ್ಷನು’

ತಿಳಿದು ತಿಳಿಸಲು ಆಜ್ಞೆಗೈಯಲು ’ಹಾಗೆಯಾಗಲಿ’ ಎಂದನು ||೭||

ವಾಯು ಬಂದಿರೆ ಯಕ್ಷ ಹೇಳಿದ ಯಾರು ನೀನೆಂದರುಹಲು

’ನಾನು ವಾಯುವು ಗಗನಗಾಮಿಯು’ ಎಂದು ಪೇಳ್ದನು ವಾಯುವು ||೮||

“ಶಕಿ ಯಾವುದು ನಿನ್ನೊಳಿರುವುದು?” ಪ್ರಶ್ನೆ ಕೇಳ್ದನು ಯಕ್ಷನು

’ಜಗದೊಳಿರುವುದನೆಲ್ಲ ಎತ್ತುವೆ’ ನುಡಿದನುತ್ತರ ವಾಯುವು ||೯||

ಹುಲ್ಲು ಕಡ್ಡಿಯನೆದುರಿಗಿಡುತಲಿ ’ಎತ್ತು’ ಎಂದನು ಯಕ್ಷನು

ಸರ್ವ ಶಕ್ತಿಯ ಕೂಡಿ ಊದಲು ಸೋತು ಹೋದನು ವಾಯುವು

ಹಾಗೆ ಮರಳಿದ ವಾಯು ನುಡಿದನು ’ಯಕ್ಷ ಯಾರೆಂದರಿಯೆನು’ ||೧೦||

ಇಂದ್ರನೇ ಜೀವಾತ್ಮನಾಗಿರೆ ತಿಳಿಯಬೇಕಿದನೆಂದರು

ತತ್ತ್ವವರಿಯಲು ಇಂದ್ರ ಹೋಗಲು ಯಕ್ಷ ರೂಪವೆ ಮಾಯವು ||೧೧||

ಅಲ್ಲೆ ಆಕಾಶದಲಿ ಶೋಭಿಪ ಹೈಮವತಿ ಉಮೆಯನು

ಕಂಡು ಬಳಿಯಲಿ ಕೇಳ್ದನಾಕೆಯ ’ಯಕ್ಷ ತತ್ತ್ವವು ಏನದು?’ ||೧೨||

ಓಂ ಶಾಂತಿಃ ಶಾಂತಿಃ ಶಾಂತಿಃ

ಕೇನೋಪನಿಷತ್- ಒಂದನೇ ಖಂಡಕ್ಕೆ ಇಲ್ಲಿ ನೋಡಿ

ಕೇನೋಪನಿಷತ್- ಎರಡನೇ ಖಂಡಕ್ಕೆ ಇಲ್ಲಿ ನೋಡಿ

ಸಂಗ್ರಹ: ಉಪನಿಷತ್ ಗೀತಾಂಜಲಿ-ಡಾ| ಮಡ್ವ ಶಾಮ ಭಟ್ಟ

……ಇನ್ನಾಣ ವಾರಕ್ಕೆ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

5 thoughts on “ಕೇನೋಪನಿಷತ್ (ತೃತೀಯ ಖಂಡ)

  1. ಶರ್ಮಪ್ಪಚ್ಚಿ,
    ಹರೇ ರಾಮ; ಬಹಳ ಒಳ್ಳೆಯ ಕೆಲಸ. ಗುರು ಹೆರಿಯರ ಅನುಗ್ರಹ೦ದ ಮು೦ದಾಣ ಕ೦ತುಗೂ ಬೇಗ ಬರಲಿ.ಧನ್ಯವಾದ೦ಗೊ.

  2. ಹೈಮವತಿಯ ಉತ್ತರ ಬಪ್ಪವಾರ ಇಕ್ಕೊ.

    ಲಾಯಕ ಇದ್ದು ಇದು. ಧನ್ಯವಾದ ಅಪ್ಪಚ್ಹಿ. ಗೀತೆಸಹಿತ ಓದಲೆ ಲಾಯಕ ಆವ್ತು.

  3. ಹೈಮವತಿಯ ಉತ್ತರ “ತತ್ವಮಸಿ” ಆದಿಕ್ಕೋ…

  4. ಹೈಮವತಿಯ ಉತ್ತರ ಎಂತ?
    ಸರ್ವಶಕ್ತ ಭಗವಂತನ ಕರುಣೆ ಇಲ್ಲದೆ ಯಾವುದೂ ಸಾಧ್ಯ ಇಲ್ಲೆ..ತೇನ ವಿನಾ ತೃಣಮಪಿ ನ ಚಲತಿ..[ಅವನ ಹೊರತು ಹುಲ್ಲುಕಡ್ಡಿಯೂ ಹಂದ].ಹೇಳುವ ನಿರೂಪಣೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×