ಡಿ.ಕೆ.ಗೌತಮ-“ರಾಜ್ಯೋತ್ಸವ ಸಾಧಕ ಪುರಸ್ಕಾರ”
ಡಿ.ಕೆ.ಗೌತಮನ ಕಿರೀಟಕ್ಕೆ ಇನ್ನೊಂದು ಶ್ರೇಷ್ಠ ಗರಿ
ಈ ಮಾಣಿಯ ಬಗ್ಗೆ ನಮ್ಮ ಬೈಲಿಲ್ಲಿ ಪರಿಚಯ ಮಾಡಿದ್ದು ನಾವು.
ಮಕ್ಕಳ ವಿಭಾಗಲ್ಲಿ ಯಕ್ಷಗಾನಕ್ಕೆ ಇವನ ಕೊಡುಗೆಯ ಗುರುತಿಸಿ, ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವಂಗೆ “ರಾಜ್ಯೋತ್ಸವ ಸಾಧಕ ಪುರಸ್ಕಾರ” ಪ್ರಶಸ್ತಿ ಕೊಟ್ಟು ಗೌರವಿಸಿದವು.
ಮೊನ್ನೆ ಕನ್ನಡ ರಾಜ್ಯೋತ್ಸವದ ದಿನ (01/11/2015) ದಂದು, ಮಂಗಳೂರಿನ ಡಾನ್ ಬಾಸ್ಕೋ ಸಭಾಭವನಲ್ಲಿ ನಡದ ಸಮಾರಂಭಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಹಯೋಗಲ್ಲಿ , ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕಲ್ಕೂರ ಇವು ಈ ಸನ್ಮಾನವ ಮಾಡಿದವು.
ಈ ಮೊದಲು ಇವಂಗೆ ಜ್ಞಾನ ಮಂದಿರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇವು ನೀಡುವ “ವಚನ ಮಂದಾರ ರಾಜ್ಯ ಪುರಸ್ಕಾರ” ಪ್ರಶಸ್ತಿ, ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಂಗಳಲ್ಲಿ ಗಮನಾರ್ಹ ಸಾಧನೆಗಾಗಿ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ, ಕೂಡಾ ಸಿಕ್ಕಿದ್ದು.
ಸುರತ್ಕಲ್ NITK ಲಿ ಇಪ್ಪ ಶ್ರೀ ದೇಂತಾಜೆ ಕೃಷ್ಣ ಭಟ್ ರಾಜೇಶ್ವರಿ ದಂಪತಿಯ ಸುಪುತ್ರ ಗೌತಮ ಪ್ರತಿಭಾವಂತ ವಿದ್ಯಾರ್ಥಿ ಮಾತ್ರ ಅಲ್ಲದ್ದೆ, ಹತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಂಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿಯ ತನ್ನದಾಗಿಸಿಗೊಂಡಿದ.
ಡಿ.ಕೆ.ಗೌತಮ ಇನ್ನು ಮುಂದೆಯೂ ಹತ್ತು ಹಲವಾರು ಪ್ರಶಸ್ತಿಯ ತನ್ನದಾಗಿಸಿಗೊಂಡು, ತಾನು ಕಲಿತ್ತ ಶಾಲೆಗೆ, ತನ್ನ ಹೆತ್ತವರಿಂಗೆ, ಸಮಾಜಕ್ಕೆ ಒಳ್ಳೆಯ ಕೀರ್ತಿ ತಂದು ಕೊಡಲಿ ಹೇಳಿ ನಾವು ಆಶೀರ್ವಾದ ಮಾಡುವೊ°
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಗೌತಮನ ವೇಷ ಪಾವಂಜೆಲಿ ನೋಡಿ ಆನು ತಲೆದೂಗಿದೆ. ತುಂಬಾ ಲಾಯಕ ಮಾಡಿದ್ದ. ಅವಂಗೆ ಶ್ರೇಯಸ್ಸಾಗಲಿ.
ಆಭಿನಂದನೆಗೊ. ಮಾಣಿಗೆ ಉಜ್ವಲ ಭವಿಷ್ಯವ ಹಾರೈಸುವೊ.
ಶುಭಾಶಯಗಳು
ಹರೇ ರಾಮ . ಅಭಿನಂದನೆಗೊ. ಶ್ರೇಯಸ್ಸಾಗಲಿ