Latest posts by ಅನು ಉಡುಪುಮೂಲೆ (see all)
- ನೀ ಶುದ್ದಿಯೊಳಗೋ…. ನಿನ್ನೊಳು ಶುದ್ದಿಯೋ… - April 17, 2020
- ಕನಸಿನ ಸೀರೆ ಕೈಸೇರಿತ್ತು - April 22, 2017
- ಎನ್ನ ಕನಸಿನ ಕೂಸು ಹುಟ್ಟಿತ್ತಿದಾ….. - May 12, 2013
ಚೌತಿ ದಿನ ಎ೦ಗಳಲ್ಲಿಗೆ ಬ೦ದ ಎಲಿರಾಯನ ಕಥೆ ಗೊ೦ತಿದ್ದನ್ನೆ. ಎನ್ನ ಕ೦ಪ್ಯೂಟರಿಲಿ ಶಾಶ್ವತ ಸ್ಥಾನ ಪಡದ ಈ ಎಲಿರಾಯನ ಸುದ್ದಿಯ ಒಟ್ಟಿ೦ಗೆ ನಿ೦ಗೊಗೆಲ್ಲ ತೋರ್ಸೆಕ್ಕು ಹೇಳಿ ಬಹಳ ಪ್ರಯತ್ನ ಪಟ್ಟೆ. ಆದರೆ ಈ ಗೋಡೆಲಿ ಆಣಿ ಬಡುದು ಪಟ ನೇಲ್ಸುದು ಹೇ೦ಗೆ ಹೇಳಿ ಗೊ೦ತಾಯಿದಿಲ್ಲೆ. ಗುರಿಕ್ಕಾರ ಹೇಳಿಕೊಟ್ಟಪ್ಪಗ ಆ ಸುದ್ದಿ ಪ್ರಕಟ ಆಗಿ ಆಯಿದು. ಹಾ೦ಗೆ ಸುಮ್ಮನೆ ಕೂದೆ. ಆದರೂ ಮನಸ್ಸು ತಡೆಯದ್ದೆ ಇ೦ದು ನೇಲ್ಸಿದೆ.
ಗಣಪತಿಯ ಆರು ಕ೦ಡಿದಿರೋ ಗೊ೦ತಿಲ್ಲೆ.ಆದರೆ ಅವನ ವಾಹನವ ನೋಡಿಯಾದರೂ ಧನ್ಯರಾಗಿ!!!!!!!!!
ಎಲ್ಲೋರಿ೦ಗೂ ಗಣಪತಿ ದೇವರ ವಾಹನವೇ ಆಯುರಾರೋಗ್ಯ ಭಾಗ್ಯ ಸ೦ಪತ್ತು ಕೊಟ್ಟು ರಕ್ಷಣೆ ಮಾಡಲಿ!!!!!!!!!!!
ನೈವೇದ್ಯಕ್ಕೆ ಏನಾದರೂ ಕೊಡುದಿದ್ದರೆ ಎ೦ಗಳ ಮನೆಗೆ ಕಳುಸಿದರೆ ಆತು!!!!!!!!!!!!
ಅನುಅತ್ತೇ..
ಇಷ್ಟು ಚೆಂದದ ಎಲಿಯ ನಿಂಗೊ ಗೂಡಿನೊಳ ಮಡಗಿದ್ದೋ…. ಚೆ ಚೆ,
ಲಾಯಿಕಲ್ಲಿ ಕೊರದು ಬೆಂದಿಮಾಡಿದ್ದರೆ ಬೋಚಬಾವ° ತಿಂತಿತ°……………
ಅಪ್ಪೂ, ಚವುತಿಗೆ ಮಾಡಿದ ಚಕ್ಕುಲಿ ಎಲ್ಲಿದ್ದು? ಮಯಿಸೂರಿಂಗೆ ಹೋಪಗ ಅದನ್ನೇ ತೆಕ್ಕೊಂಡು ಹೋದ್ಸೋ? ;-(
ಏ,ಮಾಣಿ..
ಬೆ೦ದಿಯೋ?? ನಿನ ನಿನ ಮಾಡ್ತೆ..! ಲೋಟಿ.. 🙁
ಬೆ೦ದಿಗೆ ಗೂಡೆ೦ತಗೆ…. 😛 ನವಗೆ ಗೆಣ೦ಗು ಆಕ್ಕಿದಾ…!
ಇದು ನಮ್ಮ ಎಲಿರಾಯ೦ಗೂ ಪ್ರೀಯವಾದ್ದು ಹೇಳಿ ಸುಬಗಭಾವ ಹೇಳಿದವು.. 😉
ಅದಾ.., ಈಗ ಎಂತದೋ ತಟಪಟ ಮಾಡಿದ್ದವಲ್ಲಿ ಹೇಳಿ ಗೊಂತಾವ್ತು. ಈಗ ಓಪನ್ ಆವ್ತು. ಹು..! ಮತ್ತೆ ದೂರು ಎನಗೆ!!
ಏ ಆತಿಗೆ..
ಇನ್ನಾಣ ಸರ್ತಿ rat gum ಉಪಯೋಗುಸಿ ಹಿಡುದು ಫಟತೆಗೆ ಆತಾ?
ಇಲ್ಲದ್ದರೆ ಚೆನ್ನೈ ಭಾವಂಗೆ ಸರಿಯಾಗಿ ಕಾಣ..
ಏ ಅಕ್ಕಾ,
ಚೆನ್ನೈಭಾವ೦ಗೆ ಎಲಿರಾಯನ ಸರೀ ಕಾ೦ಬಲೆ ಬೇಕಾಗಿ ಒ೦ದರಿ ಪೆಟ್ತಿಗೆ೦ದ ಹೆರಬಿಡ್ತಿರೋ?ಮತ್ತೆ ಅವು ಕಟ್ಟಿ ಹಾಕುಗು !
ವಾಹನವ ನಿಂಗೊ ಹಿಡುದು ಮಡುಗಿದ ಕಾರಣ ಇನ್ನು ಎಲ್ಲೋರಿಂಗೂ ಆಯು ಅರೋಗ್ಯ… ಲಭಿಸುಗು ಅಪ್ಪೋ! ಪಟ ಜೇನ ಕೊಜಂಟಿ ಹಾಂಗೆ ಇದ್ದಷ್ಟೇ!! ಕಾಂಬಕೆ ಎಡಿತ್ತಿಲ್ಲೆ. ಸರಿಮಾಡಿಕ್ಕುತ್ತೀರೋ. ಎಂಗಳ ಲೆಕ್ಕದ ನೇವೆದ್ಯ ಇಲ್ಲಿಂದಲೇ ಸಮರ್ಪಣೆ.