- ನೀರುಳ್ಳಿ ಕ್ರಯ ಏರಿದ್ಸಕ್ಕೆ ಬೈಲಿನೋರ ಪ್ರತಿಕ್ರೊಯೆಗೊ: - August 25, 2015
- ನೆಗೆ ಬಪ್ಪದು ಖಂಡಿತಾ!! - September 9, 2012
- ನೆಗೆ ಸೋಬಾನೆ : ’ಎಲ್ಲೋರು ಬನ್ನಿ ಬೈಲಿಂಗೆ’ - March 12, 2012
ಅನುಷ್ಟುಪ್ ಬಗ್ಗೆ ಬೈಲಿಲಿ ಶುದ್ದಿ ಬಂದದರ ಕಂಡು ಆ° ಬರದ ನೆಗೆ-ಶ್ಲೋಕಂಗೊ.
ವಾಲ್ಮೀಕಿಯ ಕ್ಷಮೆಕೋರಿ; ಅವರ ಶ್ಲೋಕದಷ್ಟು ಲಾಯ್ಕಾಗಿರ, ಆತೋ?
ಸೂ: ಇದು ಕೇವಲ ನೆಗೆಗಾಗಿ, ಅಟ್ಟೇ!
|| ನೆಗೆ ಬಪ್ಪದು ಖಂಡಿತಾ ||
ಚೆನ್ನೈಭಾವ ದಿನಾ ಎದ್ದು ಹಲ್ಲು ತಿಕ್ಕುದು ಖಂಡಿತಾ |
ಎಲೆ ತಿಂದ ಪ್ರತೀ ಸರ್ತಿ ಹಲ್ಲಿನೊಕ್ಕುದು ಖಂಡಿತಾ ||
ಚೂರಿಬೈಲಿನ ದೀಪಕ್ಕ ಚೀಪೆ ಹಪ್ಪಳ ಮಾಡುಗೊ
ಇಪ್ಪತ್ತೈದರ ಕಟ್ಟಿಕ್ಕಿ ಅಟ್ಟಲ್ಲಿ ಮಡಗಿಕ್ಕುಗೋ? ||
ತೆಕ್ಕುಂಜೆಮಾವ ಎನ್ನತ್ರೆ ಮಗ್ಗಿ ಕೇಳುಲೆ ಬಕ್ಕಡಾ |
ಒಂದೊಂದ್ಲಿ ಒಂದು ಕಲ್ತಿಕ್ಕಿ ಗಟ್ಟಿ ಹೇಳಿರೆ ಸಾಕಡಾ ||
ರಘುಭಾವನ ಕಾರಿಂಗೆ ನೀರು ಹಾಕಿರೆ ಸಾಕಡಾ |
ಬೋಚಬಾವಂಗೆ ಈ ಬಗ್ಗೆ ಹೆಚ್ಚು ಮಾಹಿತಿ ಇದ್ದಡಾ ||
ಕಾನಾವಕ್ಕನ ಜಾಲಿಂಗೆ ಬೆಳ್ಳ ಬಂದದು ಕಂಡಿರಾ |
ತೊಕ್ಕು ಸೆಂಡಗೆ ನೀರಾಗಿ ಬೆಳ್ಳ ಹೋಪದು ಖಂಡಿತಾ ||
ಅಜ್ಜಕಾನದ ಬಾವಂಗೆ ಜೀಗುಜ್ಜೆ ಪೋಡಿ ಬೇಕಡಾ |
ತ್ಯಾಂಪಣ್ಣಂಗೆ ಉಶಾರಿಲ್ಲೆ ಬೇರೆ ಆರಾರು ಮಾಡುಗೋ ||
ನೆಗೆಮಾಡಿಂಡು ಈ ಸರ್ತಿ ಶ್ಲೋಕ ಹೇಳುದು ಕಂಡಿರೋ? |
ಪುರುಸೋತಿಲಿ ಓದಿಂಡ್ರೆ ನೆಗೆ ಬಪ್ಪದು ಖಂಡಿತಾ! ||
~*~*~
ಬೈಲಿಲಿ ಪಷ್ಟಿಂಗೆ ಬಂದ ಕಾರಣ ಇದಕ್ಕೆ ಪಶ್ಟು ಪ್ರೈಸು ಹೇಳಿ ಎಲ್ಲೋರುದೇ ಮಾತಾಡಿಗೊಳ್ತಾ ಇದ್ದವು. 😉
ನಿಂಗಳೂ ಅದರ ಒಪ್ಪುತ್ತಾರೆ “ಲಾಯಿಕಿದ್ದು” ಹೇಳಿಕ್ಕಿ, ಆತೋ?
~
ನೆಗೆಮಾಣಿ
ಹಲ್ಲಿನ್ನುದೆ ಬಯಿಂದಿಲ್ಲೆ ತಲೆಕುಚ್ಚಿ ಬೆಳದ್ದಿಲೇ ।
ಬಾಯೊಡದು ಬರದ್ದನ್ನೆ ಒಪ್ಪ ಕೊಡೆಕ್ಕು ನಾವುದೇ ॥
ಭಾರಿ ಲಾಯ್ಕ ಆಯ್ದು……..
ನೆಗೆಮಾಣಿಯ ಬಾಯಿಲ್ಲಿ ಹಲ್ಲು ಇಲ್ಲದ್ರೆ ಎಂತಾತು ।
ತಿಂತನಡಾ ಚಕ್ಕುಲಿಯಾ ಮೊಸರಿಂಗೆ ಅದ್ದಿಯದ್ದೀ ॥
ನೆಗೆಮಾಣಿ ಭಾರೀ ಹುಷಾರಿದ್ದ..ಎಷ್ಟು ಪಕ್ಕ ಅನುಷ್ಟುಪ್ ನ ಬಗ್ಗೆ ತಿಳುದು ಅದರಲ್ಲಿಯೇ ಒಂದು ನೆಗೆಪದ್ಯ ಬರದಾನ್ನೆ ! 🙂
ಹಾಡುಕಟ್ಟಿಯೆ ಬ೦ದೆಯೋ ಲೂಟಿಯಾ ನೆಗೆಮಾಣಿಯೇ|
ನಿನ್ನ ಬಾಳೆಲಿ ತು೦ಬಲೀ ಅನುಪ್ಪತ್ತ್ಯದ ಹೋಳಿಗೇ ||
ನೆಗೆಮಾಣಿ ಬಂದಪ್ಪದ್ದೆ ಬೈಲು ರೈಸುಗು ಖಂಡಿತಾ,
ಮಾಣೀ, ಸೂಪರ್ ಆಯಿದು..
🙂
ನೆಗೆ ಮಾಣಿಗೆ “ಚ ವೈ ಹಿ ತು” ಎಲ್ಲಿಯುದೆ ಉಪಯೋಗಿಸೆಕಾಗಿ ಬಯಿಂದಿಲ್ಲೆ. ೧೬ ಅಕ್ಷರದ ಗೆರೆಲಿ ಶ್ಲೋಕ ಕಟ್ಟಿದ್ದು ಲಾಯಕಾಯಿದು. ಹೆ ಹ್ಹೆ ಹ್ಹೆ ಹೇಳದ್ದೆ ಮನಸ್ಸು ತಡೆತ್ತಿಲ್ಲೆ.
ಗಡಿಬಿಡಿಲಿ ಓದಿದರೂ ನೆಗೆ ಬಪ್ಪದು ಖಂಡಿತ..ಭಾರಿ ಲಾಯ್ಕ ಆಯ್ದು..
ಪ್ಪ್…..ಫ್ಹೇಹ್!!!
ಎನಗೆ ಚೆನ್ನೈ ಭಾವನ ನೆಗೆ ನೋಡಿ ಇನ್ನುದೆ ಜೋರು ನೆಗೆ ಬಂತಿದಾ!!! ..ಒಹ್ಹೊಹ್ಹೊಹ್ಹೊ!!! 🙂
ಭಾವನ ನೆಗೆಯಿ೦ದ ಕ೦ಪ್ಯೂಟರ್ ಸ್ಕ್ರೀನು ಕೆ೦ಪಾದ್ದು ಖ೦ಡಿತಾ.. 😉
ಇದು ಯಾವ ಛ೦ದಸ್ಸಿಗೂ ಬಾರ, ಬೈಯ್ಯಡಿ ಆತಾ.
ಹ್ಹೆ ಹ್ಹೆ ಹ್ಹೆ!!! ನ೦ಗೆ ಮೊದಲ ಸಾಲಲ್ಲೇ ಸಿಕ್ಕಾಪಟ್ಟೆ ನೆಗೆ ಬ೦ದೋತು.. ಇಲ್ಲಿ ಬರೀ ಮೂರೇ ಹ್ಹೆ ಹ್ಹೆ ಹ್ಹೆ ಹಾಕಿದ್ದೆ..
ಓಹ್ ಈಗ ಆರು ಆತು… 😉
ಲಾಯಕ್ಕಾಯ್ದು ನೆಗೆಗಾರಣ್ಣಾ…
ನೆಗೆ ಬರುಸುವದರಲ್ಲಿ ನೆಗೆಮಾಣಿ ಹುಶಾರಿಯೇ.
ಖಂಡಿತ, ಎನಗೆ ನೆಗೆ ಬಯಿಂದು. ಮಾಂತ್ರ ಈ ‘ಅನುಷ್ಟುಪ್’ ನ ಪಿಡಿ ಸಿಕ್ಕದ್ದೆ ಇಷ್ಟ ಅಪ್ಪ ಹಾಂಗೆ ಒಪ್ಪ ಕೊಡ್ಲೆ ಆತಿಲ್ಲೆ, ಹ್ಹು.