Oppanna.com

ಇದಕ್ಕೊಂದು ತಮಾಷೆಯ ಅಡಿ ಬರಹ ಕೊಡಿ ನೋಡುವ…

ಬರದೋರು :   ಶ್ಯಾಮಣ್ಣ    on   30/07/2011    31 ಒಪ್ಪಂಗೊ

ಶ್ಯಾಮಣ್ಣ

ನಮ್ಮ ಬೈಲಿನ ವಿಶೇಷ ಎಂತರ ಹೇಳಿತ್ತುಕಂಡ್ರೆ, ಎಲ್ಲಾ ನಮುನೆ ಗೆದ್ದೆಲಿ ಕೃಷಿಮಾಡಿದೋರುದೇ ನೆರೆಕರೆಲಿ ಇದ್ದವು.
ಭಾಮಿನಿಂದ ಹಿಡುದು, ಆರೋಗ್ಯದ ಒರೆಂಗೆ, ಕೆಮರಂದ ಹಿಡುದು ಅಡಿಗೆ ಒರೆಂಗೆ!
ಹೇಳಿದಾಂಗೆ, ಬೈಲಿನೋರಿಂಗೆ ನೆತ್ರಕೆರೆ ಶಾಮಣ್ಣನ ಗುರ್ತ ಇದ್ದೋ?
ಇಲ್ಲದ್ದೇಕೆ – ನಮ್ಮ ವಿಟ್ಳಸೀಮೆಯ ನೆತ್ರಕೆರೆಯೋರು, ಅಲ್ಲದೋ?
ಬೈಲಿಲಿ ಒಂದು ಹೊಸಾ ಗೆದ್ದೆಲಿ ಕೃಷಿಮಾಡ್ತ ಉತ್ಸಾಹ ಇವರದ್ದು. ಅದೆಂತರ?
ಇವು ಕಲಾವಿದ, ನೆಗೆಚಿತ್ರಕಾರ. ಅವು ಪಟ
(cartoon) ಹಾಕಿದ್ದರ ಕಂಡ್ರೇ ಅದು ಅಂದಾಜಿ ಅಕ್ಕು!
ದೊಡ್ಡಜ್ಜನ ಮಗಳಕ್ಕಳ ಪೈಕಿ ಕೊಡೆಯಾಲಲ್ಲಿ ಒಬ್ಬರು ಇದ್ದವಲ್ಲದೋ – ಅವರ ಮನೆಮೇಲ್ಕಟೆ ಮನೆಮಾಡಿಗೊಂಡು ಇದ್ದವು. ಕೊಡೆಯಾಲಲ್ಲೇ ಒಂದು ಕಂಪೆನಿಲಿ ಚಿತ್ರಕಾರ ಆಗಿಂಡು ಕೆಲಸಲ್ಲಿದ್ದವು.

ಅವರ ಕೆಲಸಂಗಳ ಅಂಬೆರ್ಪಿನ ಎಡೆಲಿಯೂ ಬೈಲಿಂಗೆ ಬಂದು ಶುದ್ದಿ ಕೇಳ್ತವು, ಒಪ್ಪ ಕೊಡ್ತವು.
ಇನ್ನು ಶುದ್ದಿ ಹೇಳ್ತವುದೇ.

ಶಾಮಣ್ಣನ ಹಾಂಗೆ ಅಪರೂಪದ ಪ್ರತಿಭೆಗೊ ಬೈಲಿಂಗೆ ಬಂದರೆ ತೂಕ ಹೆಚ್ಚಕ್ಕು. ಅವರ ನೆಗೆಚಿತ್ರಂಗೊ ಬಂದರೆ ನೆಗೆಯೂ ಹೆಚ್ಚಕ್ಕು.
ಶಾಮಣ್ಣಂಗೆ ಅಧಿಕೃತ ಸ್ವಾಗತಮ್!

ಶಾಮಣ್ಣನ ಪುಟಂಗೊ:
ಬೈಲಿನ ನೆರೆಕರೆ
: https://oppanna.com/nerekare/cgsystem
ಮೋರೆಪುಟ
: http://www.facebook.com/profile.php?id=100001226443439

ಶಾಮಣ್ಣನ ಎಲ್ಲ ಶುದ್ದಿಗೊಕ್ಕೂ ಒಪ್ಪಕೊಟ್ಟು ಪ್ರೋತ್ಸಾಹ ಕೊಡೇಕು ಹೇಳ್ತದು ನಮ್ಮ ಆಶಯ.
~
ಗುರಿಕ್ಕಾರ°

ಅಡಿ ಬರಹ ಕೊಡಿ:

ಇದಾ, ಇಲ್ಲಿ ಒಂದು ಆನು ಬಿಡಿಸಿದ ಕಾರ್ಟೂನು ಹಾಕಿದ್ದೆ.
ಇದಕ್ಕೊಂದು ತಮಾಷೆಯ ಅಡಿ ಬರಹ ಕೊಡಿ ನೋಡಿಕ್ಕುವ..  🙂

ಅಡಿ ಬರಹ ಕೊಡಿ

31 thoughts on “ಇದಕ್ಕೊಂದು ತಮಾಷೆಯ ಅಡಿ ಬರಹ ಕೊಡಿ ನೋಡುವ…

  1. ಪರೀಕ್ಷಗೆ ಸರಿಯಾಗಿ ಓದದ್ದೇ ಪುಸ್ತಕ ತಲೆ ಅಡಿಯಂಗೆ ಮಡಿಕ್ಕೊಂಡು ಓರಗಿದವಂಗೆ ತಲೆಕೊಂಬೇ ಗತಿ

  2. (ಹೋ…ಇವರ ಗುರ್ತ ಇದ್ದು ಎನಗೆ!!)
    ಆರಿಂದು?… ಮನಿಕ್ಕೊಂಡು ಗೊರಕ್ಕೆ ಹೊಡವೋರದ್ದಾ, ಅಲ್ಲ ತಲೆಗೊಂಬು ಹಿಡ್ಕೊಂಡೋರದ್ದ?

  3. ತಪ್ಪು ಮಾಡೋದು ಸಹಜಾ ಕಣೋ ತಿದ್ದಿ ನಡೆಯೋನು ಮನುಜಾ ಕಣೋ ಹೇಳಿ ಪದ್ಯ ಇದ್ದನ್ನೆ , ಹಾಂಗಾಗಿ ಪುಟ್ಟಕ್ಕನ ಒಪ್ಪಕ್ಕ ಹೇಳಿ ಹೇಳಲೆ ಅಕ್ಕು ಹೇಳಿ ಕಾಣ್ತು…………….

    1. ಹರೇ ರಾಮ ಪ್ರಸಾದಣ್ಣ…….
      ಧನ್ಯವಾದ೦ಗೊ……….

      (ತಪ್ಪು ಮಾಡದವ್ರು ಯಾರವ್ರೇ?
      ತಪ್ಪು ಮಾಡದವ್ರು ಎಲ್ಲವ್ರೆ?
      ಅಪ್ಪಿ ತಪ್ಪಿ ತಪ್ಪಾಗುತ್ತೆ……….)

  4. ದಿಂಬುವಿಲಿ ಇಪ್ಪದು ತಲಗೆ ಹಿಡಿವದರಿಂದ ಪುಸ್ತಕಲ್ಲಿ ಇಪ್ಪದು ಹಿಡಿವದು ಒಳ್ಳೇದು.ಹಾಂಗೆ ಮಾಡೆಕ್ಕಾರೆ ಇದೇ ಸಮಯ ಸೂಕ್ತ.

  5. ಪುಟ್ಟಕ್ಕೋ ನೀನು ಕೊಟ್ಟ ಒಪ್ಪ (ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ) ಎಂತಕೆ ಹೇಳಿ ಗೊಂತಾಯಿದಿಲ್ಲೆನ್ನೆ, ಸ್ವಾಮಿ ವಿವೇಕಾನಂದ ಹೇಳಿದ್ದು ತಮಾಶಗೆ ಹೇಳಿ ನಿನಗಾರು ಹೇಳಿದ್ದು ? ದೊಡ್ಡವು ಹೇಳಿದ್ದದರಎಲ್ಲಾ ತಮಾಶಗೆ ಹೇಳಿ ತಿಳುಕ್ಕೊಂಡರೆ ಹೇಂಗೆ ? ತಮಾಶೆ ಮಾಡುದಕ್ಕೂ ಒಂದು ಮಿತಿ ಬೇಡದೋ……….? ಶಾಮಣ್ಣ ಹೇಳಿದ್ದು ತಮಾಶೆ ಅಡಿಬರಹ ಕೊಡ್ಲೆ ನೀನು ಹೇಳಿದ್ದು ಸೀರಿಯಸ್ ವಿಶಯ ಅದುತಮಾಶೆ ಅಲ್ಲನ್ನೆ………?

    1. ಹರೇ ರಾಮ……..
      ಆನು ತಮಾಶೆಯಾಗಿ ಬರದ್ದಲ್ಲ ಪ್ರಸಾದಣ್ಣ….. ಆನು ಎಲ್ಲಿಯಾದರು ತಪ್ಪು ಬರದ್ದರೆ ಕ್ಷಮಿಸಿ ಪ್ರಸಾದಣ್ಣ……… ನಿ೦ಗಳ೦ತವರು ಸಲಹೆ ಕೊಟ್ಟಪ್ಪಗಲೇ ಈ ಪುಟ್ಟಕ್ಕ ದೊಡ್ಡಕ್ಕ ಅಪ್ಪದು……..

  6. ನಿದ್ದೆ ಬಂದ ಅಂದ ಕಂಡು
    ಸದ್ದು ಮಾಡದಂತೆ ದಿಂಬು
    ಕದ್ದು ಕೊಂಡು ಹೋಗ ಬಹುದೆ
    ಪೆದ್ದು ಭಾವನೆ ?!!

  7. ” ಪುಸ್ತಕದ ಒಳಾಣದ್ದು ತಲೆಯ ಒಳಾ೦ಗೆ ಸೇರೊಗ ಹೀ೦ಗೂ ಶಬ್ದ ಆವುತ್ತೊ? ಹಾ೦ಗಾರೆ ಎನ್ನ ಒರಕ್ಕಿನ ಗೆತಿ?”

  8. ವಾವ್… ಬಾರೀ ಲಯ್ಕಿದ್ದು ನಿಂಗಳ ಅಡಿಬರಹಂಗೋ… ಎಲ್ಲೋರಿಂಗೂ ತುಂಬಾ ಧನ್ಯವಾದಂಗೋ.
    ( ಕೆಲವೆಲ್ಲಾ ಹೀಂಗೆ ಕೊಡ್ಲಕ್ಕು ಹೇಳಿ ಎನ್ನ ತಲೆಗೂ ಹೊಕ್ಕಿದ್ದಿಲ್ಲೆ.)

    ಸುಭಗರ ಅಂದಾಜಿ ಸರಿ… ಆನುನಿಂಗ ಗ್ರೇಷಿದಾಂಗೆ ಅದೇ ಜನ.
    ಓಣಿಯಡ್ಕ ಕಿಟ್ಟಣ್ಣಂದು ತುಂಬಾ ಎನ್ನ ಯೋಚನೆಗೆ ತುಂಬಾ ಹತ್ತರೆ ಇದ್ದು..
    prasaad ಮತ್ತೆ (Gopalakrishna BHAT S.K. -ಗೊರಕೆ ಹೊಡೆದು ಮನಿಗಿದವಂಗೆ ಸರಕ್ಕು ಹೋದರೂ ಒರಕ್ಕು ಬಿಡ….)
    ಇದುದೆ ಲಾಯ್ಕಿದ್ದು.

  9. ದಿ೦ಬು ನನ್ನ ಕೈಯಲ್ಲಿ…
    ಗೊರಕೆ ನಿನ್ನ ಬಾಯಲ್ಲಿ….!!!!!

  10. ದಿ೦ಬು ನನಗೆ….!!!!!
    ನಿದ್ರೆ ನಿನಗೆ …????

  11. ಹ್ಹಹ್ಹಹ್ಹಾ…. ಇದುದೆ ಲಾಯ್ಕಿದ್ದು ದೀಪಿ ಅಕ್ಕಾ…
    ಎಲ್ಲಾ ಸರಿ… ‘ಕಿಣಿ’ ಆರು ಗೊ೦ತಾತಿಲ್ಲೆನ್ನೆ!!! 😉

  12. ಯಬ್ಬ..ಪುಸ್ತಕಲ್ಲಿ ಇಪ್ಪದರ ಎಲ್ಲಾ ಮಸ್ತಕಕ್ಕೆ ಹಾಕುವ ಕಿಣಿಯೇ!!! 🙂

  13. ಅಬ್ಬ ದಿಂಬು ಜಾರಿಸಿ ಆತು.. ಇನ್ನು ಗೊರಕೆ ಕೇಳದ್ದಲ್ಲಿ ಹೋಗಿ ಮನುಗುವ….

    1. ಇದು ಸೂಪರ್ ಆಯಿದು ಕಿಟ್ಟಣ್ಣಾ…

      1. ಧನ್ಯವಾದ ಗಣೇಶಣ್ಣ.. ಃ)

  14. ” ತಲೆಕೆಳ ದಿ೦ಬೋ ಮತ್ತೊ೦ದೋ ಹೇಳಿ ಒರಕ್ಕಿ೦ದ ಎದ್ದು ನೋಡ್ತನೋ??, ಆಹ್… ದಿ೦ಬು ನವಗಾತು..” 😉

  15. 1.ಚಿಂತೆ ಇಲ್ಲದ್ದವಂಗೆ ಸಂತೆಲಿಯೂ ಒರಕ್ಕು ಹೇಳಿ ಇಪ್ಪ ಹಾಂಗೆ .. ತಿರುಗಾಡಿಗೆ ಹೇಂಗಿಪ್ಪಲ್ಲಿಯೂ,ಹೇಂಗುದೆ ಒರಕ್ಕು..

    2. ಇವನ ಕೊರವ ಭರಕ್ಕೆ ತಲೆ ಅಡಿಲಿ ಇದ್ದದು ತಪ್ಪುಸಿ ಮಡಗಿದರೂ ಗೊಂತಾಯಿದಿಲ್ಲೇ.. 😉 🙂 !!!

    3. ಹೇ ಮಾ(ನ)ವಾ!!! ಗಟ್ಟಿಒರಕ್ಕು ಬಂದ ಮೇಲೆ ತಲೆದಿಂಬಿನ ಹಂಗೆಂತಕೆ !!!

    ಶಾಮಣ್ಣಾ,

    ಬೈಲಿಂಗೆ ಸ್ವಾಗತ..
    ಚಿತ್ರ ತುಂಬಾ ಲಾಯ್ಕಾಯಿದು.. ವಾರಕ್ಕೊಂದು ಆದರೂ ಬೈಲಿಲಿ ಬತ್ತಾ ಇರಲಿ ಹೀಂಗಿಪ್ಪದು..
    ಅದಾ!! ಈಗ ಗೊಂತಾತು.. ನಮ್ಮ ನೆಗೆ ಮಾಣಿಯ ಡಿಕಿಷ್ಣರಿ ಎನಗೆ ಕಂಡತ್ತು ಎಲ್ಲಿದ್ದು ಹೇಳಿ!!!!
    ಪುಸ್ತಕ ಸಿಕ್ಕಿ ಅಪ್ಪಗ ಆದರೂ ಬೈಲಿಲಿ ಇಂಗ್ಳೀಷು ಬಕ್ಕೋ? ಉಮ್ಮ!!! 😉

  16. ಗೊರಕೆ ಹೊಡೆದು ಮನಿಗಿದವಂಗೆ ಸರಕ್ಕು ಹೋದರೂ ಒರಕ್ಕು ಬಿಡ….

  17. ಗುರಿಕ್ಕಾರಣ್ಣೋ.. ಮಣಿಪಾಲಂದ ವಾರಕ್ಕೊಂದಾರಿ, ತಿಂಗಳಿಂಗೊಂದಾರಿ ಪ್ರಕಟ ಅಪ್ಪ ಪತ್ರಿಕೆಗಳಲ್ಲಿ ಹನಿಯ ವರ್ಷ ನಮ್ಮ ಇದೇ ಶ್ಯಾಮಣ್ಣ ಅಲ್ಲದೊ ಚಿತ್ರ ಮಾಡಿಂಡಿದ್ದದು?

  18. ಪುಸ್ತಕ ಓದುಲೆ ಕೂದು ಒರಕ್ಕು ತೂಗುದಕ್ಕೆ, ತಲೆ ಅಡಿಯಂಗೆ ಮಡುಗಿ ಒರಗಿದರೆ ಬೇಗ ತಲೆಗೆ ಹೋಕ್ಕು…!

  19. ತಲೆ ಅಡಿಂದ ತಲೆಗೊಂಬು ತೆಗದು ಪುಸ್ತಕ ಇಟ್ಟದು ಆನು ಹೇಳಿ ಗೊಂತಾಗದ್ದರೆ ಸಾಕು…….

  20. ಅರೇ, ಆನು ತಲೆಕೊಂಬು ತಪ್ಪಂದ ಮದಲೇ ಒರಗಿ ಆತಾ? ನೀನಡ್ಡಿಲ್ಲೆ ಅಪ್ಪಾ, ಆಫೀಸಿಲಿ ವರದಿಗಳ ಕುಂಡೆಅಡಿಹಾಕಿ ಒರಗುತ್ತೆ,ಮನೆಲಿ ತಲೆಅಡಿಗೆ ಮಡಿಕ್ಕೊಂಡು ಒರಗುತ್ತೆ. ಗಟ್ಟಿಗ !

  21. ಹಾಳು ಮಾಡ್ತಿಲ್ಲೆ ನಿನ್ನ ಒರಕ್ಕಿನ ,ಹೊರದ್ದೆ ಬಿಡ್ತಿಲ್ಲೆ ನಿನ್ನ ಸರಕ್ಕಿನ……….. ನಿನ್ನ ವರದಿಯೆಲ್ಲಾ ಅಂತೆ, ಯೆನ್ನಕೈಲಿಪ್ಪದೆಲ್ಲಾ ನೋಟಿನ ಕಂತೆ………ಹಾಂಗಕ್ಕೋ ಅಲ್ಲಾ ಹೀಂಗಕ್ಕೋ……….?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×