Oppanna.com

ನಿಂಗೊಗೆ ಎಂತಾರೂ ಅಂದಾಜು ಆವುತ್ತೋ?

ಬರದೋರು :   ಶ್ಯಾಮಣ್ಣ    on   08/08/2011    14 ಒಪ್ಪಂಗೊ

ಶ್ಯಾಮಣ್ಣ

ಇಲ್ಲೊಂದು ಕಾರ್ಟೂನು ಹಾಕಿದ್ದೆ…  ನೆಗೆ ಮಾಡೆಡಿ ಆತೋ….

kantabharana

ಆನು ಹೇಳಿತ್ತಿದ್ದೆ ಅಲ್ಲದೋ… ನಿನ್ನ ಭವಿಷ್ಯಲ್ಲಿ ನಿನಗೆ ಕಂಠಾಭರಣ ಯೋಗ ಇದ್ದು ಹೇಳಿ….  🙂

———————————————————————————————————————————-

ಇತ್ಲಾಗಿ  ಒಂದು ಸರ್ತಿ ಒಂದು ಹೊಡೆಲಿ ಒಬ್ಬ ಬಟ್ಟ ಮಾವ (ಬೈಲಿನ ಬಟ್ಟ ಮಾವ ಅಲ್ಲ) ಕಂಪೂಟರು ಮಡಿಕ್ಕೊಂಡು ಮಕ್ಕೊಗೆ ಎಂತದೋ ಹೇಳಿಕೊಟ್ಟುಗೊಂಡು ಇತ್ತಿದ್ದವು.
ಎಂತ ಇಕ್ಕು ಹೇಳಿ ಎನಗೆ ಅಂದಾಜಾಯಿದಿಲ್ಲೆ… ನಿಂಗೊಗೆ ಎಂತಾರೂ ಅಂದಾಜು ಆವುತ್ತೋ?
Andaju iddo?

14 thoughts on “ನಿಂಗೊಗೆ ಎಂತಾರೂ ಅಂದಾಜು ಆವುತ್ತೋ?

  1. ಮಕ್ಕಳೇ , ಈ ವಾರಿ ನೂಲ ಹುಣ್ಣಮೆಗೆ ಎನ ಪುರುಸೊತ್ತಿಲ್ಲೇ ಇದಾ. ಮಾಮಾಸಮ ಬೆಂಗಳೂರಿಂಗೆ ಬಪ್ಪಲೆ ಹೇಳಿದ್ದ°. ಬಟ್ಟಮಾವ° ಜೆನಿವಾರ ಹಾಕುವ ಮಂತ್ರ ಬೈಲಿಲಿ ಕ್ರಮ ಸಹಿತ ಕೊಟ್ಟಿದವಿದಾ. ಅದರಿಲ್ಲಿಪ್ಪಾಂಗೆ ಮಾಡಿರಾತು ಮಿನಿಯಾ. ಕೇಟತ್ತೋ.

  2. ಭಾರೀ ಲಾಯ್ಕಾಯಿದು ಶ್ಯಾಮಣ್ಣ, ಒಳ್ಳೆ ಒಪ್ಪ೦ಗಳೂ..

  3. ಹಹ್ಹಹ್ಹಹ್ಹ್ಹಹ್ಹ್ಹಹ್ಹ್ಹಹ್ಹ್ಹಹ್ಹ್ಹ್ಹಹ್ಹ್ಹ್ಹಾ…
    ಕ೦ಠಾಭರಣ ಪಷ್ಟುಕ್ಲಾಸಾಯಿದು..

  4. ಓಯ್ ಶ್ಯಾಮಣ್ಣೋ.. ಬಟ್ಟಮಾವ ಹೇಳಿಕೊಡುದು ಎಂತರಾಳಿ ಯೆನಗೊಂತಾತು..!
    ” ಅಂಗುಷ್ಠ ಅನಾಮಿಕಾಭ್ಯಾಂ Alt+Ctrl, ಅಂಗುಷ್ಠೇನ space bar, ಕನಿಷ್ಠಿಕೇನ Shift…” 😉

  5. ಮಕ್ಕಳೆ…
    ಇವತ್ತು ನಿ೦ಗೊಕೆ ಬಾಯಲ್ಲಿ ಹೇಳಿ ಕಲಿಸುಲೆ ಆಗ್ತಿಲ್ಲೆ..
    ಕ೦ಪ್ಯೂಟರ್ ಇಟ್ಕೊ೦ಡು ಹೇಳೊ ಕಾಲ ಬ೦ತಲ್ಲ್ರೊ…

  6. ನೆಗೆಚಿತ್ರಂಗಳ ಹಾಕಿಕ್ಕಿ ನೆಗೆ ಮಾಡಿಕ್ಕೆಡಿ ಹೇಳಿರೆ ಹೇಂಗಣ್ಣಾ…

  7. ಅಲ್ಲ ಶ್ಯಾಮಣ್ಣ, ಕಾರ್ಟೂನ್ ಹಾಕಿ ನೆಗೆ ಮಾಡೆಡಿ ಹೇಳಿರೆ ಹೇಂಗೆ? ಇದು ಎದುರು ಮೈಸೂರು ಪಾಕ್ ಇಟ್ಟು ತಿನ್ನೆಡಿ ಹೇಳಿದ ಹಾಂಗೆ ಆತು…

  8. ಆನು ನಿಂಗೊಗೆ ಮಂತ್ರ ಹೇಳಿ ಕೊಡ್ತೆ. ನಿಂಗ ಎನಗೆ ಒಪ್ಪಣ್ಣ.ಕೊಮ್ ಮತ್ತು ಮೋರೆಪುಟ ಕುಟ್ಟುಲೆ ಹೇಳಿಕೊಡಿ.. ಅದುವೇ ಗುರುದಕ್ಷಿಣೆ..

  9. ಇದಾನೀಂ ಗಣಕ ಯಂತ್ರೇ ಕಿಂ ಕಿಂ ಅಸ್ತಿ ಇತಿ ಅಹಂ ಪಾಠಯಾಮಿ.

  10. ಸತ್ಯನಾರಾಯಣ ಪೂಜೆಗೆ S ಒತ್ತಿ, ಗಣಹೋಮಕ್ಕೆ G. ಮತ್ತೆ , ಮಂತ್ರ ಉರು ಹೊಡೆಯಕ್ಕಾದ್ದಿಲ್ಲೆ.. ತಂತ್ರವ ಕಲ್ತುಗೊಳ್ಳಿ. ಏನಾರು ಸಂಶಯ ಇದ್ದರೆ f1 ಒತ್ತಿರಾತು.

  11. ಮಕ್ಕಳೇ, ಕಂಪ್ಯೂಟರಿಲಿ ಆಟ ಮತ್ತೆ ಆಡ್ಲಕ್ಕು, ಈಗ ಬೇಗ ಸಂಧ್ಯಾ ವಂದನೆ ಮಂತ್ರ ಕಲ್ತುಗೊಳ್ಳಿ. ಎನಗೆ ಒಂದು ಪೌರೋಹಿತ್ಯಕ್ಕೆ ಹೋಪಲಿದ್ದು. ಆನು ಬೇಗ ಹೋಯೆಕ್ಕು.ಸುರು ಮಾಡುವೊನಾ?

  12. ಅಪ್ಪೋ ಶ್ಯಾಮಣ್ಣ, ಆ ಜೋಇಸನ ತಲೇಲಿ ಎಂತ ಎಲಿ ಹತ್ತಿ ಕೂದೊಂಡಿದ್ದೋ!!

    ಕಂಪ್ಯೂಟರ್ ಆನ್ ಆಯ್ದೋ ಅದು?!ಆಗಿದ್ರೆ, ಭಟ್ಟ ಮಾವ ಹೇಳ್ತಾಯ್ಕು ಕಂಪ್ಯೂಟರ್ ಹತ್ರೆ ಕೂದು ಓದಿರೆ, ಮಕ್ಕಳೇ, ಶ್ರದ್ಧಾಭಂಗ ಅಕ್ಕು ಹೇಳಿಯೋ?! ಅಲ್ಲಾ,
    “ಮಕ್ಕಳೇ, ಶರ್ಮಪ್ಪಚ್ಚಿ ಕೊಟ್ಟ ಯೋಪಾಂ ಪುಷ್ಪಂ ವೇದ, ಪುರುಷ ಸೂಕ್ತ , ನಾರಾಯಣ ಸೂಕ್ತ ಕಂಪ್ಯೂಟರ್ಲಿ ಒಪ್ಪಣ್ಣ.ಕಾಂಲಿ ಇದ್ದು , ಅದರ ಒಂದರಿ ಓದಿಕ್ಕಿ, ಕೇಳಿಯೊಂಡು ಉರು ಹಾಕಿ” ಹೇಳಿಯೋ?!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×