Oppanna.com

ಅವಲಂಬನ : ಬೆಂಗಳೂರಿಂದ ಮೇಲುಕೋಟೆಗೆ ಹವ್ಯಕರ ಯಾತ್ರೆ

ಬರದೋರು :   ಒಪ್ಪಣ್ಣ    on   16/03/2009    6 ಒಪ್ಪಂಗೊ

ಎರಡು ತಿಂಗಳ ಹಿಂದೆಯೇ ಹೇಳಿತ್ತಿದ್ದವು, ಮಾರ್ಚಿಲಿ ಬತ್ತು ನಮ್ಮ ಅವಲಂಬನದ ಟೂರು (ಯಾತ್ರೆ ), ಈ ಸರ್ತಿ ಮೇಲುಕೋಟೆಗೆ ಹೋಪದು, ಹೇಳಿ. ಅವಲಂಬನ ಹೇಳಿರೆ ನಮ್ಮ ಗುರುಗೊ ಸಂಕಲ್ಪಿಸಿದ ಒಂದು ಬಳಗ. ಅ(ಕ್ಷರ), ವ(ಸತಿ), ಲ(ಗ್ನ), ಬ(ದುಕು), ನ(ಲಿವು) – ಹೇಳ್ತ ೫ ಒಳಾಣ ಗುಂಪುಗೊ ಸೇರಿ ಒಂದು ದೊಡ್ಡ ಸಹಾಯವಾಣಿ ಬಳಗ. ಸಮಾಜದ ೫ ಅಗತ್ಯ ಕ್ಷೇತ್ರಂಗಳ ಅಗತ್ಯತೆಯ ನೋಡಿಗೊಂಬದು ಈ ಬಳಗದ ಸೇವೆ. ಆನುದೆ ಈ ಬಳಗಲ್ಲಿ ಇಪ್ಪದು ಸಾರ್ಥಕತೆ. ಸಕ್ರಿಯ ಆಗಿ ಕೆಲಸ ಮಾಡಿಗೊಂಡು ಇದ್ದು ಈ ಬಳಗ. ಎಷ್ಟೋ ನಮ್ಮ ಮಕ್ಕೊಗೆ ಉಪಕಾರ ಆಯಿದು ಇದರಿಂದಾಗಿ.
ಕಳುದ ಸರ್ತಿ ಶಿವಗಂಗೆಗೆ ಹೊಯಿದೆಯೊ°. ಬಾರೀ ಲಾಯ್ಕಿದ್ದು ಆ ನೆಂಪುಗೊ. 🙂 ಈ ಸರ್ತಿ ಮೇಲುಕೋಟೆಯ ಗಮ್ಮತ್ತು ಅದು ಹೆಂಗೆ ಬಿಡ್ಲಿ? ಅಲ್ದೋ? ‘ಅಕ್ಕು ಬಾವ, ಎನ್ನದು ಒಂದು ಸೀಟು ನಿಘಂಟು’ ಹೇಳಿದೆ. ಮಾರ್ಚಿ ೧೫ಕ್ಕೆ ಹೇಳಿ ನಿಘಂಟು ಆತು.
ಅದು ನಿನ್ನೆ ಇದಾ..
ಮೊನ್ನೆ ಇರುಳು ಎನ್ನ ಕೆಲಸಂಗ ಅದು ಇದು, ಮತ್ತೆ ಎನ್ನ ಚೆಂಙಾಯಿಗಳ ಹತ್ತರೆ ಎಲ್ಲ ಮಾತಾಡಿ ಮನುಗುವಾಗ ಗಂಟೆ ೫. kopie dames en heren horloges ಆರೂವರೆಗೆ ಬೆಂಗ್ಳೂರು ಮಠಕ್ಕೆ ಎತ್ತುಲೇ ಹೇಳಿತ್ತಿದ್ದವು. ಆರೂ ಕಾಲಕ್ಕೆ ಎದ್ದೆ. ಓ ರಾಮ. ಒಂದು ಸಣ್ಣಕೆ ಮಿಂದ ಹಾಂಗೆ ಮಾಡಿ, ಬೈಕ್ಕು ಹತ್ತಿ ಓಡಿದೆ. ಬರೇ 20 ನಿಮಿಷಲ್ಲಿ ಮನೆಂದ ಮಠಕ್ಕೆ. ೭ಕ್ಕೆ ಮಠಲ್ಲಿ ಇತ್ತಿದ್ದೆ. ಮತ್ತೂ ಎನ್ನ ಹಾಂಗೆ ಕೆಲವು ಜೆನ ಬಪ್ಪಲೆ ಬಾಕಿ ಇತ್ತು. ಅಂತೂ ಏಳೂವರೆ ಅಂದಾಜಿಗೆ ಒಂದು ಜಯಕಾರ ಹಾಕಿದೆಯ°,ಎಂಗಳ ರಥ ಹೇರಟತ್ತು. ಒಂದು ಅರ್ಧ ದಾರಿಲಿ ಕಟ್ಟಿ ತೆಕ್ಕೊಂಡು ಹೋದ ಇಡ್ಲಿ ತಿಂದಾತು, ಎಂಗಳ ಬಸ್ಸಿಲಿ ಇದ್ದ ಕೂಸುಗೊ ಅವರ ಪದ್ಯ-ಜ್ಞಾನ ಭಂಡಾರ ಪೂರ ತೋರ್ಸಿತ್ತಿದ್ದವು, ಉಮ್ಮ, ಎಂತದೋ ಅಂತ್ಯಾಕ್ಷರಿ ಅಡ, ಪದ್ಯ ಹೇಳ್ತದು, ಅತ್ಲಾಗಿ ಇತ್ಲಾಗಿ. ಅವ° ನಿಲ್ಸಿದ ಅಕ್ಷರಂದ ಈಚವ°, ಇವನಿಂದ ಮತ್ತೆ ಪುನಾ ಅವ°. ಬಟ್ಟಕ್ಕೊ ಮಂತ್ರ ಹೇಳುವಾಗ ಕಕ್ಷಿ ಹೇಳ್ತವಲ್ದೋ, ಹಾಂಗೆ. 🙂
ನೆಡು ಮದ್ಯಾನ್ನ ಮೇಲುಕೋಟೆಗೆ ಎತ್ತಿತ್ತು.

ಮಠದ ಶಿಷ್ಯ ಒಬ್ಬ ವಿದ್ವಾಂಸರು ಸಿಕ್ಕಿದವು. ಎಂಗಳ ದರ್ಶಕ (ಗೈಡ್) ಆಗಿ ಮುಂದೆ ನಿಂದು ಪೂರ ವಿವರ ತೋರ್ಸಿದವು. ಸುರುವಿಂಗೆ ಚೆಲುವರಾಯಸ್ವಾಮಿ, ಮತ್ತೆ ಗುಡ್ಡೆ ತಲೇಲಿ ಇಪ್ಪ ಯೋಗಾ ನರಸಿಂಹನ ನೋಡಿ ಆತು. ಅಯ್ಯಂಗಾರಿಗೊ ಪೂಜೆಗೆ ಅಲ್ಲಿ. ಕೆಳ ಬಂದು ಗಟ್ಟಿಗೆ ಉಂಡೆಯೊ°. ನಮ್ಮ ಊರ ಜೆಂಬ್ರದ ಊಟವೇ ಅದು – ಹೋಳಿಗೆ ಮತ್ತೆ ಚೂರ್ಣಿಕೆ ಎರಡೂ ಇತ್ತು. 🙂 . ಒಂದನೇ ಹಂತಿ ಉಂಡಿಕ್ಕಿ ಎರಡನೆ ಹಂತಿ ಬಳುಸಿಕ್ಕಿ ಬಸ್ಸಿಲಿ ಬಂದು ಕೂದ್ದು. ಮಳೆ ಸೊರುದತ್ತು ಅದಾ.. ಅಷ್ಟಪ್ಪಗ. ಎಂಗಳ ಎಲ್ಲ ಕೆಲಸ ಮುಗುದ ಕಾರಣ ಬಚಾವ್. ಅಲ್ಲದ್ರೆ ಚೆಂಡಿ ಕಾಕೆ ಆವುತ್ತಿತೆಯೊ°. ಎಂಗೊ ಹೋದ ಕಾರಣ ಮಳೆ ಆತು ಹೇಳಿ ಗ್ರೇಶಿದವೋ ಏನೋ…. 😉

ತೊನ್ನೂರುಕೆರೆ ಹೇಳಿ ಒಂದು ಜಾಗೆ ಇದ್ದು. ದೊಡ್ಡ ಕಲ್ಲಿನ ಗುಡ್ಡೆ ಎರಡರ ಮದ್ಯಲ್ಲಿ ಕಟ್ಟ ಕಟ್ಟಿದ್ದು. ಎಂತಾ ನೀರು ಬಾವ. ಒಂದರಿ ಹೊಯೆಕ್ಕು. ಸಣ್ಣ ಮಟ್ಟಿನ ಸಮುದ್ರ ದ ಹಾಂಗೆ ಇದ್ದು. ಕುಂಬ್ಳೆ ಕಡಲಿಲಿ ಬತ್ತಷ್ಟು ದೊಡ್ಡ ಅಲೆಗೊ 🙂 . ಮಕ್ಕೊ ಎಲ್ಲ ಅತ್ಲಾಗಿ ಇತ್ಲಾಗಿ ರಜ್ಜ ತಿರುಗಿದವು.ಶ್.. 😉 ಒಂದು ಗಟ್ಟಿ ಚಾಯ ಕುಡುದವು ಕೆಲವು ಜೆನ.

ಹೊತ್ತಪ್ಪಗ ಒಂದು ವೃತ್ತ ಸಭೆ ಆತು. ಎಲ್ಲ ಮಾತಾಡಿದವು. ರಾಂಭಾವನ ಗರಂ ಮಜ್ಜಿಗೆ ಕುಡುದವು ಎಲ್ಲರು. ಮಿಕ್ಷರು, ಲಾಡು ಎಲ್ಲ ಇತ್ತು.

ಇರುಳು ಸೀದಾ ಬೆಂಗ್ಲೂರಿಂಗೆ. ಬಪ್ಪಗ ರಜ್ಜ ಬಸ್ಸು ತೊಂದರೆ ಆಗಿ ತಡವಾತು, ಎಲ್ಲ ತುಂಬಾ ಲಾಯ್ಕಾಯಿದು, ಒಂದರಿ ನಮ್ಮ ಬೆಂಗ್ಳೂರಿಲಿ ಇಪ್ಪ ಒಪ್ಪಣ್ಣ-ಒಪ್ಪಂಕ್ಕಂಗಳ ಎಲ್ಲ ಭೇಟಿ ಅಪ್ಪಲೆ ಸಿಕ್ಕಿತ್ತು. ಕುಶಿ ಆತು. ಬೊಬ್ಬೆ ಹೊಡದು ಸ್ವರ ಮಾಂತ್ರ ಹೋತು.
ಒಂದೊಪ್ಪ: ಎಲ್ಲ ಸುಖಕಾರವಾಗಿ ಮನೆಗೆ ಎತ್ತುವನ್ನಾರ ಕೇಪಿ ಅಣ್ಣಂಗೆ ಮಾಂತ್ರ ವರಕ್ಕಿಲ್ಲೆ ಹೇಳುದು ಸತ್ಯ. 🙂

6 thoughts on “ಅವಲಂಬನ : ಬೆಂಗಳೂರಿಂದ ಮೇಲುಕೋಟೆಗೆ ಹವ್ಯಕರ ಯಾತ್ರೆ

  1. @ ಆಚ ಕರೆ ಮಾಣಿ :

    ಬೈಕ್ಕು ಕಾಲೆಡಕ್ಕಿಲಿ ಇತ್ತಲ್ದ ಮಾಣಿ..!
    ನೀ ಏಕೋ° ಹೀಂಗೆ ? 🙂

    ~
    ಒಪ್ಪಣ್ಣ

  2. ಬೈಕ್ಕು ಹತ್ತಿದ್ದೇನೋ ಸರಿ , ಆದರೆ ಓಡುವಾಗ್ ಬೈಕ್ಕು ಎಲ್ಲಿತ್ತು ?……..

  3. ಅಣ್ಣ ( ದೊಡ್ಡ ) ಹೇಳಿದ್ದು ಸರೀ ಆಯ್ದು …..
    ಹಾಂಗೆ ಆಯೆಕ್ಕು ಮಹೇಶಣ್ಣ ನಿನಗೆ ……….. 🙂

    —ಅಬ್ಬೆ

  4. ಅರ್ಜೆಂಟ್ ಇತ್ತು ಅಣ್ಣ ಆ ದಿನ, ಹಾಂಗೆ ಓಡಿದ್ದು, ಅಷ್ಟೆ . . . 🙁
    ಪುರುಸೊತ್ತಿದ್ದರೆ ಒರಗುದು, ಇಲ್ಲದ್ರೆ ಓಡುದು – ಇದು ಒಪ್ಪಣ್ಣನ ಕಥೆ ಅಲ್ದೋ?

  5. “ಬೈಕ್ಕು ಹತ್ತಿ ಓಡಿದೆ. ಬರೇ 20 ನಿಮಿಷಲ್ಲಿ ಮನೆಂದ ಮಠಕ್ಕೆ. ೭ಕ್ಕೆ ಮಠಲ್ಲಿ ಇತ್ತಿದ್ದೆ”
    ಅಷ್ಟು ಸ್ಪೀಡು ಹೋಗೆಡ ಬೈಕಿಲಿ ಹೇಳಿ ಹೇಳಿದ್ದಲ್ದೋ ನಿನ್ನ ಹತ್ತರೆ ?.ಇನ್ನೊಂದರಿ ಅಷ್ಟು ಜೋರು ಓಡ್ಸಿರೆ ಕೀ ತೆಗದು ಮಡುಗುತ್ತೆ ನೋಡು 🙂 :).

    ಮುರಳಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×