Oppanna.com

ಹಂಸ ನೀರಿಲಿಪ್ಪ ಹಾಂಗೆ ನಾವು ಭೂಮಿಲಿರೆಕ್ಕು : ಒಪ್ಪಣ್ಣನ ಅಜ್ಜ

ಬರದೋರು :   ಒಪ್ಪಣ್ಣ    on   20/03/2009    5 ಒಪ್ಪಂಗೊ

ನಮ್ಮ ಪರಿಸರದ ಕೆಲವು ಜೀವಿಗಳ, ವಸ್ತುಗಳ ಎಲ್ಲ ಉದಾಹರಣ ಮನುಷ್ಯನ ಜೀವನಕ್ಕೆ ಹೊಂದಿಕೆ ಅಪ್ಪ ಹಾಂಗೆ ಅಜ್ಜಂದ್ರು ಕಥೆ ಹೇಳುಗು. ಅದರಿಂದ ನವಗೆ ನೀತಿ ನೆಂಪುದೇ ಒಳಿತ್ತು, ಆ ಪ್ರಾಣಿಗಳೂ ಮನಸ್ಸಿಂಗೆ ಹತ್ತರೆ ಆವುತ್ತು. ಅಲ್ದೋ? ಮನೆಲಿ ಅಜ್ಜ ಒಂದೊಂದರಿ ಹೇಳುಗು, ಹಂಸ ಇಲ್ಲೆಯೋ, ಅದು ನೀರಿಲಿ ಇಪ್ಪ ಹಾಂಗೆ ನಾವು ಭೂಮಿಲಿ ಇರೆಕ್ಕೂಳಿ.

ಇದರ ತಾತ್ಪರ್ಯ ಎಂತರ ಹೇಳಿತ್ತು ಕಂಡ್ರೆ: ಹಂಸವ ದೂರಂದ ನೋಡುವಗ ತುಂಬಾ ಆರಾಮಲ್ಲಿ, ಶುಭ್ರ-ಗಂಭೀರವಾಗಿ ನೀರಿಲಿ ತೆಲಿಗೊಂಡು ಹೋದ ಹಾಂಗೆ ಕಾಣ್ತು. ನೋಡುವವಕ್ಕೆ ಆನಂದ ಆವುತ್ತು. ವಾವ್- ಹಂಸ ದಷ್ಟು ಆರಾಮ ಜೀವಿ ಆರೂ ಇಲ್ಲೆ – ನೆಮ್ಮದಿಲಿ ಬದುಕ್ಕುವ ಜೆನಂಗ ಆರೂ ಇಲ್ಲೆ ಹೇಳಿ ಕಾನ್ತ ಹಾಂಗೆ.
ಆದರೆ, ನೀರಿನ ಅಡಿಲಿ ಮಾಂತ್ರ, ಅದರ ಎರಡು ಪಾದವ ರಪ-ರಪ-ರಪ ಆಡುಸಿಗೊಂಡು ಅದರ ದೇಹವ ಬೇಕಾದ ಹಾಂಗೆ ಸಮತೋಲನಲ್ಲಿ ತೆಕ್ಕೊಂಡು ಹೊಪಲೆ ಇನ್ನಿಲ್ಲದ್ದ ಕೆಲಸ ಮಾಡ್ತು. ಮೇಲೆ ನಿಂದು ನೋಡುವ ಆರಿಂಗೂ ಅದರ ನೀರಿನ ಒಳಾಣ ಕಷ್ಟ ತೋರ್ಸಿಗೊಳ್ತಿಲ್ಲೆ . ಕಾಂಬ ಎಲ್ಲೋರಿಂಗೂ ಚೆಂದಕ್ಕೆ ಮೋರೆ ತೋರ್ಸಿಗೊಂಡು, ತಾನು ಬಯಂಕರ ಸುಖಲ್ಲಿ ಇದ್ದೆ ಹೇಳ್ತ ಹಾಂಗೆ ಬದುಕ್ಕುತ್ತು. ಕೆಲವು ಮನುಷ್ಯರುದೆ ಹಾಂಗೆಯೇ, ತುಂಬಾ ನೆಗೆ ನೆಗೆ ಮಾಡಿಗೊಂಡು ಎಲ್ಲೋರತ್ರೂ ಮಾತಾಡಿಗೊಂಡು ಇರ್ತವಲ್ದ? ಅವರ ಮನೆ / ಮನಸ್ಸಿನ ಒಳ ದೊಡ್ಡ ಪ್ರಳಯವೇ ಆದರೂ ತೊರ್ಸಿಗೊಲ್ತವಿಲ್ಲೆ. ಹಾಂಗೆ ಇರೆಕ್ಕುದೆ.

ಸಣ್ಣ ತಲೆಬೇಶಿ ಆದರೂ ಮನೆಲಿ ಎಲ್ಲೋರಿಂಗೂ ಬೈಕ್ಕೊಂದು, ಸಿಕ್ಕಿದವರತ್ರೆ ಪೂರಾ ಜಗಳ ಮಾಡಿಯೊಂಡು ಸಂಬಂಧ ಹರ್ಕೊಂಡು ಇಪ್ಪವಕ್ಕೆ ಅರ್ಥ ಅಪ್ಪಲೆ ಇದರಿಂದ ಒಳ್ಳೆ ಗಾದೆ ಬೇರೆ ಇಕ್ಕೋ?
ಅಲ್ದಾ ?

ಒಂದೊಪ್ಪ: ನಮ್ಮ ಕೋಪ ಯಾವಗ್ಲೂ ಹತ್ರಾನವರ ಮೇಲೆ ತೋರ್ಸುದು, ಅಪ್ಪೋ ಅಲ್ದೋ?

5 thoughts on “ಹಂಸ ನೀರಿಲಿಪ್ಪ ಹಾಂಗೆ ನಾವು ಭೂಮಿಲಿರೆಕ್ಕು : ಒಪ್ಪಣ್ಣನ ಅಜ್ಜ

  1. ಹೊಸ ಅಂಗಿಲ್ಲಿ ಹಳೆ ಶುದ್ದಿಗಳ ಕೊಡುವ ವಿಧಾನ ತುಂಬಾ ಒಳ್ಳೆದು ಇದ್ದು ಹೇಳಿ ಗುರಿಕ್ಕಾರರಿಂಗೆ ಒಂದೊಪ್ಪ…

    “ಹಂಸ ನೀರಿಲಿಪ್ಪ ಹಾಂಗೆ ನಾವು ಭೂಮಿಲಿರೆಕ್ಕು” ಹೇಳುವ ಒಪ್ಪಣ್ಣನ ಅಜ್ಜನ ನೀತಿ ನಾವೆಲ್ಲಾ ನಿತ್ಯ ಮನಸ್ಸಿಲ್ಲಿ ನೆನಪು ಮಡಿಕ್ಕೊಲ್ಳೆಕ್ಕಾದ್ದು… ಎನಗೆ ಇದರ ಓದುವಾಗ ಅದೆಷ್ಟು ಒತ್ತಡದ ಮಧ್ಯೆಯೂ ಶಿಷ್ಯರ ನಗುಮುಖಂದಲೇ ಮಾತನಾಡುಸುವ ನಮ್ಮ ಗುರುಗಳ ನೆನಪಾತು…

  2. ಒಪ್ಪಣ್ಣಂಗೆ ಜೆತಗೆ ಒಂದು ಒಪ್ಪಕ್ಕ ಬೇಡದ ಭಾವಾ????? ಅಸಕ್ಕಾಗದ ಮಾಣಿಗೆ ಒಬ್ಬಂಗೇ????

  3. ಮಹೇಶ ಭಾವಾ …… ನಿನ್ನ ಬ್ಲಾಗು ಕಂಡು ಎನಗೆ ತುಂಬಾ ಕೊಷಿ ಆತು… ಆದರೆ ಹೆಚ್ಚು ಕಷ್ಟ ಬಪ್ಪವಕ್ಕೆ ಸುಖ ಸಿಕ್ಕುದು ತಡವಾಗಿಯಡ…. ಸಿಕ್ಕುಗು ನಿನಗುದೆ ಆತಾ ? ಎಂಗೋ ಇದ್ದೆಯೋ …. 🙂

  4. ningaLa thaleli enthado praLaya ippa hangiddu!!!!!!?hathranavu heLi anisidare heLi

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×