ಅದೇ ದಿನದ ಇನ್ನೊಂದು ಶುದ್ದಿ ಈ ವಾರ ಹೇಳ್ತೆ ಕೇಳಿ:
ತರವಾಡು ಮನೆ ಹೇಳಿರೆ ಪಿಡಿ ಆಡ್ತ ಒಂದು ಜಾಗೆ. ಪಿಡಿ ಹೇಳಿರೆ ಇಸ್ಪೇಟು (Cards) – ಗೊಂತಾತಲ್ದ? ಪರಿಭಾಷೆಲಿ ಪುಷ್ಪಾಂಜಲಿ ಹೇಳಿ ಹೇಳುದು ಅದರ. 🙂 ಇಂಥಾ ದಿನ ತರವಾಡು ಮನೆಲಿ ತಿತಿ ಹೇಳಿ ಹೇಳಿಕೆ ಆದರೆ ಆ ದಿನಕ್ಕೆ ನೆಂಟ್ರು – ನೆರೆಕರೆ ಹಳಬ್ಬರು ಬಂದೇ ಬಕ್ಕು. ಬೇರೆ ಜೆಂಬ್ರ ಹೇಳಿಕೆ ಇದ್ದರೆ ಅದಕ್ಕೆ ಅವರ ಮಕ್ಕಳನ್ನೋ ಮಣ್ಣ ಕಳುಸುಗು. ಅಷ್ಟುದೇ ಖಂಡಿತ. ಪ್ರಾಕಿಂದಲೇ ನೆಡಕ್ಕೊಂಡು ಬಂದ ಶುದ್ದಿ ಅಡ ಇದು.
ತಿತಿ ಯಾವುದೇ ಇರಳಿ, ಶಂಭಜ್ಜ ಮಾಡಿಗೊಂಡಿದ್ದ ಮುದಿ ಅಜ್ಜನ / ಅಜ್ಜಿಯ ತಿತಿ ಆಗಿಕ್ಕು, ಈಗ ರಂಗ ಮಾವ° ಮಾಡ್ತ ಶಂಬಜ್ಜನ ತಿತಿ ಆಗಿಕ್ಕು, ಕಾಂಬು ಅಜ್ಜಿ ತಿತಿ ಆಯಿಕ್ಕು, ಆರದ್ದೇ ಇರಳಿ- ಇಸ್ಪೇಟು ಆಟ ಯಾವದೇ ತಡೆ ಇಲ್ಲದ್ದೆ ನೆಡಗು. ‘ತರವಾಡು ಮನೆಲಿ ಅದಿಲ್ಲದ್ರೆ ಶಂಬಜ್ಜಂಗೆ ತೃಪ್ತಿ ಆಗ’ ಹೇಳಿ ಹಳಬ್ಬರು ನೆಗೆಮಾಡುಗು. ಶಂಬಜ್ಜಂಗೆ ಅಷ್ಟುದೇ ಇಸ್ಪೇಟು ಮರುಳು ಅಡ. 🙂ಶಂಬಜ್ಜನ ಕಾಲಕ್ಕೆ ಅಂತೂ ಉಛ್ರಾಯ. ಹನ್ನೊಂದು ಗಂಟೆ ಹೊತ್ತಿಂಗೆ ಶುರು ಆದರೆ- ತಿತಿ ದಿನ- ಉಂಬಲಪ್ಪನ್ನಾರ ಒಂದು ಸುತ್ತು, ಹೊತ್ತೋಪಗ ಆಸರಿಂಗೆ ಆಗಿಕ್ಕಿ ಇನ್ನೊಂದು ಸುತ್ತು, ಇರುಳು ಉಂಡಿಕ್ಕಿ ಮತ್ತೊಂದು ಸುತ್ತು – ಗೇಸುಲೈಟು ಮಡಗಿ – ಉದಿಯಾ ಒರೆಂಗೆ. ಈಗ, ರಂಗಮಾವನ ಕಾಲಕ್ಕೆ ಆ ಮೂರ್ನೆದು ಬಿಟ್ಟು ಹೋಯಿದು. ಇರುಳು ಒರೆಂಗೆ ಅಂತೂ ಭರ್ಜರಿ ಆಟ. ಹಳಬ್ಬರು ಎಲ್ಲ ಬಂದು ಸೇರಿ ಆಡುವಗ ದೊಡ್ಡ ರಾಮಾ ರಂಪ ಆವುತ್ತು. ನೋಡ್ಲೇ ಒಂದು ಕುಶಿ.
ಒಂದು ವಾರ ಮದಲೇ ಪಿಡಿ ಎಲ್ಲ ತಯಾರು ಮಾಡಿ ಮಡಗ್ಗು ರಂಗಮಾವ°.
ಹನ್ನೊಂದು -ಹನ್ನೆರಡು ಗಂಟೆಗೆ ಕಳ ಹಾಕಿರೆ, ಸುರುವಿಂಗೆ ಅರ್ದ ಗಂಟೆ ಕತ್ತೆ ಆಟ. ಅದು ಚಿರಿಚಿರಿ ಮಾಡ್ತ ಮಕ್ಕೊಗೆ ಬೇಕಾಗಿ. ಮುಂದಾಣ ತಲೆಮಾರು ತಯಾರು ಆಯೆಕ್ಕಲ್ದಾ- ಹಾಂಗೆ. ಕೆಲವು ಕುಶಾಲಿನ ಹಳಬ್ಬರು ಮಾಂತ್ರ ಸೇರುಗಷ್ಟೆ ಅದಕ್ಕೆ. ಅರ್ದ ಗಂಟೆಲಿ ಹೆಚ್ಹುಹೇಳಿರೆ ಸುಮಾರು ಎಂಟು ಆಟ ಆಡ್ಳೆಡಿತ್ತು. ಅಷ್ಟಪ್ಪಗ ಹಾಸಿದ ಹೊದಕ್ಕೆ, ಪಿಡಿ ಎಲ್ಲ ಸರೀ ಆಗಿ ಸೆಟ್ ಆವುತ್ತು, ದೊಡ್ಡವಕ್ಕೆ ಆಡ್ಳೆ
😉. ಸುರುವಾಣ ನಾಲ್ಕು ಆಟ ಸಮದಾನಕ್ಕೆ ಆಡುದು, ಮತ್ತಾಣದ್ದರ್ಲಿ ಮಕ್ಕೊಗೇ ಪೆಟ್ಟು ಕೊಡುದು, ಅಷ್ಟಪ್ಪಗ ನಾಮಸ್ ಆವುತ್ತಿದಾ. ಹಶುದೇ ಆವುತ್ತು ಅವಕ್ಕೆ. ಎಂತಾರು ಅರಟುಲಾ, ಗುರುಟುಲಾ ಮಣ್ಣ ಎದ್ದು ಹೋವುತ್ತವು. ರಜ್ಜ ದೊಡ್ಡ ಆದರೆ ಆಟ ನೋಡುಲೆ ಹೇಳಿ ಕೂರ್ತವು, ಕರೇಲಿ. ಮಕ್ಕೊ ಎದ್ದ ಕೂಡ್ಳೇ ’ಏ ಕುಂಞೀ, ಆ ಎಲೆ ಮರಿಗೆ ಕೊಂಡ ಮಿನಿಯಾ..!’ ‘ ತಲೆಕೊಂಬು ಕೊಂಡ ಮಿನಿಯಾ’ Luxury watches ಹೇಳುಗು. ತಂದ ಕೂಡ್ಲೇ ‘ನಿನಗೆ ಸುರುವಾಣದ್ದು ಕೂಸು ಹುಟ್ಲಿ ಮಿನಿಯಾ’ ಹೇಳುಗು. ಇಷ್ಟೆತ್ತರದ ಮಕ್ಕೊಗೆ ಎಂತರ ಅರ್ತ ಅಪ್ಪದು ಬೇಕೇ!
ಈ ಸರ್ತಿ ಎಲ್ಲ ಸೇರಿ ಒಟ್ಟು ಒಂಬತ್ತೇ ಜೆನ ಆದ್ದು. ಸಮಸಂಕೆಗೆ ಮತ್ತೊಂದು ಬಾಕಿ ಇತ್ತನ್ನೇ, ಆಗಾಣ ಕತ್ತೆ ಆಟಲ್ಲಿ ಕತ್ತೆ ಆದ ಗುಣಾಜೆ ಉಷಾರಿ ಮಾಣಿಯ ದಿನಿಗೆಳಿದವು ಶರ್ಮ ಮಾವ°. ‘ಆನು ಕತ್ತೆ ಮಾಂತ್ರ ಆಡುದು, ಇಪ್ಪತ್ತೆಂಟು ಆಡ್ತಿಲ್ಲೆ ಮಾವ°, ಅಪ್ಪ° ಬೈತ್ತವು!’ ಹೇಳಿಕ್ಕಿ ಆ ಮಾಣಿ ಪೇಪರು ಓದಲೆ ಸುರು ಮಾಡಿದ°. 🙂 ಪಾಲಾರು ಮಾಣಿ ಏವತ್ತಿನ ಹಾಂಗೆ ಉಂಬಲಪ್ಪಗ ಬಂದದು, ಈ ಸರ್ತಿಯಾಣ ಕಾರಣ – ‘ಅಡಕ್ಕೆ ತೆಗವಲೆ ಮೋಂಟ ಬಂತು’ ಹೇಳಿ. 😉 ಹಾಂಗೆ ಮತ್ತೆ ಉಗುರು ಕಚ್ಚಿಗೊಂಡು ಕೂದ ಆಚಕರೆ ಮಾಣಿ ಮೂಡಿಲ್ಲದ್ದ ಮೂಡಿಲಿ ಕೂದ°. ಒಪ್ಪಣ್ಣ, ಅಜ್ಜಕಾನ ಬಾವ, ಈಚಕರೆ ಪುಟ್ಟ° ಎಲ್ಲ ನೇರಂಪೋಕು ಮಾತಾಡಿಗೊಂಡು ಕೂದೆಯೊ°. ಮಾಷ್ಟ್ರು ಮಾವಂದೆ ಇದ್ದ ಕಾರಣ ಒಳ್ಳೆ ವಿಷಯಂಗೊ ಬಯಿಂದು ಮಾತಾಡುವಗ, ಒಂದರ ಕಳುದ ವಾರ ಹೇಳಿದ್ದೆ. ಇನ್ನೂ ತುಂಬಾ ಇದ್ದು ಹೇಳ್ತರೆ.
ಈ ಪಿಡಿ ಆಟಲ್ಲಿ ಪಾರ್ಟಿ ಮಾಡುದು ಹೇಳಿ ಎಂತ ವಿಶೇಷ ಗಡಿಬಿಡಿ ಇಲ್ಲೆ. ಒಂದು ಬಿಟ್ಟು ಒಂದು- ಹೇಳಿರೆ, ಪಾರೆ ಮಗುಮಾವನ ಹತ್ತರೆ ಕೂದ ಆಚಕರೆ ಮಾವ° ಎದುರಾಣ ಪಾರ್ಟಿ, ಅವರಿಂದ ಅತ್ಲಾಗಿ ಕೂದ ಶರ್ಮ ಮಾವ° ಇವರದ್ದೇ ಪಾರ್ಟಿ – ಹಾಂಗೆ ಒಂದು ಸುತ್ತು. ಹತ್ತು ಜೆನ ಕೂದತ್ತು ಕಂಡ್ರೆ, ಐದೈದರ ಎರಡು ಪಾರ್ಟಿ ಅಲ್ಲಿ. ಅದೆಂತ ಪೂರ್ವ ಯೋಜಿತ ಅಲ್ಲ. ಪಿಡಿ ಕಲಸಿ ಹಾಕುವನ್ನಾರವೂ ಪಾರ್ಟಿ ಗಮನುಸವು. ಸುರುವಾಣ ಆಟಲ್ಲಿ ಪಿಡಿ ತೆಗದು ಕೈ ನೋಡಿದ ಮತ್ತೆಯೇ ಪಾರ್ಟಿಲಿ ಆರೆಲ್ಲ ಇದ್ದವು ಹೇಳುದರ ನೋಡುದು.
ಸುರುವಾಣ ಒಂದು ಹತ್ತು ಆಟ ಕಳದ ಸುತ್ತ ನೀಟಕ್ಕೆ -ತ್ರಿಕಾಲಪೂಜೆಯ ಪುಷ್ಪಾಂಜಲಿಗೆ ಬಟ್ಟಕ್ಕೊ ಕೂದ ಹಾಂಗೆ- ಕೂರ್ತವು. ಮತ್ತೆ ಮೆಲ್ಲಂಗೆ ಒಂದೊಂದೇ ಕೀಲು ಪೀಂಕುಲೆ ಸುರು ಆವುತ್ತು. ಅಜ್ಜಂದ್ರಿದಾ.. ಹೆಚ್ಚಿನವು ಎಪ್ಪತ್ತರ ಮೇಲೆಯೇ! ಕಡಮ್ಮೆ ಹೇಳಿರೆ ಐವತ್ತು! ಸೊಂಟ ಬೇನೆ ಎಲ್ಲ ಸುರು ಆಗಿರ್ತು. 🙂
ಪಾರೆ ಮಗುಮಾವಂಗೆ ಗೆಂಟು ಬೇನೆ, ಕಳುದೊರಿಷ ಆ ಜ್ವರ ಬಂದದು. ಆದರೂ ಪಿಡಿ ಮರುಳು ಬಿಡವು. ತಲೆಕೊಂಬಿನ ಮೇಲೆ ಎದೆ ಮಡಗಿ, ಮಾಪಳೆ ನಮಾಜು ಮಾಡ್ಲೆ ಕೂದ ಹಾಂಗೆ ಆದರೂ ಕೂದುಗೊಂಡವು. ಶರ್ಮ ಮಾವ° ಬಚ್ಚುತ್ತು ಹೇಳಿ ಅನಂತ ಶಯನದ ಹಾಂಗೆ ಮನಿಕ್ಕೊಂಡವು.
ಆಚಕರೆ ಮಾವ ತಲೆಕೊಂಬು ಮಡಗಿ ಗೋಡೆಗೆ ಎರಗಿ ಆಟೀನು ನೈಲನ ತಿರುಗುಸಿ ಬಿಡ್ತ ಚೆಂದ ನೋಡೆಕ್ಕಾತು! ಅವರ ಕಾಲು ಖಂಡಿಗೆ ದೊಡ್ದಪ್ಪನ ಗೆನಾ ವಸ್ತ್ರಕ್ಕೆ ಮುಟ್ಟಿ ಸಗಣವೋ ಎಂತದೋ ಕುರೆ ಹಿಡುದ್ದು ಆಟ ಮುಗಿವನ್ನಾರವೂ ಗೊಂತಾಯಿದಿಲ್ಲೆ. ದೊಡ್ಡಮ್ಮ ಖಂಡಿತ ಪರಂಚುತ್ತವು ಮನೆಲಿ ಅವಕ್ಕೆ! ಪಾರೆ ಮಗು ಮಾವಂಗೆ ಒಳ್ಳೆತ ಕುಶಾಲಿದಾ, ಬೇಕಾದ್ದು ಬೇಡದ್ದು ಎಲ್ಲ ಬಕ್ಕು – ಮಾತಾಡುವಾಗ. ‘ಚೆಕ್ಕ್, ಇವೊಂದು’ ಹೇಳಿ ಮಗು ಅತ್ತೆ ಮೋರೆ ಪೀಂಟುಸುಗು , ಒಳಾಂದಲೇ!. ಹೊಸಮನೆ ಅಜ್ಜಂಗೆ ಮಾತಾಡಿದ್ದು ಏನೂ ಕೇಳ, ಪ್ರಾಯ ಆತಿದಾ! ‘ಏ°’ ಹೇಳುಗು- ಅಂಬಗಂಬಗ. ಪಿಡಿ ಆಟಲ್ಲಿ ಜಾಸ್ತಿ ಮಾತಾಡ್ಲಿಲ್ಲೆ – ಹಾಂಗಾಗಿ ಏನೂ ತೊಂದರೆ ಆಯಿದಿಲ್ಲೆ.
“ಆಟ ಹಾಳುಮಾಡಿದೆ ಎರೆಪ್ಪು”,
‘ಛೆ, ಎನ್ನ ಬೆನ್ನಿಂಗೆ ಪೀಶಕತ್ತಿ ಹಾಕಿದೆನ್ನೇ”,
“ನಿನ್ನ ಲಗಾಡಿ ತೆಗೆತ್ತೆ ನೋಡು”,
“ಅದ, ಪ್ರಾಂದ° ಎನ್ನ ನವಿಲನ ರಟ್ಟುಸಿದ° ಅದಾ!”,
…ಹೇಳಿ ಎಲ್ಲ ಬೈಗು.
” ನಿಮಿಗೆ ಮರುಳುಂಟೋ?” ಹೇಳಿ ಅಂಬಗಂಬಗ ಗೋವಿಂದ ಬಟ್ರು ಬೈಗು. ಕರಾಡಿ ಭಾಷೆ ಬಾರದ್ದೆ ಅವು ಮನೆಲಿಯುದೆ ಕನ್ನಡವೇ ಮಾತಾಡುದು.
ಮತ್ತೆ, ಬಡಿವದು,ಕಡಿವದು, ರಟ್ಟುಸುದು, ತಲೆ ತೆಗವದು,ಇಳಿವದು, ನುಂಗುದು ಇದೆಲ್ಲ ಆ ಆಟಲ್ಲಿ ಸಾಮಾನ್ಯ ಶಬ್ದ.ಆಚಕರೆ ಮಾಣಿ ಬಾವ ಇಸ್ಪೇಟಿಂಗೆ ಹೊಸಬ್ಬ ಆದರೂ, ಮಾಣಿಗೆ ಬೈಗಳು ತಿಂದು ಒಳ್ಳೆತ ಅನುಭವ ಇದ್ದನ್ನೇ, ಆದರೂ ಇದು ಕುಶಾಲಿಂಗೆ ಬೈವದು ಹೇಳಿ ಅವಂಗೆ ತಲಗೇ ಹೋಯಿದಿಲ್ಲೆ , ಯೇವತ್ತಿನ ಹಾಂಗೆ ಮೋರೆ
ದಪ್ಪ ಮಾಡಿತ್ತಿದ್ದ°. ಅವ° ಗುಲಾಮನ ಬೇಕಪ್ಪಗ ಇಳುಸಿದ್ದ°ಯಿಲ್ಲೆ ಹೇಳಿ ಹೊಸಮನೆ ಅಜ್ಜ° ಬೈದ್ದಾತ, ಪುಟ್ಟಕ್ಕನಿಂದಲೂ ಜೋರು ಬೊಬ್ಬೆ- ಅಜ್ಜಕಾನ ಬಾವನ ಬೀಸಾಳೆ ಒಂದರಿ ನಿಂದಿದು. ಪಕ್ಕನೆ ತಿತಿಯೇ ನಿಂದತ್ತು ಗ್ರೇಶೆಕ್ಕು ಎಲ್ಲೋರು!
ಮನಿಕ್ಕೊಂಡಿದ್ದ ಶರ್ಮ ಮಾವ° ಪಿಡಿ ನೋಡ್ತವೋ ಹೇಳಿ ಸಂಶಯ ಬಂದ ಪಂಜ ಚಿಕ್ಕಯ್ಯ ಎರಡ್ಡು ಬೈದವು (ಕುಶಾಲಿಂಗೆ!) – ‘ಆಡ್ತಿದ್ರೆ ಸಾಬೀತಿಲಿ ಆಡೆಕ್ಕು, ಇದೆಂತದ್ದು? ಇನ್ನೊಬ್ನ ಕೈ ನೋಡಿ ಇಳೀಲಾಗ ಹೇಳಿ ಗೊತ್ತಿಲ್ಯಾ ನಿನಿಗೆ?’ – ಪಂಜ ಹೊಡೆಲಿ ರಜ್ಜ ಮೋಡಿ ಭಾಷೆ ಇದಾ, ಕನ್ನಡ ಒತ್ತಿದ್ದು. ‘ಪಂಜ ಭಾಷೆ’ ಹೇಳಿಯೇ ಹೇಳುದು ಅದರ. ಆಚಕರೆ ಕೂಸಿನ (ಮಾಣಿಯ ತಂಗೆ) ಮೂಡ್ಲಾಗಿ ಕೊಟ್ಟ ಕಾರಣ ಎಂಗೊಗೆಲ್ಲ ಆ ಭಾಷೆ ಪರಿಚಯ ಆತು.
ಶರ್ಮ ಮಾವಂಗೆ ಬಿದ್ದ ಬೈಗಳು ಕೇಳಿ ಎಲ್ಲೊರು ನೆಗೆ ಮಾಡಿದವು, ಹೊಸ ಮನೆ ಅಜ್ಜನ ಬಿಟ್ಟು. 🙂 ಎಲ್ಲೋರ ನೆಗೆ ನಿಂದ ಮತ್ತೆ ‘ಏ°’ ಹೇಳಿದವು ಒಂದರಿ.ಪಿಡಿ ಇಳಿವಗಳೂ ಸುಮಾರೆಲ್ಲ ಸೂಕ್ಷ್ಮಂಗೊ ಇದ್ದು. ಒಂದರಿ ವಾಸ್ದೇವಟ್ಟ° ಆಟೀನು ಎಕ್ಕ°ನ ಎತ್ತಿ ಬಡುದವು. ಹತ್ತರೆ ಕೂದ ಗೋವಿಂದ ಬಟ್ರು – ಎದುರು ಪಾರ್ಟಿಯವು – ‘ಹಾ, ಆಟ ಮುಗೀತು’ ಹೇಳಿದವು. ಎಂತಕೆ ಹೇಳಿರೆ, ಅವರಿಂದಲೂ ಅತ್ಲಾಗಿ ಕೂದ ಆಚಕರೆ ಮಾವ°- ವಾಸ್ದೇವಟ್ರ ಪಾರ್ಟಿ – ಆಟೀನು ನವಿಲ°ನ ಆಗಂದ ಕಟ್ಟಿ ಮಡಗಿತ್ತಿದ್ದವು- ಇನ್ನಾಣ ಸರ್ತಿಗೆ ಇಳಿವಲೆ ಸೂಕ್ಷ್ಮ ತೋರುಸಿ ಕೊಟ್ಟದು. ಅನುಭವ ಆ ಮೂರು ಜೆನಕ್ಕೂ ಇದ್ದ ಕಾರಣ ಎಂತ ಆವುತ್ತಾ ಇದ್ದು ಹೇಳ್ತದು ಗೊಂತಾಗಿತ್ತು. ಆಚಕರೆ ಮಾಣಿಗೆ ಬಿಟ್ಟು.
;-( ಆಚಕರೆ ಮಾವ° ಆಟೀನು ನವಿಲನ ತಿರುಗಿಸಿ ಬಿಟ್ಟಪ್ಪಗ, ಮತ್ತಾಣದ್ದರ್ಲಿ ತುರ್ಪು ಇಸ್ಪೇಟು ಗುಲಾಮನ ಇಳಿತ ಹೇಳಿ ಅದೇ ಪಾರ್ಟಿಯ ಶರ್ಮ ಮಾವಂಗೆ ಗೊಂತಾಗಿ, ಅದನ್ನೇ ಇಳುದು ಆ ಆಟ ಮುಗುಶಿದವು. ಅವೆಲ್ಲ ಇಸ್ಪೇಟು ಆಡುದು ಇಂದು ನಿನ್ನೆ ಅಲ್ಲ ಬಾವ, ಸುಮಾರು ಹತ್ತೈವತ್ತು ಒರಿಷ ಆತಲ್ದ? ಹಾಂಗಾಗಿ ಇಂತಾ ಸಂಜ್ಞೆ, ಸೂಕ್ಷ್ಮ, ಸೂಚನೆಗೊ ಧಾರಾಳ ಬಳಕೆಲಿ ಇದ್ದು. ಆಚಕರೆ ಮಾಣಿ ಇನ್ನುದೆ ಕಲಿಯೇಕ್ಕಷ್ಟೇ. ಎಂಗಳ ಊರು ಗೊಂತಿಪ್ಪ ಎಲ್ಲೋರಿಂಗೂ ಇದೆಲ್ಲ ಇಸ್ಪೇಟಿನ ಒಂದು ಅಂಗ.ಇದು ಮದ್ಯಾನ್ನ ಆದ ಶುದ್ದಿ. ಹೊತ್ತೊಪ್ಪಗಾಣ ಆಸರಿಂಗೆ ಆದಮತ್ತೆ ಹಾಕಿದ ಕಳಕ್ಕೆ ಪರಾದಿನದ ಹರಿಮಾವಂದೇ ಕೂದ ಕಾರಣ ಆಚಕರೆ ಮಾಣಿ ಬದ್ಕಿರೆ ಬೇಡಿ ತಿಂಬೆ ಹೇಳಿ ರಟ್ಟಿದ°. ಆಗ ಮದ್ಯಾನ್ನ ಪರಾದಿನಕ್ಕೆ ಒಳ ಕೂದಿಪ್ಪಗ ಅವರ ತಲೆ ಕಳದ ಮೇಲೆಯೇ ಇತ್ತೋ ಏನೋ! ಪಾಪ. ಅಲ್ಲ- ಹಾಂಗೆ ಇದ್ದಿದ್ದರೆ ಮಾಂತ್ರ ಶಂಬಜ್ಜಂಗೆ ಕುಶಿ ಆವುತ್ತಿತು…! ಅಷ್ಟೇ ಈಗ!
ತಿತಿ ದಿನ ನೆಡು ಇರುಳು ಒರೆಂಗೆ ಒರಕ್ಕು ತೂಗಿಯೊಂಡು ಕಾದು ಪಾತಿ ಅತ್ತೆ ಹತ್ತು ಸರ್ತಿ ಊಟಕ್ಕೆ ದಿನಿಗೆಳಿದ ಮತ್ತೆ ಮನಸ್ಸಿಲ್ಲದ್ದ ಮನಸ್ಸಿಲಿ ಆಟ ನಿಲ್ಸಿದವು. ಶಂಬಜ್ಜ ಇರ್ತಿದರೆ ಉಂಡಿಕ್ಕಿ ಇನ್ನೊಂದು ಕಳ ಇರ್ತಿತು ಹೇಳಿ ಮಾತಾಡಿಗೊಂಡವು ಕೆಲವು ಹಳಬ್ಬರು. ಇರುಳಿಡೀ ಕಳ ಹಾಕಿ- ಕೂದು – ಬೊಬ್ಬೆ ಹೊಡಕ್ಕೊಂಡು- ಬೈಕ್ಕೊಂಡು- ಅಂಬಗಂಬಗ ಕಾಂಬು ಅಜ್ಜಿಯ ಏಳುಸಿ ಚಾಯ ಮಾಡುಸಿಗೊಂಡು, ಕಾಂಬು ಅಜ್ಜಿ ಪರಂಚಿಯೊಂಡು – ಓ ಹೋ ಹೋ – ಎಲ್ಲ ನೆಂಪಾತು, ಹಳಬ್ಬರಿಂಗೆ.
ಇರುಳು ಊಟ ಆದ ಮತ್ತೆ ನೆರೆಕರೆಯವು ಎಲ್ಲ ಹೆರಟೆಯೊ°, ದೂರದ ಪಂಜ ಚಿಕ್ಕಯ್ಯ ನಿಂದವು. ರಂಗ ಮಾವ ‘ಅಡಕ್ಕೆ ಹೇಂಗಿದ್ದು ಬಾವ’ ಹೇಳಿ ಬುಡಂದ ಮಾತಾಡ್ಸುಲೆ ಸುರು ಮಾಡಿದವು. ‘ಎನಿಗೆ ಸೊಲ್ಪ ಬೆನ್ನು ನೋವು ಜೋರಿದ್ದು, ಮಜಲುಕೆರೆಗೆ ಹೋಪುದು ಎರಡು ತಿಂಗ್ಲಾತು’ ಹೇಳಿ ಲೋಕಾಭಿರಾಮ ಸುರು ಮಾಡಿಗೊಂಡವು. ಯಬಾ! ಈ ಬೆನ್ನು ಬೇನೆಲಿಯುದೆ ಬಂದ ಇವರ ಉತ್ಸಾಹವೇ! ಹೇಳಿ ಕಂಡತ್ತು ರಂಗಮಾವಂಗೆ.
ಇಸ್ಪೇಟು (Spades), ಆಟೀನು (Hearts), ಡೈಮ (Diamonds), ಕ್ಲಾವರು (Clubs) ಹೇಳ್ತ ನಾಲ್ಕು ಜಾತಿ ಪಿಡಿಗಳಲ್ಲಿ ಪಳಗಿ ಹೋದ ಮನೆ ಅದು. ಅದೆಷ್ಟೋ ತಿತಿ ಜೆಂಬ್ರ ಕಳುದ್ದು ಆ ಮನೆಲಿ. ದೇವರ ತಲೆಲಿ ಹೂಗು ತಪ್ಪಿರೂ ತರವಾಡು ಮನೆಲಿ ಪಿಡಿ ತಪ್ಪ ಹೇಳಿ ಒಂದು ಗಾದೆ ಆಯಿದು ಎಂಗಳ ಊರಿಲಿ. ಎಲ್ಲರು ಬಕ್ಕು, ಚೆಂದಕ್ಕೆ ಆಡುಗು, ಶಂಬಜ್ಜ° ಇಪ್ಪಗ ಇದ್ದಷ್ಟು ಇಲ್ಲೆ ಈಗ. ಅವರ ಚೆಂಙಾಯಿಗೊಕ್ಕೆ ಎಲ್ಲ ಪ್ರಾಯ ಆತು, ಇಪ್ಪವಕ್ಕೆ ಸರಿಯಾದ ಜೆತೆಯೂ ಇಲ್ಲೆ. ಅಂತೂ ಆ ನೆಂಪಿಂಗೆ ರಂಗಮಾವ ರಜ್ಜ ಆದರೂ ಆಡುಗು, ಹೊತ್ತೊಪಗ ತಿತಿ ಮುಗುಷಿ ಆದರೂ.
ಈಗ ಎಲ್ಲಿಯೂ ಕಾಂಬಲೇ ಸಿಕ್ಕ ಬಾವ ಇಂತಾ ವೆವಸ್ತೆಗಳ. ಪಂಜ ಚಿಕ್ಕಯ್ಯನ ನೆರೆಕರೆ ಒಂದು ಮನೆಲಿ ಮೊನ್ನೆ ಒಂದು ದಿನ ಪಿಡಿ ಪ್ರಿಯರೆಲ್ಲ ಮತ್ತೆ ಒಂದಾಗಿ ಇರುಳಿಡಿ ಆಡಿದ್ದವಡ. ಆ ಊರಿನ ಅಣ್ಣಂದ್ರು ಎಲ್ಲ ಸೇರಿದ್ದವಡ. ‘ತಾಪತ್ರೆ ಎಲ್ಲ ಮರ್ತು’ ಹೇಳಿ ಪಂಜ ಚಿಕ್ಕಯ್ಯ ವಿವರ್ಸಿದವು.
ಆಡುವ ಎಲ್ಲರದ್ದೂ ಮಂಡೆ ಚುರ್ಕು ಆವುತ್ತು. ಲೆಕ್ಕ ಹಾಕಿ ಹಾಕಿ ಜನರ ಆಲೋಚನಾ ದೃಷ್ಟಿಗೊ ಗೊಂತಾವುತ್ತು. ರಜ್ಜ ಕುಶಾಲುಗಳೂ ಗೊಂತಾವುತ್ತು. ಒಟ್ಟಾರೆ ಜನರೊಟ್ಟಿಂಗೆ ಒಂದು ಸಂಪರ್ಕ ಬೆಳೆತ್ತು. ಬಂಧ ಗಟ್ಟಿ ಆವುತ್ತು ಹೇಳಿ ಆಚಕರೆ ಮಾಣಿ ಬಾವ° ಹೇಳ್ತ°. ‘ಅವಂಗೆ ಎಂತ ಅದು ಯಾವುದೂ effect ಆಯಿದಿಲ್ಲೆ ಹೇಳಿ ಅರ್ತ ಆವುತ್ತಿಲ್ಲೆ’ ಹೇಳಿ ಅಜ್ಜಕಾನ ಬಾವ° ನೆಗೆ ಮಾಡುಗು!
😉ಇಷ್ಟೆಲ್ಲಾ ಆಡಿರೂ, ಶಂಬಜ್ಜ° ಒಳ್ಳೆ ಕೆಲಸಗಾರ° ಆಗಿತ್ತಿದ್ದವು. ರಂಗಮಾವಂದೇ. ವಿಶೇಷ ಸಂದರ್ಬಂಗಳಲ್ಲಿ, ದಿನಂಗಳಲ್ಲಿ ಆಟ ಆಡಿಗೊಂಡಿದ್ದರೂ ಅವೆಂತ ಅದರ ಒಂದು ಜೂಜು ಆಗಿ ತೆಕ್ಕೊಂಡಿತ್ತಿದ್ದವಿಲ್ಲೆ. ಮರದಿನ ಬದಿಯಡ್ಕ ಕೆಮ್ಕಲ್ಲಿಯೋ ಮತ್ತೊ° ಸಿಕ್ಕಿರೆ ಏವತ್ತಿನ ಹಾಂಗೆ ತುಂಬಾ ಗಂಭೀರಲ್ಲಿ ಮಾತಾಡುಗು, ಪಿಡಿ ಆಟದ ಪಿಸುರು, ಕುಶಾಲು ಅಲ್ಲಿ ಇರ. ಎದ್ದ ಕೂಡ್ಲೇ ಎಲ್ಲೊರು ಪಿಡಿ ಆಟ, ಅದರ ವಾತಾವರಣ ಮರದವು. ಮನೋರಂಜನೆಯ ಸಾಧನ ಆಗಿ ಇತ್ತು ಅಷ್ಟೇ. ಅಲ್ಲಿ ಬಂದ ಶರ್ಮ ಮಾವ°, ಹರಿಮಾವ°, ಅಜ್ಜಕಾನ ಮಾವ°, ಆಚಕರೆ ಮಾವ° – ಎಲ್ಲೋರಿಂಗೂ ಅನ್ವಯ ಆವುತ್ತು ಅದು. ಇದುದೆ ಒಂದು ಸಂಸ್ಕೃತಿಯೇ ಅಲ್ದೋ!? ಒಂದು ಮನೋರಂಜನೆಯೇ ಅಲ್ದೋ? ಹೇಳಿ ಕೇಳುಗು ರಂಗಮಾವ°..
ಅಂತೂ ನಮ್ಮ ಹಳಬ್ಬರು ಅಂತೆ ಕೂದು ಕಾಡು ಹರಟೆ ಹೊಡವಗ ಹೀಂಗೊಂದು ಟೈಂಪಾಸು ಹೇಳಿ ಇಸ್ಪೇಟು ಆಡುಗು, ಆದರೆ ಅದರ ಗುಲಾಮ ಆಗಿತ್ತಿದ್ದವಿಲ್ಲೆ!
ಒಂದೊಪ್ಪ: ನಾವು ಇಸ್ಪೇಟು ಆಡೆಕ್ಕು, ಅದು ನಮ್ಮ ಆಡ್ಲಾಗ ಅಲ್ದಾ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
Ispetu aata iddalda adondu ‘marulu’ iddange.
ಸೂಪರ್… ನಮ್ಮ ಹೆರಿಯೋರು ನವಗೆ ಎಷ್ಟು ಆದರ್ಶರು ಹೇಳ್ತದರ ಚೆಂದಲ್ಲಿ ಬರದ್ದಿ….ಒಳ್ಳೆ ಬರವಣಿಗೆ…
ಒಂದೊಪ್ಪ ಅದ್ಭುತ, ಅರ್ಥಗರ್ಭಿತ ಮಾತು
ಎಂತ ಮಾಡುದು ಅತ್ತೇ… ಈ ಇಸ್ಪೀಟು ಆಟದ ಗೌಜಿ ನೋಡಿ ಹೆದರಿ ಮೂರು ದಿನ ಜ್ವರ ಇದಾ… ಹಾಂಗಾಗಿ ಒಪ್ಪಣ್ಣನ ಮಾತಾಡ್ಸುಲೇ ಎಡಿಗಾತಿಲ್ಲೇ…. ಅಂತೂ ಅತ್ತೇ ಮಾವ ಒಪ್ಪಣ್ಣ ಭಾವ ಎಲ್ಲ ಉಶಾರಿದ್ದವಲ್ದ….?
@ 'S' :-
ಹ್ಮ್, ಅಂಬಗ ಈ ಜನ ಪಂಜ-ಕುಂಬ್ಳೆ ಸೀಮೆಯ ಪುಳ್ಳಿ ಅಲ್ದೋ? ನಮ್ಮ ಅಜ್ಜಕಾನ ಬಾವನ ಹಾಂಗೆ!
ಅದಪ್ಪು, ಎಂಗೊ ಎಲ್ಲ- ಅಜ್ಜಕಾನ ಬಾವ°, ಆಚಕರೆ ಮಾಣಿ, ಒಪ್ಪಕ್ಕ°, ಪುಟ್ಟಕ್ಕ° ಕೂದೊಂಡು ಪಂಚಾತಿಗೆ ಹಾಕುವಗ ನಿಂಗ ಬಯಿಂದಿರ ಒಂದರಿ ಆದರೂ? ಬಂದಿದ್ದರೆ ಅವಕ್ಕೆ ಆರಿಂಗಾರು ಒಬ್ಬಂಗೆ ನೆಂಪಕ್ಕು.
ನಿಂಗೊ ಆರು ಹೇಳಿ ಹೇಳಿರೆ ಶುದ್ದಿ ಹೇಳುಲೆ ಸುಲಬ ಆವುತ್ತು ಹೇಳಿ ಒಂದು ಅಬಿಪ್ರಾಯ ಎಂಗಳದ್ದು! ಅಲ್ಲ – ಹೇಳದ್ರೂ ಒಪ್ಪಣ್ಣ ನಿಂಗಳ ಶುದ್ದಿ ಹೇಳದ್ದೆ ಇರ°! 😉
ಆಗಲಿ, ಶೇಡಿಗುಮ್ಮೆ ಮಾವನ ಕೇಳಿದ್ದೆ ಹೇಳಿಕ್ಕಿ. 🙂
ಚೆಂದ ಇದ್ದು……..
humm. enna ajjanamane majlukare….. shivanna helire enna doddamavana maga……… hange panja bellare kalmadka ella gontiddu… hange enna appa shedigummeyavu…hange kumble neerchalu badyadka ella gontiddu….anu yaru heli gottayekaddu important alla………. ee sambanda heengeeeee idre sakaldaaaaaaaaa henge oppanna……….ninna akka anna chikkamma chikkayya enta bekaru thilko adralle khushi irtalda……….
@ ಪೆರುಮುಕಪ್ಪಚ್ಚಿ,
ಓಹೋ, ಹಾಂಗೋ ವಿಷಯ?
ಅದಕ್ಕೆಯಾ ಎಡಪ್ಪಾಡಿ ಬಾವ ನಿಂಗಳತ್ರೆ ಅಂಬಗಂಬಗ ಹೇಳುದು, 'ಶೇಕು(Shake) ಬಂದರೆ ಮನಿಕ್ಕೊಳಿ' ಹೇಳಿ?
ಎನಗೆ ಎಂತರ ಹೇಳಿ ಅಂದಾಜಿಯೇ ಆಯಿದಿಲ್ಲೆ ಇದಾ! 😉
ಅಪ್ಪು ಒಪ್ಪಣ್ಣೊ….ಪ್ರಾಯ ಆತಿಲ್ಯೊ…..೨೮ ಆಡುಗ ಶೇಕ್ ನೈಲ ಸಿಕ್ಕಿರಂತೂ ಎಲ್ಲರತ್ರೂ ಕೊಪ ಬಪ್ಪಲೆ ಶುರು ಅವುತ್ತು…..
hmm…laaykaayidu…ee sarti madalinda raja jaastiye haasya iddu…joru nege bantu kelavu kaDe…
paTango laaykiddu…aa mOre kaamba kemaralli kaLaa paTa tegadu haakire innu laaykavtittu..aachakareyavvu kemara marattu bandittiddavaaLi…
barada shaili, bhaashaaprayOga ella soooooppar….!!
naavu alliye koodonDu nODiyonDippa haange aavuttu…
matte ondu oLLe sandEshavuu iddu idarli…
aanuu mundaaNa pOShTina nireeksheli…..
hey..maheshanna….
bharee layku baradde….
nammalli thithi dina achmane doddappa,pallathadka doddappa ella adiyondittiddavalda?
panjada chikkayya arappa???? 'S' aaru???????
sanna adippaga anude appanude bank ata adiddu nempavuttu..aringe sikkiru cards enage .. 🙂 anthoo geddondiddadu aane allada????? gammattu…
innana shukravarakke kaytha idde….
enta aachakare maniya coment baindille.ajjakana bavana coment oduvaga ispetingu pattanaje lekka idda henge melada aatango ella pattanajege kaidu aavuttu
@ ಅಜ್ಜಕಾನ :-
ಏ,ನೀನು ಎಂತ ಹೇಳ್ತೆ ಅಜ್ಜಕಾನ ಬಾವ?
ಪೆರ್ಮುಕಪ್ಪಚ್ಚಿಯ ಒಟ್ಟಿಂಗೆ ಆಡುದು ಹೇಳಿರೆ ಬಾರಿ ಕಷ್ಟದ ಕೆಲಸ. ಅವಕ್ಕೆ ಬೀಪಿ ಜಾಸ್ತಿ ಇದಾ…
ಮೊನ್ನೆ ಕೋರಿಕ್ಕಾರು ಮಾವನ ಮನೆಲಿ ಹಾಕಿದ ಕಳಲ್ಲಿ ನಮ್ಮ ಮಾರ್ಗದ ಅಣ್ಣ ಸರಿ ಇಳಿಯದ್ದಕ್ಕೆ ಸಮಕ್ಕೆ ಬೊಬ್ಬೆ ಹೊಡದ್ದವು. ಒಳ್ಳೆ ಗೌಜಿ ಆಯಿದು ಅದು.
ಇನ್ನು ಆನು ಪಿಡಿ ತಂದು ಕೊಟ್ಟು, ಎನಗೆ ಬೈದು, ನಿಂಗಳ ಬೈಲಿಲಿ ಎನ್ನ ಮರಿಯಾದಿ ಹೋಗಿ – ಎಂತಕೆ ಸುಮ್ಮನೆ.
ಅವರತ್ರೆ 'ಪೇಟೆಲಿ ಪಿಡಿ ಸಿಕ್ಕಿದ್ದಿಲ್ಲೆ ಅಪ್ಪಚ್ಚಿ' ಹೇಳ್ತೆ ಬಾವ, ಆಗದಾ? 😉
doddaNNa matthe aanu ottingre Odideyo maheshaNNaa …bhAree laika aidu..enage illi ajjanavu Adigondiddadu nempAthu…
doddaNNnge "panja chikkayya ArappA" heLi mandebeshi Athu:)
doddaNNa said:- lEkhana bhAri pashtu AidO":)
ondu 'beliya kithAbu mAdire oLLedO' heLi obba hEda:)
ಅಂತೂ ಈ ವರ್ಷದ ಆಟ ಮುಗತ್ತು ನೋಡು ಮೊನ್ನೆಗೆ. ಇನ್ನಾಣ ವರ್ಷದ ತಿತಿವರೆಗೆ ಕಾಯೆಕ್ಕು… ಎಂಗಳ ಪೆರ್ಮುಖ ಅಪ್ಪಚ್ಚಿ ಮೊನ್ನೆಂದ ಪಿಡಿ ತರೆಕ್ಕು ಹೇಳ್ತಾ ಇದ್ದ.. ಮಳೆಗೆ ಪೇಟೆ ಹೊಡೆಂಗೆ ಹೋಪಲೆ ಅವುತ್ತಿಲ್ಲೆ ಇದಾ.. ಅದಕ್ಕೆ ಅವನ ಫ್ರೆಂಡ್ ಗಳ ಬಪ್ಪಲೆ ಹೇಳಿ ಆಡುಲೆಡ.. ನೀನು ಆ ಹೊಡೆಂಗೆ ಹೋಪಲೆ ಇದ್ದರೆ ಪಿಡಿ ತೆಕ್ಕೊಂಡು ಹೋಗು ಭಾವ…
'S' ಹೇಳಿರೆ ಆರು ಹೇಳಿ ಎನಗು ಗೊಂತಯಿದಿಲ್ಲೆ ಭಾವ..
@ 's'
ನಮಸ್ಕಾರ 'S' ಗೆ.
ಅರೆ! ಈ ಜೆನಕ್ಕೆ ಮಜಲುಕೆರೆ ಶಿವಣ್ಣನ ಗೊತ್ತಿದ್ದು. ಪಂಜ ಗೊತ್ತಿದ್ದಾ ಅವಗ?
ಹ್ಮ್, ಪಂಜದ ಚಿಕ್ಕಯ್ಯನ ಗೊತ್ತಿಪ್ಲೂ ಸಾಕು, ಅಲ್ದಾ? ಅವು ದಿವ್ಸಕ್ಕೆ ನಾಲ್ಕು ಸಲಿ ಸ್ನಾನ ಮಾಡ್ತುವು..
ಬರುವ ಸಲ ಹೀಂಗೇ ಭೇಟಿ ಆವ್ತಿದ್ರೆ ಕರೀಲೆ ನಿಂಗ್ಳ ಎಡ್ರಾಸು ಗೊತ್ತಿಲ್ಲೆ – ಕಳಿಸ್ತಿರ ಎನಿಗೆ, ಕಾಗ್ದ ಬರಿತ್ತೆ? ಆತಾ?
ಇದು ಜನ ಯಾರು ಹೇಳಿ ಎನಿಗೆ ಇನ್ನೂ ಗೊತ್ತಾಯಿದಿಲ್ಲೆ ಮಾತ್ರ! 🙂 🙂
ಪಿಡಿ ಆಟಲ್ಲಿ ಇಷ್ಟೆಲ್ಲಾ ಕಥೆ ಇದ್ದಾ? ಎನಗೆ ಕತ್ತೆ ಯೂ, ಸೆಟ್ಟು ಮಾತ್ರ ಗೊತಿದ್ದಿದಾ..!ಅಮ್ದಹಾಮ್ಗೆ ಪಾಪದ ಒಪ್ಪನ್ನ ಈ ಸೂಕ್ಷ್ಮಮ್ಗಳ ಕಲ್ತದ್ದು ಹೆಂಗೆ..ಕನ್ನೂಜಿ..ಎಲ್ಲ ಗೊಮ್ತಿದ್ದು ನಿನಗೆ ಅಲ್ದಾ? ( ಅಮ್ದಹಾಮ್ಗೆ ಪಿಡಿ ಆಟವ ಮುಮ್ದ್ರಾನ ಸರ್ತಿ ಮನಗೆ ಬಮ್ದಪ್ಪಾಗ ಎನಗೂ ಹೇಳಿ ಕೊಡೆಕ್ಕಿದಾ..)
ಎಂಗೋ ಸನ್ನಾದಿಪ್ಪಗ ಇಸ್ಪೀಟು ಆದುದು ಹೇಳಿರೆ ಒಂದು ಕುಶಿ. ಅದು ಚಟ ಅಲ್ಲದ್ದ ಒಂದು ಒಳ್ಳೆ ಚಟ ಇದಾ..ಹಾಂಗಿಪ್ಪಾ ಚಟಮ್ಗಳಲ್ಲಿ ಒಂದು ರೀತಿಯ ಆನಂದವು ಇರ್ತು.. ಈಗಾಣ ಕಾಲಲ್ಲಿ ಆ ಪಿಡಿಗೋ ಎಲ್ಲಿ ಅಟ್ಟಲ್ಲಿ ಬಿದ್ದಿದೋ ಏನೋ…ಬೆಅರೀ ಕಿರಿಕೇಟು ಸಾಕಾವ್ತು ಇಮ್ದ್ರಾನ ಬುರ್ನಾಸುಗೊಕ್ಕೆ. ನಿಂತರು ಕೂತರು ಅದೇ ಚಟ..ಚಟ್ಟ ಹತ್ತುವಾಗಲು ಅದೇ ಹೇಳುವ ಹಾಂಗೆ..
ಅಂತೂ ಆಚಕರೆ ಮಾಣಿಯ ಸರೀ ಕಾಲೆಳೆವಲೆ, ಗಿಡ್ಕು ಹಾಕುಲೇ ತೀರ್ಮಾನ ಮಾಡಿದ್ದು ಹೇಳಿ ಆತು.. ಅವನೋ ಇನ್ನು ಆಚ ಕರೆಲಿ ಬ್ಲಾಗು ಬರೆವ ಐಡಿಯಾವ ಇನ್ನು ಮುಂದುವರಿಸಿದ ಹಂಗೆ ಕಾಣ್ತಾ ಇಲ್ಲೇ.
ಕಥೆ ಒಳಗೊಂಡು ಉಪಕಥೆ..ಅದರಲ್ಲಿ ಜೀವನವ ಒಳಾಣ ಆಲೋಚನೆ , ನಂಬಿಕೆಗಳ ಕಾಂಬ ಪ್ರಯತ್ನ ಲಾಯಕ ಇದ್ದು. ಆದರೆ ಉಪಕಥೆಗೋ ಮೈನ್ ಕಥೆಗೆ ಕತ್ತರಿ ಹಾಕದೆ ರಸಭಂಗ ಆಗದ್ದ ಹಾಂಗೆ ನೋಡಿಕೊಂದ್ರಾತು
majalukarege eradu tinglu hodruu bennu bene kadime aydle adava avke??????? shivanna helida hange enne uddi meeledigagira avke alda…bisineeru kandre agaddavayku avu…..adella sari……..achekare mani kusu oppakka oppanna ella inyavaga ottige serudadda??? aa dina ispeetu adtare enigu helekata????????
bhari laiku aidu baraddu ninna baravanigeya shili nodire tumba prayastaru barada hange barette allado.gunaje manige katte onde gonta katte appaleya aata aadleya?idu ella alochane maduvaaga ajjanamane nempavuttu vishaya allinnnda herkiddo henge alli gandi narayana bhat mattu madhava bhat heli ggovinda bhat helire narayana bhatra tamma.achakaremani allinda rattadre puttakkana bobbeli kemi bidle ediya nale office illeya heli
Aaahaa thumba laayika ayidu baraddu.
Adappu avvella manoranjaneya sadhana heLi hange aadudu. Hingippa suddi, halabbaru ottu seriyappaga espeetu aadudu aanude keLidde.
Lekhana da naduve kelavella vaakyango enage joru nege tharsitthu Mahesha. Ottare bhari laykayidu baraddu. InnaNa shukravaarakke kaytha idde.