Oppanna.com

ಬೆಳಗುವ ಮೊದಲೇ ನಂದಿತ್ತಾ? ತೀರ್ಥಹಳ್ಳಿಯ ನಂದಿತಾ..!

ಬರದೋರು :   ಒಪ್ಪಣ್ಣ    on   07/11/2014    4 ಒಪ್ಪಂಗೊ

ಎಲ್ಲ ಅಡ-ಅಡ ಶುದ್ದಿಗೊ. ಇನ್ನೂ ಸರಿಯಾಗಿ ಸಂಗತಿ ಹೆರ ಬಯಿಂದಿಲ್ಲೆ.
ಸರಿ ಅರಡಿಯೇಕು ಹೇದು ಇದ್ದೋ – ಈಗಳೇ ಅಲ್ದೋ ಎಲ್ಲೋರಿಂಗೂ ತಿಳಿಯಲೆ ಕೊದಿ! ಸತ್ಯ ಗೊಂತಾದ ಮೇಗೆ ಆರಿಂಗೂ ಆಸಕ್ತಿ ಇರ್ತಿಲ್ಲೆ! ಅಲ್ದೋ – ಏ°?
ಹಾಂಗೇ ಇದೊಂದು – ಓ ಅಲ್ಲಿ, ಉತ್ತರ ಕನ್ನಡ, ಸಾಗರ ಆಸುಪಾಸಿಂದ ಬಂದ ಶುದ್ದಿ, ಪೇಪರು – ಟೀವಿಗಳ ದಿನನಿತ್ಯ ಕಾಣ್ತು; ಅಷ್ಟೇ ಅಲ್ಲದ್ದೆ – ಬೈಲಕರೆಲಿಯೂ ಮಾತಾಡಿಂಡು ಇತ್ತಿದ್ದವು.
ಒಂದರಿ ಬೈಲಿಲಿ ಮಾತಾಡಿರೆ ಹೇಂಗೆ?

~

ಮದಲೇ ಹೇಳಿಕ್ಕುತ್ತೆ, ಇದು ವಿಚಾರಣೆಲಿ ಗೊಂತಾದ ಶುದ್ದಿಗೊ ಅಲ್ಲ, ಬಾಯಿಂದ ಬಾಯಿಗೆ ಬಂದ ಸತ್ಯಂಗೊ.
ಕೆಲವು ಸರ್ತಿ ವಿಚಾರಣೆಲಿ ಗೊಂತಪ್ಪದರಿಂದಲೂ ಬಾಯಿಂದಬಾಯಿಗೆ ಹರಡುದೇ ನಿಖರ ಇರ್ತು; ಅದು ಬೇರೆ!

ಒಂದಾನೊಂದು ಊರಿಲಿ, ಒಂದಾನೊಂದು ಕಾಲಲ್ಲಿ ಹೇದು ಸುರುಮಾಡೇಕಾದ್ಸು ಏನಿಲ್ಲೆ; ಓ ಅಲ್ಲಿ ಗಟ್ಟದಮೇಗೆ ಒಂದಿಕ್ಕೆ – ಎಂಟನೇ ಕ್ಳಾಸಿಂಗೆ ಹೋವುತ್ತ ಒಂದು ಕೂಚಕ್ಕ ಇದ್ದತ್ತು.
ಏವತ್ತಿನಂತೇ ಓ ಮನ್ನೆ ಉದಿಯಪ್ಪಗ ಶಾಲಗೆ ಹೆರಟತ್ತಾಡ, ಬೇಗು ಹಿಡ್ಕೊಂಡು.
ಮನೆಂದ ಸೀತ ಬಂದು ಕರಿ ಮಾರ್ಗದ ಕರೆಂಗೆ ಎತ್ತಿದ್ದಾಡ; ಬಸ್ಸಿಂಗೆ ಕಾದುಗೊಂಡು ನಿಂದತ್ತಾಡ.
ಮದಲಿಂಗೆ ರಂಗಮಾವನ ಕಾಲಲ್ಲಿ ನೆಡವದು; ಈಗ ನೆಡವವು ಆರಿದ್ದವು? ಬಸ್ಸು, ಕಾರು, ಬೈಕ್ಕು – ಹೀಂಗಿರ್ಸೇ ಆಯೇಕಷ್ಟೆ – ಅದಿರಳಿ.
ಹಾಂಗೆ ಬಂದು ಮಾರ್ಗದ ಬುಡಲ್ಲಿ ಕಾದುಗೊಂಡಿಪ್ಪಾಗಳೇ – ಒಂದು ವೇನೋ, ಕಾರೋ – ಎಂತದೋ ಬಯಿಂದಾಡ.
‘ಯೇ ಕೂಚಕ್ಕಾ, ಹಾಯಿ! ನಿನ್ನ ಶಾಲೆ ಹತ್ತರೆ ಆಗಿಯೇ ಹೋವುಸ್ಸು. ನಿನ್ನ ಬಿಡ್ತೆ, ಬಾ’ – ಹೇಳಿದವಾಡ.
ಆ ಜೆನ ಕೂಚಕ್ಕಂಗೆ ಗುರ್ತದ ಮೋರೆಯೇ ಅಡ.
ಗುರ್ತದೋರು ಆರಾರು ಕೇಳಿರೆ ’ಬತ್ತಿಲ್ಲೆ, ಅಮ್ಮ ಬೈತ್ತು’ – ಹೇಳ್ತ ಕ್ರಮ ಇದ್ದೋ? ಅದೂ ಈಗಾಣ ಕಾಲಲ್ಲಿ!
ಒಪ್ಪಣ್ಣ ಹಳಬ್ಬ ಆದರೂ ಹಾಂಗೆ ಹತ್ತಿಗೊಂಡು ಇತ್ತಿದ್ದ! ಒಂದೊಂದರಿ ಕಾಸ್ರೋಡಿಂಗೋ, ಬೀಸ್ರೋಡಿಂಗೋ, ಮಾಡಾವಿಂಗೋ – ಹೋಪಲೆ ಮಾರ್ಗದ ಬುಡಲ್ಲಿ ನಿಂದಿಪ್ಪಾಗ ಹರಿಯೊಲ್ಮೆ ಜೀಪೋ, ಜಾಲ್ಸೂರಿನ ಬೈಕ್ಕೋ, ಹಳೆಮನೆ ಕಾರೋ – ಎಂತಾರು ಸಿಕ್ಕಿದ್ದದು ಇದ್ದು.
ಹಾಂಗೆ ಈ ಕೂಚಕ್ಕಂಗೂ ಸಿಕ್ಕಿತ್ತು, ಬತ್ತೆಯೋ ಕೇಳಿದವು. ಪಾಪ, ಇದು ಹತ್ತಿತ್ತು.

~

ಹಾಂಗೆ ಹತ್ತಿದ ಕಾರು ಭರೋನೆ ಹೋತು, ದೊಡ್ಡ ಮಾರ್ಗಲ್ಲಿ.
ಶಾಲೆ ಹೊಡೆಂಗೆ ಹೋಪದಲ್ಲದೋ- ಹಾಂಗೆ ನೆಮ್ಮದಿಲಿ ಕೂದುಗೊಂಡಿದ್ದತ್ತು ಕೂಚಕ್ಕ. ಪಾಪ!

~

ಕಾರು ಹೋಗಿಂಡೇ ರಜ ದೂರ ಎತ್ತುವಾಗ, ಅದೇ ಕಾರಿಂಗೆ ಮತ್ತೆ ಕೆಲವು ಜೆನ ಹತ್ತಿದವಾಡ.
ಕೂಚಕ್ಕಂಗೆ ಅವರನ್ನೂ ಗುರ್ತ ಇದ್ದತ್ತೋ, ಅಲ್ಲ ಬೇರೆ ಆರಾರು ಹೇದು ಗ್ರೇಶಿ ಸುಮ್ಮನೆ ಇದ್ದತ್ತೋ ನವಗರಡಿಯ.
ಮತ್ತೆ ಎಂತ ಆತು ಹೇಳ್ತದು ಕರಾಳ ಇತಿಹಾಸ. ಸದ್ಯದ ಮಟ್ಟಿಂಗೆ ಚಿದಂಬರ ರಹಸ್ಯ.

~

ಅದೇ ಊರಿನ ಕಾಡಿನ ಕರೆಯ ಒಂದು ಗುಡ್ಡೆಲಿ ಒಂದು ಗುಡಿಚ್ಚೆಲಿನ ಅಜ್ಜಿ ಸೌದಿಗೆ ಹೋಗಿತ್ತಾಡ.
ಮಾಮೂಲಿನ ಹಾಂಗೇ ಹೋದ್ದಾದರೂ, ಮೊನ್ನೇಣ ದಿನ ಈ ಕೂಚಕ್ಕ ಸಾವು-ಬದುಕಿನ ಅತಂತ್ರ ಸ್ಥಿತಿಲಿ ಇದ್ದತ್ತಾಡ. ಅದೂ ಹೇಂಗೆ? ಬಾಯಿಗೆ ಒಸ್ತ್ರ ಕಟ್ಟಿ ಅರೆಬೋಧಲ್ಲಿ.
ಬಾಯಿಯ ಒಸ್ತ್ರ ಬಿಡುಸಿ ನೋಡಿರೆ – ವಿಷಸೇವನೆ ಮಾಡಿದ ಕುರುಹು ಇದ್ದತ್ತಾಡ.
ತಾನೇ ಆತ್ಮಹತ್ಯೆಗೆ ಹೆರಟದಾದರೆ ಬಾಯಿಗೆ ಒಸ್ತ್ರ ಕಟ್ಟಿಗೊಂಡು ಗುಡ್ಡೆಲಿ ಬಿದ್ದಿರೇಕಾದ ಅಗತ್ಯ ಇದ್ದತ್ತೋ?
ಬದ್ಕುಸೀ ಬದ್ಕುಸೀ – ಹೇದು ಬೊಬ್ಬೆ ಹೊಡೇಕಾದ ಅಗತ್ಯ ಇದ್ದತ್ತೋ? ಇಲ್ಲೆ.
ಈ ಅಜ್ಜಿಯ ಕೈಗೆ ಸಿಕ್ಕಿಪ್ಪದ್ದೇ, ಬದ್ಕುಸಲೆ ಹೇಳಿತ್ತಾಡ. ಹಾಂಗೆ, ಆ ಅಜ್ಜಿ ಒಂದು ಮಟ್ಟಿನ ಚಾಕ್ರಿ ಮಾಡಿ ದಾಕುದಾರಂಗೆ ಎತ್ತುಸುವ ವೆವಸ್ತೆ ಮಾಡಿತ್ತಾಡ.

~

ಆಸ್ಪತ್ರೆಲಿ ದಾಕುದಾರಂಗೊ ನೋಡಿದವೋ, ಒಳಿಶಲೆ ಪ್ರಯತ್ನಪಟ್ಟವೋ, ಎಂತಾತು – ಆರಿಂಗೂ ಅರಡಿಯ.
ಅಂತೂ, ಆ ಕೂಸು ಮಾಂತ್ರ ತೀರಿಗೊಂಡತ್ತು.
ಹದಿಹರೆಯದ ಮಗಳು ತೀರಿಗೊಂಡ ಆಘಾತ ಆ ಹೆತ್ತೋರಿಂಗೆ ಆತು.

~

ಮತ್ತೆಂತಾತು?
ಮನೆಯೋರಿಂಗೆ ಬೇಜಾರಾತು. ಊರೋರಿಂಗೆ ಪಿಸುರು ಬಂತು.
ಪಿಸುರು ಎಂತಕೆ? ಎಂತಕೆ ಹೇದರೆ – ಕಾನೂನು ವ್ಯವಸ್ಥೆ ಎಂತದೂ ಕೆಲಸ ಮಾಡ್ತಾ ಇಲ್ಲೆ – ಹೇಳ್ತ ಬೇಜಾರಲ್ಲಿ.
ಈ ಕೂಸಿಂಗೆ ಈ ನಮುನೆ ಅನ್ಯಾಯ ಆಗಿ ತೀರಿಗೊಂಬಲೆ ಕಾರಣ ಆರು?
ಮಾರ್ಗದ ಕರೆಲಿ ಹತ್ತುಸಿಗೊಂಡದು ಆರು? ಆ ಕಾರು ಆರದ್ದು? ಅದಕ್ಕೆ ಎಡೆದಾರಿಲಿ ಹತ್ತಿದ್ದು ಆರು? ಅಲ್ಲಿ ಗುಡ್ಡೆಕೊಡಿಲಿ ಬಾಯಿಗೆ ಒಸ್ತ್ರ ಚಳ್ಳಿ ಬಿಟ್ಟಿಕ್ಕಿ ಹೋದ್ಸು ಆರು? ಅದರಿಂದ ಮದಲು ವಿಷ ಕುಡುಶಿದ್ದು ಆರು?
ಆರು? – ಉಮ್ಮಪ್ಪ!
ಇದರ ನಾವು ಬೈಲಿಲಿ ಕೂದುಗೊಂಡು ಹೇಳುದಲ್ಲ, ಪೋಲೀಸರು ತನಿಖೆ ಮಾಡಿ ಹೇಳೇಕಾದ್ಸು.
ಆದರೆ, ಘಟನೆ ಆಗಿ ದಿನಗಟ್ಳೆ ಕಳುದರೂ, ಪೋಲೀಸರಿಂದ ಈ ಬಗ್ಗೆ ಉತ್ತರವೇ ಇಲ್ಲೇಡ!!

~

ತೀರಿಹೋದ ರಜ ಹೊತ್ತು ಕಳುದು ಒಂದು ಪೋಲೀಸು ಪೇದೆ ಸೀತ ಇವರ ಮನೆಗೆ ಬಂದು – ಕೂಚಕ್ಕನ ಬೇಗು ಕೊಡಿ – ಹೇದು ಕೇಳಿತ್ತಾಡ.
ಹಿಡ್ಕೊಂಡು ಪೋಲಿ-ಸ್ಟೇಷನಿಂಗೆ ಹೋತು.

ಅಪ್ಪಮ್ಮ ಅವರ ಮನೆಲಿ ಆ ಬೇಗಿನ ಪೂರ್ತಿ ಹುಡ್ಕಿದವು. ಪುಸ್ತಕ ಪೆನ್ನು ಹೊರತು ಬೇರೆಂತೂ ಇದ್ದತ್ತಿಲ್ಲೆ.
ಆದರೆ, ಆ ಪೋಲೀಸು ಹಿಡ್ಕೊಂಡು ಷ್ಟೇಷನಿಂಗೆ ಎತ್ತುವಗ ಅದರ್ಲಿ ಒಂದು ಕಾಗತ ಸಿಕ್ಕಿದ್ದು.

ಅದು ಹೇಂಗೆ? ಆರು ಬರದ್ಸು? ಎಲ್ಲಿ ಬೇಗಿಂಗೆ ತುಂಬುಸಿದ್ದು? ಆರು?
ಆ ಕಾಗತ, ಕೆಂಪಕ್ಷರಲ್ಲಿ ಬರದ್ಸು.
ಮಕ್ಕೊಗೆ ಕೆಂಪುಶಾಯಿ ಪೆನ್ನು ಅಷ್ಟು ಸುಲಭಲ್ಲಿ ಸಿಕ್ಕುತ್ತೋ? ಸಿಕ್ಕಿರೂ, ಅದರ್ಲಿ ಮಕ್ಕೊ ಬರೆತ್ತವೋ ಸಾಮಾನ್ಯವಾಗಿ?

ಈ ಕೂಚಕ್ಕ ತುಂಬ ಉಷಾರಿ ಆಡ,
ಆದರೆ ಈ ಕಾಗತಲ್ಲಿ ಬರದ ನಾಲ್ಕು ಗೆರೆಲಿ ಹತ್ತು ಚಿತ್ತು – ತಪ್ಪುಗೊ ಇದ್ದು. ಅಪ್ಪೋ ಅದು ಬರದ್ದು?
ಬರದ ವಸ್ತು-ವಿಷಯಂಗೊ ದೊಡ್ಡೋರು ಆರೋ ಆಲೋಚನೆ ಮಾಡಿ ಬರದ ಹಾಂಗಿದ್ದಾಡ. ತಂಗೆಗೆ ಸರಿಯಾಗಿ ವಿದ್ಯೆಕೊಡಿ, ಓದುಸಿ – ಇತ್ಯಾದಿ ವಿಷಯಂಗೊ.

ಎಲ್ಲದರಿಂದ ವಿಶೇಷ, ಆ ಕಾಗತಲ್ಲಿ ಅದರ ಕೂಚಕ್ಕನ ಹೆಸರೇ ತಪ್ಪಾಯಿದು ಬರದ್ಸು!
ಇದೆಲ್ಲ ನೋಡುವಾಗ ಆ ಕಾಗತವ ಬೇರೆ ಆರೋ ಬರದ್ಸು ಹೇಳ್ತ ಅನುಮಾನ ಬತ್ತಾಡ.
ಕೂಚಕ್ಕನ ಕರಕ್ಕೊಂಡು ಹೋದ ಆರೋಪಿ ಜಾಗೆಲಿ ಇಪ್ಪೋರ ಇನ್ನೂ ದಿನಿಗೆಳಿ ತನಿಖೆ ಮಾಡಿದ್ದವಿಲ್ಲೇಡ.
ಇದರ ಪೋಲೀಸಿನ ಕೈಲೇ ಆರೋ ಮಾಡುಸುತ್ತವೋ – ಹೇದೂ ಅನುಮಾನ ಬಂದ ಕಾರಣ ಆ ಊರಿನೋರು ಅನಿವಾರ್ಯವಾಗಿ ಪಿಸುರು ಮಾಡಿಗೊಂಡವು.
ಇದೇ ಪಿಸುರಿಲಿ ಆ ಊರಿಲಿ ರಜ ಜಗಳ ಆತಾಡ. ನಿಷ್ಪಕ್ಷಪಾತ ತನಿಖೆ ಆಗಲಿ – ಹೇದು ಹೋರಾಟ ಮಾಡಿದವಾಡ.

~
ಹೋರಾಟ, ತನಿಖೆ, ಆರೋಪಿ, ಅಪರಾಧಿ – ಇದೆಲ್ಲವೂ ಒರಿಶಗಟ್ಳೆ ಹಿಡಿತ್ತ ಜೆಂಬಾರ.
ಆದರೆ, ಪಾಪ ಆ ಕೂಚಕ್ಕನ ಜೀವನ ನಂದಿಯೇ ಹೋತನ್ನೇ? – ಹೇದು ಬೇಜಾರ ಆವುತ್ತು ಗ್ರೇಶಿರೆ.

ಆರೋ ಎಂತದೋ ಲೊಟ್ಟೆ ಕೇಸು – ಕಂಪ್ಲೇಂಟು ಕೊಟ್ಟು ಕೋರ್ಟಿಲಿ ನಂಬ್ರ ಮಾಡಿ ಅಪ್ಪಾಗ ಊರಿಲಿ ಇಲ್ಲದ್ದೋರೆಲ್ಲ ಹರುದು ಬಿದ್ದು ಉತ್ಸಾಹ ತೋರ್ಸಿದ್ದವಲ್ಲದೋ? ಈಗ ಅವೆಲ್ಲ ಎಲ್ಲಿದ್ದವು?
ನಿಜವಾಗಿ ಮಹಿಳಾ ಕಾಳಜಿ ಇದ್ದಿದ್ದರೆ ಅವೆಲ್ಲ ಈಗಳೂ ಬರೆಕ್ಕಾತನ್ನೇ ಎದುರು?
ಇದು ಪಾಪದ ಕೂಸು, ಅದು ಜೋರಿನ ಮಹಿಳೆ – ಹೇದು ತಾರತಮ್ಯ ಮಾಡ್ತವೋ ಆ ಜನವಾದಿಗೊ? ಮಹಿಳಾ ವಾದಿಗೊ?
ಇವಕ್ಕೆಲ್ಲ ಸತ್ಯ ಬೇಕಾದ್ಸು ಅಲ್ಲ, ಪ್ರಚಾರ ಬೇಕಾದ್ಸು.
ಅದಕ್ಕೋಸ್ಕರ ಎಂತ ಮಾಡ್ಳೂ ತಯ್ಯಾರು – ಹೇದು ಗುಣಾಜೆಮಾಣಿ ಪರಂಚಿಗೊಂಡು ಇತ್ತಿದ್ದ ನಿನ್ನೆ.

ಛೇ, ಅಷ್ಟು ಸಣ್ಣ ಕೂಸು ಅದು ಹೇಂಗೆ ಆ ಕಿರಾತಕರ ಕೈಗೆ ಸಿಕ್ಕಿಬಿದ್ದತ್ತು?
ಅವು ಅದರ ಅನ್ಯಾಯವಾಗಿ ಕೊಲ್ಲಲೆ ಕಾರಣ ಎಂತರಪ್ಪಾ!

ಇನ್ನೂ ಜೀವನವೇ ಕಂಡಿದಿಲ್ಲೆ, ಬಾಳಿ ಬೆಳಗಿದ್ದೇ ಇಲ್ಲೆ. ಇಷ್ಟರಲ್ಲೇ ಆ ಕೂಸಿನ ಜೀವನ ನಂದಿತ್ತೋ?
ನಂದಿತಾ ಹೇಳಿಯೇ ಹೆಸರಡ ಅದರದ್ದು. ಛೇ!

ಅವರ ಮನೆಯೋರಿಂಗೆ ದುಃಖ ತಡವ ಶೆಗ್ತಿ ಕೊಡ್ಳಿ. ಆ ಕೂಸು ಇನ್ನೊಂದು ಜೆನ್ಮ ಪಡಕ್ಕೊಂಡು ಬಂದು ಆ ಸಾವಿಂಗೆ ಕಾರಣ ಆದೋರ ಎದುರು ಪ್ರತೀಕಾರ ತೆಕ್ಕೊಳ್ಳಲಿ. ಅಲ್ಲದೋ?

ಒಂದೊಪ್ಪ: ಸ್ತ್ರೀಕುಲಕ್ಕೆ ಅನ್ಯಾಯ ಅಪ್ಪಗ ಹೃದಯ ಮಿಡಿಯೇಕು. ಷಡ್ಯಂತ್ರಕ್ಕೆ ಮಾಂತ್ರ ಹೃದಯ ಮಿಡಿವದಲ್ಲ.

4 thoughts on “ಬೆಳಗುವ ಮೊದಲೇ ನಂದಿತ್ತಾ? ತೀರ್ಥಹಳ್ಳಿಯ ನಂದಿತಾ..!

  1. ರಾಮಾ…………
    ಇನ್ನೆಷ್ಟು ದಿನ ಎಂಗೊ° ಇಂತಹ ಅನ್ಯಾಯಂಗಳ ನೋಡೆಕ್ಕು ರಾಮಾ………..
    ಇನ್ನುದೇ ನಿನಗೆ ಕರುಣೆ ತೋರುವ ಸಮಯ ಬೈಂದಿಲ್ಲೆಯಾ ರಾಮಾ……….
    ರಾಮಾ… ರಾಮಾ………. ರಾಮಾ………….

  2. ಹರೇರಾಮ , ಸ್ತ್ರೀ ಕುಲಕ್ಕೆ ಅನ್ಯಾಯ ಅಪ್ಪಗ ಹೃದಯ ಮಿಡಿಯೆಕ್ಕು ಷಡ್ಯಂತ್ರಕ್ಕಲ್ಲ .ನೂರಕ್ಕೆ ನೂರು ಸತ್ಯದ ಮಾತಿದು. ಒಪ್ಪಣ್ಣ !

  3. ಈಗ ಎನಗೆ ದಿನಾಗಿಳೂ ಒಪ್ಪಣ್ಣ ಓದುಲೇ ಅವ್ತಿಲ್ಲೇ, ಎಡಿಗಪ್ಪಗ ಬೇಗ ಓದಿರು ಒಪ್ಪ ಬರವಲೆ ಸಮಯ ಸಿಕ್ಕುತ್ತಿಲ್ಲೇ. ಇಂದು ಬೇಗನೆ ಓದಿದೆ, ಹಾಂಗೆ ರಪ್ಪ ಒಪ್ಪ ಬರವಲೆ ಹೆರಟೆ.
    ಇಂದ್ರಾಣ ಶುಧ್ಧಿ ಓದಿ ತುಂಬಾ ಬೇಜಾರ ಆತು. ಒಪ್ಪಣ್ಣ ‘ಒಂದೊಪ್ಪ’ಲ್ಲಿ ಬರದ್ದು ನೂರಕ್ಕೆ ನೂರು ಸತ್ಯವಾದ ಮಾತು. ಈಗ T.V. ಯವುದೆ ಹೀಂಗೆ ಮಾಡುದು ಅಗತ್ಯ ಇಲ್ಲದ್ದ ಏನಾರು ಸುದ್ದಿಗಳ ಏನಾರು ಕೈ ಕಾಲು ಸೇರ್ಸಿ ಹಾಕುತ್ತವು. ಬೇಕಾದ್ದರ ಹೇಳುತ್ತವಿಲ್ಲೇ.
    ಆದರೆ ನಡುವಿಲ್ಲಿ ‘ಹರಿಯೊಲ್ಮೆ ಜೀಪು’ ಹೇಳುವ ಪದ ಕಂಡು ಖುಷಿ ಆತು.

  4. ಚೆ. ತುಂಬಾ ಬೇಜಾರಿನ ಸಂಗತಿ. ನಂದಿತ ನಂದಲೆ ಕಾರಣ ಆದವು ಬೇಗ ಸಿಕ್ಕಲಿ. ಅವಕ್ಕೆ ಸರಿಯಾದ ಶಿಕ್ಷೆ ಆಗಲಿ.
    ಸ್ತ್ರೀಕುಲಕ್ಕೆ ಅನ್ಯಾಯ ಅಪ್ಪಗ ಹೃದಯ ಮಿಡಿಯೇಕು. ಷಡ್ಯಂತ್ರಕ್ಕೆ ಮಾಂತ್ರ ಹೃದಯ ಮಿಡಿವದಲ್ಲ, ಸರಿಯಾದ ಮಾತು ಒಪ್ಪಣ್ಣಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×