- ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017
- ನೆಗೆ ಚಿತ್ರಂಗೊ - September 19, 2015
- ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015
ಇತ್ತೀಚೆಗೆ ಈ ಚೆಂದ ಹೂಗು ಕಂಡತ್ತು. “ಇದು ಏವ ಹೂಗು ಭಾವ” ಹೇಳಿ ಕೇಳಿರೆ “ನಾಗ ಸಂಪಗೆ” ಹೇಳಿ ಉತ್ತರ ಸಿಕ್ಕಿತ್ತು.
ಎಷ್ಟು ಚೆಂದದ ಪರಿಮ್ಮಳ ಅದರದ್ದು…
ಆವಾಗ ಅನಿಸಿದ್ದಿದು…
ನಾಗ ಸಂಪಗೆ ಘಮಲು:
ನಾಗ ಸಂಪಗೆ ಘಮಲು
ಆಹಾ…. ಇದೆಂಥ ಅಮಲು॥
ಗಾಳಿಲಿಯೆ ತೇಲಿ
ತೇಲಿದ್ದು ಸುಗಂಧ
ನಾಸಿಕದ ಒಳ ಎಲ್ಲ ನವಿರು
ಸಿಂಚನವಾಗಿ ಎಳವಂಥ ಗಂಧ
ಅಂತಿಂಥ ಹೂಗಲ್ಲ, ಇಂತಿಷ್ಟೇ ಚಂದವಾ?।
ಎಂಥ ಸೌಂದರ್ಯ
ನೀನಿದರ ಕಂಡೆಯಾ।
ನಾಗ ಸಂಪಗೆ ಘಮಲು
ಆಹಾ…. ಇದೆಂಥ ಅಮಲು॥
ವೃತ್ತಲ್ಲೆ ಸುತ್ತಿದ್ದು
ಜೇನ ಹುಳು ಮಕರಂದ
ಇದ್ದೆಲ್ಲಿ ಹುಡುಕಿ
ಬಿದ್ದಲ್ಲಿ ತುಡುಕಿ
ಹೂಗು ಗರ್ಭದ ಒಳವೆ ತುಂಬಿದ್ದು ಗೊಂತಿದ್ದು।
ಒಂದಾದರೂ ಹನಿಯ
ಕುಡಿಯದ್ದೆ ಕಳಿಯ।
ನಾಗ ಸಂಪಗೆ ಘಮಲು
ಆಹಾ…. ಇದೆಂಥ ಅಮಲು॥
ಹಿತ್ತಿಲಿನ ಸುತ್ತೆಲ್ಲಾ
ನಾಲ್ಕಾರು ಮರನೆಟ್ಟು
ಕೂರೆಕ್ಕು ಮನವಿಟ್ಟು
ಹೂಗುರಾಶಿಯ ನಡುಗೆ
ನಾಗಸಂಪಗೆಯೇ ತುಂಬು ಎನ್ನ ತನು ಮನವೆಲ್ಲಾ।
ತುಂಬಲಿದ ಇಲ್ಲಿಯೇ
ಜೀವನದ ಕನಸೆಲ್ಲ।
ನಾಗ ಸಂಪಗೆ ಘಮಲು
ಆಹಾ…. ಇದೆಂಥ ಅಮಲು॥
ಎನಗೆ ಗೊಂತಿಪ್ಪ ಹಾಂಗೆ ಇದಕ್ಕೆ ನಾಗ ಲಿಂಗ ಹೇಳಿಯೂ , ಇನ್ನೊಂದು ಬೆಳಿದು ( Mesua ferrea )ಹೂಗು ಗೆಲ್ಲಿಲಿ ಅಪ್ಪದು ಅದಕ್ಕೆ ನಾಗ ಸಂಪಗೆ ಹೇಳಿ ಹೇಳ್ತವು . ಮಾಳಿಗೆ ಮಣ್ಣಿನ್ದು ಮಾಡ್ತರೆ ಅದರ ಎಲೆಯ — ಮಣ್ಣು ಮತ್ತು ಹಲಗೆಯ ಮಧ್ಯಲ್ಲಿ ಒರಳೆ ಬಾರದ್ದ ಹಾಂಗೆ ಹಾಕುತ್ತವು .
ಎನಗೆ ಗೊಂತಿಪ್ಪ ಹಾಂಗೆ ಇದಕ್ಕೆ ನಾಗಲಿಂಗ ಹೇಳಿಯೂ , ಇನ್ನೊಂದು ಬೆಳಿದು – ಹೂಗು ಗೆಲ್ಲಿಲಿ ಅಪ್ಪದು ಅದಕ್ಕೆ ನಾಗ ಸಂಪಗೆ ಹೇಳಿ ಹೇಳ್ತವು . ಮಾಳಿಗೆ ಮಣ್ಣಿನ್ದು ಮಾಡ್ತರೆ ಅದರ ಎಲೆಯ — ಮಣ್ಣು ಮತ್ತು ಹಲಗೆಯ ಮಧ್ಯಲ್ಲಿ ಒರಳೆ ಬಾರದ್ದ ಹಾಂಗೆ ಹಾಕುತ್ತವು .ಪಟ ಇದಲ್ಲಿದ್ದು –
http://en.wikipedia.org/wiki/Mesua_ferrea
http://www.flowersofindia.net/catalog/slides/Nag%20Kesar.html
ಶಾಮಣ್ಣ,ಮೊನ್ನೆ ಕೋಳ್ಯೂರು ಶಂಕರನಾರಾಯಣ ದೇವಸ್ಥಾನಲ್ಲಿ ಈ ಮರ ಅಡಿಂದ- ಮುಡಿವರೆಗೂ ಹೂಗು ಬಿಟ್ಟುಗೊ೦ಡಿತ್ತದರ ನೋಡಿದೆ .
ಇದರ ಆನು ಕೈರಂಗಳ ದೇವಸ್ತಾನಲ್ಲಿ ನೋಡಿದ್ದು….
ಈ ಹೂಗಿನ ಬಣ್ಣ , ರಚನೆ ನೋಡಿದರೇ ಮರುಳುತ್ತು. ಅದರೊಟ್ಟಿ೦ಗೆ ಪರಿಮಳದೆ ಸೇರಿದರೆ ಅಮಲು ಬಾರದ್ದೆ ಇಕ್ಕೊ?ಶಾಮಣ್ಣನ ಪದ್ಯ ಹೂಗಿನೊಟ್ಟಿ೦ಗೆ ಸೇರಿ ಮತ್ತಸ್ಟು ಪರಿಮಳ ಹಬ್ಬಿತ್ತು.ಈ ಮರ ಎಲ್ಲಿಪ್ಪದು ಶಾಮಣ್ಣ?
ಹೋಯ್… ಗುರಿಕ್ಕಾರ್ರೆ… ವಿನ್ಯಾಸ ಬದಲಾಯಿಸಿದಿರೋ ಹೇಂಗೆ?… ಪಟಂಗ ಪದ್ಯದ ಬಲದ ಕರೆಲಿಯೇ ಬರೆಕ್ಕಾತನ್ನೆ… ಕೆಳ ಅಲ್ಲ… 🙂
ಆನು ಬಾಳೆಹೊನ್ನೂರಿಲಿ ಕಾಫಿ ತೋಟಲ್ಲಿ ಕಂಡಿದೆ..ಸಣ್ಣ ಇಪ್ಪಗ ಇದರ ಹಿಡ್ಕೊಂಡು ಮನೆಗೆ ಹೋದರೆ, ತರೆಡಿ ಹಾವು ಬತ್ತು ಹೇಳಿಕೊಂಡಿತ್ತಿದ್ದವು..ಇದರ ಘಮಲಿಗೆ ಆಯಿಕ್ಕು..ನಿಂಗಳ ಪದ್ಯವೂ ಲಾಯ್ಕಾಯ್ದುಃ)..
ಆಹಾ,
ವೃತ್ತಲ್ಲೆ ಸುತ್ತಿದ್ದು
ಜೇನಹುಳು ಮಕರ೦ದ
ಹುಡುಕಿ…
ಎ೦ತಾ ಕವಿಕಲ್ಪನೆ ,ಇನ್ನು ಕಪಿ ಹೇಳಿಗೊ೦ಬದು ಬೇಡ ಶ್ಯಾಮಣ್ಣ.ಪಟ,ಪದ ನೋಡಿ ಸ೦ಪಗೆಯ ಘಮಲಿ೦ಗೆ ನವಗೂ ರಜ್ಜ ಅಮಲಾತು !
ಆಹಾ..ಪಟಂಗಳೂ ಪದ್ಯವೂ ಭಾರೀ ಪಷ್ಟಾಯಿದು. ಅಭಿನಂದನೆಗೊ ಶ್ಯಾಮಣ್ಣಾ..
ಶೈಲಕ್ಕ ಹೇಳಿದಾಂಗೆ ಪೆರ್ಡಾಲ ದೇವಸ್ಥಾನಕ್ಕೆ ಹೋಗಿಬಂದೋರಿಂಗೆ ಎಲ್ಲರಿಂಗೂ ಅಲ್ಯಾಣ ನಾಗಸಂಪಗೆ ಮರ ನೆಂಪಿಲ್ಲಿಕ್ಕು. 🙂
ನಾಗ ಸಂಪಗೆ ಘಮಲು ಬೈಲ ತುಂಬೆಲ್ಲ ಅಮಲು…
ನೆಗೆಚಿತ್ರಕಾರ ಶ್ಯಾಮಣ್ಣನ ಕವನವರಳಿತ್ತು..
ಬರಲಿ..ಬರಲಿ ಹೀಂಗೆ ಇನ್ನು ಮುಂದೆಯೂ.
ಅಪ್ಪಪ್ಪು… ನಾಗಸಂಪಗೆ ಒಟ್ಟಿಂಗೆ ಶ್ಯಾಮಣ್ಣನ ಪದ್ಯವೂ ಅರಳಿ ಕಂಪೇರಿತು
mani matada avaranalliyuu naga sampige iddu
ಹಾ಼ ಪರಿಮ್ಮಳ ಇಲ್ಲಿಗೂ ಬಂತಣ್ಣಾ….. ಪೆರಡಾಲ ದೇವಸ್ಥಾನಲ್ಲಿ ಕಂಡಿದೆ.