ಈ ಪವನಜಮಾವ ಸ್ವಲ್ಪ ಅಪರೂಪದ ಜನ. ಅವು ಹುಟ್ಟಿದ್ದು ಸುಳ್ಯಂದ ೮ ಮೈಲು ದೂರಲ್ಲಿಪ್ಪ ಕಾಸರಗೋಡು ಜಿಲ್ಲೆಗೆ ಸೇರಿದ ಬೆಳ್ಳಿಪ್ಪಾಡಿಲಿ. ಓದಿದ್ದು ಪಂಜಿಕಲ್ಲು, ಸುಳ್ಯ, ಪುತ್ತೂರು, ಮೈಸೂರು. ಈ ಜನ ಮಾಡಿದ್ದು ಕೆಮಿಸ್ಟ್ರಿಲಿ ಎಂಎಸ್ಸಿ. ನಂತರ ಹೋಗಿ ಸೇರಿಕೊಂಡದ್ದು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರಲ್ಲಿ ವಿಜ್ಞಾನ ಆಗಿ. ಅಲ್ಲಿಯೇ ಪಿಎಚ್ಡಿಮಾಡಿ ನಂತ್ರ ತೈವಾನಿಲಿಯೂ ಹೆಚ್ಚಿನ ಸಂಶೋಧನೆ ಮಾಡಿದವು. ಮುಂಬಯಿಲಿ ಇಪ್ಪಗಳೇ ಕನ್ನಡ ಕಂಪ್ಯೂಟರಿಲಿ ಸುಮಾರು ಕೆಲಸ ಮಾಡಿದ ಜನ. ೧೯೯೩ರಲ್ಲಿಯೇ ಕನ್ನಡ ಕಲಿ ಹೇಳೂವ ಒಂದು ಪ್ರೋಗ್ರಾಮ್ ಮಾಡಿತ್ತಿದ್ದವು. ಬಿಎಆರ್ಸಿ ಮುಂಬಯಿಯ ಕನ್ನಡ ಸಂಘದ ಕಾರ್ಯದರ್ಶಿಯಾಗಿ, ಕನ್ನಡ ವಿಜ್ಞಾನ ಪತ್ರಿಕೆ "ಬೆಳಗು"ವಿನ ಸಂಪಾದಕ ಆಗಿ, ಅದರ ಕಂಪ್ಯೂಟರಿಲಿ ಡಿಟಿಪಿ ಮಾಡಿ, ಕನ್ನಡಲ್ಲಿ ವಿಜ್ಞಾನ ವಿಚಾರ ಸಂಕಿರಣ ಎಲ್ಲ ಮಾಡಿದ ಜನ.೧೯೯೬ರ ಕಾಲಲ್ಲಿಯೇ, ಅದೂ ದೂರದ ಮುಂಬಯಿಲಿ ಕೂತುಕೊಂಡು, ಅಂತರಜಾಲಲ್ಲಿ ಕನ್ನಡವ ಇಡೀ ಪ್ರಪಂಚಲ್ಲೇ ಪ್ರಪ್ರಥಮ ಸರ್ತಿ ಸೇರಿಸಿ ವಿಶ್ವಕನ್ನಡ ಹೇಳುವ ಆನ್ಲೈನ್ ಪತ್ರಿಕೆ ಮಾಡಿತ್ತಿದ್ದವು.
೧೯೯೭ರಲ್ಲಿ ಬಿಎಆರ್ಸಿಯ ಬಿಟ್ಟು ಬೆಂಗಳೂರಿಗೆ ಬಂದವು. ಬಂದು ಸೇರಿದ್ದು ಸಾಫ್ಟ್ವೇರ್ ಕ್ಷೇತ್ರಲ್ಲಿ. ಇಲ್ಲಿಯೂ ಸುಮ್ಮನೆ ಇದ್ದ ಜನ ಅಲ್ಲ. ಕರ್ನಾಟಕ ಸರಕಾರಕ್ಕೆ ಕಂಪ್ಯೂಟರ್ ಕನ್ನಡ ಸಲಹಾ ಸಮಿತಿಲಿ ಕೆಲಸ ಮಾಡಿದ್ದವು, ಅದೂ ಎರಡು ಸರ್ತಿ. "ನುಡಿ" ಹೆಸರಿನ ಕನ್ನಡ ಸಾಫ್ಟ್ವೇರ್ ಬಪ್ಪಲೆ ಇವ್ವೇ ಕಾರಣ. ಅದರ ವಿನ್ಯಾಸ, ಸಲಹೆ, ಮಾರ್ಗದರ್ಶನ ಎಲ್ಲ ಇವರದ್ದೇ. ಯುನಿಕೋಡ್ ಕನ್ಸೋರ್ಶಿಯಂಗೆ ಕನ್ನಡದ ಬಗ್ಗೆ ಆಗಾಗ ಇವು ಕೊಟ್ಟ ಸಲಹೆಂದಾಗಿ ಯುನಿಕೋಡ್ಲಿ ಕನ್ನಡ ಸರಿ ಇದ್ದು. ಸುಮಾರು ವರ್ಷ ಇವು ಮೈಕ್ರೋಸಾಫ್ಟ್ ಕಂಪೆನಿಗೆ ಭಾರತೀಯ ಭಾಷೆಗಳ ಹಾಂಗೂ ಕನ್ನಡ ಭಾಷೆಯ ಸಲಹೆಗಾರ ಆಗಿ ಕೆಲಸ ಮಾಡಿದ್ದವು. ಮಕ್ಕೊಗೆ ಕಂಪ್ಯೂಟರಿಲಿ ಕನ್ನಡ ಭಾಷೆಲಿಯೇ ಪ್ರೋಗ್ರಾಮ್ ಮಾಡ್ಲೆ ಎಡಿಗಪ್ಪಂತೆ ಮಾಡುವ ಕನ್ನಡಲೋಗೋ ಹೇಳುವ ಸಾಫ್ಟ್ವೇರ್ ಮಾಡಿ ಅದಕ್ಕೆ ಮಂಥನ ಪ್ರಶಸ್ತಿ ಪಡ್ಕೊಂಡಿದವು. ಇವಕ್ಕೆ ಮೈಕ್ರೋಸಾಫ್ಟ್ ಕಂಪೆನಿ ಮೋಸ್ಟ್ ವಾಲ್ಯೂಏಬಲ್ ಪ್ರೊಫೆಶನಲ್ ಹೇಳುವ ಬಿರುದು ಕೊಟ್ಟಿತ್ತಿದ್ದವು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ, ಅದ್ರಲ್ಲೂ ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಇವು ಸುಮಾರು ಲೇಖನ ಬರದ್ದವು, ಭಾಷಣ ಕೊಟ್ಟಿದವು. ಕನ್ನಡ ಪ್ರಭ ಪತ್ರಿಕೆಲಿ ಈಗ ಪ್ರತಿ ಸೋಮವಾರ ಇವರ ಗಣಕಿಂಡಿ ಹೇಳುವ ಅಂಕಣ ಇದ್ದು ಅದು ನೂರು ಸಂಚಿಕೆ ದಾಟಿದ್ದು. ಬೆಳಗಾವಿಲಿ ಆದ ಎರಡನೆ ವಿಶ್ವ ಕನ್ನಡ ಸಮ್ಮೇಳನಲ್ಲಿ ಇವರ ಭಾಷಣ ಇತ್ತು.
ನಮ್ಮ ಗುರುಗಳ ದೊಡ್ಡ ಭಕ್ತ. ಗುರುಗಳ ಆಶಯಂದಾಗಿ ಸುರುವಾದ IT4Cow, ಅವಲಂಬನ ಸಂಸ್ಥೆಗಳಲ್ಲಿ ಇವು ಕೆಲಸ ಮಾಡ್ತವು. ಗೋವಿಶ್ವ ಹೇಳುವ e-ಪತ್ರಿಕೆ ನೆಡೆಶುತ್ತವು.
ಇವರ ನಿನ್ನೆ ಅಲ್ಲ ಮೊನ್ನೆ ಮಾಣಿ ಮಠಲ್ಲಿ ಕಂಡಹಾಂಗಾತು?? ಇವ್ವೆಯೋ?
ಹೋ.. ಪರಿಚಯ ಇಲ್ಲದ್ದೆ ಮೋಸ ಆತು 🙂
ಶುಭಾಶಯಂಗೊ ಇಬ್ರಿಂಗೂ 🙂
ಅಪ್ಪು. ಅವ್ವೇ.
ನವ ದಂಪತಿಗೊಕ್ಕೆ ಶುಭವಾಗಲಿ!
“ಆದರ್ಶ ದಂಪತಿಗಳಾಗಿ ನೂರ್ಕಾಲ ಸಂತೋಷಂದ ಬಾಳಲಿ”
ಈ ನವ ವಧೂವರರ ಮದುವೆ ಸಟ್ಟುಮುಡಿ ಫೊಟೊ೦ಗೊ ಇನ್ನೂ ಕೆಲವು ಹಾಕಿ ಪವನಜಣ್ಣ ಈ ಪಟವನ್ನೇ ಒ೦ದೆರಡು ಸರ್ತಿ ದೊಡ್ಡ ಮಾಡಿ ನೋಡಿದೆ ಇದ ಆನು ಸಟ್ಟುಮುಡಿಗೆ ಹೋಯಿದಿಲ್ಲೆ ಹಾ೦ಗಾಗಿ ಒ೦ದು ಕುತೂಹಲ ನಮ್ಮಕೂಸು ಹೇಳ್ತ ಅಭಿಮಾನ೦ದ
ಸುಮಾರು ೫೦೦ ರಿಂದ ಜಾಸ್ತಿ ಪಟಂಗೊ ಇದ್ದನ್ನೆ !!!
೫೦೦ ಪೂರ ಬೇಡಪ್ಪ. ಒಂದು ಹತ್ತು ಫಟಂಗಳ ಹಾಕಿರೆ ಹೆಚ್ಚಾಗ.
ಹೋ… ವಿಜಯತ್ತೆ ಮನ್ನೆ ಹೇದ ಶುದ್ದಿ ಇದುವೇಯೋ!!! ಗ್ರೇಶಿಯೊಂಡಿತ್ತೆ ಅದಾರಾಗಿಕ್ಕಪ್ಪಾದು.
ಹರೇ ರಾಮ. ಅಭಿನಂದನೆಗೊ. ಶ್ರೀಗುರುದೇವಾತುನುಗ್ರಹಂದ ಇವಕ್ಕೆ ಉತ್ತರೋತ್ತರ ಶ್ರೇಯಸ್ಸಾಗಲಿ ಹೇಳಿ ಬೈಲ ಹತ್ತು ಸಮಸ್ತರ ಪರವಾಗಿ.
ಕುತ್ತಿಗೆದ್ದೆ ಸಿರಿಯ ಮದುವೆಯ’ ಅಪರೂಪದ ಆದರ್ಶ ಮದುವೆ’ ಹೇಳ್ತ ಶೀರ್ಶಿಕೆಲಿ ಬರದ್ದೆ ಬೈಲಿಲ್ಲಿ. ಓದಿ – https://oppanna.com/?p=26461
ಓದಿದೆ. ಲಾಯಕ್ಕಾಯಿದು
ಹರೇ ರಾಮ; ನಿನ್ನೆ ಅಷ್ಟೇ ವಿಜಯತ್ತೆ ಸುದ್ದಿ ಹೇಳಿದ ” ಅಪರೂಪದ ಆದರ್ಶ ಮದುವೆ ” ಯ ಓದಿತ್ತೆ. ಇ೦ದು ದ೦ಪತಿಗಳ ಪಟವನ್ನೂ ಲಾಯಕ್ಕಕ್ಕೆ ತೆಗದು ನಮ್ಮ ಬೈಲಿ ಹಾಕಿದ್ದಕ್ಕೆ ಅಭಿನ೦ದನಗೊ. ದ೦ಪತಿಗೊ ನೂರಾರು ವಸ೦ತವ ಸುಖ ಸ೦ತೋಷಲ್ಲಿ ಕಳೆಯಲಿ ಹೇದು ಹಾರೈಸುತ್ತೆ. ನಮಸ್ತೇ….