- ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ? - May 29, 2019
- ಒಪ್ಪಣ್ಣ ಪ್ರತಿಷ್ಠಾನಂದ ಇಸಿಜಿ ಯಂತ್ರ ಕೊಡುಗೆ - January 8, 2019
- ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ - April 29, 2015
ಹವ್ಯಕ ಭಾಷೆಯ ಬೆಳವಣಿಗೆಯ ಪ್ರಯತ್ನ ಮಾಡ್ತಾ ಇಪ್ಪ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಈ ವರ್ಷಂದ ಕೊಡ್ಳೆ ಸುರು ಮಾಡಿದ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಯ “ಕಲಾದರ್ಶನ”ದ ಸಂಪಾದಕ ವಿ.ಬಿ. ಹೊಸಮನೆಯವಕ್ಕೆ ಮೊನ್ನೆ, ಎಪ್ರಿಲ್ 19 ಆದಿತ್ಯವಾರ ಪ್ರದಾನ ಮಾಡಿ ಆತು.
ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ನೆಡದ ಕಾರ್ಯಕ್ರಮಲ್ಲಿ ಪ್ರಶಸ್ತಿ ಪ್ರದಾನದ ಒಟ್ಟಿಂಗೆ, ಪ್ರತಿಷ್ಠಾನ ಈ ವರ್ಷವೂ ನೆಡೆಶಿದ ವಿಷು ವಿಶೇಷ ಸ್ಪರ್ಧೆ-2015 ರ ವಿಜೇತರಿಂಗೆ ಬಹುಮಾನವ ವಿತರಿಸಲೂ ಎಡಿಗಾತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಧುರೈಯ ಕಾಮರಾಜ ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ಹರಿಕೃಷ್ಣ ಭರಣ್ಯ ಮಾತಾಡಿ, “ಹವ್ಯಕೇತರ ಸಮಾಜದ ಹಲವು ಜೆನಂಗೊ ಹವಿಗನ್ನಡ ಸಾಹಿತ್ಯಲ್ಲಿ ಸಾಧನೆ ಮಾಡಿದ್ದವು. ಆದರೆ, ಸ್ವತಃ ಹವ್ಯಕರಾಗಿದ್ದುಗೊಂಡು ಆ ಭಾಷೆಯ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವು ಕಡಮ್ಮೆ. ಇದರ ಸವಾಲಾಗಿ ಸ್ವೀಕರಿಸಿ, ಬೇರೆ ಭಾಷೆಗಳಲ್ಲಿ ಸಾಹಿತ್ಯ ಬರೆತ್ತ ಹವ್ಯಕರು ಹವಿಗನ್ನಡದಲ್ಲಿ ಬರವಲೆ ಸುರುಮಾಡೆಕ್ಕು” ಹೇಳಿದವು.
“ಹೆಚ್ಚು ಪ್ರಭಾವಶಾಲಿ, ಆತ್ಮೀಯತೆಯ ಭಾಷೆ ಆಗಿಪ್ಪ ಹವಿಗನ್ನಡ, ಹಳೆಗನ್ನಡ ಭಾಷೆಯ ರೂಪಾಂತರ. ಈ ಭಾಷೆಯ ಒಳಿಶುದು ಬೆಳೆಶುದು ನಮ್ಮ ಕೈಲಿಯೇ ಇದ್ದು. ಈ ಭಾಷೆಯ ಸೊಗಡಿನ ಇನ್ನಾಣ ಜನಂಗೊಕ್ಕೆ ಪರಿಚಯಿಸುವ ದೃಷ್ಟಿಲಿ ಒಪ್ಪಣ್ಣ ಬಳಗ ಮಾಡ್ತಾ ಇಪ್ಪ ಕಾರ್ಯ ಸಂತೋಷದ್ದು” ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದವು.
ಬಾಳಿಲ ಪರಮೇಶ್ವರ ಭಟ್ಟರ ಸ್ಮರಿಸಿದ ಅವ್ವು, “ಭಟ್ಟರು ಹವಿಗನ್ನಡ ಸಾಹಿತ್ಯ ಕ್ಷೇತ್ರಲ್ಲಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡಿದವು. ಅವರ ಹೆಸರಿಲ್ಲಿ ಪ್ರಶಸ್ತಿ ಕೊಡ್ತಾ ಇಪ್ಪದು ತುಂಬಾ ಕೊಶಿ ಆತು” ಹೇಳಿದವು.
ಅತಿಥಿಗಳಾಗಿತ್ತಿದ್ದ ಹಿರಿಯ ಯಕ್ಷಗಾನ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ನಮ್ಮ ಹವ್ಯಕ ಭಾಷೆಲಿಯೇ ಮಾತಾಡಿ, “ಹವಿಗನ್ನಡ ತುಂಬಾ ಸಂಸ್ಕಾರ ಇಪ್ಪ ಭಾಷೆ. ಯಾವದೇ ಭಾಷೆಗೆ ಸಾಹಿತ್ಯ ಕ್ರೀಡಾಂಗಣ ಇಪ್ಪ ಹಾಂಗೆ. ಮುಳಿಯ ತಿಮ್ಮಪ್ಪಯ್ಯ, ಕಡೆಂಗೋಡ್ಳು ಶಂಕರಭಟ್ಟರೂ ಸೇರಿ ಹಲವು ಜೆನ ವಿದ್ವಾಂಸರುಗೊ ಹವ್ಯಕ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದವು. ಒಪ್ಪಣ್ಣ ಪ್ರತಿಷ್ಠಾನ ಈ ಭಾಷೆಯ ಒಳಿಶಿ ಬೆಳೆಶುಲೆ ಹೆರಟದು ತುಂಬಾ ಸಂತೋಷದ ಕೆಲಸ” ಹೇಳಿದವು.
ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ವಿ. ಬಿ. ಹೊಸಮನೆ ಮಾತಾಡಿದವು.
ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಜಯದೇವ ಖಂಡಿಗೆ ಅತಿಥಿಗಳಾಗಿತ್ತಿದ್ದವು. ಪ್ರತಿಷ್ಠಾನದ ಗೌರವ ಅಧ್ಯಕ್ಷ ಈಶ್ವರ ಭಟ್. ಎಸ್. ಎಳ್ಯಡ್ಕ ಪ್ರಾಸ್ತಾವಿಕವಾಗಿ ಮಾತಾಡಿದವು. ಮಂಗಳೂರಿನ ಪ್ರಸಾದ್ ಪವರ್ ಇಂಜಿನಿಯರ್ಸ್ ಯಜಮಾನ ಶ್ಯಾಮಪ್ರಸಾದ್ ಬಿ. ವಿಷು ಸ್ಪರ್ಧೆ ವಿಜೇತರಿಂಗೆ ಬಹುಮಾನ ವಿತರಣೆ ಮಾಡಿದವು. ಬಹುಮಾನ ಸಿಕ್ಕಿದವರ ಪರವಾಗಿ ಗುಣಾಜೆ ರಾಮಚಂದ್ರಭಟ್ ಮಾತಾಡಿದವು. ಈ ಸಂದರ್ಭಲ್ಲಿ ವಿ.ಬಿ. ಹೊಸಮನೆಯವರ ಬಗ್ಗೆಯೂ ಅವ್ವು ರಚಿಸಿದ ಚುಟುಕವ ಓದಿದವು.
ಪ್ರತಿಷ್ಠಾನದ ಅಧ್ಯಕ್ಷರಾಗಿಪ್ಪ ಶ್ರೀಕೃಷ್ಣ ಶರ್ಮ ಹಳೆಮನೆ ಸ್ವಾಗತ ಮಾಡಿದವು. ಗೋಪಾಲಕೃಷ್ಣ ಭಟ್ ಬೊಳುಂಬು ಕಾರ್ಯಕ್ರಮ ನಿರೂಪಣೆ ಮಾಡಿದವು. ರಘುರಾಮ ಮುಳಿಯ ಧನ್ಯವಾದವ ಸಮರ್ಪಿಸಿದವು.
ಹೊಸ ವೆಬ್‌ಸೈಟ್ ಲೋಕಾರ್ಪಣೆ: ಬೆಂಗಳೂರಿನ ಧ್ಯೇಯ ಸೋಫ್ಟವೇರ್ ಸಂಸ್ಥೆಯ ರವಿನಾರಾಯಣ ಗುಣಾಜೆ ಆಯತ ಮಾಡಿದ ಪ್ರತಿಷ್ಠಾನದ ಹೊಸ ವೆಬ್‌ಸೈಟ್ (www.oppanna.org) ಯ ಇದೇ ಸಂದರ್ಭಲ್ಲಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಲೋಕಾರ್ಪಣೆ ಮಾಡಿದವು.
ಪ್ರಶಸ್ತಿ ಪ್ರದಾನ ಸಮಾರಂಭದ ಮೊದಲು ವಿದುಷಿ ಶ್ರೀಮತಿ ವಿಜಯ ಪ್ರಕಾಶ್ ಬೆದ್ರಡಿ ಕಲ್ಲಕಟ್ಟ ಇವರ ಶಿಷ್ಯ ವೃಂದದವು ಒಳ್ಳೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೆಡೆಶಿಕೊಟ್ಟವು. ಪುತ್ತೂರು ರಮೇಶ್ ಭಟ್ ಭಾಗವತರಾಗಿ ಮಧೂರು ರಾಧಾಕೃಷ್ಣ ನಾವಡ, ದೀಪಕ್ ರಾವ್ ಪೇಜಾವರ, ಮಹಾಬಲೇಶ್ವರ ಭಟ್ ಭಾಗಮಂಡಲ, ಚೈತನ್ಯ ಮುಳಿಯ ಇವರೊಟ್ಟಿಂಗೆ ಹಲವು ಜೆನಂಗೊ ಸೇರಿ ಪ್ರದರ್ಶನ ಕೊಟ್ಟ ಪ್ರಮೀಳಾರ್ಜುನ ಯಕ್ಷಗಾನ ಬಯಲಾಟ ಎಲ್ಲೋರಿಂಗೂ ಕೊಶಿ ಆತು.
ಕೆಲವು ಮಾಧ್ಯಮ ವರದಿಗೋ :
ಕಾರ್ಯಕ್ರಮ ತುಂಬಾ ಚೆಂದಕೆ ಕಳುದ್ದು ಎಲ್ಲರ ಸಹಕಾರಂದ, ಅದರಲ್ಲಿಯೂ ಮುಖ್ಯವಾಗಿ ನೀರ್ಚಾಲಿನ ಪರಿಸರದವರಿಂದ. ಹವ್ಯಕರಲ್ಲದ್ದರೂ ಹವ್ಯಕಲ್ಲಿ ಮಾತಾಡಿದ ಬೆಳ್ಳಿಗೆ ನಾರಾಯ ಮಣಿಯಾಣಿಯ ಮಾತುಗೊ ತುಂಬಾ ಅರ್ಥಪೂರ್ಣ. ಬಾಳಿಲದವರ ಆತ್ಮೀಯ ಒಡನಾಟ ಇತ್ತಿದ್ದ ಡಾ|ಹರಿಕೃಷ್ಣ ಭರಣ್ಯ, ಅವರ ಸಂಸ್ಮರಣೆಯ ಲಾಯಿಕಲಿ ಮಾಡಿದವು.
ಕರ್ಣಾಟಕ ಶಾಸ್ತ್ರೀಯ ಸಂಗೀತ, “ಪ್ರಮೀಳಾರ್ಜುನ” ಯಕ್ಷಗಾನ- ಕಾರ್ಯಕ್ರಮಕ್ಕೆ ಮೆರುಗು ಕೊಟ್ಟತ್ತು.
ಇದಕ್ಕಾಗಿ ಶ್ರಮಿಸಿದ ಎಲ್ಲೋರಿಂಗೂ, ಪ್ರತಿಷ್ಠಾನದ ಅಧ್ಯಕ್ಷನ ನೆಲೆಲಿ ಧನ್ಯವಾದಂಗೊ
ಉತ್ತಮ ಕಾರ್ಯಕ್ರಮ. ಉತ್ತಮ ವರದಿ. ಉತ್ತಮ ಪ್ರಚಾರ. ವಜ್ರಾಂಗೆ ಭಾವಯ್ಯಂಗೆ ಧನ್ಯವಾದಂಗೊ.
ಒಳ್ಳೆ ವರದಿ
ಕಾರ್ಯಕ್ರಮದ ಯಥಾವತ್ ವರದಿ ಓದಿ ಕೊಶಿ ಆತು. ಡೈಮಂಡು ಭಾವಂಗೆ ಹರೇ ರಾಮ
ಒಪ್ಪಣ್ಣ ಬೈಲಿನ ಈ ವರ್ಷದ ಯಶಸ್ವಿ ಕಾರ್ಯಕ್ರಮದ ವರದಿ ಚೆಂದಕೆ ಬಯಿಂದು ಡೈಮಂಡು ಭಾವ . ಕಾರ್ಯಕ್ರಮಲ್ಲಿ ಭಾಗವಹಿಸಿದ ಎಲ್ಲಾ ನೆಂಟರಿ೦ಗೂ, ದುಡಿದ ಎಲ್ಲಾ ಬಂಧುಗೊಕ್ಕೂ ಕೃತಜ್ಞತೆಗೋ.
ಹರೇ ರಾಮ.
ಈ ಸುದ್ದಿಯ ಫೊಟೊ, ಪತ್ರಿಕಾ ಪ್ರಕಟಣೆ ಸಹಿತ ಬಯಲಿಂಗೆ ಹಾಕಿದ್ದು ಕೊಶಿ ಆತು.