Latest posts by ಶೇಡಿಗುಮ್ಮೆ ಪುಳ್ಳಿ (see all)
- ಅಬ್ಬಿ ಗೀತೆ – ಶರಲ್ಲಿ - October 11, 2012
- ಸತ್ಯ – ಇ(೦)ದು - April 17, 2012
- ಅವಿಲಿನ ಹಾಂಗೇ – ಒಂದು ಪ್ರಯೋಗ - April 10, 2012
ರೆರೆರೆರೆರೇ, ರೆರೆರಾರಾರಾ……. ಆ…….., ರೆರೆರೆರೇ… ಏ…. ಹೇ………. ಹೇ………..
ಬೇಗನೆ ತೆಗೆನಿನ್ನಾ
ಬೆಳಿಚೂರೀ – ಅಣ್ಣಾ
ಬೆಂದಿಗೆ ಕೊರೆತ್ತಾ – ಬೆಳಿಚೂರೀ ||೨||
ಎಲ್ಲಿಗೆಲ್ಲ ಹೋವುತ್ತರೂ
ಸೊಂಟಲ್ಲಿ ಕಟ್ಟಿಗೊಂಬ
ಕೈಹಿಡಿ ಬೆಳಿ ಇಪ್ಪಾ – ಬೆಳಿಚೂರೀ || ಬೇಗನೆ ||
ಬಾಳೆಲೆ – ಸಜ್ಜಿಮಾಡ್ಲೆ
ಬೆಳಿಚೂರೀ – ಅದರ
ಮಸೆಯದ್ದೆ ಹರಿಯದ್ದ
ಬೆಳಿಚೂರೀ ||೨||
ಬೆಂದಿಗೆ ಕೊರೆತ್ತವರ
ಕೈಬೆರಳೂಕೊರೆಯದ್ದೆ ||೨||
ಸುಮ್ಮನೆ ಕರೆಲಿಪ್ಪ – ಬೆಳಿಚೂರೀ || ಬೇಗನೆ ||
ಬಟಾಟೆ ಕೊರವಲಕ್ಕು
ಬೆಳಿಚೂರೀ – ಅದು
ಟೊಮೆಟಕ್ಕೆ ಆಗದ್ದ
ಬೆಳಿಚೂರೀ ||೨||
ತಾಳಿಂಗೆ ಕೊರದಿಕ್ಕಿ
ಒಂದುಸರ್ತಿ ಮಿಂದಿಕ್ಕಿ ರೆರೆರೇ.. ಏ………. ಏ……… ಏ…….. ರೆರೇ…
ತಾಳಿಂಗೆ ಕೊರದಿಕ್ಕಿ
ಒಂದುಸರ್ತಿ ಮಿಂದಿಕ್ಕಿ
.ಸೊಂಟಕ್ಕೆ ಸೇರುತ್ತಾ – ಬೆಳಿಚೂರೀ || ಬೇಗನೆ ||
ಬೆಳಿ ಚೂರಿ ಆದರೂ ಗುಣ ತಿಳಿದು ಸರಿಯಾಗಿ ಉಪಯೋಗಿಸುವುದು ಜಾಣ್ಮೆ ಹೇಳುವ ಸಂದೇಶ ಕೊಡುವ ನಿಂಗಳ ಪದ್ಯ ಲಾಯಕ ಆಯಿದು…
ಧನ್ಯವಾದಂಗೊ…,
ಬರಲಯ್ಯಾ ನಿನ್ನ ಪದ ಹೆಚ್ಚು ಸಾರೀ….
ಧನ್ಯವಾದಂಗೊ…, ಇನ್ನೊಂದಷ್ಟು ಪದ್ಯಂಗಳ ಹಾಳುಮಾಡುಲೆ ಪ್ರಯತ್ನ ಮಾಡ್ತೆ.
ಲಾಯಿಕ ಆಯಿದು
“ತರವಲ್ಲ ತೆಗಿ ನಿನ್ನ ತಂಬೂರಿ” ರಾಗ ಹೊಂದುತ್ತು.
ಅಪ್ಪಚ್ಚೀ ಒಪ್ಪ ಕೊಟ್ಟದು ನೋಡಿ ಕೊಶೀ ಆತು………, ಧನ್ಯವಾದಂಗೊ…,
ವಾಹ್ ಇದು ಭಾರೀ ಲಾಯ್ಕಾಯ್ದು!!
{ರೆರೆರೆರೆರೇ, ರೆರೆರಾರಾರಾ…..}-ಇದರ ಕ೦ಡ ಕೂಡ್ಳೇ ಅಶ್ವಥ್ಥರನ್ನು ಶಿಶುನಾಳ ಶರೀಫರನ್ನು ನೆನಪ್ಪಾತು..ಪದ್ಯ ಅ೦ತೂ ಸೂಪರ್ ಆಯ್ದು,ಅವರ ಪದ್ಯದ ರಾಗಲ್ಲಿಯೇ ಓದ್ಸಿಗೊ೦ಡು ಹೋತು..ಖುಶಿ ಆತು..
ಅಪ್ಪು ಅಕ್ಕೋ ಆನುದೇ ಇದರ ಬರವಗ ಮನಸ್ಸಿಲೇ ಅವರ ನೆನಪು ಮಾಡಿಂಡು ತಪ್ಪಾತು ಕ್ಷಮಿಸಿ ಹೇಳಿ ಹೇಳೀಕ್ಕಿಯೇ ಬರದ್ದದು .
ರಾಗಲ್ಲಿಯೇ ಓದ್ಸಿಗೊ೦ಡು ಹೋತು- ಓದಿದಿರೋ ಹಾಂಗಾರೆ ಇನ್ನಾಣ ಸರ್ತಿ ಹಾಡೆಕ್ಕದಾ….ಹ್ಮ್ಮ್
ಹೆ ಹೆ ಹೆ..
ಅಣ್ಣೋ..
ನಿಂಗೊ ಭಯಂಕರ ಆತಾ..
ಲಾಯಕಾಯಿದು…
ಇದೆಂತ ಮಾಣಿ ಭಯಂಕರವ ನೋಡಿ ನೆಗೆ ಮಾಡ್ತದು ? ಚೂರಿ ಲಾಯಿಕಾಯಿದೋ ಅಲ್ಲಾ ಬಡ್ಡಾದ್ದು ಲಾಯಿಕಾಯಿದೋ? ಹೀಂಗೊಂದು ಡೋಂಗಿ ಮಾಡುಲೆ ಆಗ ಆತೋ…….
ಲಾಯಕಾದ್ದು ಬಡ್ಡಾದ ಪೀಶಕತ್ತಿಯ ಪದ್ಯ…
ಮಾವಾ ,
(ಮನ್ನೆ ಹವ್ಯಕ ವಾರ್ಷಿಕೋತ್ಸವಲ್ಲಿ ನಮ್ಮ ಶೇಡಿಗುಮ್ಮೆ ಪುಳ್ಳಿಗೂ ಒಂದು ಅವಕಾಶ ಕೊಡೆಕಾತು. ಕರೋಕೆ ಒಟ್ಟಿಂಗೆ ಹಾಡಿ ಒಂದು ಗಮ್ಮತ್ತು ಮಾಡ್ಳೆ ಆವ್ತಿತಾನೆ. )- ನಾವು ನಿಂಗಳ ನಾಟಕಂದ ಮೊದಲೆ ಎಲ್ಲಿಯಾರೂ ಹಾಡಿತ್ತಿದ್ದರೆ ಇದ್ದನ್ನೇ ನಾಟಕ ನೋಡುಲೆ ಜೆನವೇ ಇರ್ತಿತವಿಲ್ಲೆ ತಂದ ಊಟಎಲ್ಲಾ ವಾಪಾಸು ತೆಕ್ಕೊಂಡೋಯೆಕಿತ್ತು ಗೊಂತಿದ್ದಾ . ಇದಾ ಇದರ ಆರತ್ರೂ ಹೇಳಿಕ್ಕೆಡಿ ಮಿನಿಯ, ನಮ್ಮ ಮರಿಯಾದಿ ಎಲ್ಲಾ ಹೋತಿಕ್ಕುಗು.ಇದು ನಮ್ಮೊಳವೇ ಇರಳಿ ಆತೋ….
ತರವಲ್ಲ ತೆಗಿ ನಿನ್ನ ತಂಬೂರೀ .. ಅಣಕುಗೀತೆಯಾಗಿ ಹವ್ಯಕ ಸ್ಟೈಲಿಂಗೆ ತಿರುಗಿದ್ದು ಭಾರೀ ಲಾಯಕಾತದ. ಮನ್ನೆ ಹವ್ಯಕ ವಾರ್ಷಿಕೋತ್ಸವಲ್ಲಿ ನಮ್ಮ ಶೇಡಿಗುಮ್ಮೆ ಪುಳ್ಳಿಗೂ ಒಂದು ಅವಕಾಶ ಕೊಡೆಕಾತು. ಕರೋಕೆ ಒಟ್ಟಿಂಗೆ ಹಾಡಿ ಒಂದು ಗಮ್ಮತ್ತು ಮಾಡ್ಳೆ ಆವ್ತಿತಾನೆ. ಅಣಕುಗೀತೆಗೊ ಬೈಲಿಂಗೆ ಬತ್ತಾ ಇರಳಿ.
ಲಾಯಿಕಿದ್ದು.
ಮಾವಾ ಅದು ನೋಡುಲೆ ಮಾತ್ರಾ ಲಾಯಿಕಿಪ್ಪದು, ಬರೇ ಬಡ್ಡು …………
ಚೆಲ,
ಸಿ.ಅಶ್ವಥ್ ಇರ್ತಿದ್ದರೆ ” ಏನು ಸಾಹಿತ್ಯ ” ಹೇಳಿ ಒ೦ದು ಉದ್ಗಾರ ತೆಗೆತ್ತಿತ್ತ°. ರೈಸಿದ್ದು ಭಾವ..
ಇನ್ನು ಮೆಟ್ಟುಕತ್ತಿ ಬೇಕಾರೆ ಯೇವ ಪದ ಹೇಳೆಕ್ಕೊ?
ಮೆಟ್ಟು ಕತ್ತಿ ಮಡಿಕ್ಕೊ….
ಅದರಮೇಲೆ ಕೂದುಗೋ
ತಾಗದ್ದಾಂಗೆ ನೋ……ಡೀ…….ಗೊ…….., ಹೇಂಗಕ್ಕು?
ಬಾಳೆಕ್ಕಾಯಿ ಕೊರೆತ್ತರೆ ತೆಗವಲಿಲ್ಲೆ! ಹಪ್ಪಾ!! ಬಾಳೆ ಕಟ್ಟುತ್ತರೆ ಹತ್ರೆ ಮಡಿಕ್ಕೊಂಬಲೂ ಅಡ್ಡಿ ಇಲ್ಲೆ ಆತಾ.
ಏಭಾವ, ಬಾಳೆಕಾಯಿ ಕೊರದರೆ ನೆಗೆಗಾರನ ಮೋರೆಯ ಬಣ್ಣ ಇಪ್ಪ ಹಿಡಿ ಬೋಚ ಭಾವನ ಮೋರೆಯಬಣ್ಣ ಆದರೋ……..?