- ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ? - May 29, 2019
- ಒಪ್ಪಣ್ಣ ಪ್ರತಿಷ್ಠಾನಂದ ಇಸಿಜಿ ಯಂತ್ರ ಕೊಡುಗೆ - January 8, 2019
- ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ - April 29, 2015
ಒಪ್ಪಣ್ಣ ಪ್ರತಿಷ್ಠಾನಂದ ಇಸಿಜಿ ಯಂತ್ರ ಕೊಡುಗೆ
ಹವ್ಯಕ ಸಾಹಿತ್ಯ ಮತ್ತೆ ಭಾಷಾ ಬೆಳವಣಿಗೆ ಹಾಂಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಪ್ಪ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ, ಬಂಟ್ವಾಳ ತಾಲ್ಲೂಕಿನ ಸಜಿಪನಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರವ ಕೊಡುಗೆಯಾಗಿ ಕೊಟ್ಟಿದು.
ಮಂಗಳವಾರ (ದಿನಾಂಕ ೦೮/೦೧/೨೦೧೯) ನಡದ ಸರಳ ಸಮಾರಂಭಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಹಳೆಮನೆ ಇವು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತುಫೈಲ್ ಅವಕ್ಕೆ ರೂ 25 ಸಾವಿರ ಮೌಲ್ಯದ ಇಸಿಜಿ ಯಂತ್ರವ ಹಸ್ತಾಂತರಿಸಿದವು.
ಈ ಸಂದರ್ಭದಲ್ಲಿ ಮಾತಾಡಿದ ಶ್ರೀಕೃಷ್ಣಶರ್ಮ ಹಳೆಮನೆ ಇವು ’ಪ್ರತಿಷ್ಠಾನ, ಸಮಾಜಮುಖಿ ಕೆಲಸಂಗಳ ನಿರಂತರವಾಗಿ ಮಾಡುತ್ತಾ ಬೈಂದು. ಇಸಿಜಿ ಯಂತ್ರಂದಾಗಿ ಗ್ರಾಮೀಣ ಭಾಗಲ್ಲಿ ಇಪ್ಪ ಜನಂಗೊಕ್ಕೆ ಹೃದ್ರೋಗ ಪರೀಕ್ಷೆ ಸುಲಭ ಅಪ್ಪಲಿದ್ದು. ಸಜಿಪನಡು ಭಾಗದ ಜನಂಗೊ ಇದರ ಪ್ರಯೋಜನ ಪಡಕ್ಕೊಳಲಿ’ ಹೇಳಿ ಶುಭಹಾರೈಸಿದವು.
ಕೆಎಂಸಿಯ ಹಿರಿಯ ಹೃದ್ರೋಗ ತಜ್ಞ ಡಾ. ಪದ್ಮನಾಭ್ ಕಾಮತ್ ಅವು ಆರಂಭಿಸಿದ ‘ಹೃದಯ ತಜ್ಞರು ನಿಮ್ಮ ಮನೆ ಬಾಗಿಲಿಗೆ’ ಹೇಳ್ತ ಅಭಿಯಾನದ ಭಾಗವಾಗಿ ಪ್ರತಿಷ್ಠಾನ ಇಸಿಜಿ ಯಂತ್ರವ ಕೊಡುಗೆಯಾಗಿ ಕೊಟ್ಟಿರ್ತು.
ಸಜಿಪನಡು ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಪ್ರತಿದಿನ 80-100 ರೋಗಿಗಳು ಆರೋಗ್ಯ ತಪಾಸಣೆಗೆ ಬತ್ತಾ ಇದ್ದು, ಇಸಿಜಿ ಯಂತ್ರಂದಾಗಿ ಹೃದಯಕ್ಕೆ ಸಂಬಂಧಿಸಿದ ರೋಗಂಗಳ ಪತ್ತೆ ಹಚ್ಚುವದು ಸಾಧ್ಯವಪ್ಪಲಿದ್ದು.
ಪ್ರತಿಷ್ಠಾನದ ಕಿಶೋರ್ ಏನಂಕೂಡ್ಳು ಹಾಂಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗೊ ಈ ಕಾರ್ಯಕ್ರಮಲ್ಲಿ ಹಾಜರಿತ್ತಿದ್ದವು.
ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಹಾಂಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲೋರಿಂಗೂ , ಪ್ರತಿಷ್ಠಾನದ ಅಧ್ಯಕ್ಷರು ಧನ್ಯವಾದಂಗಳ ಸಮರ್ಪಿಸಿದವು.
~~~***~~~