Oppanna.com

ಗುರುಪೀಠ ಬೈಲಿನ ಹರಸಲಿ; ಗುರುಪೀಠವ ಬೈಲು ಒಳಿಶಲಿ..

ಬರದೋರು :   ಒಪ್ಪಣ್ಣ    on   29/08/2014    2 ಒಪ್ಪಂಗೊ

ನಿನ್ನೆ ಉದಿಯಪ್ಪಗಂದಲೇ ಗೆದ್ದೆ ಬಚ್ಚಲು.
ಇರುಳು ಗುಡಿಹೆಟ್ಟಿ ಒರಗಿದೋನಿಂಗೆ ಇಂದು ಎಚ್ಚರಿಗೆ ಆದ್ಸು ರಜಾ ತಡವಾಗಿ.

ಎದ್ದು ನೋಡಿರೆ – ಜಗತ್ತು ತುಂಬ ಬದಲಿದ್ದು!
ನಿನ್ನೆ ಕಂಡ ಹಾಂಗೆ ಜಗತ್ತು ಇಂದಿಲ್ಲೆ.
ನಿನ್ನೆ ಪೂರ್ಣ ತಿಳಿ ನೀರು ಇದ್ದ ನೆಂಪು; ಇಂದು? ಕಲಂಕಿದ ಕೆಂಪು ನೀರು!
ನಿನ್ನೆ ನೆಮ್ಮದಿಯ ಮನಸ್ಸು ಇದ್ದತ್ತು – ಇಂದು ಕಲಂಕಿ ಹೋಯಿದು!
ನಿನ್ನೆ ಮೌನ ಇದ್ದೋರು ಇಂದು ಮಾತಾಡ್ತವು.
ನಿನ್ನೆ ಮಾತಾಡಿದೋರು ಇಂದು ಮೌನಲ್ಲಿದ್ದವು.
ನಿನ್ನೆ ಒಳ್ಳೆಯೋರ ಸಾಜ ಕಂಡೋರದ್ದು ಇಂದು ನಿಜರೂಪ.
ಕೆಲವೆಲ್ಲ ಅಯೋಮಯ! ಕೆಲವೆಲ್ಲ ನಿರಾಮಯ!!
ಅದಿರಳಿ.

~

ನಾಡ್ದು ಮೂವತ್ತೊಂದನೇ ತಾರೀಖಿನ ಆಯಿತ್ಯವಾರ ಕೆಕ್ಕಾರಿಲಿ ಗುರುಭೇಟಿ ಇದ್ದು – ಹೇದು ಗುರಿಕ್ಕಾರ್ರು ಮೊನ್ನೆಯೇ ಬೈಲಿಂಗೆ ಹೇಳಿಕೆ ಹೇಳಿದ್ದವು. ನಿಂಗೊ ಎಲ್ಲೋರುದೇ ಬಪ್ಪಲಿದ್ದನ್ನೇ?
ಪ್ರತಿ ಒರಿಶದಂತೆ ಈ ಒರಿಶವೂ ಚಾತುರ್ಮಾಸ್ಯಲ್ಲಿ ಶ್ರೀಗುರುಗಳ ಭೇಟಿ ಮಾಡುಸ್ಸು ನಮ್ಮ ಬೈಲಿಂಗೆ ಹೆಮ್ಮೆಯ ವಿಷಯ. ಆ ದಿನ ಎಂತೆಲ್ಲ ವಿಶೇಷ ಇದ್ದು – ಕೇಳುವಿ ನಿಂಗೊ. ಎಲ್ಲವೂ ವಿಶೇಷವೇ..

ಉದಿಯಪ್ಪಗ ಅಲ್ಲಿಗೆ ಎತ್ತಿಅಪ್ಪದ್ದೇ ಸಿಕ್ಕುತ್ತದೇ ರಾಮನ ನಿತ್ಯಪೂಜೆ ಕಾಂಬಲೆ ಸಿಕ್ಕುತ್ತು.
ಶ್ರೀಗುರುಕರಾರ್ಚಿತ ಪೂಜೆ ಅದು.
ಶಂಕರಾಚಾರ್ಯರ ಲಾಗಾಯ್ತು ಇಂದಿನ ವರೆಂಗೂ ನಿರಂತರವಾಗಿ ಬಿಡದ್ದೇ ನೆಡವ ಪೂಜೆ ಅದು.
ಗುರುಗೊ ಮಾಡ್ತ ಪೂಜೆಯ ಬಗ್ಗೆ ಅಂದೊಂದರಿ ಬೈಲಿಲಿ ಶುದ್ದಿ ಮಾತಾಡಿದ್ದು – ನೆಂಪಿದ್ದನ್ನೇ?

~

ಪಾದ ಪೂಜೆ:

ಶ್ರೀಕರಾರ್ಚಿತ ಪೂಜೆಗೆ ಅದರದ್ದೇ ಆದ ಮಹತ್ವ. ಹಾಂಗೇ ಇನ್ನೊಂದು – ಶ್ರೀಪಾದುಕಾಪೂಜೆ.
ಶ್ರೀ ಶಂಕರಾಚಾರ್ಯ ಶ್ರೀಗುರುಗಳ ಇಡಿಯ ಭರತಭೂಮಿಗೆ ಕರಕ್ಕೊಂಡು ಹೋದ ಪಾದುಕೆಯ ಗೌರವಿಸುವಂತಹ ಸೂಚನೆಯ ಬೆಳ್ಳಿ ಪಾದುಕೆಯ ಎದುರು ಮಡಗಿ ಶ್ರದ್ಧಾಭಕ್ತಿಂದ ಪೂಜೆ ಮಾಡ್ತ ಸನ್ನಿವೇಶ.

ನಮ್ಮ ಬೈಲಿನೋರು ಚಾತುರ್ಮಾಸ್ಯಲ್ಲಿ ಸೇರಿದ ದಿನ ಬೈಲಿನ ಲೆಕ್ಕಲ್ಲಿ ಒಂದು ಪಾದಪೂಜೆ ಮಾಡ್ತದು ಗೊಂತಿದ್ದನ್ನೇ?
ಬೈಲಿನ ಪರವಾಗಿ ಬೈಲಿನ ಒಂದು ಕುಟುಂಬ ಪೂಜೆಗೆ ಕೂದು, ಇಡಿಯ ಬೈಲಿಂಗೇ ಆಶೀರ್ವಾದ ಅನುಗ್ರಹ ಅಭಯ ಸಿಕ್ಕಲಿ – ಎಲ್ಲಾ ಕುಟುಂಬಂಗೊಕ್ಕೂ ಶ್ರೀರಕ್ಷೆ ಸಿಕ್ಕಲಿ – ಹೇದು ಗ್ರೇಶುದು ನಮ್ಮ ಬೈಲಿನ ವಿಶೇಷ.
ಆಚೊರಿಶ ಗುರಿಕ್ಕಾರ್ರ ಕುಟುಂಬ ಕೂದ್ದದೂ, ಕಳುದೊರಿಶ ಶರ್ಮಪ್ಪಚ್ಚಿಯ ಕುಟುಂಬ ಕೂದ್ದದೂ ನವಗೆ ನೆಂಪಿದ್ದು.

ಕಟ್ಟಿದ ಕಚ್ಚೆ ಸಡಿಲ ಅಪ್ಪದು ಬೇಡ ಹೇದು ಗುಟ್ಟಿಲಿ ಎರಡು ಚಪಾತಿ ಹೆಚ್ಚು ತಿಂದಿಕ್ಕಿ ಬಯಿಂದವು ಶರ್ಮಪ್ಪಚ್ಚಿ – ಚಿಕ್ಕಮ್ಮಂಗೆ ಗೊಂತಾಗದ್ದ ಹಾಂಗೆ. ಆದರೆ ಬೈಲಿಂಗೆ ಗೊಂತಾಯಿದು ಆ ಸಂಗತಿ!

ಅದಿರಳಿ.

ಈ ಸರ್ತಿ ಪಾದಪೂಜೆಗೆ ಕೂರುಸ್ಸು ನಮ್ಮ ಪ್ರೀತಿಯ ತೆಕ್ಕುಂಜೆ ದಂಪತಿಗೊ.
ಅವು ಬೈಲಿನ ಪ್ರೀತಿಯ “ಟೀಕೆ”ಮಾವನೂ ಅಪ್ಪು. ವಸ್ತುನಿಷ್ಠವಾಗಿ ಎಲ್ಲ ವಿಷಯಂಗಳನ್ನೂ ವಿಮರ್ಶೆ ಮಾಡಿ ಒಳಿತುಕೆಡುಕುಗಳ ತೋರ್ಸುದಕ್ಕೋ ಏನೋ, ಅವಕ್ಕೆ ಟೀಕೆ ಮಾವ° ಹೇಳಿಯೇ ಹೇಳುಸ್ಸು ಸುಭಗಣ್ಣ.
ಸದ್ಗೃಹಿಣಿ ಶ್ರೀಮತಿಯವರನ್ನೂ, ಇಬ್ರು ಬುದ್ಧಿವಂತ ಮಕ್ಕಳನ್ನೂ ಪಡಕ್ಕೊಂಡು ಬೆಂಗ್ಳೂರು ನಗರಲ್ಲಿ ವಾಸಿಯಾಗಿಪ್ಪ ಶ್ರೀಯುತ ಟೀಕೆಮಾವ° ನಮ್ಮ ಬೈಲಿನ ಪ್ರತಿನಿಧಿಸಿ ನಾಡ್ದು ಶ್ರೀಗುರುಪಾದುಕಾ ಪೂಜೆಯ ಮಾಡ್ತವು. ಅಪೂರ್ವ ಅವಕಾಶಕ್ಕೆ ಅವಕ್ಕೆ ಅಭಿನಂದನೆಗೊ. ಅವರ ಕುಟುಂಬಕ್ಕೂ, ಸಾಹಿತ್ಯ-ಸಮಾಜ ಸೇವೆಗೂ ಉದ್ಯೋಗ-ವಿದ್ಯಾಭ್ಯಾಸಕ್ಕೂ ಒಳ್ಳೆದಾಗಲಿ ಹೇದು ರಾಮದೇವರತ್ರೆ ಕೇಳಿಗೊಂಬದು.

ಹಾಂಗೇ, ಅವು ಪಾದಪೂಜೆ ಮಾಡುವಾಗ ನಾವು ಹಿಂದೆ ಕೂದುಗೊಂಡು ಶ್ರದ್ಧಾಭಕ್ತಿಲಿ ದೇವರ ನಂಬಿಗೊಂಬಲಿದ್ದಲ್ಲದೋ –ಬೈಲಿನ ಎಲ್ಲೋರಿಂಗೂ ಶುಭಾಶೀರ್ವಾದ ಸಿಕ್ಕಲಿ ಹೇಳ್ತದು ನಮ್ಮ ಹಾರೈಕೆ. ಎಲ್ಲೋರಿಂಗೂ ಎಲ್ಲಾ ರೀತಿಲಿಯೂ ಸಕಲ ಸೌಭಾಗ್ಯವ ಆ ಗುರುಗೊ ಅನುಗ್ರಹಿಸಲಿ ಹೇದು ಕೇಳಿಗೊಂಬದು.

~
ಗುರುಪಾದುಕಾಪೂಜೆ ಆದ ಮತ್ತೆ ನಮ್ಮ ಬೈಲಿನೋರಿಂಗೆಲ್ಲ ಕೂದು ಪಂಚಾತಿಗೆ ಮಾಡುವ ಅವಕಾಶ.
ನಿತ್ಯವೂ ಅಂಬೆರ್ಪಿಲಿ ಕಾಂಬದಾತನ್ನೆ, ಆ ದಿನ ಪುರುಸೋತಿಲಿ ಪರಸ್ಪರ ಮೋರೆಕಾಂಬಲೆ ಅವಕಾಶ ಆವುತ್ತು.
ಡೈಮಂಡು ಭಾವಂಗೆ ಚುಬ್ಬಣ್ಣನ ಒಟ್ಟಿಂಗೆ ಚಾಯ ಕುಡಿಯಲೆಡಿತ್ತು; ಶ್ರೀಅಕ್ಕಂಗೆ ದೀಪಿಅಕ್ಕನ ಹತ್ತರೆ ರಾಮಕಥೆಯ ಕಥೆ ಮಾತಾಡ್ಳೆಡಿತ್ತು; ಸುಭಗಣ್ಣಂಗೆ ಮಾಷ್ಟ್ರುಮಾವನ ಎಲೆತಟ್ಟೆಂದ ಹೊಗೆಸೊಪ್ಪು ಎಳದು ತಿಂಬಲೆ ಅವಕಾಶ ಆವುತ್ತು – ಹೀಂಗೆ ಎದುರೇ ಸಿಕ್ಕಿರೆ ಅದಕ್ಕೊಂದು ಗಮ್ಮತ್ತೇ ಬೇರೆ! ಅಲ್ಲದೋ?

~

ಅದಾಗಿ, ಗುರುಗೊ ಭಿಕ್ಷೆ ಸ್ವೀಕಾರ ಮಾಡಿಕ್ಕಿ ಗುರುಪೀಠಕ್ಕೆ ಬಪ್ಪ ಸುಮುಹೂರ್ತ.
ಗುರುಪೀಠಕ್ಕೆ ಬಂದ ಮತ್ತೆ ಮಂಗಳಕರ ಆಶೀರ್ವಚನವೂ – ಆಶೀಃಪೂರ್ವಕ ವ್ಯಾಸಮಂತ್ರಾಕ್ಷತೆಯೂ ಇದ್ದೇಇದ್ದು. ಅದಲ್ಲದ್ದೇ ಬೇರೆ ಎಂತರ ಇದ್ದು?
ಅದೇ ಇಂದ್ರಾಣ ಶುದ್ದಿಯ ವಿಶೇಷ.

~

ಕಾವ್ಯ- ಗಾನ-ಯಾನ: ಧ್ವನಿಮುದ್ರಿಕೆ:

ಓ ಅಂದು ಬೈಲಿನ ಲೆಕ್ಕದ ಒಂದು ಕಾರ್ಯಕ್ರಮ ಆಯಿದು ಪುತ್ತೂರಿಲಿ, ನೆಂಪಿದ್ದೋ?
ಕೆದಿಲಾಯ ಅಜ್ಜ, ಉಪಾಧ್ಯಾಯ ಮಾವ, ದೀಪಿ ಅಕ್ಕ, ಕಾಂಚೋಡು ಅಣ್ಣ, ದೇರಾಜ ಭಾವ – ಎಲ್ಲೋರುದೇ ಬಂದು ಸೇರಿದ ಅಪರೂಪದ ಹಾಡುಗಾರಿಕೆ ಕಾರ್ಯಕ್ರಮ “ಕಾವ್ಯ-ಗಾನ-ಯಾನ”.
ಕನ್ನಡಲ್ಲಿ ಬೆಳಗಿದ ಹಲವಾರು ಹಿರಿಯರ ಹಾಡುಗಳ ಹಾಡಿ, ಅದರೊಟ್ಟಿಂಗೇ ಆ ಹಾಡುಗೊ ಎಂತಕೆ ಹುಟ್ಟಿತ್ತು, ಹೇಂಗೆ ಬೆಳದತ್ತು, ಎಂತಕೆ ಪ್ರಸಿದ್ಧ ಆತು – ಹೇಳ್ತರ ಬಗ್ಗೆ ವಿಮರ್ಶೆ ಮಾಡಿ ರೈಸಿದ ಕಾರ್ಯಕ್ರಮ ಅದು.
ಮಂಗಳೂರು ಆಕಾಶವಾಣಿಯೋರು ಅದರ ಚೆಂದಲ್ಲಿ ಮರುಪ್ರಸಾರವೂ ಮಾಡಿದ್ದವು.

ಆ ದಿನದ ಕಾರ್ಯಕ್ರಮ – ಅಲ್ಲಿಗೆ ಬಂದು ನೋಡಿದೋರಿಂಗೆ ಆತು.
ಆಕಾಶವಾಣಿ ಕಾರ್ಯಕ್ರಮ – ರೇಡಿಯ ಕೇಳಿದೋರಿಂಗೆ ಆತು.
ಹಾಂಗಾರೆ ಬಾಕಿದ್ದೋರು ಕೇಳ್ತ ಕೆಣಿ ಎಂತರ? ಅದೇ – ಧ್ವನಿಮುದ್ರಿಕೆ ಮಾಡುಸ್ಸು.

ನಮ್ಮ ಬೈಲಿನ ಹೆರಿಯೋರೆಲ್ಲ ಸೇರಿಗೊಂಡು ಅಂಬಗ ಆ ಕಾರ್ಯಕ್ರಮದ ಧ್ವನಿಯ ತಟ್ಟೆದೋಸೆಲಿ ರಿಕಾರ್ಡು ಮಾಡಿರೆ ಹೇಂಗೆ – ಹೇದು ತೀರ್ಮಾನ ಮಾಡಿಗೊಂಡವು.
ಮುಳಿಯಭಾವಾ, ಯೇನಂಕೂಡ್ಳಣ್ಣ, ಶೇಡ್ಯಮ್ಮೆ ವಿದ್ಯಕ್ಕ, ಡೈಮಂಡು ಭಾವ – ಎಲ್ಲೋರುದೇ ಸೇರಿ ಚೆಂದಮಾಡಿ ಧ್ವನಿಮುದ್ರಿಕೆ ತಯಾರಿ ಮಾಡಿದ್ದವು. ಮೂರು ಘಂಟೆಯ ಅಮೋಘ ಪದ್ಯಂಗೊ, ಪದ್ಯಾರ್ಥಂಗೊ – ನಿಂಗೊಗೆ ರಸದೌತಣ ಕೊಡ್ತರಲ್ಲಿ ಸಂಶಯ ಇಲ್ಲೆ – ಹೇದು ಡೈಮಂಡು ಭಾವ ಮೊನ್ನೆ ಟೀಕೆಮಾವನ ಹತ್ತರೆ ಹೇಳಿಗೊಂಡಿತ್ತಿದ್ದ.

~

ಚೈನು – ಉದ್ದಕತೆ:

ಬೈಲಿನ ಶುದ್ದಿಗಳ ಪುಸ್ತಕರ ರೂಪಲ್ಲಿ ತರೆಕ್ಕು, ಆ ಮೂಲಕ ಕಂಪ್ಯೂಟ್ರು ಅರಡಿಯದ್ದೋರಿಂಗೂ ಶುದ್ದಿ ಮುಟ್ಟುಸೇಕು – ಹೇಳ್ತದು ನಮ್ಮ ಅಭಿಲಾಷೆ ಅಲ್ಲದೋ?
ನಮ್ಮ ಬೈಲಿಲಿ ಅಪೂರ್ವ ಬರಹಗಾರರು ಇರ್ಸು ನವಗೆ ಗೊಂತಿಪ್ಪದೇ. ಎಲ್ಲೋರುದೇ ಶುದ್ದಿ ಹೇಳ್ತರುದೇ, ನಮ್ಮ ಶಾಮಣ್ಣ ರಜ “ಉದ್ದದ ಶುದ್ದಿ” ಹೇಳ್ತವು. ಉದ್ದಕತೆ ಅದು. ನಾಣಿಗೆ ಎಂತಾತು, ಹೊಗೆಸೊಪ್ಪಿನ ಇಬ್ರಾಯಿಗೆ ಎಂತಾತ್ – ಹೇದು ರಜ ನೀಳವಾಗಿ ಹೇಳಿದ್ದದು ಬೈಲಿಲಿ ಭಾರೀ ರೈಸಿದ್ದತ್ತು.
ಅಪ್ಪು, ನೆಗೆಚಿತ್ರ ಶಾಮಣ್ಣ ಬರದ ಎರಡು ಉದ್ದಕತೆಗೊ- ಚೈನು, ಮತ್ತೆ, ಪೆನ್ಸಿಲು – ಇದೆರಡರ ಒಂದು ಪುಸ್ತಕ ಆಗಿ ಮಾಡಿ, ಪ್ರಕಾಶನ ಮಾಡಿರೆ ಹೇಂಗೆ – ಹೇದು ಬೈಲಿಲಿ ಕೆಲವು ಜೆನಕ್ಕೆ ಆಲೋಚನೆ ಬಂತು. ಆ ಪ್ರಕಾರ – ಡೈಮಂಡು ಭಾವ, ಮುಳಿಯಭಾವ, ಶಾಮಣ್ಣ ಎಲ್ಲೋರುದೇ ಸೇರಿಗೊಂಡು ಚೆಂದಕೆ ಒಂದು ಪುಸ್ತಕ ರೂಡಿ ಮಾಡಿದವು. ಗುರುಗಳ ಆಶೀರ್ವಾದ ತೆಕ್ಕೊಂಡು ಅದರ ಬಿಡುಗಡೆ ಮಾಡ್ಳಿದ್ದು – ಹೇದು ಡೈಮಂಡು ಬಾವ° ಮೊನ್ನೆಯೇ ಹೇಳಿತ್ತಿದ್ದ.

~

ನಮ್ಮ ಪ್ರೀತಿಯ ಸಂಸ್ಥಾನ: ಮಾವಿನಕುಳಿ ಪ್ರಸನ್ನಣ್ಣ

ಬೈಲು ತುಂಬ ತುಂಬ ಬೆಳೇಕು. ಕೊಡೆಯಾಲದ ಸಮುದ್ರ ದಾಂಟಿ ಅದರಿಂದ ಅತ್ಲಾಗಿಯಾಣ ಸಾಗರ ದಾಂಟಿ ಎಲ್ಲ ಕಡೇಂಗೂ ಹಬ್ಬೇಕು – ಹೇಳ್ತದು ನಮ್ಮ ಆಶಯ ಆಗಿದ್ದತ್ತು. ಅಲ್ಲದೋ?

ಹಾಂಗೇ ಆವುತ್ತಾ ಇದ್ದು ಹೇಳ್ತದು ಅತ್ಯಂತ ಸಂಗತಿ.
ಸಾಗರ ಮಂಡಲಲ್ಲಿ ಮಾವಿನಕುಳಿ ಹೇದು ಒಂದು ಊರು ಇದ್ದು. ಅಲ್ಲಿ ಇಪ್ಪ ಒಂದು ಕುಟುಂಬ ತಲೆತಲಾಂತರಂದ ನಮ್ಮ ಗುರುಪೀಠಕ್ಕೆ ಹತ್ತರೆ. ತುಂಬಾ ಹತ್ತರೆ.
ಗುರುಪೀಠದ ಕಷ್ಟಕಾಲಲ್ಲಿ, ಸುಖಕಾಲಲ್ಲಿ, ಆರಾಮ ಕಾಲಲ್ಲಿ – ಎಲ್ಲ ಸಮಯಲ್ಲೂ ಗುರುಪೀಠವ ಎತ್ತಿ ಹಿಡಿವ ಕುಟುಂಬ ಅದು. ಆ ಕುಟುಂಬಲ್ಲಿ ಅರಳಿದ ಒಂದು ಕುಡಿ, ಪ್ರಸನ್ನಣ್ಣ – ಹೇದು.
ನಮ್ಮ ಮಾಷ್ಟ್ರುಮಾವನ ದೊಡ್ಡಮಗನ ಕ್ಲಾಸು ಅಡ. ಹಾಂಗಾಗಿ ಅಂದೇ ಗುರ್ತ ಇದ್ದು ಪರಸ್ಪರ. ಆ ಪ್ರಸನ್ನಣ್ಣ ನಮ್ಮ ಗುರುಗಳ ಬಗ್ಗೆ ಬರದ ಒಂದು ಅಪೂರ್ವ ಶುದ್ದಿ ಸಂಕಲನದ ಒಂದು ಪುಸ್ತಕ.

ಗುರುಗಳ ತಾನು ಕಂಡ ರೀತಿ, ಅವರ ಹಿರಿಮೆಗೊ, ಪೀಠದ ಗೌರವಂಗೊ – ಎಲ್ಲವನ್ನುದೇ ಮುಕ್ತ ಮನಸ್ಸಿಂದ ಬರದ್ದವು. ಅವರ ಪುಸ್ತಕವನ್ನುದೇ ಬೈಲಿನ ವೇದಿಕೆಲಿ ಬಿಡುಗಡೆ ಮಾಡ್ತದು ಹೆಮ್ಮೆಯ ವಿಷಯ ಹೇದು ಮುಳಿಯಭಾವ ಹೇಳಿದವು.

~
ಗರುಭೇಟಿ
ಇದು ಮೂರು ಪ್ರಕಟಣೆಗೊ ಬಿಡುಗಡೆ ಆದ ಮತ್ತೆಯೇ ಗುರುಭೇಟಿ.
ಪುಸ್ತಕ ಬಿಡುಗಡೆ ಒಂದು ಕೊಶಿ ಆದರೆ ಗುರುಭೇಟಿ ಮತ್ತೊಂದೇ ಕೊಶಿ.
ಬೈಲಿನ ಸಮಗ್ರ ಬೆಳವಣಿಗೆಯ ಗಮನುಸಿ ಗುರುಗೊ ಆಶೀರ್ವಾದ ಕೊಡ್ತದು ಒಂದು ಹೆಮ್ಮೆ ಅಲ್ಲದೋ ನವಗೆಲ್ಲ?
ಆ ಸೌಭಾಗ್ಯವ ಕಳೆದ ಎರಡು ವರ್ಷಂದ ಪಡಕ್ಕೊಂಡು ಬಂದ ಬೈಲು ನಿಜವಾದ ಕುಶಿಲಿ ಇದ್ದು.
ಮುಂದೆಯೂ ಗುರುಗಳ ಆಶೀರ್ವಾದ ನಿತ್ಯ-ನಿರತ-ನಿರಂತರವಾಗಿ ಸಿಕ್ಕೇಕು –ಹೇಳ್ತದು ಬೈಲ ಎಲ್ಲೋರ ಆಶಯ.

~

ಇಷ್ಟೆಲ್ಲ ಮಾತಾಡಿಗೊಂಡಿಪ್ಪಾಗಳೇ ಶುದ್ದಿ ಬಂತಿದಾ – ಟೀವಿಲಿ ಹೀಂಗೀಂಗೆ ಬತ್ತಾ ಇದ್ದೂದು!
ಆರೋ ಪೈಶೆಗೆ ಬೇಕಾಗಿ ಎಂತೆಂತದೋ ಮಾಡಿಕ್ಕಿ – ಬೆದರಿಕೆ ಹಾಕಿಕ್ಕಿ, ಅವರ ಮಾನ ಮುಚ್ಚಿಗೊಂಬಲೆ ಬೇಕಾಗಿ ಟೀವಿ ಎದುರು ಬಂದು ಏನೆಲ್ಲ ಹೇಳಿದ್ದು. ಅದೇವದೋ ಹರಟೆ ಮಾಡಿರೆ ದೇವಲೋಕ ಹಾಳಾವುತ್ತೋ? ಇಲ್ಲೆ.

ಆ ದೇವರು – ರಾಮ ನಿನ್ನೆಯೂ ನೋಡಿಗೊಂಡಿತ್ತಿದ್ದ, ಇಂದೂ ನೋಡಿಗೊಂಡಿದ್ದ. ಸದಾ – ನೋಡಿಗೊಂಡೇ ಇರ್ತ. ಅವಂಗೆ ಗೊಂತಾವುತ್ತು ಸತ್ಯ ಯೇವದು ಹೇದು.
ಆದರೆ, ಟೀವಿಯವು ಹಾಂಗಲ್ಲ; ನಿನ್ನೆ ನೋಡ್ತವಿಲ್ಲೆ, ನಾಳೆ ನೋಡ್ತವಿಲ್ಲೆ – ಇಂದು ಮಾಂತ್ರ ಬೇಕಾದ್ಸರಿಂದಲೂ ಹೆಚ್ಚು ನೋಡ್ತವು! ಗೊಂತಿಪ್ಪದಕ್ಕೆ ಉಪ್ಪು ಮೆಣಸು ಸೇರ್ಸಿ – ರಜ ಉಪ್ಪುಕಾರಒಗ್ಗರಣೆ ಹಾಕಿ ರುಚಿರುಚಿ ಮಾಡಿ ಬಳುಸುತ್ತವು. ಬೇಕಾದೋರು ಬೇಡದ್ದೋರು ಎಲ್ಲೋರಿಂಗೂ ಬಳುಸುತ್ತವು.

ಜೆನಂಗೊ ಟೀವಿಲಿ ಬಂದದೇ ಸತ್ಯ ಹೇದು ನಂಬಿಗೊಂಡು ಏನೆಲ್ಲ ಗ್ರೇಶುಸ್ಸು ಬೇಡ.
ಶ್ರೀರಾಮನೇ ಬಂದು ಸತ್ಯ ತೋರ್ಸಿ ಕೊಡ್ತ- ಹೇದು ಬೈಲಿನ ಎಲ್ಲೋರುದೇ ಧೈರ್ಯಲ್ಲಿ ಹೇಳಿದವು.

~

ನಾಳ್ದು 31ಕ್ಕೆ ಕೆಕ್ಕಾರಿಂಗೆ ಬನ್ನಿ. ಹೆಚ್ಚಿನ ಸಂಖ್ಯೆಲಿ ಬನ್ನಿ. ಬೈಲಿನ ಎಲ್ಲೋರುದೇ ಬನ್ನಿ.
ಗುರುಪೀಠ ಬೈಲಿನ ಹರಸಲಿ; ಆದರೆ, ನಾವೆಲ್ಲ ಗುರುಪೀಠ ಒಳಿಶುವ..

~

ಒಂದೊಪ್ಪ: ಗುರುಪೀಠದ ತುಪ್ಪದೀಪಕ್ಕೆ ನಾವು ತುಪ್ಪ ಆಯೇಕು. ಅದರ ಪ್ರಕಾಶ ನವಗೇ ಇಪ್ಪದು. ಅಲ್ಲದೋ?

2 thoughts on “ಗುರುಪೀಠ ಬೈಲಿನ ಹರಸಲಿ; ಗುರುಪೀಠವ ಬೈಲು ಒಳಿಶಲಿ..

  1. ಬೈಲಿನ ಲೆಕ್ಕಲ್ಲಿ ಸಾಹಿತ್ಯ ಸೇವೆ, ಗುರುಭೇಟಿ ತುಂಬಾ ಸಂತೋಷದ ವಿಷಯ. ಇನ್ನೊಂದು ವಿಷಯದ ಬಗ್ಗೆ ಹೇಳುವುದಾದರೆ
    ಶ್ರೀರಾಮನೇ ಬಂದು ಸತ್ಯ ತೋರ್ಸಿ ಕೊಡ್ತ ಹೇಳುವದು ಸರಿಯಾದ ಮಾತು.

  2. ಶ್ರೀಗುರುಗಳ ಬೇಟಿ, ಮಂತ್ರಾಕ್ಷತೆ ಪಡಕ್ಕೊಂಡು ಬಪ್ಪವಿಚಾರ ಒಳ್ಳೆ ಸಂತೋಷಾತು .ಆ ನೀರುಕಲಂಕಿದ ವಿಚಾರ…! ಅಂದು ರಾಮನ ಪೂಜಗೆ ಹೇದು ಬಂದ ಹೂಗು, ನೀಚಹಾವಾಗಿ ಹೆಡೆನೆಗ್ಗಿತ್ತಲ್ಲೋ!?. ಅಂದೆಲ್ಲ ರಾಮಕಥಗೆ ಹಾಡುವಾಗ ಎವ ಭಾವನೆಲಿ ಇದ್ದತ್ತೋ , ರಾಮ,ರಾಮಾ ..ಕಾಪಾಡು. ಸರಿ..ನಾಯಿ ಕೊರಪ್ಪೀರೆ ದೇವಲೋಕ ಹಾಳಪ್ಪಲಿಲ್ಲೆ ಖಂಡಿತ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×