- ಅಬ್ಬಿ ಗೀತೆ – ಶರಲ್ಲಿ - October 11, 2012
- ಸತ್ಯ – ಇ(೦)ದು - April 17, 2012
- ಅವಿಲಿನ ಹಾಂಗೇ – ಒಂದು ಪ್ರಯೋಗ - April 10, 2012
ಇಲ್ಲಿ ಬಪ್ಪ ಎಲ್ಲ ವೆಕ್ತಿಗೋ ಕಾಲ್ಪನಿಕ.
ಇದರ ಅಯಿಗಿರಿ ನಂದಿನಿ ದಾಟಿಲಿ ಹಾಡುಲೆ ಪ್ರಯತ್ನ ಮಾಡುಲಕ್ಕು.
ಕಿಣಿಕಿಣಿ ಆತಡ, ಕಟ್ಟಿದ ಗುಡಿ ತೆಗದತ್ತಡ,
ಕೈ ಕುಟ್ಟಿ ಒತ್ತಿತ್ತಡ, ಉದಿಯಾತಡಾ….
ಗಂಟೇಳಾತಡ, ಏಳ್ಲೊತ್ತಾತಡ
ಬಸ್ಸಿಂಗೆ ಹೆರಡುಲೆ ತಡವಾವುತ್ತಡಾ……..
ಶಾಲಗೆ ಹೋಯೆಕ್ಕಡ, ಮಾಷ್ಟ್ರಪಾಟ ಕೇಳೆಕ್ಕಡ,
ಪರೀಕ್ಷೆಲಿ ಒಳ್ಳೆ ಮಾರ್ಕು ತೆಗೆಯೆಕ್ಕಡಾ.
ಸೀ ಇ ಟಿ ಬರೆಯೆಕ್ಕು, ರೇಂಕೊಂದು ಬರೇಕ್ಕು,
ಡಾಕ್ಟ್ರೋ, ಇಂಜಿನೀಯೆರೋ ಆಯೆಕ್ಕಡಾ….
ರಾಮಣ್ಣ ಎದ್ದಾಡಾ, ಬಯಲಿಂಗೆ ಇಳುದಾಡ,
ಪಂಪು ಸ್ಟಾಟು ಮಾಡಿ ನೀರು ಬಿಟ್ಟನಡಾ……
ನೀರುಕಟ್ಟಿ ತೋಟಕ್ಕೋಗಿ; ಬಿದ್ದಾಡಕ್ಕೆ ಹೆರ್ಕಿದಾಡ,
ಸೋಗೆ ಹಾಳೆ ಯೆಳಕ್ಕೊಂಡು ಮನಗೋದಾಡಾ….
ದೊಡ್ಡತ್ತೆ ಕರುಬಿಟ್ಟು, ಕಾಪಿಗೆ ರೆಡೀ ಮಾಡಿತ್ತಡ,
ಮಿಂದುಮೋರೆ ತೊಳದರೆ, ಕುಡಿವಲಕ್ಕಡಾ…
ಹೆರಡುಲೆ ತಡವಪ್ಪವು, ಶಾಲಗೆ ಹೋಪವು,
ಮೊದಲೂ ಬಂದರೆ ಒಳ್ಳೆದಡಾ……..
ಮಾಷ್ಟ್ರು ಮಾವ ಹೆರಟವು, ಶಾಲಗೆ ಹೋದವು,
ಮಕ್ಕೊಗೆ ಪಿಟಿ ಪಿಟಿ ಸುರುವಾತದಾ….
ಕೋಪಿ ಇಂದು ತಯಿಂದಿಲ್ಲೆ, ಹೋಂವರ್ಕು ಆಯಿದಿಲ್ಲೆ
ಹೇಳೀರೆ ಕೈ ಬೆನ್ನು ಬೆಶಿಯಕ್ಕದಾ….
ಯಾರಿಂಗೆ ಬೇಕಿದು, ಈಪರಿ ಕಿರಿಕಿರಿ
ಕಿಣಿ ಕಿಣಿ ಆಗದ್ರೇ ಒಳ್ಳೆದದಾ…..
ರಜೆಹೆಚ್ಚಾಯೆಕು, ಶಾಲೆ ಕಮ್ಯಾಯೆಕು
ಯಾರತ್ರೆ ಹೇಳೀರು ಆವುತ್ತಿಲ್ಲೆಡಾ………
ನಿಂಗೊಗೆ ಎಡಿಗಾರೆ ನೋಡಿ………….
ಈ ಕಿರಿಕಿರಿಯ ಓದಿ ಒಪ್ಪ ಕೊಟ್ಟ ಎಲ್ಲೋರಿಂಗೂ ಕಿರಿಕಿರಿಮಾಡ್ತ ಶೇಡಿಗುಮ್ಮೆ ಪುಳ್ಳಿಯ ಧನ್ಯವಾದಂಗೋ……
ಲಾಯ್ಕ ಆಯಿದು…..:D
ಹ,ಹಾ..{ರಜೆಹೆಚ್ಚಾಯೆಕು, ಶಾಲೆ ಕಮ್ಯಾಯೆಕು} ಶೇಡಿಗುಮ್ಮೆ ಪುಳ್ಳಿ ಹೀ೦ಗೆ ಹೇಳಿದ ಕಾರಣವೋ ಏನೋ ಕರ್ನಾಟಕ ಸರ್ಕಾರದವು ಆರ ಜಯ೦ತಿ ಮಾಡೊದೂ ಹೇಳಿ ಹುಡುಕ್ಕಿಗೊ೦ಡಿದ್ದವಡಾ!!
ಈ ಕಿರಿಕಿರಿಯ ಓದಿ ಒಪ್ಪ ಕೊಟ್ಟ ಎಲ್ಲೋರಿಂಗೂ ಕಿರಿಕಿರಿಮಾಡ್ತ ಶೇಡಿಗುಮ್ಮೆ ಪುಳ್ಳಿಯ ಧನ್ಯವಾದಂಗೋ……
ಕಿರಿಕಿರಿ ಬೇಡ ಹೇಳಿ ಓದುಲೇ ತಡವಾದ್ದದು ಅಲ್ಲ… ಕಿಣಿ ಕಿಣಿ ಪದ್ಯ ಲಾಯಕಿದ್ದು ಹೇಳಿ ಒಂದೊಪ್ಪ
ವಾಹ್ಹ್….!!
ಕಿಣಿಕಿಣಿ ಗಂಟೆಯ ಬಾರಿಸಿ ಓದಿರೆ ಈ ಪದ್ಯವು ಚೆಂದ ಕೇಳುಗಡಾ
ಶಾಲೆಯ ಸಂಖ್ಯೆಯ ಕಮ್ಮಿಯ ಮಾಡಲೆ ಕನ್ನಡ ಶಾಲೆಯ ಮುಚ್ಚುಗಡಾ..!
ಓಯಿ.. ಇದು ಲಾಯಕ ಆಯ್ದಾತಾ.
ಅದೆಂತಕೆ ಮಿಂದು ಮೋರೆ ತೊಳೆತ್ತದೋ!! ಉಮ್ಮಾ ಧಾಟಿ ಎಲ್ಲಾ ನವಗರಡಿಯ. ಕುಶಾಲ್ಲಿ ಓದಿತ್ತಿಲ್ಲಿ.
ಇದಾ .. ರಜೆ ಹೆಚ್ಚಾದರೆ ಶಾಲೆ ಕಮ್ಮಿಯಾದರೆ ಕಣ್ಣು ಕೆಂಪಕ್ಕಡಾ ಮಂಡೆ ಬೆಷಿಯಕ್ಕಡಾ ಹೇದು ನಮ್ಮಲ್ಲಿಂದ ಒಪ್ಪ.