Oppanna.com

ಪೈಪೂ ಒಟ್ಟೆ – ಹಂಡೆಯೂ ಒಟ್ಟೆ

ಬರದೋರು :   ಶೇಡಿಗುಮ್ಮೆ ಪುಳ್ಳಿ    on   27/12/2011    12 ಒಪ್ಪಂಗೊ

ಭಾವನ ತೋಟಲ್ಲಿ ಸ್ಪ್ರಿಂಕ್ಳೇರು ಹಾರುದ್ದು
ಪೈಪು – ಒಟ್ಟೆಡಾ

ಅತ್ತೆಯ ಪಂಪು ನೀರೂ ಎಳೆಯದ್ದು
ಪೈಪು – ಒಟ್ಟೆಡಾ

ಮಾವನ ಟೇಂಕಿಲಿ ನೀರೂ ನಿಲ್ಲದ್ದು
ಪೈಪು – ಒಟ್ಟೆಡಾ

ಕಾರಿನಟೇಂಕಿಲಿ ಪೆಟ್ರೋಲು ಕಾಲಿಯಾದ್ದು
ಪೈಪು – ಒಟ್ಟೆಡಾ

ಪೇಟೆಂದ ಮನಗೆ ಸಾಮಾನುತಪ್ಪಗ
ತೊಟ್ಟೆಯೇ- ಒಟ್ಟೆಡಾ

ಉಬರಡ್ಕ ಮಾವನ ಅಡಕ್ಕೆ ಒಣಗುಸುವ
ಪ್ಲೇಸ್ಟಿಕೂ – ಒಟ್ಟೆಡಾ

ಸೋರುತ್ತ ಮಾಡಿಂಗೆ ಸುಭಗಣ್ಣ ಮುಚ್ಚಿದ
ಪ್ಲೇಸ್ಟಿಕೂ – ಒಟ್ಟೆಡಾ

ಚೆನ್ನೈ ಭಾವನ ರೈನು ಕೋಟಿಲಿ
ಎಲಿಕೆರದ  – ಒಟ್ಟೆಡಾ

ಹೂಗಿಂದ ಹೂಗಿಂಗೆ ಹಾರ್ತಾ ಇಪ್ಪದು
ಬಣ್ಣದ -ಚಿಟ್ಟೆಡಾ

ಮಕ್ಕೊಗೆ ಹಾರುಲೆ ಅಜ್ಜನಮನೆಲಿ
ಮಣ್ಣಾಂ- ಚಿಟ್ಟೆಡಾ

ಲೈಟಿನ ಬೆಣ್ಚಿಲಿ ಹಾರಿ ಸತ್ತದು
ಸಣ್ಣ – ಚಿಟ್ಟೆಡಾ

ಮಾವಂಗೆ ಎದ್ದು ಸುತ್ತೂ ಬಪ್ಪಲೆ
ತೊಳಶೀ – ಕಟ್ಟೆಡಾ

ಶಾಲಗೆ ಹೋವುತ್ತ ದಾರಿಲಿ ಇಪ್ಪದು
ಅಶ್ವತ್ಥ – ಕಟ್ಟೆಡಾ

ಮಾವಿನ ಬುಡಕ್ಕೆ ಕಟ್ಟಿ ಇಪ್ಪದು
ಮಾವಿನ – ಕಟ್ಟೆಡಾ

ಮಾವಿನಕಟ್ಟೆಂದ ಮದಲೇ ಇಪ್ಪದು
ಬೋಳು – ಕಟ್ಟೆಡಾ

ಮಕ್ಕಳೇ ಇಲ್ಲದ್ದ ಊರಿಲಿ ಇಪ್ಪದು
ಜೋಕುಳ – ಕಟ್ಟೆಡಾ

ಬೈಕಿನ ಚಕ್ರ ನೆಲವ ಅಪ್ಪಿದ್ದು
ಟ್ಯೂಬು –  ಒಟ್ಟೆಡಾ

ಒಲೆಯ ಒಳಂಗೇ ನೀರು ಬಿದ್ದದು
ಅಳಗೆ – ಒಟ್ಟೆಡಾ

ನೀರು ಎತ್ತುಲೆ ಸುಲಭ ಅಪ್ಪದು
ಕೊಡಪಾನ – ಒಟ್ಟೆಡಾ

ಬಂಙಲ್ಲೆತ್ತಿ ನೀರು ಎರದ್ದು
ಹಂಡೆಯೇ ಒಟ್ಟೆಡಾ ……….

ಎಲ್ಲೋರು ಬೇರೆಬೇರೆ ಆಗಿ ಇಪ್ಪ ನಮ್ಮೋರ ಮನೆಗಳ ಕಥೆಯೇ ಇಷ್ಟೇಡಾ….

12 thoughts on “ಪೈಪೂ ಒಟ್ಟೆ – ಹಂಡೆಯೂ ಒಟ್ಟೆ

  1. ಹುಳಿ ಬ೦ದ ಉದ್ದಿನಹಿಟ್ತಿಲಿ ಎರದ ದೋಸೆಲಿ ಸಾವಿರ ಒಟ್ಟೆಡಾ..
    ” ಹೀ೦ಗಿರ್ತ ಪದ್ಯ ಕಟ್ಟೆಡಾ ಪುಳ್ಳಿ ” ಹೇಳಿದ್ದು ಲೊಟ್ಟೆಡಾ !

    1. ಭಾವಾ , ದೋಸೆ ಒಟ್ಟೆ ಬಿದ್ದಷ್ಟೂ ರುಚಿ ಹೆಚ್ಚಡ ಆದರೆ ಕಾವಲಿಗೆಯೇ ಒಟ್ಟೆ ಆದರೆ……..?

        1. ಎಂತಾ ನೆಗೆಮಾಡಿದ್ದಕ್ಕೆ ಆರಾರು ಸೌದಿಕೊಳ್ಳಿ ಹಿಡುಕ್ಕೊಂಡು ಓಡುಸಿಂಡು ಬೈಂದವೋ ಹೇಂಗೆ?

  2. ಈ ಅರ್ಧಸತ್ಯವ ಓದಿ ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ.

  3. ಒಟ್ಟೆ ಲೊಟ್ಟೆಗಳ ಹಾಡು ಭಾರೀ ಚೆಂದ ಆಯಿದನ್ನೇ.

  4. ಯೇ ಪುಳ್ಳಿಯೇ..
    ಒಂದೊಂದು ಘಟನೆಗೂ ಒಂದೊಂದು ಶುದ್ದಿ ಬರವಲಕ್ಕೇನ್ನೇಪ್ಪಾ..

    { ಬೈಕಿನ ಚಕ್ರ ನೆಲವ ಅಪ್ಪಿದ್ದು – ಟ್ಯೂಬು – ಒಟ್ಟೆಡಾ}
    ಮೊನ್ನೆ ಒಂದಿನ ಸುಬಗಣ್ಣಂಗೆ ಹೀಂಗೇ ಆಗಿ, ಮನೆದೇವರ ಸಹಸ್ರನಾಮ ಆಗಿ – ಯೋ ಪಾಪ!!

  5. ಒಟ್ಟೆಯೋ…ಲೋಟ್ಟೆಯೋ… ಪದ್ಯ ಮಾಂತ್ರ ಲಾಯಕ ಇದ್ದು… ಎಲ್ಲೋರು ಬೇರೆಬೇರೆ ಆಗಿ ಇಪ್ಪ ನಮ್ಮೋರ ಮನೆಗಳ ಕಥೆಯೇ ಇಷ್ಟೇಡಾ… ಇಂದ್ರಾಣ ಸಮಸ್ಯೆಯ ಪದ್ಯ ರೂಪಲ್ಲಿ ಹೇಳಿದ್ದು ಲಾಯಕ ಆಯಿದು…

  6. ಸರ್ವಂ ರಂಧ್ರಮಯಂ ಹೇಳಿದ ಹಾಂಗಾತಾನೆ. ತುಳು ಪದ್ಯದ ರಾಗಲ್ಲಿ ಚೆಂದಕೆ ಹಾಡ್ಳಕ್ಕು. ಹೊಸತನ ಇದ್ದು. ಎಲ್ಲೋರ ಮನೆಯ ದೋಸೆಲಿಯುದೆ ಒಟ್ಟೆ ಇರ್ತಾಡ ಅಲ್ಲದೋ ಪುಳ್ಳಿ ?

  7. ಕಟ್ಟೆಯ ಚಿಟ್ಟೆಲಿ ಕೂದರೆ ಶೇಡಿಗುಮ್ಮೆ ಪುಳ್ಳಿಯ
    ಕಣ್ಣಿಂಗೆ ಬಿದ್ದದ್ದೆಲ್ಲಾ ಒಟ್ಟೆಡಾ!
    ಹೇಳುವದೆಲ್ಲ ಲೊಟ್ಟೆಡಾ!!

    ಓಯಿ., ಎಲ್ಲಾ ಒಟ್ಟೆ ಮಾಡಿ ಆತಿಲ್ಲ್ಯೋ. ಇನ್ನು …?

    ಲಾಯಕ ಆಯ್ದು ಹೇಳಿ ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×