Latest posts by ಶೇಡಿಗುಮ್ಮೆ ಪುಳ್ಳಿ (see all)
- ಅಬ್ಬಿ ಗೀತೆ – ಶರಲ್ಲಿ - October 11, 2012
- ಸತ್ಯ – ಇ(೦)ದು - April 17, 2012
- ಅವಿಲಿನ ಹಾಂಗೇ – ಒಂದು ಪ್ರಯೋಗ - April 10, 2012
ಟೀವಿ ನೋಡಿದರಲ್ಲು
ಕಾವಿ ಕಳ್ಳರ ಸಂತೆ
ಕೋವಿ ಹಿಡಿವಲು ಸಾಕು ನಂಬುಲೆಡಿಯ
ಮೀವದವು ಕಮ್ಮಿಯೇ
ಹಾವಿನಾ ಜಾತಿಯವು
ಹೂವಿನಾ ಹಿಂದಿಕ್ಕು ಮುಳ್ಳು ತುಂಬಾ
ಮಾವಿನಾ ಮರದಡಿಲಿ
ಬೇವಿನಾ ಗಿಡ ಹುಟ್ಟಿ
ಬಾವಿ ನೀರಿನ ಕಾದು ಕೂಯಿದಿಲ್ಲೆ
ಮವನಾ ಮನಗೋಗಿ
ಕಾವದವು ಬದಿಗೇಳಿ
ಜೀವ ಹಿಂಡುವದವು ತಗಣೆಯ ಹಾಂಗೇ
ಸಾವಿನಾ ಮನೆ ಮುಂದೆ
ಹೂವಿನಾ ರಾಶಿಯೇ
ಸಾವು ಬಂದಿದು ಯೆಲ್ಲಾ ಹೂವಿಂಗುದೇ
ದೇವರಾ ಹೆಸರೇಳಿ
ಸಾವ ಹಬ್ಬವ ಮಾಡ್ತ
ಬಾವ, ಮೂಸೆಯ ಮನೆಲಿ ದನುವಿಂಗುದೇ
ಲಾಯಿಕಾಯಿದು, ಒಪ್ಪ೦ಗೊ
ಲಾಯ್ಕ ಆಯಿದು.ಶೇಪುಭಾವ ಕುಶಾಲು ಬಿಟ್ಟು ಗಂಭೀರ ಆದ ಹಾಂಗೆ ಕಾಣುತ್ತು.
ಅಭಿನಂದನೆಗೋ… (೫+೫+೫+೫) ಒಂದು ಪ್ರಯತ್ನ ಮಾಡಿದೆ…
ಅದು ಸತ್ಯ ಇದು ಸತ್ಯ ಹೇಳಿ ಮಿತ್ಯ ನಂಬೆಡ
ಸತ್ಯ ತನ್ನೊಳ ಹೇಳಿ ತಿಳಿದವ ಜ್ಹಾನಿಯಡ |
ಕಾವಿಯನು ನಂಬೇಡ , ಕೋವಿಯನು ನಂಬೇಡ
ನಿನ್ನ ನೀ ನಂಬುವುದರ ಮೊದಲು ಕಲಿಯೆಕ್ಕಡ||
ಮಾವು ಸೀವಿಕ್ಕು, ಆದರು ಬೇವು ಕಹಿಯಿಕ್ಕು
ಮಾವದು ರಸಾಯನಕೆ,ಬೇವು ಔಷಧಿಯಕ್ಕು|
ಅವು ಜೊತೆಗೆ ಬೆಳೆತ್ತಾ ಇದ್ದಾರೆ ಉಳಿಸೆಕ್ಕು
ನಾವದರ ಸರಿಯಾದ ಉಪಯೋಗ ಮಾಡೆಕ್ಕು ||
ಸಾವು ಬಂದರೆ ಹುಟ್ಟುಲೆ ಅವಕಾಶವು ಇಕ್ಕು
ನೋವು ಬಂದರೆ ನಲಿವಿನ ಹಿತಾನುಭವವಕ್ಕು|
ನಾವು ಕೃತಕತೆಯ ಮರದು ಸಹಜತೆಯ ಮೆರೇಕು
ಹೂವು ಇದ್ದ ಹಾಂಗೆಯೆ ಈ ಜಗತ್ತಿಲ್ಲಿರೆಕು ||
ಚಂದ ಆಯ್ದು ಭಾವ. ಅಭಿನಂದನೆ. ಬರ್ಲಿ ಇನ್ನೂ ಇನ್ನೂ ನಿಂಗಳ ಈ ವಿಶೇಷ ಅಭಿರುಚಿಯ ಈ ಪ್ರಯತ್ನ ಹೇಳಿ ಶ್ಲಾಘಿಸಿತ್ತು – ‘ಚೆನ್ನೈವಾಣಿ’.
ಇಂದ್ರಾಣ ಕಾಲದ ಸತ್ಯಂಗಳಲ್ಲಿ ಕೆಲವು ಸತ್ಯಂಗಳ ಮಾಂತ್ರ ಹೆರ್ಕಿ ಚೆಂದದ ಕವಿತೆ ಕಟ್ಟಿದ್ದ ಶೇಡಿಗುಮ್ಮೆ ಪುಳ್ಳಿ. ಪುಳ್ಳಿಯ ಪದ್ಯಂಗೊ ನಿಜಜೀವನವ ಬಿಡುಸಿ ತೋರುಸ್ತಾ ಇದ್ದು.