ನಮ್ಮ ನೆಡೂಕೆ ಎಷ್ಟೋ ಜೆನ ಇದ್ದವು – ನಿಜವಾಗಿ ಅವು ಎಂತ ಆಗಿರ್ತವಿಲ್ಲೆಯೋ – ಅದರ ಹೇಳಿಗೊಳ್ತವು.
ಎನಗೆಂತೂ ಗೊಂತಿಲ್ಲೆಪ್ಪ – ಹೇಳ್ತ ಘನವಿದ್ವಾಂಸರೂ ಇದ್ದವು,
ಅವರ ಗೊಂತಿದ್ದು, ಹೀಂಗೆ ಮಾಡಿದ್ದೆ .. ಇತ್ಯಾದಿ ಅಂತೆಅಂತೆ ಹೇಳುವ ಬಾಯಿಬಡ್ಕಂಗಳೂ ಇದ್ದವು.
ಅಂತವರ ನೆಡುಕೆ ನವಗೆ ಕಾಂಬ ವಿಶೇಷ ವೆಗ್ತಿ ಈ ಡೈಮಂಡು ಭಾವ!
ಡೈಮಂಡು ಭಾವ ಹೇಳಿತ್ತುಕಂಡ್ರೆ, ನಮ್ಮದೇ ಬೈಲಿನ ಆಚ ಹೊಡೇಲಿ – ವಜ್ರಾಂಗಿಲಿ ಇರ್ತ ಬಾವಯ್ಯ°!
ಬರವದು ಹೇಳಿರೆ ಅವಕ್ಕೆ ಕೊಶಿ. ಓದುದು ಹೇಳಿರೆ ಇನ್ನೂ ಕೊಶಿ. (ಅವನೇ ಬರದ್ದರ ಅವಂಗೆ ಓದುಲೆಡಿತ್ತಿಲ್ಲೆನ್ನೇ ಹೇಳುದು ಒಂದೇ ಅವರ ಬೇಜಾರು!)
ಮುಳಿಯಾಲಪ್ಪಚ್ಚಿಯ ಹಾಂಗೆ ಪೇಪರು ಓದುಗು, ಮೂರು ಹೊತ್ತುದೇ. ನಾಲ್ಕನೇ ಹೊತ್ತು ರಜ್ಜ ಉಂಡಿಕ್ಕಿ ಒರಗ್ಗು.
ಎಲ್ಯಾರು ಎಡೆ ಸಿಕ್ಕಿರೆ ಒಪ್ಪಣ್ಣನ ಬೈಲಿಂಗೆ ಬಂದು ಹೊಸ ಶುದ್ದಿಗಳ ತಿಳ್ಕೊಂಡು ಹೋಕು.
ಈಗ ಹೊಸಾ ಶುದ್ದಿ ಎಂತರ ಹೇಳಿರೆ, ಡೈಮಂಡು ಭಾವ ನಮ್ಮ ಬೈಲಿಂಗೆ ಶುದ್ದಿ ಹೇಳುಲೆ ಸುರು ಮಾಡಿದ°.
ಜೀವನಕ್ಕೆ, ಮನಸ್ಸಿಂಗೆ ಹತ್ತರಾಣ ಶುದ್ದಿಗಳ ಅವ ಹೇಳುಗು. ತುಂಬಾ ಲಾಯಿಕಲ್ಲಿ ವಿವರುಸುಗು.
ಇಂಟರುನೆಟ್ಟಿಲಿ ಎಂತದೋ ಬ್ಲೋಗು ಮಾಡಿದ್ದನಡ, (
http://vajrottama.blogspot.in/), ಪುರುಸೊತ್ತಾದರೆ ಅದನ್ನೂ ಓದಿಕ್ಕಿ.
ಅಂತೂ ನಮ್ಮ ನೆರೆಕರೆಗೆ ಸೇರಿಗೊಂಡು, ನಮ್ಮ ಒಟ್ಟೊಟ್ಟಿಂಗೆ ಶುದ್ದಿಗಳ ಹೇಳಿಗೊಂಡು ನಮ್ಮ ಒಟ್ಟಿಂಗೆ ಕುಶಾಲು ಮಾತಾಡಿಗೊಂಡು ನಮ್ಮೊಟ್ಟಿಂಗೆ ಇಕ್ಕು.
ನಿಜಜೀವನಲ್ಲಿ ದೊಡ್ಡ ಚಿಂತನೆಗೊ ಇಪ್ಪ ವೆಗ್ತಿ ಈ ಡೈಮಂಡು ಭಾವ.
ಅವನ ಶುದ್ದಿಗೊಕ್ಕೂ ಒಪ್ಪ ಕೊಟ್ಟು, ಇನ್ನೂ ಹೆಚ್ಚು ಹೆಚ್ಚು ಶುದ್ದಿಗೊ ಬಪ್ಪಲೆ ಪ್ರೋತ್ಸಾಹಿಸೇಕು ಹೇಳಿ ಬೈಲಿನವರತ್ರೆ ಕೇಳಿಗೊಂಬದು..
“ಅಫ್ಜಲ್ ಗುರುವಿನ ಗಲ್ಲಿಂಗೆ ಏರಿಸಿದವಡ” ಹೇಳುವ ಶುದ್ದಿ ಬೇಗ ಬರಲಿ ಹೇಳಿ ಹಾರೈಸುತ್ತೆ.
ಎನಗೆ ಅನುಮಾನ ಇಪ್ಪ ಪ್ರಕಾರ ಆ ಕಸಬ್ಬು (ಇಸುಬ್ಬಿನ ಎರಡ್ಣೇ ಮಗ) ಜ್ವರಲ್ಲೇ ಸತ್ತದು. ಆದರೆ ಅಲ್ಲಿ ಜ್ವರ ಬಂದು ಸತ್ತತ್ತು ಹೇದು ಗೊಂತಾದರೆ ಪ್ರಪಂಚದಾದ್ಯಂತ ಅಲ್ಲೋಲ ಕಲ್ಲೋಲ ಅಕ್ಕು, ಕೈದಿಗೊಕ್ಕೆ ರಕ್ಷಣೆ ಇಲ್ಲೆ, ಅಮಾನವೀಯವಾಗಿ ನಡಕ್ಕೊಂಡಿದವು, ಇತ್ಯಾದಿ ಹೇದು . ಹಾಂಗಾಗಿಯೇ ಅದರ ಗಲ್ಲಿಂಗೇರ್ಸಿದ್ದು ಹೇದು ಪ್ರಚಾರ ಮಾಡಿ ಎಂಗಳೆ ದೊಡ್ಡ ಜನ ಹೇದು ಮಾಡಿತ್ತು ಸೋನ್ಯ ಗಾಂಧಿ. ಆರಿಂಗೂ ತೋರ್ಸದ್ದೆ, ಗುಟ್ಟಾಗಿ ಹುಗುದ್ದು ಎಂತಕ್ಕೆ ಹೇದು ಅರ್ತ ಆತಾ ……..?
ಏ ಭಾವ ಎನಗೇನೂ ಹಾಂಗೆ ತೋರ್ತುಲ್ಲೆ. ಗಲ್ಲಿಂಗೇರ‍್ಸುವ ಕ್ರಮ ಹೀಂಗೆ ಹೇಳಿ ತುಂಬ ಜೆನ ಹೇಳ್ತವಪ್ಪ… ಪಾಕಿಸ್ತಾನಲ್ಲಿ ಇಪ್ಪ ಅದರ ಕುಟುಂಬ ಶವ ತೆಕ್ಕೊಂಡೋವ್ತೆಯಾ° ಹೇಳಿ ಹೇಳಿತ್ತವಿಲ್ಲೆಡಾ.
ಬಾವಾ
ಒಂದು ಪಿಟಿಶನ್ ಹಾಕಿರೆ ಹೇಂಗೆ..?
ಅಕೇರಿಗೆ ಕಸಬಿನ ಕತೆ ಕಸವಿಗಿಂತ ಕಡೆ ಆತು.
ಆದರೆ ಅದರ ಕೊಂದ ಮಾತ್ರಕ್ಕೆ ಭಯೋತ್ಪಾದನೆ ಎಂತ್ಸು ಕಮ್ಮಿ ಆಗ. ನಮ್ಮೊಳದಿಕ್ಕೇ ಸುಮಾರು ಭಯೋತ್ಪಾದಕಂಗೊ ಬೆಳದು ನಿಂತಿದವು. ಅವರೆಲ್ಲರನ್ನೂ ಗಲ್ಲಿಂಗೇರಿಸೆಕ್ಕು.
Govt spent more than 30 crores for this culprit in last 4 years
ಇಂದಿನ ಸುದ್ದಿಯ ಇಂದು ತಿಳಿಸಿದ್ದು ಸಮಯೊಚಿತ. ರಾಜಕಿಯ ಡೈಮಂಡ್ ಬಾವನಿಂದ ಹೆಚ್ಹು ಹೆಚ್ಹು ಬರಲಿ
ಏ ಭಾವ ನಿಂಗೊ ಡೈಮಂಡು ಭಾವ° ಆದ್ದು ಏವತ್ತು? 🙂
ಆಯೆಕ್ಕಾದ್ದರ ಮಾಡ್ಲೆ ಇಷ್ಟು ವರ್ಷ ಎಂತಕೆ ತೆಕ್ಕೊಂಡವೋ? 🙁
ಏ ಭಾವ ನಾವು ಡೈಮಂಡು ಭಾವ ಆಗಿ ಕೆಲವು ತಿಂಗಳುಗಳೇ ಆಗಿ ಹೋತಿದಾ…. 🙂
ನಾವು ಇನ್ನು ಮುಂದೆ ಕೊರೆಂಗು ಭಾವ° 🙂
ಎನಗೇಕೋ ಸಂಶಯ ಭಾವಾ,
ಇದರ ಕೊಂದದಾಗಿರ. ಇದು ನುಸಿ ಕಚ್ಚಿ ಸತ್ತದಾದಿಕ್ಕು. “ಹೇಂಗೂ ಸತ್ತಿದನ್ನೆ, ರಜ್ಜ ಹೆಸರು ಮಾಡುವೊ°” ಹೇಳಿ “ಗಲ್ಲಿಂಗೆ ಹಾಕಿದೆಯೊ°” ಹೇಳಿ ಹೇಳಿದ್ದಾದಿಕ್ಕು..
ಅದಕ್ಕೆ ಬಿರಿಯಾಣಿ ಸಪ್ಲೈ ಮಾಡಿಗೊಂಡಿತ್ತ ಮನುಷ್ಯಂಗೆ ಹೇಂಗಾದಿಕ್ಕೋ ! ಃ))
ಅಪ್ಪೂಳಿ..
ಇನ್ನು ಅದಕ್ಕಾದ ನಷ್ಟವ ಆರು ತುಂಬಿ ಕೊಡುದು??
ಹೇಂಗಾರೂ ಆತನ್ನೆ. ಯೋ, ಎಷ್ಟು ಖರ್ಚು ಮಾಡಿದವಪ್ಪ ಅದಕ್ಕೆ ಬೇಕಾಗಿ.
ಈಗಳಾದರೂ ಗಲ್ಲಿಂಗೆ ಹಾಕಿದವನ್ನೆ..
ಇಲ್ಲದ್ದರೆ ಇನ್ನಾಣ ಬಜೆಟ್ಟಿಲಿ “terrorist promotional expenses” ಹೇಳಿ ಒಂದು head ಮಾಡೆಕಾವುತ್ತಿತ್ತು…
ಈಗಾದರೂ ಮನಸ್ಸು ತೋರಿತ್ತನ್ನೆ!
ದೇಶದ ಇತರ ಹಲವು ವಿಷಯಂಗಳನ್ನೂ ಈ ರೀತಿ ಮದಲೇ ಪ್ರಚಾರ ಮಾಡಿದ್ದೇ ಕಾಲಹರಣ ಮಾಡ್ತರರ ತಪ್ಪಿಸಿರೆ ನಮ್ಮ ಅನೇಕ ಸಮಸ್ಯೆಗೊಕ್ಕೆ ಶೀಘ್ರಪರಿಹಾರ ಸಿಕ್ಕುಗು. ಆದರೆ.., ಇನ್ನೂ ನಿಗೂಢವಾಗಿಪ್ಪದು.. ಅದೇಂತಕೆ ಪತ್ರಿಕೆಗಳಲ್ಲಿ ದೂರದರ್ಶನಲ್ಲಿ ಚರ್ಚೆ ವಿಮರ್ಶೆ ಮಾಡದ್ದೆ ಇದರ ಕತೆ ಮುಗುಶಿದವು ?!!
ಚರ್ಚೆ ಮಾಡ್ಲೆ ಬಿಟ್ಟರೆ, ಆ ರಿಪೋರ್ಟರ್’ಗ ಎಲ್ಲ ಸೇರಿ ಎರಡು ‘ಜಾತ್ಯಾತೀತವಾದಿ’ಗಳ ತಂದು “ಕೊಲ್ಲಲೆಡಿಯ” ಹೇಳ್ಸುಗು ಹೇಳಿಯೋ ಎನೋ? 😉
ಸಮಯೋಚಿತ ಸುದ್ಫ್ದಿ…….