“ಮಲೆನಾಡಿನ ಮಂದನ ಗೊಜ್ಜು”

ಮೊನ್ನೆ ಅಮ್ಮ ರುಚಿಯಾಗಿ ಅವಿಲು ಬೆಂದಿ ಮಾಡಿತ್ತು 🙂 ಅದರ ಎನ್ನ ಮುಂಬೈಯ ಗುರ್ತದವಕ್ಕೆ ಹೇಳಿಯಪ್ಪಗ, ಅವಕ್ಕೆ interesting ಹೇಳಿ ಅನ್ಸಿತ್ತು. ಎನ್ನ ಹತ್ತರೆ ಮಾಡ್ತ ಕ್ರಮ ಎಲ್ಲ ಕೇಳಿದವ್ವು. ಅಂಬಗ ಎನಗೆ ಅನ್ಸಿತ್ತು, ಬೇರೆ ಊರಿನ ಆಹಾರಂಗೊ ಕೆಲವು ನಾವುದೇ ತಿಳ್ಕೊಂಡರೆ ನವಗೂ ಹೊಸರುಚಿ ಮಾಡ್ಲಕ್ಕನ್ನೇ ಹೇಳಿ 🙂 ಎನ್ನ ಅಕ್ಕ ಸೌಮ್ಯಂದೇ ಹೇಳಿತ್ತು, ಇದು good idea  ಹೇಳಿ.ಹಾಂಗೆ ಸಾಗರಲ್ಲಿ ಮಾಡ್ತ ಒಂದು ಗೊಜ್ಜಿಯ ಬಗ್ಗೆ ಬೈಲಿನೋರಿಂಗೆ ಗೊಂತು ಮಾಡ್ಸುವ ಹೇಳಿ ಕಂಡತ್ತು. ಇದು ಎನಗೆ ತುಂಬಾ ಇಷ್ಟ, ಆನು ಎನ್ನ ಅತ್ತೆಯ ಹತ್ತರೆ ಕಲ್ತದು :). ಸಾಗರಲ್ಲಿ ಈ ಗೊಜ್ಜಿಯ ಜಂಬ್ರಂಗಳಲ್ಲಿಯೂ ಮಾಡ್ತವು. ತುಂಬಾ ರುಚಿ ..ಹುಳಿ ಹುಳಿ..ಖಾರ..ಬೆಳ್ಳಿಳ್ಳಿ ಒಗ್ಗರಣೆ………. ಬಾಯಿಲಿ ನೀರು ಬತ್ತು 😉

ಈ ಗೊಜ್ಜಿಗೆ ಅಲ್ಲಿ “ಮಂದನ ಗೊಜ್ಜು” ಹೇಳಿ ಹೇಳ್ತವು. ಮಂದಕ್ಕೆ ಇಪ್ಪ ಕಾರಣ ಈ ಹೆಸರು ಬಂದದಾಗಿಕ್ಕು. ಹುಳಿ ಇಪ್ಪ ಮಾವಿನಕಾಯಿ, ಅಂಬಟೆ ಅಥವಾ ಹುಣಸೇಕಾಯಿ, ಈ ಮೂರರಲ್ಲಿ ಯಾವುದರದ್ದೂ ಗೊಜ್ಜಿ ಮಾಡ್ಲಕ್ಕು. ಆನು ಮಾವಿನಕಾಯಿ ಗೊಜ್ಜಿ ಮಾಡ್ತ ಕ್ರಮ ಬರೆತ್ತೆ, ಉಳುದ ಎರಡರನ್ನೂ ಅದೇ ಕ್ರಮಲ್ಲಿ ಮಾಡ್ಲಕ್ಕು.ಅಲ್ಲಿ ಹೆಚ್ಚಾಗಿ ‘ಅಪ್ಪೆ’ ಮಾವಿನಕಾಯಿಯ ಉಪಯೋಗ್ಸುತ್ತವು, ಅದು ಹೆಚ್ಚು ಹುಳಿ ಇಪ್ಪ ಕಾರಣ.

ಬೇಕಪ್ಪ ವಸ್ತುಗೊ:

 • ಎರಡು ಮಾವಿನಕಾಯಿ
 • ಹಸಿಮೆಣಸು/ಗಾಂಧಾರಿ ಮೆಣಸು
 • ಎಣ್ಣೆ
 • ಸಾಸಮೆ
 • ಉದ್ದಿನಬೇಳೆ
 • ಬೆಳ್ಳುಳ್ಳಿ
 • ಮಜ್ಜಿಗೆಮೆಣಸು/ಕೆಂಪುಮೆಣಸು
 • ಉಪ್ಪು
 • ನೀರು

ಮಾಡುವ ಕ್ರಮ:

 • ಮಾವಿನಕಾಯಿಯ ಚೋಲಿಸಮೇತ ರಜ್ಜ ನೀರು,ಉಪ್ಪು ಹಾಕಿ ಬೇಶೆಕು.
 • ಬೆಂದಮೇಲೆ ಅದೇ ನೀರಿಲ್ಲಿ ಅದರ ಸರೀ ಪುರುಂಚಿ ಗುಳ ತೆಗದು, ಚೋಲಿಯನ್ನೂ ಗೊರಟನ್ನೂ ಇಡ್ಕೆಕು 😉 .
 • ಅದಕ್ಕೇ ಹಸಿಮೆಣಸು ಅಥವಾ ಗಾಂಧಾರಿ ಮೆಣಸಿನ ಹಾಕಿ ನುರಿಯಕು.
 • ಬಾಣಲೆಯ ಒಲೆಲಿ ಮಡುಗಿ [ಕಿಚ್ಚುದೇ ಹೊತ್ತುಸೆಕ್ಕು], ಅದಕ್ಕೆ ಎಣ್ಣೆ,ಸಾಸಮೆ,ಉದ್ದಿನಬೇಳೆ,ಮಜ್ಜಿಗೆಮೆಣಸು ಅಥವಾ ಕೆಂಪುಮೆಣಸು, ಗುದ್ದಿದ ಬೆಳ್ಳುಳ್ಳಿ ಹಾಕೆಕು.
 • ಸಾಸಮೆ ಹೊಟ್ಟುಲೆ ಶುರು ಆದಪ್ಪಗ ತೆಗದು ಮಡುಗಿದ ಮಾವಿನಕಾಯಿಯ ಗುಳವ ಅದಕ್ಕೆ ಹಾಕಿ ಕೊದುಶೆಕ್ಕು.
 • ಅದು ಸರೀ ಕೊದ್ದಮೇಲೆ ಇಳುಗಿ.

ಇದರ ಅಶನದೊಟ್ಟಿಂಗೆ ಉಂಬಲೆ ಭಾರೀ ರುಚಿ. ಒಂದರಿಯಾಣ ಊಟಕ್ಕೆ ಅರ್ಧ ಚಮ್ಚೆಯಷ್ಟು ಗೊಜ್ಜಿ ಸಾಕಾವ್ತು, ಅಷ್ಟು ಹುಳಿ,ಖಾರ ಇರ್ತು. ಉಪ್ಪಿನ ಕಾಯಿಯ ಹಾಂಗೆ ರಜ್ಜ ಬಳುಸುಲಿಪ್ಪ ಗೊಜ್ಜಿ ಇದು.

ಈ ಗೊಜ್ಜಿಯ ಒಂದು ವಾರಂದ ಹತ್ತು ದಿನ ಮಡುಗಿರೂ ಹಾಳಾವ್ತಿಲ್ಲೆ, ಆದರೆ ನೀರು ತಾಗ್ಸುಲಾಗ. ಅಗತ್ಯ ಬಿದ್ದರೆ ಎರಡು ದಿನ ಕಳುದಪ್ಪಗ ಇನ್ನೊಂದರಿ ಕೊದುಶುಲಕ್ಕು.

ಆರೋಗ್ಯ, ಕ್ಯಾಲೊರಿಯ ಬಗ್ಗೆ ಚಿಂತೆ ಮಾಡುವವ್ವುದೇ ಇದರ ರುಚಿ ನೋಡ್ಲೆ ತೊಂದರಿಲ್ಲೆ. ಮಿತಿಲಿ ತಿಂದರೆ ಯಾವುದೂ ಕೆಟ್ಟದಲ್ಲ.

ಆದರೆ ಅಸಿಡಿಟಿ, ಹೊಟ್ಟೆಯ ಅಲ್ಸರ್, ಗ್ಯಾಸ್ಟ್ರೈಟಿಸ್, ಹೀಂಗಿದ್ದ ಸಮಸ್ಯೆ ಇಪ್ಪವಕ್ಕೆ ಇದು ಒಳ್ಳೆದಲ್ಲ.

ಸುವರ್ಣಿನೀ ಕೊಣಲೆ

   

You may also like...

71 Responses

 1. ಸುವರ್ಣಿನಿ ಅಕ್ಕಾ, ಮಂದಜ ಗೊಜ್ಜು ಪಾಕವ ನಿಂಗ ಹೇಳಿದ ಹಾಂಗೆ ಮಾಡ್ಲೆ ಪ್ರಯತ್ನ ಪಡ್ತೆ. ಅಪ್ಪೆ ಸಾರು ಆನು ಒಂದರಿ ಶಿರಸಿಲಿ ಉಂಡಿದೆ.ಭಾರೀ ಲಾಯಿಕ ಆಯಿದು.ಮತ್ತೆ ಒಂದರಿ ಶೃಂಗೇರಿಲಿ ಒಂದು ಅಂಗಡಿಲಿ ಅಪ್ಪೆ ಮಾವಿನ ಎಸೆನ್ಸ್ ಸಿಕ್ಕಿತ್ತು.ಸುಮಾರು ಆರು ತಿಂಗಳು ಸಮಯ ಅದರ ಸಾರು ಮಾಡಿ ಉಂಡಿದೆ.
  ಲೇಖನಲ್ಲಿ ಅಭಿಪ್ರಾಯ ಭೇದಂಗ ಬಪ್ಪದು ಸಹಜ.ಅದರ ಯಾವುದನ್ನೂ ಮನಸ್ಸಿಲಿ ಮಡುಗೆಡಿ ಅಕ್ಕಾ,
  ನಮ್ಮ ಬೈಲಿನ ಪ್ರತಿಯೊಬ್ಬನೂ ಒಂದೊಂದು ಕ್ಷೇತ್ರಲ್ಲಿ ಮಿಂಚಿಗೊಂಡಿದ್ದವು.ನವಗೆ ಪರಸ್ಪರ ಅದು ಪ್ರಯೋಜನಕ್ಕೆ ಬತ್ತಾ ಇದ್ದು,ಅಲ್ಲದ್ದೆ ನಮ್ಮ ಹೆರಿಯೋರ ಕಾಲದ ಸಂಬಂಧಂಗ,ಆ ಹಳೆ ನೆಂಪುಗ ನಮ್ಮ ಬೈಲಿನ ಮೂಲಕ ಹೊಸ ಪುನರಾವರ್ತನೆ ಆವ್ತಾ ಇದ್ದು. ಇದು ಎಲ್ಲೋರಿಂಗೂ ಕೊಶಿಯೇ ಅಲ್ದೋ?

 2. ನಾನು ಬ್ರಾಹ್ಮ್ನಣನೆ, ಆದರೆ, ಉತ್ತಾರಾದಿ ಮಠ, ಹವ್ಯಕ ನಲ್ಲ, ನಾನು ಇಲ್ಲಿಗೆ ಸದಸ್ಯನಾಗಲು ಇಚ್ಛಿಸುವೆ. ಕಾರಣ, ಇಲ್ಲಿ ಕನ್ನಡದಲ್ಲಿ ಬರೆಯಬಹುದು. ಹಾಗು ಹವ್ಯಕರ ದೈನಂದಿನ ಜೀವನ ತಿಳಿಯುವಲ್ಲಿ Help ಆಗುತ್ತೆ. ನನ್ನ ಪೂರ್ವಜರು ಸುಮಾರು ೧೫೦೦ ಇಸವಿಯವರು ಶೇಷ ಭಟ್ಟರು, ಅವರು ಕರ್ನಾಟಕದ ಗಿಬ್ಬುರಿನವರಾಗಿರುತ್ತಾರೆ. ನಾನು ಅವರ ವಂಶದವನು. ಇದರ ಅರ್ಥ, ಅವರು ಹವ್ಯಕರೆ ಆಗಿರಲೆ ಬೇಕು.

  ನನಗನಿಸುತ್ತೆ, ನನ್ನನ್ನು ನಿಮ್ಮವನೆ ಎಂದು ನಿಮ್ಮಲ್ಲಿ ಬರಮಾಡಿಕೊಳ್ಳುತ್ತಿರ.

  ಇತಿ ನಿಮ್ಮವ
  ಅರುಣಕುಮಾರ್ ನಾರಾಯಾಣಾಚಾರ್ ತತ್ತಾರ್
  9731094000/9845302301
  Bangalore

  • ನಮಸ್ತೇ ಅರುಣಕುಮಾರಣ್ಣ,

   ಒಪ್ಪಣ್ಣನ ಬೈಲು ಬರೀ ಹವ್ಯಕರಿಂಗೆ ಸೀಮಿತ ಆಗಿಲ್ಲೆ. ಹವ್ಯಕತನದ, ಹವ್ಯಕ ಭಾಶೆ ಮಾತಾಡುವ, ಹವ್ಯಕ ಭಾಶೆ ಅರ್ಥ ಅಪ್ಪ ಎಲ್ಲೋರಿಂಗೂ ಇಲ್ಲಿ ಸ್ವಾಗತ ಇದ್ದು.

   ನಿಂಗಳ ಪರಿಚಯ ಮಾಡಿಗೊಂಡು ಬಂದದು ಕೊಶೀ ಆತು. ಒಪ್ಪಣ್ಣನ ಬೈಲಿನ ಒಂದು ಭಾಗ ಆಯೆಕ್ಕು ಹೇಳಿ ಇಷ್ಟ ಪಟ್ಟಿದಿ.

   ಬೈಲಿನ ಶುದ್ದಿ(article)ಗಳ ಓದಿ ನಿಂಗಳ ಅನಿಸಿಕೆ(ಒಪ್ಪ) ಗಳ ಖಂಡಿತಾ ಬರೆಯಿ.

   ಬೈಲಿನ ಲೆಕ್ಕಲ್ಲಿ ನಿಂಗಳ ಸ್ವಾಗತ ಮಾಡ್ತೆ.
   ಬೈಲಿನ ರೂಪವ ಅರ್ಥೈಸಿಗೊಂಡು ಎಲ್ಲರ ಒಟ್ಟಿಂಗೆ ಸೇರಿಗೊಳ್ಳಿ.

  • ಚೆನ್ನೈ ಭಾವ says:

   ಅರುಣಕುಮಾರಣ್ಣಂಗೆ ಸ್ವಾಗತ. ಸ್ವಪರಿಚಯ ಚಂದಕ್ಕೆ ಮಾಡಿಕೊಟ್ಟು ಬೈಲಿನೊಳ ಬಂದದ್ದಕ್ಕೆ ಮೆಚ್ಚುಗೆ ಮತ್ತು ಅಭಿನಂದನೆ.
   ‘ನನ್ನನ್ನು ನಿಮ್ಮವನೆ ಎಂದು ನಿಮ್ಮಲ್ಲಿ ಬರಮಾಡಿಕೊಳ್ಳುತ್ತಿರ’ – ಖಂಡಿತ., ನಮ್ಮತನ ಉಳಿಸಿ , ಗೌರವಿಸಿ, ಬೆಳೆಸೆಕು ಹೇಳಿ ಭಾವನೆಂದ ಬಪ್ಪ ಎಲ್ಲ ಬಂಧುಗಳನ್ನೂ ಬೈಲು ಆತ್ಮೀಯವಾಗಿ ಬರಮಾಡಿಕೊಳ್ಳುತ್ತು. ಬೈಲಿಲ್ಲಿಪ್ಪ ಶುದ್ದಿಗಳ ಓದಿ, ಅನಿಸಿಕೆ ಬರೆಯಿರಿ. ನೀವೂ ಶುದ್ದಿ ಬರೆಯಿರಿ ಹೇಳಿತ್ತು -‘ಚೆನ್ನೈವಾಣಿ’.

 3. ಆತ್ಮಿಯರೇ, ತಮ್ಮ ಆದರದ ಪ್ರೀತಿ ಕ೦ಡು, ಮನಸ್ಸು ಉಲ್ಲಾಸಭರಿತವಾಗಿದೆ. ನನಗೆ ಹವ್ಯಕ ಭಾಶೆ ಬರುದಿಲ್ಲಾ, ಹಾಗೆ೦ದ ಮಾತ್ರಕ್ಕೆ, ನಾನು ಕಲಿಯುವುದಿಲ್ಲವೆಂದು ಅಲ್ಲ. ಕೊ೦ಚ ಸಮಯ ಹಿಡಿಯತ್ತೆ ಅಷ್ಟೇ. ಈ ಪ್ರಯತ್ನದಲ್ಲಿ, ನನ್ನಿ೦ದ ತಪ್ಪಾಗಬಹುದು. ಕ್ಷಮೆಇರಲಿ. ಹವ್ಯಕ ಭಾಷೆಯ ಸ್ವಾರಸ್ಯವೇ ಬೆರೆ. ಓದುತ್ತಿರಲು, ಬಲುಚೆ೦ದ.

  ನಾ ಬಯಲುಸೀಮೆಯವ, ಬಳ್ಲಾರಿ ನ೦ದು ಊರು, ನ೦ಗೆ, ಒಪ್ಪವಾದುದು, ಇಲ್ಲಿಯ ಜನ, ಅವರ ದಿನನಿತ್ಯದ ಲವಲವಿಕೆ, ಇಲ್ಲಿಯ ಶುದ್ದಿ(ಸುದ್ದಿ ನಮ್ಮಕಡೆ ಭಾಷೆ) ತು೦ಬ ಸ್ವಾರಸ್ಯಮಯವಾದುದು.

  ಇತಿ ನಿಮ್ಮವ,
  ಅನತ

  • ಅನತಣ್ಣಂಗೆ ನಮಸ್ಕಾರಂಗೊ.
   ಬೈಲಿಂಗೆ (ಬಯಲು = oppanna.com) ಆತ್ಮೀಯ ಸ್ವಾಗತಂ!

   ಇಲ್ಲಿ ನೆರೆಕರೆ(authors)ಯವು ಹೇಳಿದ ಶುದ್ದಿಗಳ(articles) ಕೇಳಿ; ಒಪ್ಪ ( = ಮುತ್ತು /comments) ಕೊಟ್ಟು ಪ್ರೋತ್ಸಾಹಿಸಿ.

   ಬೈಲಿಲಿ ನಿಂಗಳ ಉಪಸ್ಥಿತಿ ಎಲ್ಲೋರ ಕೊಶಿಯ ಹೆಚ್ಚಿಸುತ್ತು.
   ನಿಂಗಳ ಪ್ರೀತಿಯ,
   ~
   ಗುರಿಕ್ಕಾರ°
   ಬೈಲಿನ ಪರವಾಗಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *