ಅಂಬಟೆ, ದೊಣ್ಣೆ ಮೆಣಸು ಚಿತ್ರಾನ್ನ

December 17, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಂಬಟೆ, ದೊಣ್ಣೆ ಮೆಣಸು ಚಿತ್ರಾನ್ನ

ಬೇಕಪ್ಪ ಸಾಮಾನುಗೊ:

  • 1.5 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು)
  • 3 ಅಂಬಟೆ
  • 2 ದೊಡ್ಡ ದೊಣ್ಣೆ ಮೆಣಸು
  • 3/4-1 ಕಪ್(ಕುಡ್ತೆ) ಕಾಯಿ ತುರಿ
  • 3 ಹಸಿಮೆಣಸು
  • 10-15 ಬೇನ್ಸೊಪ್ಪು
  • 2-3 ಚಮ್ಚೆ ಕಡ್ಲೆ ಬೇಳೆ
  • 1 ಚಮ್ಚೆ ಉದ್ದಿನ ಬೇಳೆ
  • 1.5 ಚಮ್ಚೆ ಸಾಸಮೆ (1 ಚಮ್ಚೆ ಮಸಾಲೆಗೆ +  1/2 ಚಮ್ಚೆ ಒಗ್ಗರಣೆಗೆ)
  • 1/4 ಚಮ್ಚೆ ಜೀರಿಗೆ
  • 1-2 ಮುರುದ ಒಣಕ್ಕು ಮೆಣಸು
  • 1/2 ಚಮ್ಚೆ ಅರುಶಿನ ಹೊಡಿ (1/4 ಚಮ್ಚೆ ಮಸಾಲೆಗೆ +  1/4 ಚಮ್ಚೆ ಒಗ್ಗರಣೆಗೆ)
  • 2-3 ಮುರುದ ಒಣಕ್ಕು ಮೆಣಸು
  • ದೊಡ್ಡ ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 3-4 ಚಮ್ಚೆ ಎಣ್ಣೆ

ಮಾಡುವ ಕ್ರಮ:

1.5 ಕುಡ್ತೆ ಬೆಣ್ತಕ್ಕಿಯ ನೀರಿಲ್ಲಿ ಲಾಯಿಕ ತೊಳದು, ಸಾಧಾರಣ 3 ಕುಡ್ತೆ ನೀರು ಹಾಕಿ, ಕುಕ್ಕರಿಲ್ಲಿ ಬೇಶಿ ಕರೆಲಿ ಮಡುಗಿ.

ಅಂಬಟೆಯ ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆತ್ತಿ ಮಡುಗಿ.

ತೆಂಗಿನಕಾಯಿ, ಅಂಬಟೆ, ಹಸಿಮೆಣಸು, ಉಪ್ಪು, 1 ಚಮ್ಚೆ ಸಾಸಮೆ, 1/4 ಚಮ್ಚೆ ಅರುಶಿನ ಹೊಡಿ, ದೊಡ್ಡ ಚಿಟಿಕೆ ಇಂಗು, 6-7 ಬೇನ್ಸೊಪ್ಪಿನ ಮಿಕ್ಸಿಲಿ ಹಾಕಿ. ನೀರು ಹಾಕದ್ದೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತರಿ-ತರಿಯಾಗಿ ಕಡೆರಿ.

ದೊಣ್ಣೆ ಮೆಣಸಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದ-ಉದ್ದಕೆ ಕೊರದು ಮಡುಗಿ.

ಒಂದು ಬಾಣಲೆಲಿ ಉದ್ದಿನ ಬೇಳೆ, ಕಡ್ಲೆ ಬೇಳೆ, 1/2 ಚಮ್ಚೆ ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಕೊರದ ದೊಣ್ಣೆ ಮೆಣಸು, ಬೇನ್ಸೊಪ್ಪು, 1/4 ಚಮ್ಚೆ ಅರುಶಿನ ಹೊಡಿ, ಉಪ್ಪು, ಹಾಕಿ ಸಾಧಾರಣ 5 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ತೊಳಸಿ.

ದೊಣ್ಣೆ ಮೆಣಸು ಬೆಂದ ಅಪ್ಪಗ, ಕಡದು ಮಡುಗಿದ ಮಸಾಲೆಯ ಹಾಕಿ ತೊಳಸಿ 1 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೇಶಿ ಮಡುಗಿದ ಅಶನವ ಹಾಕಿ ತೊಳಸಿ. 2-3 ನಿಮಿಷ ಲಾಯಿಕ ಬೆಶಿ ಅಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಮುಳಿಯ ಭಾವಅಕ್ಷರ°ತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿಶರ್ಮಪ್ಪಚ್ಚಿದೊಡ್ಮನೆ ಭಾವಕಳಾಯಿ ಗೀತತ್ತೆಸುವರ್ಣಿನೀ ಕೊಣಲೆಬೋಸ ಬಾವಸಂಪಾದಕ°ಅನು ಉಡುಪುಮೂಲೆಅಜ್ಜಕಾನ ಭಾವದೇವಸ್ಯ ಮಾಣಿಗಣೇಶ ಮಾವ°ರಾಜಣ್ಣಶಾ...ರೀಡಾಮಹೇಶಣ್ಣಅಡ್ಕತ್ತಿಮಾರುಮಾವ°ದೀಪಿಕಾvreddhiಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿಪೆರ್ಲದಣ್ಣಕಾವಿನಮೂಲೆ ಮಾಣಿಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ