ಬದನೆಕಾಯಿ ಖಾರ ಗೊಜ್ಜಿ

March 4, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬದನೆಕಾಯಿ ಖಾರ ಗೊಜ್ಜಿ

ಬೇಕಪ್ಪ ಸಾಮಾನುಗೊ:

  • 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು)
  • 2-4 ಹಸಿಮೆಣಸು ಅಥವಾ ಗಾಂಧಾರಿ ಮೆಣಸು
  • 1/2 ಸಾಧಾರಣ ಗಾತ್ರದ ನೀರುಳ್ಳಿ
  • ದ್ರಾಕ್ಷೆ ಗಾತ್ರದ ಹುಳಿ
  • ರುಚಿಗೆ ತಕ್ಕಸ್ಟು ಉಪ್ಪು
  • ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • 1/2 ಚಮ್ಚೆ ಸಾಸಮೆ
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬದನೆಕಾಯಿಯ ಹೆರಾಂಗೆ ರೆಜ್ಜ ಎಣ್ಣೆ ಪಸೆ ಮಾಡಿ, ಪೀಶಕತ್ತಿ/ಫೊರ್ಕ್ ಲ್ಲಿ ಕುತ್ತಿ, ಅದರ ಕೆಂಡಲ್ಲಿ/ ಗ್ಯಾಸ್ ಒಲೆಲಿ/ ಮೈಕ್ರೋವೇವ್/ ಓವನ್ ಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸುಟ್ಟು ಹಾಕಿ.

ಹುಳಿಗೆ ರೆಜ್ಜ ನೀರು ಹಾಕಿ, ಪುರುಂಚಿ ಕರೆಲಿ ಮಡುಗಿ. ನೀರುಳ್ಳಿಯ ಸಣ್ಣಕೆ ಕೊಚ್ಚಿ ಮಡುಗಿ.
ಬದನೆಕಾಯಿಯ ಹೆರಾಣ ಚೋಲಿ ತೆಗದು, ಒಂದು ಸೌಟಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚಿ ಮಡುಗಿ.

ಇದರ ಒಂದು ಪಾತ್ರಕ್ಕೆ ಹಾಕಿ, ಹುಳಿ ನೀರು, ಉಪ್ಪು, ಕೊಚ್ಚಿ ಮಡುಗಿದ ನೀರುಳ್ಳಿ, ಬೇಕಾದಸ್ಟು ನೀರು ಹಾಕಿ ತೊಳಸಿ. ಹಸಿಮೆಣಸಿನ ಲಾಯಿಕಲಿ ನುರಿರಿ. (ನೀರುಳ್ಳಿಯ ಬೇಕಾದರೆ ತುಪ್ಪಲ್ಲಿ ಹೊರುದುದೆ ಹಾಕುಲಕ್ಕು.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ, ಗೊಜ್ಜಿಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

  1. ಮುಣ್ಚಿಕಾನ ಭಾವ

    ಒಪ್ಪ ರುಚಿ….
    ಆದರೆ ತೆಗೆದು ಮಡುಗಿದ ಹಸಿ ಮೇಣಸು ಸುರುವಿಂಗೆ ಅಲ್ಲೇ ಬಾಕಿ ಆತನ್ನೆ ವೇಣಿಯಕ್ಕ :)
    ಮತ್ತೆ ಆನದರ ಕೈಲಿ ನುರಿದು ಹಾಕಿ ತೊಳಸಿದೆ…. ಗಮ್ಮ ಆತು :)

    [Reply]

    VA:F [1.9.22_1171]
    Rating: 0 (from 0 votes)
  2. ವೇಣಿಯಕ್ಕ°

    ಮಾಡಿ ನೋಡಿ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ..ಃ)

    ಅಪ್ಪು ಮೆಣಸು ನುರಿವದರ ಹೇಳ್ಳೆ ಬಿಟ್ಟು ಹೋಯಿದು. ಈಗ ಸರಿ ಮಾಡಿದ್ದೆ. ಹೇಳಿದ್ದಕ್ಕೆ ಧನ್ಯವಾದ.

    [Reply]

    VN:F [1.9.22_1171]
    Rating: 0 (from 0 votes)
  3. ಯಮ್.ಕೆ

    ಓ,ನಮ್ಮ ಫೇವರೆಟ್ ಅಯಿಟಮ್ಮು..ಕುಶ್ ಹುವಾ.

    [Reply]

    VA:F [1.9.22_1171]
    Rating: 0 (from 0 votes)
  4. ಸುರೇಖಾ ಚಿಕ್ಕಮ್ಮ
    k s surekha

    ಇದೇ ಬದನೆ ತಿರುಳಿಂಗೆ ತೆಂಗಿನ ಕಾಯಿ-ಸಾಸಿವೆ-ಹಸಿಮೆಣಸು ಅರೆದು ಮಜ್ಜಿಗೆ/ಮೊಸರು ಹಾಕಿದ ಪದಾರ್ಥವೂ ಲಾಯ್ಕಾವುತ್ತು. ಗೊಜ್ಜಿಂದು ಒಂದು ರುಚಿ – ಸಾಸಮೆದುದು ಇನ್ನೊಂದು ರುಚಿ. ಎರಡುದೆ ಲಾಯ್ಕವೇ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಸುವರ್ಣಿನೀ ಕೊಣಲೆವೇಣೂರಣ್ಣಶಾ...ರೀಬೋಸ ಬಾವvreddhiಗಣೇಶ ಮಾವ°ವಸಂತರಾಜ್ ಹಳೆಮನೆಅಡ್ಕತ್ತಿಮಾರುಮಾವ°ಉಡುಪುಮೂಲೆ ಅಪ್ಪಚ್ಚಿಎರುಂಬು ಅಪ್ಪಚ್ಚಿಮುಳಿಯ ಭಾವಶುದ್ದಿಕ್ಕಾರ°ಹಳೆಮನೆ ಅಣ್ಣಡೈಮಂಡು ಭಾವವಿಜಯತ್ತೆಡಾಮಹೇಶಣ್ಣಚೆನ್ನಬೆಟ್ಟಣ್ಣಬೊಳುಂಬು ಮಾವ°ವಿನಯ ಶಂಕರ, ಚೆಕ್ಕೆಮನೆನೆಗೆಗಾರ°ಗೋಪಾಲಣ್ಣಡಾಗುಟ್ರಕ್ಕ°ಒಪ್ಪಕ್ಕದೀಪಿಕಾಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ