ಬಟಾಟೆ ಮೊಸರು ಗೊಜ್ಜಿ

ಬಟಾಟೆ ಮೊಸರು ಗೊಜ್ಜಿ

ಬೇಕಪ್ಪ ಸಾಮಾನುಗೊ:

 • 2 ದೊಡ್ಡ ಬಟಾಟೆ
 • 1-2 ಹಸಿಮೆಣಸು
 • 1/4 ಇಂಚು ಶುಂಠಿ
 • 4-5 ಎಳೆ ಕೊತ್ತಂಬರಿ ಸೊಪ್ಪು
 • 2-3 ಕಪ್(ಕುಡ್ತೆ) ಮೊಸರು
 • 2-3 ಚಮ್ಚೆ ಕಾಯಿ ಸುಳಿ
 • 1/4 ನೀರುಳ್ಳಿ (ಬೇಕಾದರೆ ಮಾತ್ರ)
 • ರುಚಿಗೆ ತಕ್ಕಸ್ಟು ಉಪ್ಪು
 • 1 ಚಮ್ಚೆ ಸಾಸಮೆ
 • 1/2 ಚಮ್ಚೆ ಜೀರಿಗೆ
 • 3-4 ಬಾಳಕ್ಕು ಮೆಣಸು(ಬೇಕಾದರೆ ಮಾತ್ರ)
 • 5-6 ಬೇನ್ಸೊಪ್ಪು
 • ದೊಡ್ಡ ಚಿಟಿಕೆ ಇಂಗು
 • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬಟಾಟೆಯ ತೊಳದು, ಮುಳುಗುವಸ್ಟು ನೀರು ಹಾಕಿ, ಪ್ರೆಶರ್ ಕುಕ್ಕರ್ಲ್ಲಿ ಬೇಶಿ.(2-3 ಸೀಟಿ ಸಾಕು)
ಪ್ರೆಶರ್ ಹೋದ ಮೇಲೆ, ಬಟಾಟೆಯ ಚೋಲಿ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹೊಡಿ ಮಾಡಿ ಮಡುಗಿ.
ಕೊತ್ತಂಬರಿ ಸೊಪ್ಪು, ಶುಂಠಿ, ನೀರುಳ್ಳಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ ಮಡುಗಿ.

ಕಾಯಿ ಸುಳಿಯ ಮಿಕ್ಸಿಗೆ ಹಾಕಿ, ರೆಜ್ಜ ನೀರು ಹಾಕಿ ಕೊಜಕ್ಕು ಮಾಡಿ ಮಡುಗಿ.

ಹೊಡಿ ಮಾಡಿದ ಬಟಾಟೆ, ಕೊಚ್ಚಿದ ನೀರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿಯ ಒಂದು ಪಾತ್ರಲ್ಲಿ ಹಾಕಿ.
ಉಪ್ಪು, ಮೊಸರು, ಕೊಜಕ್ಕು ಮಾಡಿದ ಕಾಯಿಯ ಹಾಕಿ ಲಾಯಿಕಲಿ ತೊಳಸಿ.(ಮೊಸರು ಹುಳಿ ಇದ್ದರೆ ರೆಜ್ಜ ಹಾಲು ಸೇರ್ಸಿ.)
ಗೊಜ್ಜಿಗೆ ಹಸಿ ಮೆಣಸು ನುರಿರಿ.
ಒಗ್ಗರಣೆ ಸಟ್ಟುಗಿಲ್ಲಿ ಬಾಳಕ್ಕು ಮೆಣಸು, ಎಣ್ಣೆ ಹಾಕಿ ಒಂದೆರಡು ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ. ಅದು ಚಿನ್ನದ ಬಣ್ಣಕ್ಕೆ ಬಪ್ಪಗ, ಸಾಸಮೆ, ಜೀರಕ್ಕಿ ಹಾಕಿ. ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

6 Responses

 1. ಯೇ ಅಕ್ಕಾ..
  ಇಂದು ಪಂಜ ಹೊಡೆಂಗೆ ಹೋಪವ ಮದ್ಯಾನ್ನ ಊಟಕ್ಕೆ ಮಾಷ್ಟ್ರತ್ತೆಯಲ್ಲಿಗೆ ಹೋದೆ. ಅಲ್ಲಿ ಇತ್ತಿದಾ ಬಟಾಟೆ ಮೊಸರು ಗೊಜ್ಜಿ…
  ಆನು ಬತ್ತೆ ಹೇಳಿ ಮಾಡಿದ್ದೋ ಕೇಟೆ.. ಇದು ಕತೆ ಬೇರೆಯೇ..
  ಬೈಲಿಲಿ ಬರದ್ದರ ನೋಡಿದ ಮಾಮಸಮ, ಮಾಮಸಸೊಗೆ ಪೋನು ಮಾಡಿ ಮಾಡ್ಲೆ ಹೇಳಿದ್ದಡ. ಪೋನು ಬಂದಪ್ಪಗ ಬಿಟ್ಟ ಬಾಯಿಯ ಮುಚ್ಚಿದ್ದು ಗೊಜ್ಜಿ ಆದ ಮತ್ತೆಯೇ ಹೇಳಿದವು ಮಾಷ್ಟ್ರತ್ತೆ..

  ಆನು ಸಮಾ ಉಂಡು ಮುಂದೆ ಪ್ರಯಾಣ ಬೆಳೆಸಿತ್ತು..

  • ತೆಕ್ಕುಂಜ ಕುಮಾರ ಮಾವ° says:

   ಮಾಮಸಮ ಗೊಜ್ಜಿ ಅದ ಮತ್ತೆ ಬಿಟ್ಟ ಬಾಯಿಯ ಮುಚ್ಚಿಯೇ ಕೂರುಗಷ್ಟೆ..!

  • ಬೋಸ ಬಾವ says:

   ಹೂ..!! ಅದು ಸರಿ…!
   ಗೊಜ್ಜಿ, ಬಜ್ಜಿ ಯಾಗಿ..!
   ಮಜ್ಜಿಗೆ ಹೊಟ್ಟೆಗೆ ಹೋತೋ…?
   ಹೇಳಿ ನೆಗೆಮಾಣಿ ಕೇಳ್ತಾ…!!

 2. ಬೆಟ್ಟುಕಜೆ ಮಾಣಿ says:

  ಪೆಂಗಣ್ಣಾ ಹೇಳಿದರಲ್ಲಿ ತಪ್ಪಿಲ್ಲೆ.ಬಾಯಿಗೆ ರುಚಿ ಆಗ್ತು..ತಿಂಬ್ಲು ಹಾಂಗೆ ಬಾರಿ ಪಷ್ಟು..

 3. ಕೊರೆಂಗು ಭಾವ° says:

  ಇದರ ನೋಡಿರೆ ಕೊರೆಂಗು ಭಾವಂಗೆ ಕೊದಿ!

 4. ಎಮ್.ಸ್. says:

  ಬಟಾಟೆ ಗೊಜ್ಜಿ೦ಗೆ
  •1-2 ಹಸಿಮೆಣಸೆರಡು
  •2-3 ಕುಡ್ತೆ ಮೊಸರು ಹಾಕು
  •4-5 ಎಳೆ ಕೊತ್ತಂಬರಿ ಸೊಪ್ಪುಸಾಕು
  •5-6 ಬೇನ್ಸೊಪ್ ಬೇಕು
  •7 _8 ಲಿಸ್ಟ್ಲಿಪ್ಪ ಬಾಕಿಪ್ಪ ಎ೦ಟು ಸೇರ್ಸು.
  •9_ 10ಹೊಟ್ಟೆ ತು೦ಬಾ ಉ೦ಡತ್ತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *