Oppanna.com

ಬೇಳೆಚೆಕ್ಕೆ ಕೂಟು

ಬರದೋರು :   ವೇಣಿಯಕ್ಕ°    on   16/04/2013    1 ಒಪ್ಪಂಗೊ

ವೇಣಿಯಕ್ಕ°

ಬೇಳೆಚೆಕ್ಕೆ ಕೂಟು

ಬೇಕಪ್ಪ ಸಾಮಾನುಗೊ:

  • 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ
  • 1-1.25 ಕಪ್(ಕುಡ್ತೆ) ಕಾಯಿ ತುರಿ
  • 3-4 ಒಣಕ್ಕು ಮೆಣಸು
  • ಸಣ್ಣ ತುಂಡು ಅರುಶಿನ ಕೊಂಬು ಅಥವಾ 1/4 ಚಮ್ಚೆ ಅರುಶಿನ ಹೊಡಿ
  • 3/4 ಚಮ್ಚೆ ಜೀರಿಗೆ
  • 1/4 ಚಮ್ಚೆ ಮೆಣಸಿನ ಹೊಡಿ
  • ದ್ರಾಕ್ಷೆ ಗಾತ್ರದ ಬೆಲ್ಲ
  • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಸಾಸಮೆ
  • 4-5 ಎಸಳು ಬೆಳ್ಳುಳ್ಳಿ
  • 10-15 ಬೇನ್ಸೊಪ್ಪು
  • 2-3 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಬೇಳೆಚೆಕ್ಕೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ, ಗೂಂಜಿನ ತೆಗೆರಿ.

ಕಡಿಂದ ಸೊಳೆಯ ತೆಗೆರಿ.

ಪ್ರತಿ ಸೊಳೆಯನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ 4 ಭಾಗ ಮಾಡಿ.

ಒಂದು ಪಾತ್ರಲ್ಲಿ ರೆಜ್ಜ ನೀರು ತೆಕ್ಕೊಂಡು ಅದಕ್ಕೆ ಈ ಕೊರದ ಬೇಳೆಚೆಕ್ಕೆಯ ಹಾಕಿ.

ಪೊದುಂಕುಳು, ಹೂಸಾರೆ ಎಲ್ಲ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸೊಳೆ, ಬೇಳೆಯ ಬೇರೆ ಬೇರೆ ಮಾಡಿ.

ಬೇಳೆಯ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ರೆಜ್ಜ ಉಪ್ಪು, ನೀರು ಹಾಕಿ ಬೇಶಿ.(1-2 ಸೀಟಿ ಸಾಕು).
ಇನ್ನೊಂದು ಪಾತ್ರಲ್ಲಿ ಸೊಳೆ, ಉಪ್ಪು, ಮೆಣಸಿನ ಹೊಡಿ, ಬೆಲ್ಲ, ಚಿಟಿಕೆ ಅರುಶಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ. ಇದಕ್ಕೆ ಬೇಶಿದ ಬೇಳೆಯನ್ನೂ ಹಾಕಿ ತೊಳಸಿ.

ಬಾಣಲೆಗೆ/ಒಗ್ಗರಣೆ ಸಟ್ಟುಗಿಂಗೆ ಒಣಕ್ಕು ಮೆಣಸು, ಅರುಶಿನ ಕೊಂಬು, ರೆಜ್ಜ ಎಣ್ಣೆ ಹಾಕಿ ಪರಿಮ್ಮಳ ಬಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಹೊರಿರಿ.

ಮಿಕ್ಸಿಗೆ ಕಾಯಿ, ಹೊರುದ ಮಸಾಲೆ, ಜೀರಿಗೆ, ಹುಳಿ ಹಾಕಿ, ಬೇಕಾದಸ್ಟು ನೀರುದೆ ಹಾಕಿ ನೊಂಪು ಕಡೆರಿ. ಇದರ ಬೆಂದ ಬಾಗಕ್ಕೆ ಹಾಕಿ ತೊಳಸಿ, ಕೊದುಶಿ. (ಉಪ್ಪು, ನೀರು ಬೇಕಾದರೆ ಹಾಕಿ.)
ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಕೂಟಿಂಗೆ ಹಾಕಿ. ಇದು ಅಶನ, ದೋಸೆ, ರೊಟ್ಟಿ, ಚಪಾತಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಬೇಳೆಚೆಕ್ಕೆ ಕೂಟು

  1. Ninga helida ella item gala madi nodekolidde ondondagi purusothu sikkiyappaga. Olledaydu vivarane krishnaveni akka. Palav maduva krama henge heli hakiddiddare olledithu.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×