ಕ್ಯಾರೆಟ್ ಖೀರು

March 10, 2015 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕ್ಯಾರೆಟ್ ಖೀರು

ಬೇಕಪ್ಪ ಸಾಮಾನುಗೊ:

 • 3 ಕಪ್(ಕುಡ್ತೆ) ಕೊಚ್ಚಿದ ಕ್ಯಾರೆಟ್
 • 9 ಕಪ್(ಕುಡ್ತೆ) ಹಾಲು
 • 3 ಕಪ್(ಕುಡ್ತೆ) ಸಕ್ಕರೆ
 • 5-6 ಏಲಕ್ಕಿ
 • ರೆಜ್ಜ ಕೇಸರಿ

ಮಾಡುವ ಕ್ರಮ:

ಕ್ಯಾರೆಟ್ ನ ಚೋಲಿ ತೆಗದು, ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಇದರ ಒಂದು ಪಾತ್ರಲ್ಲಿ ಹಾಕಿ, ರೆಜ್ಜ ನೀರು ತಳುದು ಕುಕ್ಕರಿಲ್ಲಿ ಮಡುಗಿ ಬೇಶಿ(3-4 ಸೀಟಿ). ಕುಕ್ಕರಿನ ಸೀಟಿ ಹೋಗಿ ತಣುದ ಮೇಲೆ, ಇದರ ಮಿಕ್ಸಿಗೆ ಹಾಕಿ ಬೇಕಪ್ಪಸ್ಟು ಹಾಲು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ.

2-3 ಚಮ್ಚೆ ಬೆಶಿ ಹಾಲಿನ ಒಂದು ಗಿಣ್ಣಾಲಿಲ್ಲಿ ಹಾಕಿ ಅದಕ್ಕೆ ಕೇಸರಿಯ ಹೊಡಿ ಮಾಡಿ ಹಾಕಿ ಮಡಿಕ್ಕೊಳ್ಳಿ.

ಒಳುದ ಹಾಲಿನ ದಪ್ಪ ತಳದ ಪಾತ್ರಲ್ಲಿ ಹಾಕಿ ಕೊದುಶಿ. ಅದರ ಸಣ್ಣ/ಹದ ಕಿಚ್ಚಿಲ್ಲಿ ಸಾಧಾರಣ 10 ನಿಮಿಷ ಮಡುಗಿ, ಅಂಬಗಂಬಗ ತೊಳಸುತ್ತಾ ಇರಿ.

ಇದಕ್ಕೆ ಕಡದ ಕ್ಯಾರೆಟ್, ಸಕ್ಕರೆ ಹಾಕಿ ತೊಳಸಿ, ಹದ ಕಿಚ್ಚಿಲ್ಲಿ ಸಾಧಾರಣ 15 ನಿಮಿಷ ಮಡುಗಿ. ಅಂಬಗಂಬಗ ತೊಳಸಿತ್ತಾ ಇರಿ.

ಇದಕ್ಕೆ ಹೊಡಿ ಮಾಡಿದ ಏಲಕ್ಕಿ, ಕೇಸರಿ ಹಾಲಿನ ಹಾಕಿ 5 ನಿಮಿಷ ಸಣ್ಣ ಕಿಚ್ಚಿಲ್ಲಿ ಕಾಸಿ.

ಪೂರ್ತಿ ತಣುದ ಮೇಲೆ ಪ್ರಿಡ್ಜಿಲ್ಲಿ ಮಡುಗಿ, ತಣ್ಣಂಗೆ ಕುಡಿವಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. parvathimbhat
  parvathimhat

  ನೋಡುವಾಗ ಈಗಳೇ ಕುಡಿಯೆಕ್ಕು ಹೇಳಿ ಕಾಣುತ್ತು .

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಆಹಾ .. ಓಹೋ .. ಇದು ರೈಸುತ್ತು . ಧನ್ಯವಾದ ಅಕ್ಕ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಯೇನಂಕೂಡ್ಳು ಅಣ್ಣಅನಿತಾ ನರೇಶ್, ಮಂಚಿಡೈಮಂಡು ಭಾವವಾಣಿ ಚಿಕ್ಕಮ್ಮಸುವರ್ಣಿನೀ ಕೊಣಲೆಗಣೇಶ ಮಾವ°ವಿದ್ವಾನಣ್ಣಜಯಗೌರಿ ಅಕ್ಕ°ವೆಂಕಟ್ ಕೋಟೂರುದೊಡ್ಡಮಾವ°ಪುಣಚ ಡಾಕ್ಟ್ರುಹಳೆಮನೆ ಅಣ್ಣಅನುಶ್ರೀ ಬಂಡಾಡಿಶಾ...ರೀಮಾಲಕ್ಕ°ಪ್ರಕಾಶಪ್ಪಚ್ಚಿಅಜ್ಜಕಾನ ಭಾವವಿನಯ ಶಂಕರ, ಚೆಕ್ಕೆಮನೆಕೇಜಿಮಾವ°ಮಾಷ್ಟ್ರುಮಾವ°ದೇವಸ್ಯ ಮಾಣಿಮಂಗ್ಳೂರ ಮಾಣಿತೆಕ್ಕುಂಜ ಕುಮಾರ ಮಾವ°ಪುತ್ತೂರುಬಾವಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ