ಹಲಸಿನಕಾಯಿ ಗುಜ್ಜೆ ಪೋಡಿ

April 3, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನಕಾಯಿ ಗುಜ್ಜೆ ಪೋಡಿ

ಬೇಕಪ್ಪ ಸಾಮಾನುಗೊ:

 • ಸಣ್ಣ ತುಂಡು ಹಲಸಿನಕಾಯಿ ಗುಜ್ಜೆ
 • 1 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು
 • 3/4 -1 ಚಮ್ಚೆ ಮೆಣಸಿನ ಹೊಡಿ
 • ದೊಡ್ಡ ಚಿಟಿಕೆ ಇಂಗು
 • ರುಚಿಗೆ ತಕ್ಕಸ್ಟು ಉಪ್ಪು
 • 10-15 ಜೀರಿಗೆ
 • 10-15 ಓಮ
 • ಎಣ್ಣೆ ಹೊರಿವಲೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಗುಜ್ಜೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಅದರ ಹೆರಾಣ ರೆಚ್ಚೆಯ ತೆಗದು, ಗೂಂಜಿನ ರೆಜ್ಜ ತೆಗದಿಕ್ಕಿ, ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ದೊಡ್ಡಕೆ ತೆಳ್ಳಂಗೆ ಕೊರದು, ಒಂದು 5 ನಿಮಿಷ  ಉಪ್ಪು ನೀರಿಲ್ಲಿ ಹಾಕಿ ತೆಗದು ಮಡುಗಿ.

ಒಂದು ಪಾತ್ರಲ್ಲಿ ಅಕ್ಕಿ ಹಿಟ್ಟು/ಹೊಡಿ, ಇಂಗು, ಮೆಣಸಿನ ಹೊಡಿ, ಉಪ್ಪು, ಜೀರಿಗೆ, ಓಮವ ಹಾಕಿ, ಅದಕ್ಕೆ ಬೇಕಾದಸ್ಟು ನೀರುದೆ ಹಾಕಿ 
ಲಾಯಿಕಲಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಸ್ಟು ಹದ ಇರಲಿ.

ಒಂದು ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ.
ಅದು ಬೆಶಿ ಆದಪ್ಪಗ, ಗುಜ್ಜೆಯ ಹಿಟ್ಟಿಲ್ಲಿ ಅದ್ದಿ ಎಣ್ಣೆಗೆ ಹಾಕಿ ಅದು ಕರು-ಕುರು ಅಪ್ಪನ್ನಾರ ಬೇಶಿ(ಎಣ್ಣೆಯ ಗುಜು ಗುಜು ಅಜನೆ ನಿಂದರೆ ಆತು ಹೇಳಿ ಲೆಕ್ಕ.)

ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಚೆನ್ನೈ ಬಾವ°

  ಹಾ….. ಈ ತಿಂಗಳಿಡೀ ಹಲಸಿನ ಕಾಯಿದೆಯೋ !! ಅಕ್ಕು. ಧಾರಾಳ ಒಳ್ಳೇದು. ಹಲಸಿನಕಾಯಿ ಹವ್ಯಕರ ಸೊತ್ತಡ. ಕುಶೀ ಆತು ಓದಿ. ಇನ್ನು ಹಲಸಿನ ಹಣ್ಣು ಪಾಚ , ಪೆರಟಿ ಎಲ್ಲಾ ಬರ್ಲಿ. ಮತ್ತೆ ಸೊಳೆ ಬಾಳ್ಕುದೆ . ಒಪ್ಪ.

  [Reply]

  VN:F [1.9.22_1171]
  Rating: +2 (from 2 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅಪ್ಪಪ್ಪು. ಈ ತಿಂಗಳು ಅದೇ ಒಳ್ಳೆದು. ಇನ್ನು ಯೇವದೆಲ್ಲ ಇದ್ದು ನಿಂಗಳ ಲಿಸ್ಟಿಲಿ.ಒಂದೊಂದೇ ಬರಳಿ.

  [Reply]

  VN:F [1.9.22_1171]
  Rating: +2 (from 2 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಗುಜ್ಜೆ ಪೋಡಿ ಲಾಯಕ ಆಯಿದು… ಧನ್ಯವಾದ…

  [Reply]

  VA:F [1.9.22_1171]
  Rating: +1 (from 1 vote)
 4. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಇದಾ ಅಕ್ಕೋ ಆ ಶುಂಟಿ ಚಟ್ನಿ ರಜಾ ಇತ್ತೆ ಕೊಟ್ಟಿಕ್ಕಿ ಆತೋ………

  [Reply]

  VN:F [1.9.22_1171]
  Rating: 0 (from 0 votes)
 5. ಅಜ್ಜಕಾನ ಭಾವ

  ಯೆ ಅಕ್ಕಾ
  ಹೀಂಗೆ ಪೆಶಲ್ಲು ಮಾಡಿಪ್ಪಗ ನವಗೊಂದು ಪಾರ್ಸೆಲ್ಲು ಮಾಡಿಕ್ಕಿ.
  ಎಡ್ರೆಸು ನಿಂಗಳ ಶ್ರೀ ಅತ್ತೆ ಹೇಳುಗು…

  [Reply]

  ಬೋಸ ಬಾವ

  ಬೋಸ ಬಾವ Reply:

  ಓಯಿ..!!
  ರಜ್ಜ ಎನಗೂ ಬೇಕು ಮಾರಾಯಾ..!!
  ಪೂರ ಮುಗುಶಿಕ್ಕೆಡಾ… ಏ?? 😉

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ನಿನಗೆ ಕೊಡುವಾ ಮಾರಾಯ.. ನೀನು ಅತ್ಲಾಗಿ ಹೋಪಗ ಕೊಡೆಯಾಲಕ್ಕೆ ಹೋದರೆ ಅಕ್ಕ ಮಾಡಿ ಕೊಡುಗು ಹೆದರೆಡಾ..

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°

  ಫೊಟೋಲ್ಲಿ ಗುಜ್ಜೆ ಪೋಡಿ ನೋಡಿ ಕೊಶಿ ಆತು. ಮಾಡಿ ನೋಡೆಕು. ಬಾಕಿ ಎಲ್ಲವುದೆ ಇದ್ದಾನೆ. ಗುಜ್ಜೆ ಎಲ್ಲಿದ್ದು ಹೇಳಿ ಹುಡ್ಕೆಕಷ್ಟೆ.

  [Reply]

  VA:F [1.9.22_1171]
  Rating: +1 (from 1 vote)
 7. Sandesh Y

  ಹಲಸಿನ ಕಾಯಿ ಬಿಟ್ರೆ ಬೇರೆಂತದೂ ಸಿಕ್ಕುತ್ತಿಲ್ಲೆಯಾ ನಿಂಗೊಗೆ?:-> ಇನ್ನಾಣ ಸರ್ತಿ ಉಂಡೆ ಮೇಲಾರ ಹೇಂಗೆ ಮಾಡ್ತದು ಹೇಳಿ ಬರೇರಿ.;-) ಮಾಡಿಕೊಟ್ಟರೆ ನಿಂಗ ಜನ ಅಪ್ಪು!;-)

  [Reply]

  ಪೆಂಗಣ್ಣ° Reply:

  ಸಂದೇಶ ಮಹಾನುಭಾವರೇ ಆಯಾಯ ಕಾಲಕ್ಕೆ ಪ್ರಕೃತಿ ಕೊಡುದರ ನಾವು ಉಪಯೋಗಿಸಿಕೊಳ್ಳೆಕ್ಕು ಇಲ್ಲದ್ರೆ ನವಗೂ ಓ ಆ ದೇಶಪ್ರೇಮಿ ಜಾತಿಯವಕ್ಕೂ ಎಂತ ವ್ಯೆತ್ಯಾಸ ಇಕ್ಕು?
  ಮತ್ತೆ ನಿಂಗೋ ಬೈಲಿನ ಸರೀ ನೋಡಿರೆ ಉಂಡೆ ಮಾಡುವ ಒಂದು ವಿಧಾನ ಈಗಲೇ ಬೈಂದು, ಅದು ಸಿಕ್ಕುಗು.. ಸುಮ್ಮನೇ ಎನ್ನದೂ ಒಂದು ಇರ್ಲಿ ಹೇದರೆ ನವಗಾಗ ಇದಾ..

  [Reply]

  VA:F [1.9.22_1171]
  Rating: +4 (from 4 votes)
  ಗುರಿಕ್ಕಾರ°

  ಗುರಿಕ್ಕಾರ° Reply:

  ಸಂದೇಶಂಗೆ ನಮಸ್ಕಾರ.
  ನಿಂಗಳ ಒಪ್ಪ ಕಂಡು ಆಶ್ಚರ್ಯವೂ ಖೇದವೂ ಆತು.

  ವೇಣಿಅಕ್ಕ ಎಷ್ಟು ಸರ್ತಿ ಹಲಸಿನ ಕಾಯಿಯ ಶುದ್ದಿ ತೆಗದರೂ, ಒಂದೇ ಪಾಕವ ಅಲ್ಲನ್ನೇ ಹೇಳಿದ್ದು?
  ಇದೊಂದು ಹೊಸತ್ತು – ಹಲಸಿನ ಪೋಡಿ. ಎಷ್ಟೋ ಜೆನಕ್ಕೆ ಇದರ ಮಾಡುಸ್ಸು ಅರಡಿಯ.
  ಹಲಸಿನಕಾಯಿಲಿ ಎಷ್ಟು ಬಗೆ ಮಾಡ್ಳೆಡಿತ್ತು ಹೇಳ್ತ ವೈವಿಧ್ಯತೆಯ ತೋರುಸುತ್ತು ಇದು.

  ಅಷ್ಟು ಪ್ರೀತಿಲಿ ಬಗೆಬಗೆಯ ಖಾದ್ಯ-ತಿಂಡಿಗಳ ಬೈಲಿಂಗೆ ಹೇಳ್ತ ವೇಣಿಅಕ್ಕಂಗೆ ಇನ್ನಾಣವಾರ ಯೇವರ ಹೇಳೇಕು ಹೇದು ಅರಡಿಯದೋ? ಇನ್ನೊಬ್ಬ ಹೇಳಿ ಆಯೇಕೋ?
  ಅವರ ಪುರುಸೊತ್ತಿನ ಒರೆಂಗೆ ನಾವು ಕಾವೊ°. ಅದರಿಂದಲೂ ಅಂಬೆರ್ಪಿದ್ದರೆ ನಿಂಗಳೇ ಬರದು ಕಳುಗಿ ಬೈಲಿಂಗೆ! :-)

  ಆತೋ?
  ಬೈಲಿನ ಎಲ್ಲೋರ ಹತ್ತರೆ ಪ್ರೀತಿಲಿ ಮಾತಾಡಿಗೊಂಡಿದ್ದರೆ ನಿಂಗೊ ಜೆನ ಅಪ್ಪು! 😉

  [Reply]

  VN:F [1.9.22_1171]
  Rating: +8 (from 8 votes)
  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅದೆಲ್ಲ ಆವ್ತಿಲ್ಲೆ ಆತೊ. ಗುಜ್ಜೆ ಮುಗಿವನ್ನಾರ ಗುಜ್ಜೆಯೇ ಮಾಡ್ಳಕ್ಕು. ನಿಂಗೊಗೆಂತ ಸೊಕ್ಕು. ಉಂಡೆಮೇಲಾರ ಮಾಡಿಯಪ್ಪಗ ಇಡ್ಲಿ ಒಗ್ಗರ್ಸಲಾವ್ತಿತ್ತಿಲ್ಯೋ ಕೇಳುವಿ ನಿಂಗೊ. ನಿಂಗೊಗೆ ಇದು ಬೇಡದ್ರೆ ಎರಡು ಪೆಲತ್ತರಿ ಬೇಕಾರೆ ಅಕ್ಕಾರೆ ತೆಕ್ಕೊಂಡು ಹೋಯಿಕ್ಕಿ. ಪೋಡಿ , ಗುಜ್ಜಗೆ ಎಂಗೊ ಇದ್ದೆಯೊ°

  [Reply]

  Sandesh Y Reply:

  ಯೇ ಭಾವಾ ನಿಂಗೊ ಪೋಡಿ ತಿಂಬದರಲ್ಲಿ ಪೋಕ ಅಂಬಗಾ!;-) ಎನಗೆ ಬೇಳೆ ಹಿಡಿಶುವ ಏರ್ಪಾಡೇ ಅಂಬಗ!?

  [Reply]

  VN:F [1.9.22_1171]
  Rating: 0 (from 0 votes)
  ಜಯಶ್ರೀ ನೀರಮೂಲೆ

  jayashree.neeramoole Reply:

  ಗುಜ್ಜೆ,ಹಲಸಿನ ಕಾಯಿ ಎಷ್ಟು ವಿಧಾನಗಳಲ್ಲಿ ಎಷ್ಟು ತಿಂದರೂ ಬೊಡಿಯ… ಪುಣ್ಯಕ್ಕೆ ಎಂಗಳ ಮನೆ ಹತ್ತರೆ ಅಂಗಡಿಲ್ಲಿ ಸಾಧಾರಣ ಇತರ ತರಕಾರಿಗಳ ಕ್ರಯಕ್ಕೆ ಬೇಕಾದಷ್ಟು ಗುಜ್ಜೆಯೂ ಸಿಕ್ಕುತ್ತು… ಅಡಿಗೆ ಹೇಳಿ ಕೊಡುಲೆ ಬೈಲಿಲ್ಲಿ ವೇಣಿಯಕ್ಕನೂ ಇದ್ದು… :)

  [Reply]

  Sandesh Y Reply:

  ಹಲಸಿನ ಹಣ್ಣಿನ ಸೊಳೆಯ ಕ್ರಯಕ್ಕೆ ಮಾರ್ತವಡಾ ಬೆಂಗ್ಳೂರಿಲಿ ಎಲ್ಲಾ? ಒಂದು ಸೊಳಗೆ ಎಷ್ಟಿರ್ತು ಕ್ರಯ ಗೊಂತಿದ್ದಾ?

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಒಂದು ಸೊಳೆಗೆ ಸಾಧಾರಣ ಎರಡು ರುಪಾಯಿ ಹಾಂಗೆ ಇರುತ್ತು ಹೇಳಿ ಕಾಣುತ್ತು… ಸರಿಯಾಗಿ ಗೊಂತಿಲ್ಲೇ…

  ಅಣ್ಣ ಗುಜ್ಜೆ,ಹಲಸಿನ ಹಣ್ಣಿನ ವ್ಯಾಪಾರ ಶುರು ಮಾಡುವ ಅಂದಾಜು ಇದ್ದೋ ಹೇಳಿ… 😉

  ಈ ಸಂಕೊಲೆಗೆ ಸಹಾಯ ಅಪ್ಪಲೂ ಸಾಕು…

  http://oppanna.com/lekhana/adkathimar/halasina-hannina-mela
  http://oppanna.com/oppa/halasu-balasi

  VA:F [1.9.22_1171]
  Rating: 0 (from 0 votes)
 8. ಮುಳಿಯ ಭಾವ
  ರಘು ಮುಳಿಯ

  ದೀಗುಜ್ಜೆ ಪೋಡಿ ಗೊ೦ತಿದ್ದು.ಆದರೆ ಇದು ಹೊಸತ್ತು.ಬೇಳೆ ಚೆಕ್ಕೆ ಆದರೂ ಉಪಯೋಗಿಸಲಕ್ಕೋ ಅಕ್ಕ?

  [Reply]

  ವೇಣಿಯಕ್ಕ°

  ವೇಣಿಯಕ್ಕ° Reply:

  ಬೇಳೆಚೆಕ್ಕೆ ಅಸ್ಟು ಲಾಯಿಕ ಆವುತ್ತಿಲ್ಲೆ. ಎಳತ್ತು ಕಣ್ಣು ಗುಜ್ಜೆ ಲಾಯಿಕ ಅಪ್ಪದು.

  [Reply]

  VN:F [1.9.22_1171]
  Rating: 0 (from 0 votes)
 9. Sandesh Y

  ಓ ದೇವರೇ.. ಆನು ಬೈಲಿಂಗೆ ಹೊಸಬ್ಪ ಅಲ್ಲದೋ ಅಣ್ಣಂದ್ರೇ ತಿಳುವಳಿಕೆ ರಜ ಕಮ್ಮಿ ಇದಾ? ಎನ್ನದೂ ಒಂದು ಇರಲಿ ಹೇದು ಒಂದು ಹಾಕಿದ್ದಪ್ಪಾ ಪೆಂಗಣ್ಣಂಗೆ ಬೇಗ ಗೊಂತಾತದ! ಎನ್ನ ಕ್ಷಮಿಸಿ ಆತಾ ಅಕ್ಕಾ, ಅಣ್ಣಂದ್ರೇ. ನಿಂಗೊ ಎಂತ ಕೊಟ್ರು ತಿಂಬೆ!

  [Reply]

  ಪೆಂಗಣ್ಣ° Reply:

  ಓಯೀ ಸಂದೇಶಣ್ಣೋ
  ಇದಾ ನಿನ್ನ ಜೋರು ಮಾಡಿದ್ದಲ್ಲ ಆತೋ..
  ನಮ್ಮತನವ ಉಳುಶುಲೆ ಇದನ್ನೂ ಉಳುಶೆಡದೋ?
  ಮತ್ತೆ ಕೀಟನಾಶಕ ಹಾಕದ್ದೇ ಸಿಕ್ಕುದು ಇದೇ ಅಲ್ಲದೋ?

  ಬೈಲಿಂಗೆ ದಿನಾ ಬಂದೊಂಡಿರು.. ಅಂಬಗ ವಿಚಾರಂಗ ಗೊಂತಕ್ಕು..

  [Reply]

  Sandesh Y Reply:

  ಆನು ಒಪ್ಪುತ್ತೆ ಅಣ್ಣೋ. ನಮ್ಮತನವ ನಾವು ಬಿಟ್ಟುಕೊಡ್ಲಾಗಲ್ದೊ. ಆನು ಗ್ರೇಶಿದ್ದು ನಿಂಗ ಜೋರು ಮಾಡಿದ್ದೋಳಿಯೇ ಆತಾ. ಇನ್ನು ನಿಂಗಳೊಟ್ಟಿಂಗೆ ಆನುದೆ ಇದ್ದೆ ಎಂತಾ, ಇದಾ ಬೈಲಿಂಗೆ ಎಂತಾರು ಸಕಾಯಕ್ಕೆ ಬೇಕಾರೆ ದೆನುಗೋಳಿಕ್ಕಿ ಎಂತಾ

  [Reply]

  ಪೆಂಗಣ್ಣ° Reply:

  ಇದಾ ಒಟ್ಟಿಂಗೆ ಬಂದರಾತು ಅಸ್ಟೆ..

  ಯೇತಡ್ಕ ಗುಡ್ಡೆ ಇಳ್ಕೊಂಡು ಯೆನಂಕೋಡ್ಲು ಹೊಡಂಗೆ ಇಳಿವಾಗ ದಾರಿ ಕರೆಲಿ ಬೀಜದ ಗೆಡುವಿಂದ ನಾಕು ಚೋರೆಯ ಕ್ಗಿಸೆ ಹಾಕಿಯೊಂಡು ಬಂದರೆ ಚೋಲಿ ತೆಗದು ತಿಂಬಲಕ್ಕಿದಾ…. ಆಗದೋ?

  Sandesh Y Reply:

  ಎನ್ನ ಅಂಗಿಯ ಡ್ರೈ ವಾಷ್ ಮಾಡ್ಲೇ ಕೊಡೆಕ್ಕಕ್ಕು ಬೀಜದ ಸೊನೆ ಅಂಗಿಗೆ ಹಿಡ್ಕೊಂಡರೆ:-D

  VN:F [1.9.22_1171]
  Rating: 0 (from 0 votes)
  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಈಗ ನಿಂಗೊ ಇದು ಜೆನ ಅಪ್ಪು. ಒಪ್ಪಿತ್ತು. ಇದಾ ನವಗೆ ಬೈಲಿ ಅಲ್ಪ ಇದ್ದು ಮಾಡ್ಳೆ. ನಿಂಗೊ ಕೈ ಕೊಡ್ತೆ ಹೇಳಿರೆ ಆಗ , ಕೈ ಸೇರೇಕು ಸಂದೇಶಣ್ಣೊ.

  VA:F [1.9.22_1171]
  Rating: 0 (from 0 votes)
 10. Sandesh Y

  ENTHAYEKU HELI?

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ೧.ನಮ್ಮತನದ ಮೇಲೆ ನಾವೂ ಪ್ರೀತಿ,ಅಭಿಮಾನ ಬೆಳೆಶಿಗೊಂಬದು ಮತ್ತು ಇತರರಿಂಗೆ ಬೆಳೆಸುಲೆ ಸಹಾಯ ಮಾಡುದು…
  ೨.ಸುಜ್ಹಾನವ ನಾವೂ ಪಡಕ್ಕೊಂಬದು ಮತ್ತು ಇತರರಿಂಗೆ ಪಡಕ್ಕೊ೦ಬಲೆ ಸಹಾಯ ಮಾಡುದು…
  ೩. ರಾಮಾಯಣದ ಆದರ್ಶ ಪಾತ್ರಂಗಳ ಆದರ್ಶವ ನಾವೂ ಅಳವಡಿಸಿಗೊಂಬದು ಮತ್ತು ಇತರರಿಂಗೆ ಅಳವಡಿಸಿಗೊಂಬಲೆ ಸಹಾಯ ಮಾಡಿ ಆ ಮೂಲಕ ರಾಮ ರಾಜ್ಯದ ಕನಸಿನ ನನಸಾಗಿಸುದು…
  ೪.ಪ್ರಕೃತಿ ಪ್ರೇಮ,ವಿಶ್ವ ಪ್ರೇಮವ ನಾವೂ ಬೆಳೆಶಿಗೊಂಬದು ಮತ್ತು ಇತರರಿಂಗೆ ಬೆಳೆಸುಲೆ ಸಹಾಯ ಮಾಡಿ ಆ ಮೂಲಕ ನಳನಳಿಸುವ ಪ್ರಕೃತಿಯ ನೋಡುವ ಸೌಭಾಗ್ಯ ಎಲ್ಲರಿಂಗೂ ಸಿಕ್ಕುವ ಹಾಂಗೆ ಮಾಡುದು…

  ಇವೆಲ್ಲ ನಮ್ಮ ಉದ್ದೇಶಂಗ… ಇದಕ್ಕೋಸ್ಕರ ನಿಂಗಳ ಯಾವುದೇ ಪ್ರಯತ್ನವೂ ಸ್ವಾಗತಾರ್ಹ…

  [Reply]

  Sandesh Y Reply:

  Mele helida yella niyamakku anu baddha. Dhanyavadango akka.

  [Reply]

  VN:F [1.9.22_1171]
  Rating: +1 (from 1 vote)
  ಜಯಶ್ರೀ ನೀರಮೂಲೆ

  jayashree.neeramoole Reply:

  ಒಂದು ಸ್ವ-ಅನುಭವ ಹೇಳಿರೆ ಗುರುಭಕ್ತಿ ಜಾಸ್ತಿ ಆವುತ್ತಾ ಇದ್ದ ಹಾಂಗೆ ಈ ಎಲ್ಲ ಗುಣಂಗ ನಮ್ಮ ಆಂತರ್ಯಲ್ಲಿ ತನ್ನಿಂತಾನೆ ಬೆಳೆತ್ತಾ ಹೋವುತ್ತು…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿಶ್ಯಾಮಣ್ಣಕೊಳಚ್ಚಿಪ್ಪು ಬಾವಶಾ...ರೀಶರ್ಮಪ್ಪಚ್ಚಿಶೇಡಿಗುಮ್ಮೆ ಪುಳ್ಳಿಅಡ್ಕತ್ತಿಮಾರುಮಾವ°ಸಂಪಾದಕ°ಕೇಜಿಮಾವ°ಕೆದೂರು ಡಾಕ್ಟ್ರುಬಾವ°ಗಣೇಶ ಮಾವ°ಪುಟ್ಟಬಾವ°ಮುಳಿಯ ಭಾವದೊಡ್ಮನೆ ಭಾವನೀರ್ಕಜೆ ಮಹೇಶಪುಣಚ ಡಾಕ್ಟ್ರುಪೆಂಗಣ್ಣ°ಅನು ಉಡುಪುಮೂಲೆವಿಜಯತ್ತೆವಾಣಿ ಚಿಕ್ಕಮ್ಮಕಳಾಯಿ ಗೀತತ್ತೆಅಜ್ಜಕಾನ ಭಾವಎರುಂಬು ಅಪ್ಪಚ್ಚಿಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ