ಹಲಸಿನ ಹಣ್ಣಿನ ಒಗ್ಗರಣೆ

July 1, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನ ಹಣ್ಣಿನ ಒಗ್ಗರಣೆ

ಬೇಕಪ್ಪ ಸಾಮಾನುಗೊ:

 • 12-15 ಹಲಸಿನ ಹಣ್ಣಿನ ಸೊಳೆ
 • 3 ಒಣಕ್ಕು ಮೆಣಸು
 • ರುಚಿಗೆ ತಕ್ಕಸ್ಟು ಉಪ್ಪು
 • 1 ಚಮ್ಚೆ ಉದ್ದಿನ ಬೇಳೆ
 • 1/2 ಚಮ್ಚೆ ಸಾಸಮೆ
 • 2 ಚಮ್ಚೆ ತೆಂಗಿನ ಎಣ್ಣೆ

ಮಾಡುವ ಕ್ರಮ:
ಹಲಸಿನ ಹಣ್ಣಿನ ಕೊರದು, ಎಳಕ್ಕಿ, ಬೇಳೆ, ಪೊದುಂಕುಳು, ಹೂಸಾರೆ ಎಲ್ಲ ತೆಗದು ಮಡುಗಿ.

ಒಂದು ಬಾಣಲೆಗೆ ಸಾಸಮೆ, ಉದ್ದಿನ ಬೇಳೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಹಲಸಿನ ಹಣ್ಣಿನ ಸೊಳೆ ಹಾಕಿ ತೊಳಸಿ. ಇದಕ್ಕೆ ಉಪ್ಪು ಹಾಕಿ ತೊಳಸಿ, ಸಣ್ಣ ಕಿಚ್ಚಿಲ್ಲಿ, 2-3 ನಿಮಿಷಕ್ಕೊಂದರಿ ತೊಳಸಿಗೊಂಡು ಮುಚ್ಚಲು ಮುಚ್ಚಿ ಬೇಶಿ.

ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಸುಭಗ

  ತುಂಬ ಲಾಯ್ಕ ಆವ್ತು ಇದು.
  ಎಂಗೊ ವರ್ಷಲ್ಲಿ ನಾಲ್ಕೈದು ಸರ್ತಿಯಾದರೂ ಮಾಡ್ತೆಯೊ° ಇದರ.
  ವೇಣಿಯಕ್ಕ, ಇದಕ್ಕೆ ತುಳುವಿಲ್ಲಿ ’ಚಂಗುಳಿ’ಯೋ ಹೀಂಗೆಂತದೋ ಒಂದು ಹೆಸರಿದ್ದಲ್ಲದ? ಗೊಂತಿದ್ದ?

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಇನ್ನೊಂದರಿ ಮಾಡಿಪ್ಪಗ ಒಂದು ಕೂಕಿಳು ಹಾಕಿ ಭಾವ.

  [Reply]

  VN:F [1.9.22_1171]
  Rating: 0 (from 0 votes)
  ವೇಣಿಯಕ್ಕ°

  ವೇಣಿಯಕ್ಕ° Reply:

  ಅಪ್ಪು ಅಪರೂಪಕ್ಕೆ ತಿಂಬಲೆ ಲಾಯಿಕ ಆವುತ್ತು.
  ಚಂಗುಳಿ ಹೇಳಿದರೆ ಬೇರೆ. ಚಂಗುಳಿ ನಮ್ಮ ಹಲಸಿನ ಹಣ್ಣಿನ ಪಾಯಸದ ಹಾಂಗೆ.. ಕಾಯಿಹಾಲು ಹಾಕದ್ದೆ ಬೋಳು ಪಾಯಿಸ.(ಹಲಸಿನಹಣ್ಣಿನ ಕೊಚ್ಚಿ, ರೆಜ್ಜ ನೀರು ಹಾಕಿ ಬೇಶಿ, ಬೆಲ್ಲ ಹಾಕಿ ಕೊದುಶಿ, ರೆಜ್ಜ ಗೆಣಮೆಣಸಿನ ಹೊಡಿ/ಏಲಕ್ಕಿ ಹೊಡಿ ಹಾಕಿ ತೊಳಸಿದರೆ ಆತು.)

  ಚಂಗುಳಿ, ಹಲಸಿನ ಹಣ್ಣಿನ ಒಗ್ಗರಣೆ ಎಲ್ಲ ಹೆಚ್ಚಾಗಿ ಮಳೆಗಾಲದ ನೀರು ಎಳಕ್ಕೊಂಡ ಹಣ್ಣಿನ ಮಾಡುದು(ಹಸಿ ತಿಂದರೆ ಶೀತ, ದೊಂಡೆ ಬೇನೆ ಮತ್ತೆ ಕರಗದ್ದೆ ಅಪ್ಪದಕ್ಕೆ ಹೀಂಗೆ ಬೇಶಿ ತಿಂಬದು.)

  [Reply]

  VN:F [1.9.22_1171]
  Rating: 0 (from 0 votes)
 2. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ಎನ್ನ ಅಮ್ಮಂದೆ ಎಂಗ ಸಣ್ಣಾದಿಪ್ಪಗ ಇದರ ಮಾಡುತ್ತ ಭಾರಿ ರುಚಿ !ನೆನಪಿಸಿದ್ದಕ್ಕೆ ಧನ್ಯವಾದಂಗ ವೇಣಿ ಅಕ್ಕ ಇನ್ನಣ ಸರ್ತಿ ಹಲಸಿನ ಹಣ್ಣು ಇಪ್ಪಗ ಅಪ್ಪನ ಮನೆಗೆ ಹೋದರೆ ಮಾಡುತ್ತೆ !ಒಂದೆರಡು ಬಗೆ ನಿಂಗ ಇಲ್ಲಿ ಹೇಳಿಕೊಟ್ಟ ಮಾದರಿಲಿ ಮಾಡಿದ್ದೆ ಆನುದೆ!ಧನ್ಯವಾದಂಗ ವೇಣಿ ಅಕ್ಕ

  [Reply]

  ವೇಣಿಯಕ್ಕ°

  ವೇಣಿಯಕ್ಕ° Reply:

  ಧನ್ಯವಾದಂಗೊ.. ಮಾಡಿ ತಿಳಿಸಿದ್ದಕ್ಕೆ. :)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಜಯಶ್ರೀ ನೀರಮೂಲೆಚುಬ್ಬಣ್ಣಹಳೆಮನೆ ಅಣ್ಣಒಪ್ಪಕ್ಕದೇವಸ್ಯ ಮಾಣಿದೊಡ್ಡಭಾವಪಟಿಕಲ್ಲಪ್ಪಚ್ಚಿಚೂರಿಬೈಲು ದೀಪಕ್ಕಬೋಸ ಬಾವಶುದ್ದಿಕ್ಕಾರ°ಕಾವಿನಮೂಲೆ ಮಾಣಿಅನಿತಾ ನರೇಶ್, ಮಂಚಿಶ್ಯಾಮಣ್ಣಕೊಳಚ್ಚಿಪ್ಪು ಬಾವವೇಣಿಯಕ್ಕ°ದೊಡ್ಮನೆ ಭಾವಬೊಳುಂಬು ಮಾವ°ಪುತ್ತೂರುಬಾವಶರ್ಮಪ್ಪಚ್ಚಿವೇಣೂರಣ್ಣಮಾಷ್ಟ್ರುಮಾವ°ಉಡುಪುಮೂಲೆ ಅಪ್ಪಚ್ಚಿಪುತ್ತೂರಿನ ಪುಟ್ಟಕ್ಕವಸಂತರಾಜ್ ಹಳೆಮನೆಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ