ಹಲಸಿನ ಹಣ್ಣು ಪೆರಟಿ

July 17, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನ ಹಣ್ಣು ಪೆರಟಿ

ಬೇಕಪ್ಪ ಸಾಮಾನುಗೊ:

  • 2-3 ಸಾಧಾರಣ ಗಾತ್ರದ ಹಲಸಿನ ಹಣ್ಣು
  • 2-3 ಚಮ್ಚೆ ಸಕ್ಕರೆ (ಬೇಕಾದರೆ ಮಾತ್ರ)

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.

ಹಲಸಿನ ಹಣ್ಣಿನ ಒಂದು ಬಾಣಲೆ ಅಥವಾ ಉರುಳಿಲಿ ಹಾಕಿ ಬೇಶಿ. (ಬೇಕಾದರೆ ಹಲಸಿನ ಹಣ್ಣಿನ ಮಿಕ್ಸಿಲಿ ಹಾಕಿ ರೆಜ್ಜ ಕ್ರಶ್ ಮಾಡ್ಲೆ ಅಕ್ಕು).
ಇದರ ಹದ ಕಿಚ್ಚಿಲ್ಲಿ ಗಟ್ಟಿ ಅಪ್ಪನ್ನಾರ ಕಾಸಿ. (ತುಂಬ ಗಟ್ಟಿ ಮಾಡದ್ದರೆ ಇದರ ಪ್ರಿಜ್ ಲ್ಲಿ ಮಡುಗೆಕ್ಕು)

ತಣುದ ಮೇಲೆ ಇದಕ್ಕೆ 2-3 ಚಮ್ಚೆ ಸಕ್ಕರೆ ಉದುರ್ಸಿ, ಲಾಯಿಕಲಿ ತೊಳಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉಂಡೆ ಮಾಡಿ, ಒಂದು ಪ್ಲಾಸ್ಟೀಕು ಕರಡಿಗೆಲಿ ತೆಗದು ಮಡುಗಿ.
ಇದರ ಹಾಂಗೆ ತಿಂಬಲುದೇ ಆವುತ್ತು ಅಥವಾ ಪಾಯಸ ಮಾಡಿ ತಿಂಬಲುದೇ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

  1. ಸುಮನ ಭಟ್ ಸಂಕಹಿತ್ಲು.

    ಎನಗೆ ಇದರ ಹಾಂಗೆ ಅಂತೆ ತಿಂಬಲೆ ಭಾರೀ ಪ್ರೀತಿ. ಪಾಯಸದೆ ಲಾಯಿಕ ಅವ್ತು.
    ಹ್ಮ್! ಆಶೆ ಆವ್ತನ್ನೆ?

    [Reply]

    VA:F [1.9.22_1171]
    Rating: +2 (from 2 votes)
  2. ಚೆನ್ನೈ ಬಾವ°
    ಚೆನ್ನೈ ಭಾವ°

    ಇದು…ಎನ ಪೆರಟಿ ಬೇಡ (ಹಲ್ಲಿಂಗೆ ಹಿಡಿತ್ತು), ಪೆರಟಿ ಪಾಚ ಅಕ್ಕು. ಇದು ಪೆರಟು ಹೇಳಿದ್ದಲ್ಲ, ಪೆರಟಿ ಸೀವು ಲಾಯಕ ಆವ್ತು ಹೇಳಿದ್ದು ಹೇದು.

    [Reply]

    VA:F [1.9.22_1171]
    Rating: +1 (from 3 votes)
  3. ಚುಬ್ಬಣ್ಣ
    ಚುಬ್ಬಣ್ಣ

    ವಾ.. ಅದ್ಬುತ..ವೇಣಿಯಕ್ಕನ ಹಲಸಿ ಹಣ್ಣಿನ ಬಗೆ ಬಗೆಯ ತಿ೦ಡಿಗೋ…!!
    ಇದರ ಪಾಯಸ ಭಾರಿ ಲಾಯಕೆ… ನಾಲ್ಕು ಲೋಟ ಕುಡುದ್ದೇ ಗೊ೦ತಾಗ… :)

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಗೊ೦ತಪ್ಪದು ಹೇ೦ಗೆ ಚುಬ್ಬಣ್ಣ? ಲೋಕಲ್ ಅನೆಸ್ತೇಶಿಯಾ ಕೊಟ್ಟ ಹಾ೦ಗಾಕ್ಕನ್ನೆ !
    ಸ೦ಗ್ರಹಯೋಗ್ಯ ಅ೦ಕಣ,ವೇಣಿ ಅಕ್ಕ೦ಗೆ ಧನ್ಯವಾದ.

    [Reply]

    VA:F [1.9.22_1171]
    Rating: +4 (from 6 votes)
  4. ಕೇಜಿಮಾವ°
    ಕೇಜಿಮಾವ°

    ಕಳುದ ವರ್ಷ ಮಾಡಿದ್ದು ಬೂಸರು ಬಂದು ಎರಡು ವಾರಲ್ಲಿ ಹಾಳಾತನ್ನೇ!

    [Reply]

    ವೇಣಿಯಕ್ಕ°

    ವೇಣಿಯಕ್ಕ° Reply:

    ಮಾಡುವ ಹಾಂಗೆ ಮಾಡಿದರೆ ಬೂಸರು ಬತ್ತಿಲ್ಲೆ…!!!

    [Reply]

    VN:F [1.9.22_1171]
    Rating: +6 (from 8 votes)
    ಉಂಡೆಮನೆ ಕುಮಾರ°

    ಉಂಡೆಮನೆ ಕುಮಾರ° Reply:

    ನೀರಿನಂಶ ಪೂರ ಹೋಗಿರ..ಎಳಮ್ಮೆ

    [Reply]

    VA:F [1.9.22_1171]
    Rating: 0 (from 0 votes)
  5. ಕೇಜಿಮಾವ°
    ಕೇಜಿಮಾವ°

    ಆಯಿಕ್ಕು.ಎನ್ನ ಅಮ್ಮಂಗೆ ಅನುಭವ ಕಮ್ಮಿ ಆತೋ ಏನೋ.ಬರೀ ಅರುವತ್ತು ವರ್ಷದ ಅನುಭವ ಪೆರಟಿ ಮಾದ್ಳೆ ಸಾಲದೋ ಏನೋ?

    [Reply]

    Bhat Reply:

    Dear Mava,

    Even Tendulkar gets out for a duck sometimes. That does not mean he lacks experience in batting :-) Just an off day!

    [Reply]

    VA:F [1.9.22_1171]
    Rating: +11 (from 13 votes)
  6. ಕೇಜಿಮಾವ°
    ಕೇಜಿಮಾವ°

    ತಮಾಷೆ ಲಾಯಕಾಯಿದು.

    [Reply]

    VA:F [1.9.22_1171]
    Rating: -7 (from 9 votes)
  7. ಉಂಡೆಮನೆ ಕುಮಾರ°
    ಉಂಡೆಮನೆ ಕುಮಾರ°

    ತುಳುವಂದು ಆವುತ್ತಿಲ್ಲೆಯೋ ಅಕ್ಕಾ°

    [Reply]

    ವೇಣಿಯಕ್ಕ°

    ವೇಣಿಯಕ್ಕ° Reply:

    ತುಳವಂದು ಪೆರಟಿ ಮಾಡುದು ಗೊಂತಿಲ್ಲೆ. ತುಳುವನ ಹಣ್ಣು ನೂಲು ನೂಲು(ಮಾಲೆ ಮಾಲೆ) ಅಪ್ಪ ಕಾರಣ ಆದಿಕ್ಕು ಎಲ್ಲರುದೆ ಬಕ್ಕೆ ಹಣ್ಣನ್ನೆ ಪೆರಟಿ ಮಾಡುದು.

    [Reply]

    VN:F [1.9.22_1171]
    Rating: 0 (from 0 votes)
  8. Ganesh Bhat
    Ganesha

    Tuluva hannina hannu thuppa madle avuthu heli kanuthu! Adara thumbaaa hothu sekeli (steam) madekku.

    [Reply]

    ಕೇಜಿಮಾವ°

    ಕೇಜಿಮಾವ° Reply:

    ತುಳುವನ ಹಣ್ಣು ಇಡ್ಳಿ ಮಾಡ್ಳಾವುತ್ತು.ಲಾಯಕಾವುತ್ತು.

    [Reply]

    VA:F [1.9.22_1171]
    Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಮಂಗ್ಳೂರ ಮಾಣಿಚುಬ್ಬಣ್ಣಬೋಸ ಬಾವಜಯಶ್ರೀ ನೀರಮೂಲೆಪಟಿಕಲ್ಲಪ್ಪಚ್ಚಿಶೇಡಿಗುಮ್ಮೆ ಪುಳ್ಳಿಶರ್ಮಪ್ಪಚ್ಚಿಅಕ್ಷರದಣ್ಣಅಜ್ಜಕಾನ ಭಾವದೊಡ್ಮನೆ ಭಾವಬಂಡಾಡಿ ಅಜ್ಜಿಕಳಾಯಿ ಗೀತತ್ತೆದೀಪಿಕಾಕೇಜಿಮಾವ°ಅನುಶ್ರೀ ಬಂಡಾಡಿಪೆಂಗಣ್ಣ°ವಿದ್ವಾನಣ್ಣವೇಣೂರಣ್ಣಪವನಜಮಾವಪುತ್ತೂರಿನ ಪುಟ್ಟಕ್ಕಉಡುಪುಮೂಲೆ ಅಪ್ಪಚ್ಚಿದೊಡ್ಡಭಾವಚೆನ್ನೈ ಬಾವ°ಗಣೇಶ ಮಾವ°ಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ