ಹರುವೆ ಸೊಪ್ಪು ತಾಳು(ಪಲ್ಯ)

January 17, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರುವೆ ಸೊಪ್ಪು ತಾಳು

ಬೇಕಪ್ಪ ಸಾಮಾನುಗೊ:

 • 1 ಕಟ್ಟು ಹರುವೆ ಸೊಪ್ಪು
 • 3-4 ಚಮ್ಚೆ ಕಾಯಿ ತುರಿ
 • 4-5 ಹಸಿಮೆಣಸು
 • ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
 • ಚಿಟಿಕೆ ಅರುಶಿನ ಹೊಡಿ
 • ರುಚಿಗೆ ತಕ್ಕಸ್ಟು ಉಪ್ಪು
 • 1/2 ಚಮ್ಚೆ ಉದ್ದಿನ ಬೇಳೆ
 • 1/2 ಚಮ್ಚೆ ಸಾಸಮೆ
 • 2-3 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಹರುವೆ ಸೊಪ್ಪಿನ ಲಾಯಿಕ ನೀರಿಲ್ಲಿ 2-3 ಸರ್ತಿ ತೊಳದು ಒಂದು ಕರೆಲಿ ನೀರು ಬಳಿವಲೆ ಮಡುಗಿ.

ಹರುವೆ ಸೊಪ್ಪನ್ನೂ, ಹಸಿಮೆಣಸನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.

ಒಂದು ಬಾಣಲೆಲಿ ಎಣ್ಣೆ, ಸಾಸಮೆ, ಉದ್ದಿನ ಬೇಳೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಅದಕ್ಕೆ ಕೊಚ್ಚಿದ ಹಸಿಮೆಣಸು ಹಾಕಿ ರೆಜ್ಜ ಹೊತ್ತು ಬಾಡ್ಸಿ.
ಅದಕ್ಕೆ ಕೊಚ್ಚಿದ ಹರುವೆ ಸೊಪ್ಪು, ಅರುಶಿನ ಹೊಡಿ, ಬೆಲ್ಲ, ಉಪ್ಪು ಹಾಕಿ ಲಾಯಿಕಲಿ ತೊಳಸಿ. ರೆಜ್ಜ ನೀರು ತಳುದು(ಬೇಕಾದರೆ ಮಾತ್ರ),
ಬಾಣಲೆಯ ಮುಚ್ಚಿ, ಸಣ್ಣ ಕಿಚ್ಚಿಲ್ಲಿ ಬೇಶಿ. ಸೊಪ್ಪು ಬೆಂದ ಮೇಲೆ, ಕಾಯಿ ತುರಿ ಹಾಕಿ ತೊಳಸಿ, ತಾಳಿನ ಒಂದು 2-3 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಅಶನ, ಚಪಾತಿ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಎಲಾ! ಈ ಅಕ್ಕ ವಾರ ವಾರ ಎನಗೆ ಇಷ್ಟವಾದ್ದರನ್ನೇ ಮಾಡಿ ಹಾಕುತ್ತವನ್ನೆ ಇಲ್ಲಿ!!. ಹರ್ವೆ ತಾಳು, ಸಾಸಮೆ, ಕೊದಿಲು, ಮೇಲಾರ ಉಂಬದು ಹೇಂಗೆ ಹೇಳಿ ಎನಗರಡಿಗು. ತಾಳು ಮಾಡುದೇಂಗೆ ಹೇದು ಈಗ ಇಲ್ಲಿ ವಿವರಣೆ ಸಿಕ್ಕಿದ್ದು ಲಾಯಕ ಆತು ಹೇಳಿತ್ತು -‘ಚೆನ್ನೈವಾಣಿ’.

  [Reply]

  VA:F [1.9.22_1171]
  Rating: 0 (from 0 votes)
 2. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಹರುವೆ ಸೊಪ್ಪಿನ ತಾಳ್ಳ ಮಾಡುಲೆ ಹೇಳಿಕೊಟ್ಟದು ಲಾಯಿಕಾಯಿದಕ್ಕೋ,
  ಒಂದುಕಟ್ಟು ಹರುವೆ ಸೊಪ್ಪು ಹೇಳಿ ಓದೆಕಾದ್ದರ ಒಂದು ಕಟ್ಟ ಹೇಳಿ ಓದಿಹೋತು ಮನಸ್ಸಿನೊಳಾವೆ ನೆಗೆಯೂ ಬಂತು ಮತ್ತೆ ನೋಡೀರೆ ಇದು ಹಳ್ಳಿ ಕಟ್ಟ ಅಲ್ಲ ಪೇಟೆ ಕಟ್ಟು ಹೇಳಿ ಗೊಂತಾತು, ಧನ್ಯವಾದಂಗೊ….

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಹರುವೆ ಸೊಪ್ಪಿನ ತಾಳು ಮಾಡಿ ನೋಡೆಕ್ಕು. ವಿವರ ಲಾಯಿಕಕೆ ಇದ್ದು.
  @ ಶೇ.ಪು. ಇದಾ, ಹಳ್ಳಿ ಕಟ್ಟವೂ ಈಗ ನೀನು ಜಾನ್ಸಿದಷ್ಟು ದೊಡ್ಡ ಇಲ್ಲೆ ಆತಾ :)
  ಸಮಕ್ಕೆ ತಿನ್ನೆಕ್ಕಾರೆ ನೀನು ಹೇಳಿದ ಕಟ್ಟವೇ ಬೇಕಕ್ಕು

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಏ ಅಪ್ಪಚ್ಚಿ ,
  ಹಳ್ಳಿ ಕಟ್ಟವೂ ಈಗ ನೀನು ಜಾನ್ಸಿದಷ್ಟು ದೊಡ್ಡ ಇಲ್ಲೆ ಆತಾ :)- ನವಗೆ ಜಾನ್ಸುವ ಅಗತ್ಯ ಇಲ್ಲೆ ಮನೆಗೆ ಹೋಗಿಪ್ಪಗ ನೋಡೀರೆ ಕಾಣ್ತು ಅದಿರಳಿ ಅಂತೂ ಎನ್ನ ಹೊಟ್ಟೆ ಹಾಳಿತ ಕಂಡು ಹಿಡುದಿ ಅಂಬಗ…!

  [Reply]

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ವಿವರಣೆಗೆ ಧನ್ಯವಾದ ಅಕ್ಕಾ.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಇದು ಚಪಾತಿಯೊಟ್ಟಿಂಗೆ ಲಾಯಕಕ್ಕು.

  [Reply]

  VN:F [1.9.22_1171]
  Rating: 0 (from 0 votes)
 5. ಜಯಶ್ರೀ ನೀರಮೂಲೆ
  jayashree.neeramoole

  ಇಂದು ಯಜಮಾನರು ಕೆಂಪು ಹರುವೆ ಹೇಳಿರೆ ತುಂಬಾ ಇಷ್ಟ ಹೇಳಿತ್ತಿದ್ದವು… ಬೈಲಿಂಗೆ ಬಂದರೆ ಇಲ್ಲಿಯೂ ಹರುವೆ ಸೊಪ್ಪಿನ ತಾಳು… ಎಂಗೊಗೆ ಹರುವೆ ಸೊಪ್ಪು ಮೊದಲೇ ಇಷ್ಟ… ತಾಳು ತುಂಬಾ ಲಾಯಕ ಆಯಿದು ಹೇಳಿ ವೇಣಿಯಕ್ಕಂಗೊಂದು ಒಪ್ಪ…

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಜಯಗೌರಿ ಅಕ್ಕ°ದೊಡ್ಡಮಾವ°ಮಂಗ್ಳೂರ ಮಾಣಿಅಕ್ಷರ°ಬೊಳುಂಬು ಮಾವ°vreddhiಅಕ್ಷರದಣ್ಣವಿನಯ ಶಂಕರ, ಚೆಕ್ಕೆಮನೆಡಾಮಹೇಶಣ್ಣಹಳೆಮನೆ ಅಣ್ಣತೆಕ್ಕುಂಜ ಕುಮಾರ ಮಾವ°ಪವನಜಮಾವಅನು ಉಡುಪುಮೂಲೆಕಾವಿನಮೂಲೆ ಮಾಣಿಡೈಮಂಡು ಭಾವನೀರ್ಕಜೆ ಮಹೇಶಬಟ್ಟಮಾವ°ಅನುಶ್ರೀ ಬಂಡಾಡಿಪಟಿಕಲ್ಲಪ್ಪಚ್ಚಿಅಜ್ಜಕಾನ ಭಾವಬೋಸ ಬಾವವಸಂತರಾಜ್ ಹಳೆಮನೆವಿಜಯತ್ತೆದೀಪಿಕಾಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ