Oppanna.com

ಮಾವಿನ ಹಣ್ಣಿನ ಸಾಸಮೆ

ಬರದೋರು :   ವೇಣಿಯಕ್ಕ°    on   15/05/2012    10 ಒಪ್ಪಂಗೊ

ವೇಣಿಯಕ್ಕ°

ಮಾವಿನ ಹಣ್ಣಿನ ಸಾಸಮೆ

ಬೇಕಪ್ಪ ಸಾಮಾನುಗೊ:

  • 10-12 ಕಾಟು ಮಾವಿನ ಹಣ್ಣು
  • 1.5-2 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • 1-2 ಹಸಿಮೆಣಸು ಅಥವಾ ಒಣಕ್ಕು ಮೆಣಸು
  • 1.5-2 ಕಪ್(ಕುಡ್ತೆ) ಕಾಯಿ ತುರಿ
  • 1/2 ಚಮ್ಚೆ ಸಾಸಮೆ

ಮಾಡುವ ಕ್ರಮ:


ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ.

1/2 ಕುಡ್ತೆ ನೀರಿನ ಮಾವಿನ ಹಣ್ಣಿನ ಚೋಲಿಯ ಪಾತ್ರಕ್ಕೆ ಹಾಕಿ, ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಗೊರಟಿನ ಪಾತ್ರಕ್ಕೆ ಹಾಕಿ.
ಅದಕ್ಕೆ ಬೆಲ್ಲವ ಕೆರಸಿ ಹಾಕಿ. ಉಪ್ಪುದೆ ಹಾಕಿ. ಅದರ ಲಾಯಿಕಲಿ ಪುರುಂಚಿ.

ಮಿಕ್ಸಿ/ಗ್ರೈಂಡರ್ಲ್ಲಿ ಕಾಯಿ, ಸಾಸಮೆ, ಹಸಿಮೆಣಸು/ಒಣಕ್ಕು ಮೆಣಸು ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.
ಕಡದ ಕಾಯಿಯ ಮಾವಿನ ಹಣ್ಣಿನ ಪುರುಂಚಿದ ಪಾತ್ರಕ್ಕೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

10 thoughts on “ಮಾವಿನ ಹಣ್ಣಿನ ಸಾಸಮೆ

  1. ಸಾಸಮೆ ಇದ್ದರೆ ಊಟ ಮುಗಿಯ ಅಲ್ಲದೊ? ಅಚ್ಚುಕಟ್ಟಾತು ಅಕ್ಕಾ.

  2. ವೇಣಿ,
    ಯೇವತ್ರಾಣ ಹಾಂಗೇ ಲಾಯ್ಕ ಅಡಿಗೆ ವಿವರಣೆ. ಅಡಿಗೆ ಎಲ್ಲೋರೂ ಮಾಡ್ತವು. ಆದರೆ ಅದರ ಸಮಪ್ರಮಾಣ ಹೇಳಿ, ಚಿತ್ರ ಸಮೇತ ವಿವರ್ಸೆಕ್ಕಾದರೆ ವೇಣಿಯೇ ಆಯೆಕ್ಕಷ್ಟೆ.
    ಮಾವಿನ ಹಣ್ಣು ಸಾಸಮೆ ಎನಗೆ ಇಷ್ಟದ್ದು. ಕೊಶೀ ಆತು ಬೈಲಿಲಿಯೂ ನೋಡಿ ಅಪ್ಪಗ.
    ಹೀಂಗೇ ಚೆಂದಕ್ಕೆ ಬತ್ತಾ ಇರಲಿ ಯಾವಾಗಲೂ ಹೇಳ್ತ ಹಾರಯಿಕೆ ಶ್ರೀಅಜ್ಜಿಂದ. 🙂

    1. ಶ್ರೀ ಅಜ್ಜಿ ನಿಂಗಲ ಮನೆ ಹತ್ರೆ ಎಲ್ಲ್ಯಾದ್ರೂ ಮಾವಿನ ಹಣ್ಣು ಬೀಳ್ತಾ??

      1. { ಶ್ರೀ ಅಜ್ಜಿ }
        ಚೆಲ, ಮನ್ನೆ ಕಾನಾವಣ್ಣನ ಉಪ್ನಾನ ಕಳುದ್ದಷ್ಟೇ! ಈಗ ಅಜ್ಜಿ ಆಗಿಯೂ ಆತೋ ಅಂಬಗ!

        ಎಡಿಯಪ್ಪಾ ಈ ಕಾನಾವಣ್ಣ ಒಯಿವಾಟಿಲಿ! 😉

        1. ಶ್ರೀ ಅಕ್ಕನೆ ಹೇಳಿಯೊಂಡದ್ದು ಅವು ಅಜ್ಜಿ ಹೇಳಿ ಒಪ್ಪಲ್ಲಿ..

  3. ಮೊನ್ನೆ ಊರಿಂಗೆ ಹೋಗಿ ಬಪ್ಪಗ ಕಾಟು ಮಾವಿನ ಹಣ್ಣು ತಂದಾಯಿದು.
    ಒಂದೊಂದೇ ಪ್ರಯೋಗಂಗೊ ಆವ್ತಾ ಇದ್ದು.
    ಸಾಸಮೆ ಇದ್ದರೆ ಮತ್ತೆ ಊಟಕ್ಕೆ ಬೇರೆ ಎಂತದೂ ಬೇಡ.
    ಪಟ ಸಮೇತ ಮಾಡುತ್ತ ವಿಧಾನ ಕೊಟ್ಟದು ಲಾಯಿಕ ಆತು

  4. ಉದೀಯಪ್ಪಗ ಮಾವಿನ ಹಣ್ಣು ಹೆಕ್ಕಿಗೊಂಡು ಈಗ ಬತ್ತೆ ಹೇದು ಹೋದ ಪೆಂಗಣ್ಣ ಇದುವರೆಗೆ ಬಯಿಂದನಿಲ್ಲೆ. ಅವನ ಕಾವದು, ಬಂದ ಮೇಲೆ ಅವ ಕೊಟ್ಟ ಹಣ್ಣಿಂದ ಸಾಸಮೆ ಮಾಡೆಕ್ಕಟ್ಟೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×