ಮಾವಿನ ಹಣ್ಣಿನ ಜ್ಯೂಸ್ ಸಿರಪ್

April 8, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾವಿನ ಹಣ್ಣಿನ ಜ್ಯೂಸ್ ಸಿರಪ್

ಬೇಕಪ್ಪ ಸಾಮಾನುಗೊ:

  • 80-100 ಸಾಧಾರಣ ಗಾತ್ರದ ಮಾವಿನಹಣ್ಣು(ಕಾಟು ಮಾವಿನ ಹಣ್ಣು ಒಳ್ಳೆದು)
  • 15-20 ಕಪ್(ಕುಡ್ತೆ) ಸಕ್ಕರೆ
  • 5 ಕಪ್(ಕುಡ್ತೆ) ನೀರು

ಮಾಡುವ ಕ್ರಮ:

ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ.

ಮಾವಿನ ಹಣ್ಣಿನ ಚೋಲಿಯನ್ನೂ, ಗೊರಟನ್ನೂ ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ.

ಇದರ ಮಿಕ್ಸಿಗೆ ಹಾಕಿ ರೆಜ್ಜ ಹೊತ್ತು ತಿರುಗ್ಸಿ.

ಒಂದು ಪಾತ್ರಲ್ಲಿ ಸಾಧಾರಣ 4-5 ಕುಡ್ತೆ ನೀರುದೆ, ಸಕ್ಕರೆದೆ ಹಾಕಿ ತೊಳಸಿ ಸಕ್ಕರೆ ಪಾಕ ಮಾಡಿ. (ಸಕ್ಕರೆ ಪಾಕ ಆತಾ ಹೇಳಿ ನೋಡುಲೆ, ಕೋಲು ಬೆರಳಿನ ಕೊಡಿಯ ಜಾಗ್ರತೆಲಿ ಸಕ್ಕರೆ ಪಾಕಕ್ಕೆ ಅದ್ದಿ, ಅದರ ಹೆಬ್ಬಟೆ ಬೆರಳಿಲ್ಲಿ ಮುಟ್ಟಿ ಬಿಡಿ. ಅಸ್ಟೊತ್ತಿಂಗೆ ನೂಲಿನ ಹಾಂಗೆ ಬಂದರೆ ಸಕ್ಕರೆ ಪಾಕ ಆಯಿದು ಹೇಳಿ ಲೆಕ್ಕ.) 
ಇದಕ್ಕೆ ಮಾವಿನ ಹಣ್ಣಿನ ಎಸರಿನ ಹಾಕಿ, ತೊಳಸಿ, ಕೊದುಶಿ, ಕಿಚ್ಚಿನ ನಂದ್ಸಿ.

ಪೂರ್ತಿ ತಣುದ ಮೇಲೆ ಇದರ ಲಾಯಿಕಲಿ ತೊಳಸಿ, ಕುಪ್ಪಿಗೆ ತುಂಬ್ಸಿ ಮಡುಗಿ. ಫ್ರಿಜ್ಜಿಲ್ಲಿ ಮಡುಗಿದರೆ 6 ತಿಂಗಳಾದರೂ ಹಾಳಾವುತ್ತಿಲ್ಲೆ.

ಜ್ಯೂಸ್ ಮಾಡ್ಲೆ, ಈ ಸಿರಪ್ಪಿನ ಒಂದು ಪಾತ್ರಲ್ಲಿ ಹಾಕಿ ಅದಕ್ಕೆ 3 ಪಟ್ಟು ನೀರು ಹಾಕಿ ತೊಳಸಿ. ಐಸ್ ತುಂಡು ಬೇಕಾದರೆ ಹಾಕಿ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಶ್ರೀಅಕ್ಕ°ಅನು ಉಡುಪುಮೂಲೆಡಾಮಹೇಶಣ್ಣಹಳೆಮನೆ ಅಣ್ಣಮಾಲಕ್ಕ°ಜಯಶ್ರೀ ನೀರಮೂಲೆಚೂರಿಬೈಲು ದೀಪಕ್ಕದೊಡ್ಡಮಾವ°ಅನುಶ್ರೀ ಬಂಡಾಡಿಡೈಮಂಡು ಭಾವಸರ್ಪಮಲೆ ಮಾವ°ಉಡುಪುಮೂಲೆ ಅಪ್ಪಚ್ಚಿಬಂಡಾಡಿ ಅಜ್ಜಿವಿದ್ವಾನಣ್ಣಪ್ರಕಾಶಪ್ಪಚ್ಚಿಅಡ್ಕತ್ತಿಮಾರುಮಾವ°ಅಕ್ಷರ°ಬೊಳುಂಬು ಮಾವ°ಜಯಗೌರಿ ಅಕ್ಕ°ಮುಳಿಯ ಭಾವಪುಟ್ಟಬಾವ°ಕೇಜಿಮಾವ°ವಿನಯ ಶಂಕರ, ಚೆಕ್ಕೆಮನೆಕಾವಿನಮೂಲೆ ಮಾಣಿವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ