ಮಾವಿನ ಹಣ್ಣಿನ ಮೆಣಸುಕಾಯಿ

May 28, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾವಿನ ಹಣ್ಣಿನ ಮೆಣಸುಕಾಯಿ

ಬೇಕಪ್ಪ ಸಾಮಾನುಗೊ:

 • 10-12 ಕಾಟು ಮಾವಿನ ಹಣ್ಣು
 • 2-3 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ
 • ರುಚಿಗೆ ತಕ್ಕಸ್ಟು ಉಪ್ಪು
 • 3-4 ಹಸಿಮೆಣಸು
 • 2 ಕಪ್(ಕುಡ್ತೆ) ಕಾಯಿ ತುರಿ
 • 3-4 ಒಣಕ್ಕು ಮೆಣಸು
 • 1.5 ಚಮ್ಚೆ ಉದ್ದಿನ ಬೇಳೆ
 • 1.5 ಚಮ್ಚೆ ಕಡ್ಲೆ ಬೇಳೆ
 • 1/4 ಚಮ್ಚೆ ಮೆಂತೆ
 • 3-3.5 ಚಮ್ಚೆ ಎಳ್ಳು
 • ಚಿಟಿಕೆ ಇಂಗು
 • ಚಿಟಿಕೆ ಅರುಶಿನ ಹೊಡಿ
 • 1 ಚಮ್ಚೆ ಸಾಸಮೆ
 • 1-2 ಮುರುದ ಒಣಕ್ಕು ಮೆಣಸು
 • 12-15 ಬೇನ್ಸೊಪ್ಪು (ಅರೆವಾಶಿ ಮಸಾಲೆಗೆ, ಅರೆವಾಶಿ ಒಗ್ಗರಣೆಗೆ)
 • 2  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. ಹಸಿಮೆಣಸಿನ ಉದ್ದಕೆ ಸಿಗುದು ಮಡುಗಿ.

1/2 ಕುಡ್ತೆ ನೀರಿನ ಮಾವಿನ ಹಣ್ಣಿನ ಚೋಲಿಯ ಪಾತ್ರಕ್ಕೆ ಹಾಕಿ, ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಗೊರಟಿನ ಪಾತ್ರಕ್ಕೆ ಹಾಕಿ.
ಗೊರಟನ್ನೂ ಹದಕೆ ಪುರುಂಚಿ,ಅದಕ್ಕೆ ಅರುಶಿನ ಹೊಡಿ, ಬೆಲ್ಲ, ಉಪ್ಪು, 2 ಕುಡ್ತೆ ನೀರು ಹಾಕಿ ಬೇಶಿ.

ಒಂದು ಬಾಣಲೆಲಿ ಎಳ್ಳಿನ ಹಾಕಿ ಪರಿಮ್ಮಳ ಬಪ್ಪನ್ನಾರ ಅಥವಾ ಎಳ್ಳು ಹೊಟ್ಟುವನ್ನಾರ ಹದ ಕಿಚ್ಚಿಲ್ಲಿ ಹೊರುದು ತೆಗದು ಮಡುಗಿ.
ಅದೇ ಬಾಣಲೆಗೆ ಒಣಕ್ಕು ಮೆಣಸು, ಉದ್ದಿನ ಬೇಳೆ, ಕಡ್ಲೆ ಬೇಳೆ, ಮೆಂತೆ, 1 ಸಕ್ಕಣ(ಚಮ್ಚೆ) ಎಣ್ಣೆ ಹಾಕಿ, ಹದ ಕಿಚ್ಚಿಲ್ಲಿ ಪರಿಮ್ಮಳ ಬಪ್ಪನ್ನಾರ ಹೊರಿರಿ.
ಅದಕ್ಕೆ ಇಂಗು, ಅರುಶಿನ ಹೊಡಿ, 6-8 ಬೇನ್ಸೊಪ್ಪು ಹಾಕಿ ಸಣ್ಣ ಕಿಚ್ಚಿಲ್ಲಿ ಒಂದು ನಿಮಿಷ ಹೊರಿರಿ.

ಕಾಯಿ, ಹೊರುದು ಮಡುಗಿದ ಮಸಾಲೆಯ ಬೇಕಾದಸ್ಟು ನೀರು ಹಾಕಿ ಕಡೆರಿ.
ಕಾಯಿ ಸಾಧಾರಣ ನೊಂಪಪ್ಪಗ, ಹೊರುದು ಮಡುಗಿದ ಎಳ್ಳು ಹಾಕಿ ನೊಂಪಿಂಗೆ ಕಡೆರಿ.
ಇದರ ಬೇಶಿ ಮಡುಗಿದ ಮಾವಿನ ಹಣ್ಣಿನ ಪಾತ್ರಕ್ಕೆ ಹಾಕಿ, ಬೇಕಾದಸ್ಟು, ನೀರು, ಉಪ್ಪು, (ಬೆಲ್ಲ) ಹಾಕಿ ಕೊದುಶಿ. ಸಣ್ಣ ಕಿಚ್ಚಿಲ್ಲಿ 5 ನಿಮಿಷ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಮೆಣಸುಕಾಯಿಗೆ ಹಾಕಿ ತೊಳಸಿ.
ಇದು ಅಶನ, ದೋಸೆ, ಇಡ್ಲಿ, ಇತ್ಯಾದಿಗಳ ಒಟ್ಟಿಂಗೆ ಹಾಕಿ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಡಾಮಹೇಶಣ್ಣಪೆಂಗಣ್ಣ°ದೇವಸ್ಯ ಮಾಣಿಉಡುಪುಮೂಲೆ ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆಕೆದೂರು ಡಾಕ್ಟ್ರುಬಾವ°ಪಟಿಕಲ್ಲಪ್ಪಚ್ಚಿಅನಿತಾ ನರೇಶ್, ಮಂಚಿಪುತ್ತೂರಿನ ಪುಟ್ಟಕ್ಕಜಯಗೌರಿ ಅಕ್ಕ°ಪೆರ್ಲದಣ್ಣಶಾಂತತ್ತೆಅಕ್ಷರ°ಶ್ಯಾಮಣ್ಣಕೊಳಚ್ಚಿಪ್ಪು ಬಾವಶರ್ಮಪ್ಪಚ್ಚಿಅಡ್ಕತ್ತಿಮಾರುಮಾವ°ವೇಣೂರಣ್ಣವೇಣಿಯಕ್ಕ°ಶ್ರೀಅಕ್ಕ°ಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿದೊಡ್ಡಮಾವ°ದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ