ಮೆಣಸಿನ ಸೆಂಡಗೆ (ವಡೆ)

February 21, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೆಣಸಿನ ಸೆಂಡಗೆ (ವಡೆ)

ಬೇಕಪ್ಪ ಸಾಮಾನುಗೊ:

 • 12 ಕಪ್(ಕುಡ್ತೆ) ಹಸಿಮೆಣಸು
 • 2 ಕಪ್(ಕುಡ್ತೆ) ಉದ್ದಿನ ಬೇಳೆ
 • 5 ಕಪ್(ಕುಡ್ತೆ) ಹೊದಳು
 • ರುಚಿಗೆ ತಕ್ಕಸ್ಟು ಉಪ್ಪು

ಮಾಡುವ ಕ್ರಮ:

ಉದ್ದಿನ ಬೇಳೆಯ 3-4 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ, ಅದರ ಲಾಯಿಕಲಿ 2-3 ಸರ್ತಿ ನೀರಿಲ್ಲಿ ತೊಳದು, ಗ್ರೈಂಡರಿಲ್ಲಿ ರೆಜ್ಜ ನೀರು ಹಾಕಿ ನೊಂಪಿಂಗೆ ಕಡೆರಿ.

ಹಸಿಮೆಣಸಿನ ತೊಟ್ಟು ತೆಗದು, ತೊಳದು ಮಡುಗಿ.

ಈ ಹಸಿಮೆಣಸಿನ ನೀರು ಹಾಕದ್ದೆ ಮಿಕ್ಸಿಲಿ ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ನೊಂಪಿಂಗೆ ಕಡೆರಿ.

ಇದರ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಉಪ್ಪುದೆ, ಕಡದ ಉದ್ದಿನ ಹಿಟ್ಟುದೆ ಹಾಕಿ ಲಾಯಿಕಲಿ ತೊಳಸಿ. ಅದಕ್ಕೆ ಹೊದಳುದೆ ಹಾಕಿ ಬೆರುಸಿ.


ರೆಜ್ಜ ರೆಜ್ಜವೆ ಹಿಟ್ಟಿನ ತೆಗದು ಒಂದು ಪ್ಲಾಸ್ಟೀಕು ಶೀಟ್ / ಬಾಳೆ ಎಲೆ / ಮುಂಡಿ ಎಲೆಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಾಧಾರಣ 1/4  ಇಂಚು ದಪ್ಪಕೆ ವಡೆಯ ಆಕಾರಲ್ಲಿ  ಹಾಕಿ.

ಇದರ 5-6 ದಿನ ಬೆಶಿಲಿಲ್ಲಿ ಒಣಗ್ಸಿ ಒಂದು ಕರಡಿಗೆಲಿ ಹಾಕಿ ಮಡುಗಿ.

ಇದರ ಎಣ್ಣೆಲಿ ಹೊರುದು ಊಟಕ್ಕೆ ಬಳುಸಿ. ಇದು ಮೇಲಾರ, ತಂಬ್ಳಿ, ಮಜ್ಜಿಗೆ, ಮೊಸರು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 80 ಮೆಣಸಿನ ವಡೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಜಯಶ್ರೀ ನೀರಮೂಲೆ
  jayashree.neeramoole

  ಹೊದಳು ಸೇರುಸಿ ಮಾಡುವ ಕ್ರಮ ಗೊಂತಿತ್ತಿಲ್ಲೇ… ಪ್ರಯೋಗ ಮಾಡೆಕ್ಕು…

  [Reply]

  VA:F [1.9.22_1171]
  Rating: 0 (from 0 votes)
 2. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಅಕ್ಕೋ ಈ ಹೊದಳು ಹಾಕುತ್ಸು ಎಂತಕೇದು ನವಗೆ ಗೊಂತಾತಿಲ್ಲೆನ್ನೇ…..

  [Reply]

  ವೇಣಿಯಕ್ಕ°

  ವೇಣಿಯಕ್ಕ° Reply:

  ಹೊದಳು ಸೇರ್ಸುದು ಹೆಚ್ಚು ಮೃದು ಅಪ್ಪಲೆ.

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಓ ಅದಕ್ಕೋ … ಅಕ್ಕಂಗೆ ಧನ್ಯವಾದಂಗೊ…

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಹು……….ಉಹ್ಹ್ಹ್ಹ್ಹುಉಉ….. ಅಕ್ಕೋ…ಖಾರಾ….. ಮೆಣಸೂಊಊಊ

  ಅಂದರೂ ಮೇಲಾರದೊಟ್ಟಿಂಗೆ ಲಾಯಕ ಆವ್ತು. ಶೇ.ಪು ಒಟ್ಟಿಂಗೆ ಮಾತಾಡಿಗೊಂಡು ಅಂತೇ ಕಾಪಿಯೊಟ್ಟಿಂಗೆ ಆಗಪ್ಪೊ.!

  ಅಂದರೂ ಮೆಣಸಿನ ವಡೆ ಇಲ್ಲದ್ದೆ ಆಗಪ್ಪ. ಶುದ್ದಿಗೊಂದು ಒಪ್ಪ. ಚಂದಕ್ಕೆ ಕೊರದು ಕೊಚ್ಚಿ ಕಡದು ಬೈಲಿಲಿ ವಣಗಿಸಿ ಎಣ್ಣೆಲಿ ಹೊರುದು ಮಡಿಗಿದ್ದಕ್ಕೊಂದು ಧನ್ಯವಾದ ಹೇಳಿತ್ತು – ‘ಚೆನ್ನೈವಾಣಿ’

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಏ ಭಾವಾ ಅಷ್ಟೆಲ್ಲಾ ಊಊಊಊ ಹೇಳುದೆಂತ ಅಗತ್ಯ ಇಲ್ಲೆ ಉಪ್ಪುದೇ ಉದ್ದುದೇ ಸೇರುಸಿಯಪ್ಪಗ ಕಾರ ಹನಿಯ ತಗ್ಗುತ್ತು ಆತೋ….

  [Reply]

  VN:F [1.9.22_1171]
  Rating: +1 (from 1 vote)
 4. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಎನಗೆ ಖಾರ ರಜ ದೂರವೇ ಆದರೂ, ವೇಣಿ ಅಕ್ಕ ಮಾಡಿದ ಈ ಮೆಣಸಿನ ಸೆಂಡಗೆ ನೋಡುವಾಗ ಬಾಯಿಲಿ ನೀರು ಬತ್ತಾ ಇದ್ದದ. ಮಾಡುವ ಕ್ರಮ ಹೇಳಿಕೊಟ್ಟದಕ್ಕೆ ಧನ್ಯವಾದಂಗ ಅಕ್ಕ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಶಾ...ರೀಮಂಗ್ಳೂರ ಮಾಣಿನೆಗೆಗಾರ°ವಸಂತರಾಜ್ ಹಳೆಮನೆರಾಜಣ್ಣದೊಡ್ಡಮಾವ°ವೆಂಕಟ್ ಕೋಟೂರುಚೆನ್ನಬೆಟ್ಟಣ್ಣಜಯಗೌರಿ ಅಕ್ಕ°ಶ್ರೀಅಕ್ಕ°ಅನುಶ್ರೀ ಬಂಡಾಡಿಉಡುಪುಮೂಲೆ ಅಪ್ಪಚ್ಚಿಯೇನಂಕೂಡ್ಳು ಅಣ್ಣಮಾಲಕ್ಕ°ಶಾಂತತ್ತೆvreddhiಬಂಡಾಡಿ ಅಜ್ಜಿವೇಣೂರಣ್ಣಜಯಶ್ರೀ ನೀರಮೂಲೆಗಣೇಶ ಮಾವ°ಪುಟ್ಟಬಾವ°ಶ್ಯಾಮಣ್ಣನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ