ಮುಳ್ಳು ಸೌತೆಕಾಯಿ ದೋಸೆ

ಮುಳ್ಳು ಸೌತೆಕಾಯಿ ದೋಸೆ

ಬೇಕಪ್ಪ ಸಾಮಾನುಗೊ:

  • 2 ಕಪ್(ಕುಡ್ತೆ) ತುಂಡು ಮಾಡಿದ ಮುಳ್ಳು ಸೌತೆ ಬಾಗ
  • 1 ಕಪ್(ಕುಡ್ತೆ) ಬೆಣ್ತಕ್ಕಿ
  • 1/4 ಕಪ್(ಕುಡ್ತೆ) ಕಾಯಿ ತುರಿ (ಬೇಕಾದರೆ ಮಾತ್ರ)
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ / ತುಪ್ಪ

ಮಾಡುವ ಕ್ರಮ:

ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಮುಳ್ಳು ಸೌತೆಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು((ಎಳತ್ತಾದರೆ ಚೋಲಿ, ತಿರುಳು ತೆಗೆಯೆಕ್ಕು ಹೇಳಿ ಇಲ್ಲೆ)),  ಸಣ್ಣಕೆ ತುಂಡು ಮಾಡಿ ಅಥವಾ ತುರುದು ಮಡಿಕ್ಕೊಳ್ಳಿ. ಅಕ್ಕಿ, ಉಪ್ಪು, ಕಾಯಿ ತುರಿ ಮುಳ್ಳು ಸೌತೆಯ ತುಂಡಿನ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ ನೊಂಪಿಂಗೆ ಕಡೆರಿ(ನೀರು ಬೇಕಾದರೆ ಮಾತ್ರ ಹಾಕಿ.) ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಕಾವಲಿಗೆಯ ಬೆಶಿ ಮಾಡಿ, ಒಂದು ಸೌಟು ಹಿಟ್ಟು ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಎರದು ಮುಚ್ಚಲು ಮುಚ್ಚಿ 1-2 ನಿಮಿಷ ಬೇಶಿ.
ಇದಕ್ಕೆ ಎಣ್ಣೆ/ತುಪ್ಪ ಹಾಕಿ, ಕವುಂಚಿ ಹಾಕಿ 1-2 ನಿಮಿಷ ಬೇಶಿ.

ಬೆಶಿ ಬೆಶಿ ದೋಸೆಯ ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 6-8 ದೋಸೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *