ಮುಳ್ಳು ಸೌತೆಕಾಯಿ ಕೊಟ್ಟಿಗೆ

ಮುಳ್ಳು ಸೌತೆಕಾಯಿ ಕೊಟ್ಟಿಗೆ

ಬೇಕಪ್ಪ ಸಾಮಾನುಗೊ:

 • 8-10 ಕಪ್(ಕುಡ್ತೆ) ಕೊಚ್ಚಿದ ಮುಳ್ಳು ಸೌತೆ (ಮುಳ್ಳು ಸೌತೆಯ ಬದಲು, ಸೊರೆಕ್ಕಾಯಿ, ಕುಂಬ್ಳಕಾಯಿ ಅಥವಾ ಸೌತೆಕಾಯಿಯ ಉಪಯೋಗ್ಸುಲೆ ಅಕ್ಕು.)
 • 2 ಕಪ್(ಕುಡ್ತೆ) ಬೆಣ್ತಕ್ಕಿ
 • 3 ಚಮ್ಚೆ ಕಾಯಿ ತುರಿ
 • 1-2 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ)
 • ರುಚಿಗೆ ತಕ್ಕಸ್ಟು ಉಪ್ಪು
 • 15-20 ಬಾಳೆ ಎಲೆ

ಮಾಡುವ ಕ್ರಮ:

ಅಕ್ಕಿಯ ನೀರಿಲ್ಲಿ 4-5 ಘಂಟೆ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಅಕ್ಕಿಯ ರೆಜ್ಜವೆ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ತರಿ ತರಿ ಆಗಿ ಕಡೆರಿ. ಕಡವಗ ಉಪ್ಪು ಹಾಕಿ.

ಬಾಳೆ ಎಲೆಯ ಕಿಚ್ಚಿಲ್ಲಿ ಬಾಡ್ಸಿ, ಲಾಯಿಕಲಿ ಉದ್ದಿ ಮಡುಗಿ. ಮುಳ್ಳು ಸೌತೆಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು, ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.

ಕಡದ ಅಕ್ಕಿ ಹಿಟ್ಟಿಂಗೆ, ಬೆಣ್ಣೆ  ಹಾಕಿ ತೊಳಸಿ. ಅದಕ್ಕೆ ಕೊಚ್ಚಿದ ಮುಳ್ಳು ಸೌತೆಯ ಹಾಕಿ ತೊಳಸಿ.

ರೆಜ್ಜ ಹಿಟ್ಟಿನ ತೆಕ್ಕೊಂಡು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಳೆ ಎಲೆಲಿ ಹಾಕಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಳೆ ಎಲೆಯ ಮಡ್ಸಿ.


ಪುನಃ ಬಾಳೆ ಎಲೆಯ ಎರಡು ಕರೆಯನ್ನು ಮಡ್ಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕವುಂಚಿ ಒಂದು ತಟ್ಟೆಲಿ ಮಡುಗಿ.

ಅಟ್ಟಿನಳಗೆ/ಪ್ರೆಶರ್ ಕುಕ್ಕರ್ನ ಅಡಿಲಿ ರೆಜ್ಜ ನೀರು ಹಾಕಿ, ಸ್ಟಾಂಡ್ ಮಡುಗಿ ಅದರ ಮೇಗೆ ಕೊಟ್ಟಿಗೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕವುಂಚಿ ಮಡುಗಿ.
ಮುಚ್ಚಲು ಮುಚ್ಚಿ, 15-20 ನಿಮಿಷ ದೊಡ್ಡ ಕಿಚ್ಚಿಲ್ಲಿ ಬೇಶಿ, ಮತ್ತೆ 15-20 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.
(ಪ್ರೆಶರ್ ಕುಕ್ಕರಿಂಗೆ, ವೈಟ್ ಮಡುಗುದು ಬೇಡ, ವೈಟ್ ಸ್ಟಾಂಡಿಂಗೆ ಒಂದು ಗ್ಲಾಸಿನ ಕವುಂಚಿ ಮಡುಗಿರೆ ಸಾಕು.)

ಬೆಶಿ ಬೆಶಿ ತುಪ್ಪ ಹಾಕಿ ಚಟ್ನಿ ಅಥವಾ ಸಾಂಬರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 15-20 ಕೊಟ್ಟಿಗೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

8 Responses

 1. Raveesha says:

  Udiyappagana kaapige super thindi,habeli benda thindi tumba uttama,madyannakke enthadu special

 2. ಚೆನ್ನೈ ಭಾವ° says:

  ಕೊಟ್ಟಿಗೆ ಪಷ್ಟಾಯ್ದು ಹೇದ° ಭಾವ°.

 3. ಬೆಟ್ಟುಕಜೆ ಮಾಣಿ says:

  ರೆಡಿ ಇದ್ದಾ? ಸುಮಾರು ಸಮಯ ಆತು ತಿನ್ನದ್ದೆ..ಬಂದರೆ ಸಿಕ್ಕುಗ್ಗೋ?

  • ರೆಡಿ ಇದ್ದರೆ ನೀನು ಬಪ್ಪಗ ಒಳಿಯಾ ಬೆಟ್ಟು ಬಾವಾ..
   ಬೋಚ ಬಾವ ಉದಿಯಪ್ಪಗಳೇ ಅತ್ಲಾಗಿ ಹೋಯಿದಾ..

   • ಬೋಸ ಬಾವ says:

    ಹೂ..!!
    ಭಾರಿ ಲಾಯಕೆ ಇದ್ದು..!!
    ರಜಾ ಒಳುದ್ದು.. ಮಡುಸಿದ ಬಾಳೆ.. 😉
    ಒಳದಿಕೆ ಇಪ್ಪದು ಪೂರ ಕಾಲಿ.. 😛

 4. ಸಂದೇಶ್ says:

  ಲಾಯ್ಕಾಯಿದು ಕೊಟ್ಟಿಗೆ. ಸಚಿತ್ರ ವಿವರಣೆ ಕೊಟ್ಟಿದಿ. ಧನ್ಯವಾದಂಗೊ

 5. ವಿದ್ಯಾ ರವಿಶಂಕರ್ says:

  ಸಖತ್ ರುಚಿ ಆಯಿದು ವೇಣಿ.

 6. geekay yeskay says:

  ಭ್ಹ್ಹಾರೀ ಲಾಯ್ಕ ಆಯ್ದು ಮಿನಿಯಾ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *