ಮುಳ್ಳುಸೌತೆಕಾಯಿ ಪಾಯಸ

November 19, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಳ್ಳುಸೌತೆಕಾಯಿ ಪಾಯಸ

ಬೇಕಪ್ಪ ಸಾಮಾನುಗೊ:

 • 2-3 ಕಪ್(ಕುಡ್ತೆ) ಕೊಚ್ಚಿದ ಮುಳ್ಳುಸೌತೆ
 • 1.5-2 ಕಪ್(ಕುಡ್ತೆ) ಬೆಲ್ಲ
 • 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು
 • 3/4 – 1 ಚಮ್ಚೆ ಗಟ್ಟಿ ಬೆಣ್ತಕ್ಕಿ ಹಿಟ್ಟು / ಅಕ್ಕಿ ಹೊಡಿ
 • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
 • 2-3 ಏಲಕ್ಕಿ

ಮಾಡುವ ಕ್ರಮ:

ಮುಳ್ಳುಸೌತೆಕಾಯಿಯ ಚೋಲಿ, ಒಳಾಣ ತಿರುಳು, ಬಿತ್ತು ಎಲ್ಲ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ರೆಜ್ಜ ಚೆಟ್ಟೆಗೆ ತುಂಡು ಮಾಡಿ.

ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಹಿಂಡಿದ ಪುಂಟೆಗೆ 1 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
ಈ ನೀರು ಕಾಯಿಹಾಲಿನ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಕೊಚ್ಚಿದ ಮುಳ್ಳುಸೌತೆದೆ ಹಾಕಿ ಬೇಶಿ.
ಬಾಗ ಬೆಂದಪ್ಪಗ, ಅದಕ್ಕೆ ಬೆಲ್ಲ,ಚಿಟಿಕೆ ಉಪ್ಪು ಹಾಕಿ ಕೊದುಶಿ, ಬೆಲ್ಲ ಕರಗುವನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ.

ಒಂದು ಪಾತ್ರಲ್ಲಿ 1/4 ಕುಡ್ತೆ ನೀರು/ನೀರು ಕಾಯಿಹಾಲು ಹಾಕಿ, ಅದಕ್ಕೆ ಅಕ್ಕಿ ಹಿಟ್ಟು/ಹೊಡಿ ಹಾಕಿ ಕರಡಿ. ಅದರ ಪಾಯಸಕ್ಕೆ ಹಾಕಿ ಕೊದುಶಿ.
ಕಾಯಿ ಹಾಲನ್ನೂ ಹಾಕಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಆಹಾ..ಏಲಕ್ಕಿ ಘ೦ ಹೇಳಿತ್ತೊ೦ದರಿ. ಬಾಗ ಇಪ್ಪ ಪಾಯ್ಸ ಇದೊ೦ದೇ ಅಲ್ಲದೋ?

  [Reply]

  VA:F [1.9.22_1171]
  Rating: +4 (from 4 votes)
 2. ವೇಣಿಯಕ್ಕ°

  ಃ) ಅಪ್ಪು ಮುಳ್ಳುಸೌತೆ ಪಾಯಸ ರೆಜ್ಜ ವಿಶೇಷ. ಬಾಗ ಇಪ್ಪ ಪಾಯಸಂಗೊ ಕಮ್ಮಿ…. ಸೊರೆಕ್ಕಾಯಿ, ದಾರಳೆಕಾಯಿ, ಖರಬೂಜ, ಹಲಸಿನಕಾಯಿ ಬೇಳೆ, (ಹಾಲಿಟ್ಟು/ತೆಳ್ಳವು) ಇತ್ಯಾದಿ ಬಿಟ್ಟರೆ ಹೆಚ್ಚಿಂದೆಲ್ಲಾ ಬಾಗ ಇಲ್ಲದ್ದ ಪಾಯಸಂಗಳೆ…

  [Reply]

  VN:F [1.9.22_1171]
  Rating: +2 (from 2 votes)
 3. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಪಾಯಸ ರೈಸಿದ ಹಾಂಗೆ ಕಾಣ್ತು..ತಣ್ಣಂಗೆ ಫ್ರಿಡ್ಜ್ ಲಿ ಮಡಗಿ ಒಂದರಿ ತಿನ್ನೇಕ್ಕಾತು..

  [Reply]

  VN:F [1.9.22_1171]
  Rating: 0 (from 0 votes)
 4. satheesh kongot

  veni akka . kene gendedhudhe paayasa aavutthu. itthichege obbara maneli maaditthau. pastaauthu.

  [Reply]

  VA:F [1.9.22_1171]
  Rating: 0 (from 0 votes)
 5. ಲಕ್ಷ್ಮಿ ಜಿ.ಪ್ರಸಾದ

  ವೇಣಿ ಅಕ್ಕನ ಪಯಸ ಇಲ್ಲಿಗೆ ಘಂ ಹೇಳಿ ಪರಿಮಳ ಬತ್ತಾ ಇದ್ದು
  ಆನುದೇ ಮಾಡಿ ತಿನ್ನಕ್ಕು ಹೇಳಿ ಇದ್ದೆ

  ಹೇಳಿಕೊಟ್ಟದಕ್ಕೆ ಧನ್ಯವಾದಂಗ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°ಸುವರ್ಣಿನೀ ಕೊಣಲೆಬಂಡಾಡಿ ಅಜ್ಜಿಕಾವಿನಮೂಲೆ ಮಾಣಿವಸಂತರಾಜ್ ಹಳೆಮನೆಕೇಜಿಮಾವ°ದೊಡ್ಡಭಾವಜಯಗೌರಿ ಅಕ್ಕ°ಪುಟ್ಟಬಾವ°ಶರ್ಮಪ್ಪಚ್ಚಿvreddhiಪುತ್ತೂರುಬಾವಶ್ರೀಅಕ್ಕ°ಉಡುಪುಮೂಲೆ ಅಪ್ಪಚ್ಚಿಶ್ಯಾಮಣ್ಣಅಡ್ಕತ್ತಿಮಾರುಮಾವ°ನೀರ್ಕಜೆ ಮಹೇಶಒಪ್ಪಕ್ಕವಿದ್ವಾನಣ್ಣಪ್ರಕಾಶಪ್ಪಚ್ಚಿವೆಂಕಟ್ ಕೋಟೂರುಮುಳಿಯ ಭಾವಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ