ನೀರು ಮಾವಿನಕಾಯಿ(ಬೇಶಿದ) ಗೊಜ್ಜಿ

September 24, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನೀರು ಮಾವಿನಕಾಯಿ(ಬೇಶಿದ) ಗೊಜ್ಜಿ

ಬೇಕಪ್ಪ ಸಾಮಾನುಗೊ:

  • 8-10 ನೀರು ಮಾವಿನಕಾಯಿ
  • 1-2 ಹಸಿಮೆಣಸು
  • 2-3 ದೊಡ್ಡ ನಿಂಬೆ ಗಾತ್ರದ ಬೆಲ್ಲ
  • ಚಿಟಿಕೆ ಅರುಶಿನ ಹೊಡಿ
  • 1/2 ಚಮ್ಚೆ ಮೆಣಸಿನ ಹೊಡಿ
  • 1 ಚಮ್ಚೆ ಸಾರಿನ ಹೊಡಿ
  • 1/2 ಚಮ್ಚೆ ಜೀರಿಗೆ
  • 1 ಚಮ್ಚೆ ಸಾಸಮೆ
  • 5-6 ಬೇನ್ಸೊಪ್ಪು
  • 3-4 ಬೆಳ್ಳುಳ್ಳಿ ಎಸಳು
  • ದೊಡ್ಡ ಚಿಟಿಕೆ ಇಂಗು
  • 2  ಚಮ್ಚೆ ಎಣ್ಣೆ

ಮಾಡುವ ಕ್ರಮ:
ನೀರು ಮಾವಿನಕಾಯಿಯ ತೊಳದು, ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ರೆಜ್ಜ ಹೊತ್ತು(ಹೆಚ್ಚಿಗೆ ಉಪ್ಪು ಬಿಡುವನ್ನಾರ) ಬೊದುಳುಲೆ ಹಾಕಿ ತೆಗೆರಿ.

ನೀರು ಮಾವಿನಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊರೆರಿ. ಹಸಿಮೆಣಸಿನ ಸಿಗುದು ಮಡುಗಿ.

ಕೊರದ ನೀರು ಮಾವಿನಕಾಯಿಯ, ಹಸಿಮೆಣಸಿನ ಪ್ರೆಶರ್ ಕುಕ್ಕರಿಂಗೆ ಹಾಕಿ.
ಬೆಲ್ಲ, ಅರುಶಿನ ಹೊಡಿ, ಮೆಣಸಿನ ಹೊಡಿ, ಬೇಕಾದಸ್ಟು ನೀರು ಹಾಕಿ ಬೇಶಿ(2-3 ಸೀಟಿ).
ಕುಕ್ಕರಿನ ಪ್ರೆಶರ್ ಹೋದ ಮೇಲೆ, ಸಾರಿನ ಹೊಡಿ(ಉಪ್ಪು, ಬೆಲ್ಲ, ಹುಳಿ, ನೀರು ಬೇಕಾದರೆ ಹಾಕಿ), ತೊಳಸಿ, ಕೊದುಶಿ, ಗೊಜ್ಜಿಯ 5-10 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಹಾಕಿ, ಎಣ್ಣೆದೆ ಹಾಕಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.
ಇದಕ್ಕೆ ಸಾಸಮೆ, ಜೀರಿಗೆ, ಹಾಕಿ ಹೊರಿರಿ. ಅದು ಹೊಟ್ಟಿ ಅಪ್ಪಗ, ಅದಕ್ಕೆ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. ಸುಮನ ಭಟ್ ಸಂಕಹಿತ್ಲು.

    ಬಾಯಿಲಿ ನೀರು ಬತ್ತನ್ನೇ ಆ ಅಖೇರಿಯಾಣ ಫೊಟೋ ನೋಡುವಗ….
    ಪರಿಮಳ ಘಮ ಘಮ ಇಲ್ಲಿಗೇ ಬತ್ತು….

    [Reply]

    VA:F [1.9.22_1171]
    Rating: 0 (from 0 votes)
  2. ಬೊಳುಂಬು ಮಾವ°
    ಗೋಪಾಲ ಬೊಳುಂಬು

    ಶುದ್ದಿ ಓದುತ್ತಿದ್ದ ಹಾಂಗೇ ನಾಲಗೆಲಿ ನೀರು ಹರುದ್ದದು ನಿಜ. ಪಟಂಗಳುದೆ ಲಾಯಕಾಯಿದು. ಎಜಮಾಂತಿ ಹತ್ರೆ, ಗೊಜ್ಜಿ ಮಾಡ್ಳೆ ಹೇಳೆಕು.

    [Reply]

    ಪೆಂಗಣ್ಣ° Reply:

    ಮಾವಾ
    ಅಂಬಗ ನವಗೂ ರಜ್ಜ ಇರಳಿ..

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಡೈಮಂಡು ಭಾವಶಾ...ರೀನೆಗೆಗಾರ°ಪುತ್ತೂರುಬಾವಸರ್ಪಮಲೆ ಮಾವ°ಶರ್ಮಪ್ಪಚ್ಚಿಗೋಪಾಲಣ್ಣದೊಡ್ಡಭಾವಉಡುಪುಮೂಲೆ ಅಪ್ಪಚ್ಚಿವೇಣಿಯಕ್ಕ°ನೀರ್ಕಜೆ ಮಹೇಶಚೆನ್ನಬೆಟ್ಟಣ್ಣಮಾಷ್ಟ್ರುಮಾವ°ಬಂಡಾಡಿ ಅಜ್ಜಿಪೆರ್ಲದಣ್ಣಶೀಲಾಲಕ್ಷ್ಮೀ ಕಾಸರಗೋಡುಯೇನಂಕೂಡ್ಳು ಅಣ್ಣಪಟಿಕಲ್ಲಪ್ಪಚ್ಚಿಕಜೆವಸಂತ°ವಿಜಯತ್ತೆಜಯಶ್ರೀ ನೀರಮೂಲೆಎರುಂಬು ಅಪ್ಪಚ್ಚಿಪವನಜಮಾವವಸಂತರಾಜ್ ಹಳೆಮನೆವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ