ನೀರು ಮಾವಿನಕಾಯಿ ತಂಬ್ಳಿ

October 8, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನೀರು ಮಾವಿನಕಾಯಿ ತಂಬ್ಳಿ

ಬೇಕಪ್ಪ ಸಾಮಾನುಗೊ:

  • 3-4 ಸಾಧಾರಣ ಗಾತ್ರದ ನೀರು ಮಾವಿನಕಾಯಿ (ರೆಜ್ಜ ಮೆಸ್ತಂಗೆ ಇಪ್ಪದಾದರೆ ಒಳ್ಳೆದು)
  • 1.5 ಕಪ್(ಕುಡ್ತೆ) ಕಾಯಿತುರಿ
  • 1 ಹಸಿಮೆಣಸು
  • ರುಚಿಗೆ ತಕ್ಕಸ್ಟು ಉಪ್ಪು
  • 1.5 ಕಪ್(ಕುಡ್ತೆ) ಚಪ್ಪೆ ಮಜ್ಜಿಗೆ
  • 1 ಚಮ್ಚೆ ಸಾಸಮೆ
  • 1/4 ಚಮ್ಚೆ ಜೀರಿಗೆ
  • 1-2 ಮುರುದ ಒಣಕ್ಕು ಮೆಣಸು
  • 4-5 ಬೇನ್ಸೊಪ್ಪು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:
ನೀರು ಮಾವಿನಕಾಯಿಯ ತೊಳದು, ಕರೆಲಿ ಮಡುಗಿ. (ಉಪ್ಪು ಹೆಚ್ಚಿದ್ದರೆ, ಉಪ್ಪು ಬಿಡುವನ್ನಾರ ನೀರಿಲ್ಲಿ ಬೊದುಳುಲೆ ಹಾಕಿ ತೆಗೆರಿ)

ಮಾವಿನಕಾಯಿಯ ಲಾಯಿಕಲಿ ಪುರುಂಚಿ, ಎಸರು, ಚೋಲಿಯ ಮಿಕ್ಸಿ/ಗ್ರೈಂಡರಿಂಗೆ ಹಾಕಿ, ಕಾಯಿ, ಹಸಿಮೆಣಸನ್ನೂ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.
ನೀರು ಮಾವಿನಕಾಯಿ ಗೊರಟನ್ನೂ, ಕಡದ ಅರಪ್ಪನ್ನೂ ಒಂದು ಪಾತ್ರಕ್ಕೆ ಹಾಕಿ. ಇದಕ್ಕೆ ಮಜ್ಜಿಗೆ, ಉಪ್ಪು ಹಾಕಿ ತೊಳಸಿ.(ನೀರು ಬೇಕಾದರೆ ರೆಜ್ಜ ಹಾಕುಲಕ್ಕು)

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ,ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಂಬ್ಳಿಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ನೀರು ಮಾವಿನಕಾಯಿ ತಂಬ್ಳಿ, 10.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿದೊಡ್ಡಭಾವಅನುಶ್ರೀ ಬಂಡಾಡಿಜಯಗೌರಿ ಅಕ್ಕ°ಕಜೆವಸಂತ°ವಸಂತರಾಜ್ ಹಳೆಮನೆಕಾವಿನಮೂಲೆ ಮಾಣಿವಾಣಿ ಚಿಕ್ಕಮ್ಮಅಕ್ಷರ°ಪುತ್ತೂರಿನ ಪುಟ್ಟಕ್ಕವೇಣೂರಣ್ಣವಿಜಯತ್ತೆಮಂಗ್ಳೂರ ಮಾಣಿಶೀಲಾಲಕ್ಷ್ಮೀ ಕಾಸರಗೋಡುಯೇನಂಕೂಡ್ಳು ಅಣ್ಣದೀಪಿಕಾಮುಳಿಯ ಭಾವಬೋಸ ಬಾವಶ್ರೀಅಕ್ಕ°ಪಟಿಕಲ್ಲಪ್ಪಚ್ಚಿಶಾ...ರೀಜಯಶ್ರೀ ನೀರಮೂಲೆಡಾಗುಟ್ರಕ್ಕ°ಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ