ಪರೋಟ

August 17, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 47 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ,

ಇಷ್ಟು ದಿನ ಮಂತ್ರ, ಶ್ಲೋಕ ಹೇಳಿ ರಜ್ಜ ವಿವರಣೆ ಕೊಟ್ಟಿದೆ. ಇಂದು ರಜ್ಜ ಅಡಿಗೆ ವಿಷಯದ ಬಗ್ಗೆ ಹೇಳ್ತೆ.

ಆನು  ಬೆಂಗುಳೂರಿಂಗೆ ಹೋದಿಪ್ಪಗ ಕೆಲವು ಸರ್ತಿ ಪುರುಸೊತ್ತಿಪ್ಪಗ  ಆನು, ಅಜ್ಜಕಾನ ಬಾವ, ಬೀಸ್ರೋಡು ಮಾಣಿ, ಮಾಷ್ಟ್ರುಮಾವನ ಮಗ – ಎಲ್ಲೋರು ಸೇರಿ ಕೆಲವು ಸರ್ತಿ ಪರೋಟ ಮಾಡಿ ತಿಂಬ ಕ್ರಮ ಇದ್ದು..
ಆದರೆ ಸೌಮ್ಯಕ್ಕ, ಬಂಡಾಡಿ ಅಜ್ಜಿ, ಶ್ರೀ ಅಕ್ಕ, ದೀಪಕ್ಕ ಮಾಡಿದ ಹಾಂಗೆ ಆಗ..
ಆದರೂ ಅಡಿಗೆಲಿ  ಬೀಸ್ರೋಡು ಮಾಣಿ ಉಷಾರು..
ಎಂಗೋ ಅವಂಗೆ ಅಡಿಗೆ ಮಾಡ್ಲೆ ಸೇರಿಗೊಂಬದು  ಮಾತ್ರ..ಹೀಂಗೆ ಎಂಗೊ ಪರೋಟ ಮಾಡಿದ್ದದು ಹೇಂಗೆ ಹೇಳಿ ಬೈಲಿಲಿ ಹೇಳುವ ಹೇಳಿ ಕಂಡತ್ತು.

ಬೇಕಪ್ಪ  ಸಾಮಾನುಗ:

ಗೋಧಿ ಹೊಡಿ: ೪ ಕಪ್
ಮೈದಾ  ಹೊಡಿ:
೨ ಕಪ್
ಮೆಣಸಿನ ಹೊಡಿ:
ಅರ್ಧ ಚಮಚ
ತೆಂಗಿನೆಣ್ಣೆ
: ೨೫೦ಗ್ರಾಂ

ನೀರು: ೨೫೦ಮಿ.ಲೀ.
ಉಪ್ಪು
: ರುಚಿಗೆ ತಕ್ಕ ಹಾಂಗೆ.

ಮಾಡ್ತ ವಿಧಾನ:

ಗೋಧಿಹೊಡಿ ಮತ್ತೆ  ಮೈದಾ ಹೊಡಿಯ ಜೆರಡೆಲಿ ಸರೀ ಗಾಳ್ಸಿಗೊಂಡು ಅದರಒಟ್ಟು ಸೇರ್ಸಿ ಅಗಲ ಬಾಯಿ ಪಾತ್ರಕ್ಕೆ ಹಾಕಿ.
ರಜ್ಜ,ಎಣ್ಣೆ,ಮೆಣಸಿನ ಹೊಡಿ,ಉಪ್ಪು – ಎಲ್ಲವನ್ನೂ ರಜಾ ನೀರಿಲಿ ಗಟ್ಟಿಗೆ ಕಲಸೆಕ್ಕು.
ಮತ್ತೆ ಚಪಾತಿ ಉಂಡೆಯ ಹಾಂಗೆ ಉಂಡೆ ಮಾಡಿ ಮಡುಗೆಕ್ಕು.
ಮತ್ತೆ ಲಟ್ಟಣಿಗೆಗೆ, ಚಪಾತಿ ಮಣೆಗೆ ಲಾಯಿಕ ಎಣ್ಣೆ ಹಾಕಿ ಉದ್ದೆಕ್ಕು.
ಮತ್ತೆ ಹಿಟ್ಟಿನ ಉಂಡೆಯ ಲಟ್ಟುಸಲೆ  ಬಪ್ಪ ಹಾಂಗೆ ಎಣ್ಣಗೆ ಅದ್ದಿ ಉರೂಟು ಅಪ್ಪ ಹಾಂಗೆ ಲಟ್ಟುಸೆಕ್ಕು.
ಮತ್ತೆ ಅದರ ಕಾವಲಿಗೆಗೆ ಅಥವಾ ಈಗಾಣ ತವಾಕ್ಕೆ ಹಾಕಿ ನಸೂ ಕೆಂಪು ಅಪ್ಪನ್ನಾರ  ಬೇಯಿಷೆಕ್ಕು.
ಇದಕ್ಕೆ ಕೂಡ್ಲೆ ಕಾಯಿ ಚಟ್ನಿ,ಬೆಣ್ಣೆ,ನೀರುಳ್ಳಿತುಂಡು, ಅಥವಾ ಗಸಿ ಮಾಡಿದರೆ ತಿಂಬಲೆ ಲಾಯಿಕ ಆವ್ತು.
ಇನ್ನು ಇದರ್ಲಿ ಬೇರೆ ರೀತಿಲಿ ಮಾಡುವ ವಿಧಾನಂಗ ಇದ್ದರೆ ತಿಳುಶಿ ಆತೋ?

ಓ  ಮೊನ್ನೆ ಮೆಡ್ರಾಸಿಲಿಪ್ಪ ನೆಕ್ರಾಜೆ ಕೂಸಿನ ಮನಗೆ ಎಂಗ ಹೋಗಿ ಬಪ್ಪಗ ದಾರಿ ನಡೂಕೆ ಪರೋಟ ಮಾಡುದರ ಅಜ್ಜಕಾನ ಬಾವ ಮೊಬೈಲಿಲಿ ವೀಡ್ಯ ತೆಗದ್ದು…

ಪರೋಟ , 3.3 out of 10 based on 3 ratings
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 47 ಒಪ್ಪಂಗೊ

 1. ನೆಗೆಗಾರ°

  ಆ ವೀಡ್ಯಲ್ಲಿಪ್ಪ ಪರೋಟಕ್ಕೆ ಉಪ್ಪೇ ಹಾಕದ್ರೂ ಉಪ್ಪುಪ್ಪು ಇರ್ತಡ!
  – ಉಮ್ಮ, ಅಜ್ಜಕಾನಬಾವ° ಹೇಳಿದ್ದು.

  [Reply]

  ಶ್ರೀಶಣ್ಣ

  ಶ್ರೀಶ. ಹೊಸಬೆಟ್ಟು Reply:

  ಸ್ವಂತ ಅನುಭವವೋ ಎಂತ :) :)

  [Reply]

  ಬೈಲಕರೆ ಅಜ್ಜ Reply:

  ನಿಂಗ ಎಂತಕೆ ಹೀಂಗೆ ಜಗಳ ಮಾಡುವದೋ? ಎನ್ನ ಪುಳ್ಳಿ ಪರೋಟ ಮಾಡುತ್ಸು ಹೇಂಗೆ ಹೇಳಿರೆ ನಿಂಗ ಕುಡಿತ್ತ ಸುದ್ದಿ ಮಾತಾಡುವದು ಎಂತಕೆ..

  [Reply]

  VA:F [1.9.22_1171]
  Rating: 0 (from 0 votes)
  ಬಲ್ನಾಡುಮಾಣಿ

  ಆದರ್ಶ Reply:

  {ಉಪ್ಪೇ ಹಾಕದ್ರೂ ಉಪ್ಪುಪ್ಪು ಇರ್ತಡ!}

  ಅಪ್ಪಡ ನಗೆಗಾರಣ್ಣೋ!! ಜಾಸ್ತಿ ಬೆಗರಿ ಅಪ್ಪದ್ದೆ ಉಪ್ಪು ಹಾಕದ್ದರುದೆ ಸುಧಾರ್ಸುಲಾವುತ್ತಡ್ಡ!! 😉

  [Reply]

  ಶ್ರೀಶಣ್ಣ

  ಶ್ರೀಶ.ಹೊಸಬೆಟ್ಟು Reply:

  ಏ ಬಲ್ನಾಡು ಮಾಣಿ. ನೀನು ಹೀಂಗೆಲ್ಲಾ ಹೇಳಿರೆ ಜೆಂಬಾರಲ್ಲಿ ಹೋಗಿ ಉಂಬದು ಹೇಂಗೆ? ನೀನು ಬಳುಸಿರೂ ಹಾಂಗೆ ಅವ್ತಡ!!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣವಿನಯ ಶಂಕರ, ಚೆಕ್ಕೆಮನೆvreddhiಅಕ್ಷರದಣ್ಣಅನಿತಾ ನರೇಶ್, ಮಂಚಿಪೆಂಗಣ್ಣ°ಪುತ್ತೂರುಬಾವಶುದ್ದಿಕ್ಕಾರ°ಅಕ್ಷರ°ಶಾಂತತ್ತೆವಾಣಿ ಚಿಕ್ಕಮ್ಮಶ್ಯಾಮಣ್ಣವಿಜಯತ್ತೆಗಣೇಶ ಮಾವ°ಪ್ರಕಾಶಪ್ಪಚ್ಚಿಪೆರ್ಲದಣ್ಣಅಜ್ಜಕಾನ ಭಾವವೆಂಕಟ್ ಕೋಟೂರುಸಂಪಾದಕ°ಚೂರಿಬೈಲು ದೀಪಕ್ಕಚೆನ್ನೈ ಬಾವ°ಸರ್ಪಮಲೆ ಮಾವ°ಕೆದೂರು ಡಾಕ್ಟ್ರುಬಾವ°ಎರುಂಬು ಅಪ್ಪಚ್ಚಿಮಂಗ್ಳೂರ ಮಾಣಿದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ