ಸೊಳೆ ಖಾರ ಬೆಂದಿ

October 9, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೊಳೆ ಖಾರ ಬೆಂದಿ

ಬೇಕಪ್ಪ ಸಾಮಾನುಗೊ:

 • 3 ಕಪ್(ಕುಡ್ತೆ) ನೀರು ಸೊಳೆ
 • ಚಿಟಿಕೆ ಅರುಶಿನ ಹೊಡಿ
 • 1/4 ಚಮ್ಚೆ ಮೆಣಸಿನ ಹೊಡಿ
 • ಸಣ್ಣ ತುಂಡು ಅರುಶಿನ ಕೊಂಬು / 1/4 ಚಮ್ಚೆ ಅರುಶಿನ ಹೊಡಿ
 • ಸಣ್ಣ ದ್ರಾಕ್ಷೆ ಗಾತ್ರದ ಹುಳಿ(ಬೇಕಾದರೆ ಮಾತ್ರ)
 • 4-5 ಒಣಕ್ಕು ಮೆಣಸು
 • 1-1.25 ಕಪ್(ಕುಡ್ತೆ) ಕಾಯಿ ತುರಿ
 • 5-6 ಬೇನ್ಸೊಪ್ಪು
 • 5-6 ಎಸಳು ಬೆಳ್ಳುಳ್ಳಿ
 • 1 ಚಮ್ಚೆ ಸಾಸಮೆ
 • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
(ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.)

ನೀರು ಸೊಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಕೊರದ ನೀರು ಸೊಳೆ, ಮೆಣಸಿನ ಹೊಡಿ, ಚಿಟಿಕೆ ಅರುಶಿನ ಹೊಡಿ, ನೀರು ಹಾಕಿ ಪಾತ್ರಲ್ಲಿ ಬೇಶಿ.

ಕಾಯಿ ತುರಿ, ಅರುಶಿನ, ಒಣಕ್ಕು ಮೆಣಸು, ಹುಳಿಯ ಮಿಕ್ಸಿಲಿ ಹಾಕಿ ಬೇಕಾಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.

ಕಡದ ಮಸಾಲೆಯ ಬೆಂದ ಬಾಗಕ್ಕೆ ಹಾಕಿ ತೊಳಸಿ, ಲಾಯಿಕಲಿ ಕೊದುಶಿ.(ಉಪ್ಪು, ಹುಳಿ, ನೀರು ಬೇಕಾದರೆ ಹಾಕಿ.) ಕೊದುದ ಮತ್ತೆ ಬೆಂದಿಯ ಸಣ್ಣ ಕಿಚ್ಚಿಲ್ಲಿ 2 ನಿಮಿಷ ಮಡುಗಿ.

ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು.
ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಬೆಂದಿಗೆ ಹಾಕಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಇದು ತಿಂದು ಗೊಂತಿಲ್ಲೆ ಇದಾ. ಮಾಡಿ ನೋಡಕ್ಕಷ್ಟೇ.
  ಓಯ್…ಪೆಂಗಣ್ಣ ಭಾವೋ…. ಸೊಳೆ ಇದ್ದೋ ?

  [Reply]

  VA:F [1.9.22_1171]
  Rating: -1 (from 1 vote)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ಅಬ್ಬೆ ಮಾಡಿ ಕೊಟ್ಟದು, ಉ೦ಡದು ಎಲ್ಲ ನೆ೦ಪಾತು ಒ೦ದರಿ.. ಧನ್ಯವಾದ೦ಗೊ

  [Reply]

  VA:F [1.9.22_1171]
  Rating: 0 (from 0 votes)
 3. ಭಾಗ್ಯಶ್ರೀ

  ಸೊಳೆ ಬೆಂದಿ ಎನಗೆ ತುಂಬ ಇಷ್ತ.ಎಂಗಳು ಮಾಡ್ತೆಯೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಅನುಶ್ರೀ ಬಂಡಾಡಿಪುಣಚ ಡಾಕ್ಟ್ರುಚೆನ್ನೈ ಬಾವ°ಶೀಲಾಲಕ್ಷ್ಮೀ ಕಾಸರಗೋಡುಡೈಮಂಡು ಭಾವಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ಪೆಂಗಣ್ಣ°ಕಜೆವಸಂತ°ದೊಡ್ಡಭಾವಶರ್ಮಪ್ಪಚ್ಚಿಪೆರ್ಲದಣ್ಣಶ್ರೀಅಕ್ಕ°ಶೇಡಿಗುಮ್ಮೆ ಪುಳ್ಳಿಶಾ...ರೀತೆಕ್ಕುಂಜ ಕುಮಾರ ಮಾವ°ಚೆನ್ನಬೆಟ್ಟಣ್ಣವೆಂಕಟ್ ಕೋಟೂರುಎರುಂಬು ಅಪ್ಪಚ್ಚಿದೊಡ್ಡಮಾವ°ಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣದೊಡ್ಮನೆ ಭಾವಜಯಗೌರಿ ಅಕ್ಕ°ಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ