ಸೊಳೆ ರೊಟ್ಟಿ

September 18, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೊಳೆ ರೊಟ್ಟಿ

ಬೇಕಪ್ಪ ಸಾಮಾನುಗೊ:

 • 10-12 ಕಪ್(ಕುಡ್ತೆ) ನೀರು ಸೊಳೆ
 • 2 ಕಪ್ (ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಒಳ್ಳೆದು) ಅಥವಾ ಅಕ್ಕಿ ಹೊಡಿ
 • 1.5 ಕಪ್(ಕುಡ್ತೆ) ಕಾಯಿ ತುರಿ
 • 5-6 ಹಸಿಮೆಣಸು
 • 3/4-1 ಇಂಚು ಗಾತ್ರದ ಶುಂಠಿ
 • 4-5 ಕಣೆ ಬೇನ್ಸೊಪ್ಪು
 • 2 ದೊಡ್ಡ ನೀರುಳ್ಳಿ
 • ಎಣ್ಣೆ / ತುಪ್ಪ
 • 25 ಬಾಳೆ ಎಲೆ

ಮಾಡುವ ಕ್ರಮ:

ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳದು, ಲಾಯಿಕಲಿ ಹಿಂಡಿ ಮಡುಗಿ.
(ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.)

ಅಕ್ಕಿಯ 3-4 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ, ಲಾಯಿಕಲಿ ತೊಳದು ಮಡುಗಿ.ಬಾಳೆ ಕೀತುಗಳ ಲಾಯಿಕ ಉದ್ದಿ ಮಡುಗಿ. ಹಿಂಡಿ ಮಡುಗಿದ ನೀರು ಸೊಳೆ, ಬೇನ್ಸೊಪ್ಪು, ಹಸಿಮೆಣಸು, ಶುಂಠಿಯ ಮಿಕ್ಸಿಗೆ ಹಾಕಿ ಕ್ರಶ್ ಮಾಡಿ ಮಡುಗಿ.
ಅಕ್ಕಿಯ ರೆಜ್ಜ ನೀರು ಹಾಕಿ ಸಾಧಾರಣ ನೊಂಪಿಂಗೆ ಕಡೆರಿ. ಅದಕ್ಕೆ ಕ್ರಶ್ ಮಾಡಿದ ಸೊಳೆಯನ್ನೂ, 1 ಕುಡ್ತೆ ಕಾಯಿ ತುರಿಯನ್ನೂ
ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ. (ನೀರು ಹೆಚ್ಚಾದರೆ ರೆಜ್ಜ ಅಕ್ಕಿ ಹೊಡಿ ಬೆರುಸಿ.)

ನೀರುಳ್ಳಿಯ ಚೋಲಿ ತೆಗದು, ತೊಳದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.

ಕೊಚ್ಚಿದ ನೀರುಳ್ಳಿ, 1/2 ಕುಡ್ತೆ ಕಾಯಿ ತುರಿಯ ಹಿಟ್ಟಿಂಗೆ ಹಾಕಿ ಲಾಯಿಕಲಿ ಬೆರುಸಿ.
ರೆಜ್ಜ ಹಿಟ್ಟಿನ ತೆಕ್ಕೊಂಡು ಬಾಳೆ ಕೀತಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಹತ್ಸಿ.

ಕಾವಲಿಗೆಯ ಬೆಶಿ ಅಪ್ಪಲೆ ಮಡುಗಿ. ಕಾವಲಿಗೆ ಕಾದಪ್ಪಗ ಹತ್ಸಿ ಮಡುಗಿದ ರೊಟ್ಟಿಯ ಕವುಂಚಿ ಹಾಕಿ ಮುಚ್ಚಲು ಮುಚ್ಚಿ
ಸಾಧಾರಣ ಒಂದು ನಿಮಿಷ ಬೇಶಿ.(ಬಾಳೆ ಕೀತು ಬಾಡುವನ್ನಾರ.)

ಬಾಳೆ ಕೀತಿನ ತೆಗದು, 1 ಸಕ್ಕಣ ತುಪ್ಪ/ಎಣ್ಣೆ ಹಾಕಿ ಕವುಂಚಿ ಹಾಕಿ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.

ಬೆಶಿ ಬೆಶಿ ರೊಟ್ಟಿಯ ತೆಂಗಿನ ಎಣ್ಣೆ-ಬೆಲ್ಲ ಅಥವಾ ಸಾಂಬಾರು/ಬೆಂದಿ/ಚಟ್ನಿ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸೂಪರ್.
  ತೆಂಗಿನೆಣ್ಣೆ, ಬೆಲ್ಲ ಸೇರಿಸಿ ಪಟ್ಟಾಗಿ ಹೊಡವಲಕ್ಕು.
  (ಸದ್ಯಕ್ಕೆ ಸೊಳೆ ಇಲ್ಲದ್ದೇ ಕೊರತೆ)

  [Reply]

  VA:F [1.9.22_1171]
  Rating: +1 (from 1 vote)
 2. ಬೊಳುಂಬು ಮಾವ°

  ವಾವ್ ! ಕಾಂಬಗಳೇ ಕೊದಿ ಆವ್ತು ! ನೆಂಪು ಮಾಡಿದ ವೇಣಿಅಕ್ಕಂಗೆ ಧನ್ಯವಾದಂಗೊ. ಮಾಡುಸುವೋ ಹೇಳಿರೆ ನೀರು ಸೊಳೆ ಇಲ್ಲೇನೆ.

  [Reply]

  VA:F [1.9.22_1171]
  Rating: -1 (from 1 vote)
 3. ಸುಮನ ಭಟ್ ಸಂಕಹಿತ್ಲು.

  ತುಪ್ಪ + ಬೆಲ್ಲ ಸೇರ್ಸಿ ತಿನ್ನೆಕ್ಕು… ಎನಗೆ ತುಂಬಾ ಪ್ರೀತಿ… ಸೊಳೆ ರೊಟ್ಟಿ, ಇಲ್ಲಿ ಸಿಕ್ಕುತ್ತಿಲ್ಲೆನ್ನೆ?
  ಎಂಗೊ ಸಣ್ಣ ಇಪ್ಪಗ ಮನೆಲಿ ಹಲಸಿನಕಾಯಿ, ಸೊಳೆ, ಬೇಳೆ ಅಡಿಗೆ ಇದ್ದ ದಿನ ಅಪ್ಪ ಹೇಳುಗು…. “ಇದೆಲ್ಲ ಸ್ಪೆಷಲ್ ಅಡಿಗೆಗೊ, ವಿದೇಶಲ್ಲೂ ಸಿಕ್ಕ …”
  ಎಷ್ಟು ಸತ್ಯವಾದ ಮಾತು ಅಲ್ಲದಾ?

  [Reply]

  VA:F [1.9.22_1171]
  Rating: +2 (from 2 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಎನಗೆ ಬೆಂದಿಯೊಟ್ಟಿಂಗೆ ಆಗದ್ದೆ ಇಲ್ಲೆ. ರುಚೀ ಅಕ್ಕು.

  [Reply]

  VN:F [1.9.22_1171]
  Rating: 0 (from 2 votes)
 5. ಸುವರ್ಣಿನೀ ಕೊಣಲೆ
  Suvarnini Rao Konale

  ಎನಗೆ ತುಂಬ ಇಷ್ಟ ಇದು. ಬೆಣ್ಣೆ ಮತ್ತೆ ಬೆಲ್ಲದೊಟ್ಟಿಂಗೆ ಮೆಲ್ಲುಲೆ!!
  ಊರಿಲ್ಲಿ ಸಿಕ್ಕುಗು..ಹೋಪದೇ ಇಲ್ಲೆ ಈಗ. ಸಾಗರಲ್ಲಿ ಇಲ್ಲೆ ಈ ಬಗೆ :(
  ಇಲ್ಲಿಯೂ ಶುರು ಮಾಡೆಕು.

  [Reply]

  VA:F [1.9.22_1171]
  Rating: +1 (from 1 vote)
 6. ಚೆನ್ನೈ ಬಾವ°
  ಚೆನ್ನೈ ಭಾವ°

  ಹಾ°.. ಬಸಳೆ ಕೊದಿಲಿನೊಟ್ಟಿಂಗೆ ನಾಕು ರೊಟ್ಟಿ ಇತ್ತೆ ಕೊಟ್ಟಿಕ್ಕಿ.

  [Reply]

  VA:F [1.9.22_1171]
  Rating: -1 (from 1 vote)
 7. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಸೂ…..ಪರ್.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆದೇವಸ್ಯ ಮಾಣಿಅಜ್ಜಕಾನ ಭಾವಕಾವಿನಮೂಲೆ ಮಾಣಿವಿನಯ ಶಂಕರ, ಚೆಕ್ಕೆಮನೆಮುಳಿಯ ಭಾವಪವನಜಮಾವಜಯಗೌರಿ ಅಕ್ಕ°ವೇಣಿಯಕ್ಕ°ಮಾಲಕ್ಕ°ಒಪ್ಪಕ್ಕಕಜೆವಸಂತ°ಉಡುಪುಮೂಲೆ ಅಪ್ಪಚ್ಚಿದೀಪಿಕಾಹಳೆಮನೆ ಅಣ್ಣಪುತ್ತೂರುಬಾವಪ್ರಕಾಶಪ್ಪಚ್ಚಿಕೇಜಿಮಾವ°ಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ಶೀಲಾಲಕ್ಷ್ಮೀ ಕಾಸರಗೋಡುತೆಕ್ಕುಂಜ ಕುಮಾರ ಮಾವ°ಬಟ್ಟಮಾವ°ದೊಡ್ಮನೆ ಭಾವಡೈಮಂಡು ಭಾವಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ