ತೊಂಡೆಕಾಯಿ ಹುಳಿಮೆಣಸಿನ ಕೊದಿಲು

January 3, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತೊಂಡೆಕಾಯಿ ಹುಳಿಮೆಣಸಿನ ಕೊದಿಲು

ಬೇಕಪ್ಪ ಸಾಮಾನುಗೊ:

  • 25-30 ತೊಂಡೆಕಾಯಿ
  • 1/4 ಚಮ್ಚೆ ಅರುಶಿನ ಹೊಡಿ ಅಥವಾ ಸಣ್ಣ ತುಂಡು ಅರುಶಿನ
  • ಚಿಟಿಕೆ ಮೆಣಸಿನ ಹೊಡಿ
  • ದ್ರಾಕ್ಷೆ ಗಾತ್ರದ ಓಟೆ ಹುಳಿ
  • ದ್ರಾಕ್ಷೆ ಗಾತ್ರದ ಬೆಲ್ಲ (ಬೇಕಾದರೆ ಮಾತ್ರ)
  • 3-4 ಒಣಕ್ಕು ಮೆಣಸು
  • 3/4 -1 ಕಪ್ ಕಾಯಿತುರಿ
  • ರುಚಿಗೆ ತಕ್ಕಸ್ಟು ಉಪ್ಪು
  • 3-4 ಬೆಳ್ಳುಳ್ಳಿ (ಬೇಕಾದರೆ ಮಾತ್ರ)
  • 1/2 ಚಮ್ಚೆ ಸಾಸಮೆ
  • 5-6 ಬೇನ್ಸೊಪ್ಪು
  • 1-2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ತೊಂಡೆಕಾಯಿಯ ಲಾಯಿಕ ತೊಳದು, ತೊಟ್ಟು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಗುಂಡುಕಲ್ಲಿಲ್ಲಿ ಅಥವಾ ಇಕ್ಕುಳಲ್ಲಿ ಗುದ್ದೆಕ್ಕು/ಅರಚ್ಚೆಕ್ಕು.

ಪ್ರೆಶರ್ ಕುಕ್ಕರಿಲ್ಲಿ ಗುದ್ದಿದ ತೊಂಡೆಕಾಯಿ, ಚಿಟಿಕೆ ಅರುಶಿನ ಹೊಡಿ, ಮೆಣಸಿನ ಹೊಡಿ, ಉಪ್ಪು, ಬೆಲ್ಲ, ಹಾಕಿ 2 ವಿಸಿಲ್ ಬಪ್ಪನ್ನಾರ ಬೇಶಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಒಣಕ್ಕು ಮೆಣಸು, ಅರುಶಿನ ಹೊಡಿ/ಕೊಂಬು, ಹುಳಿ, ಬೇಕಾಸ್ಟು ನೀರು ಹಾಕಿ ನೊಂಪು ಕಡೆರಿ. ಕುಕ್ಕರಿನ ಪ್ರೆಶರ್ ಹೋದ ಮೇಲೆ, ಇದರ ಬೇಶಿದ  ಬಾಗಕ್ಕೆ ಹಾಕಿ ತೊಳಸಿ, ಕೊದುಶೆಕ್ಕು.(ಉಪ್ಪು, ನೀರು ಬೇಕಾದಸ್ಟು ಹಾಕಿ.)  ಸಣ್ಣ ಕಿಚಿಲ್ಲಿ ಒಂದು 5 ನಿಮಿಷ ಮಡುಗಿ.

ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಕೊದಿಲಿಂಗೆ ಹಾಕಿ. ಇದು ಅಶನ, ದೋಸೆ, ರೊಟ್ಟಿ, ಚಪಾತಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

  1. ಸಿಂಧೂ

    ಆಹಾ… ಎನಗೆ ಭಾರೀ ಪ್ರೀತಿ ಇದು…. ಎನ್ನ ಹಾಂಗೆ ಸರೀ ಉಂಬೋರಿಂಗೆ ೨ ಜೆನಕ್ಕೆ ಸಾಕಕ್ಕು.

    [Reply]

    VA:F [1.9.22_1171]
    Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿವೆಂಕಟ್ ಕೋಟೂರುಚೂರಿಬೈಲು ದೀಪಕ್ಕಶಾ...ರೀಕೆದೂರು ಡಾಕ್ಟ್ರುಬಾವ°ದೀಪಿಕಾಕೊಳಚ್ಚಿಪ್ಪು ಬಾವಗಣೇಶ ಮಾವ°ಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿನೀರ್ಕಜೆ ಮಹೇಶವೇಣಿಯಕ್ಕ°ಶ್ರೀಅಕ್ಕ°ಗೋಪಾಲಣ್ಣಡಾಗುಟ್ರಕ್ಕ°ವಸಂತರಾಜ್ ಹಳೆಮನೆಕಾವಿನಮೂಲೆ ಮಾಣಿಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ಪುಣಚ ಡಾಕ್ಟ್ರುರಾಜಣ್ಣಸರ್ಪಮಲೆ ಮಾವ°vreddhiಪುತ್ತೂರಿನ ಪುಟ್ಟಕ್ಕಮಾಲಕ್ಕ°ವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ