ಗರ್ಭಪಾತ: ಭಾಗ ೨

ಮನಸ್ಸಿನ ಒಳ ಅಶಾಂತಿ ಉಂಟಾದರೆ ಜೀವನವೇ ಬುಡಮೇಲು..ಅದೇ ಶಾಂತಸಾಗರಲ್ಲಿ ಅಶಾಂತಿ ಉಂಟಾದರೆ? ಜಪಾನಿಲ್ಲಿ ಆದಹಾಂಗೆ ಎಲ್ಲವೂ ಒಂದೇ ಕ್ಷಣಲ್ಲಿ ಬುಡಮೇಲು….. ಅದೆಂತಗೆ ಹಾಂಗೆ? ಪ್ರಳಯ ಹೇಳಿರೆ ಇದೇ ಅಲ್ಲದಾ? ಪ್ರಕೃತಿಮಾತೆಗೆ ನಾವು ಕೊಟ್ಟ ಹಿಂಸೆ ಹೆಚ್ಚಾತು. ಎಲ್ಲವನ್ನೂ ಎಲ್ಲರೂ ಒಂದು ಮಿತಿಯ ವರೆಗೆ ತಡಕ್ಕೊಂಬಲಕ್ಕು…ಮತ್ತೆ ಹೀಂಗಿಪ್ಪದೆಂತಾರು ಅಪ್ಪದೇ ಅಲ್ಲದಾ? ಅಲ್ಲದ್ದರೆ ಅಮ್ಮ ತನ್ನ ಮಕ್ಕಳನ್ನೇ ಬಲಿ ತೆಕ್ಕೊಂಬದರ ನಂಬುಲೆ ಸಾಧ್ಯವಾ? ಅಷ್ಟು ಹಿಂಸೆ-ಬೇನೆಯ ನಾವು ಭೂಮಿದೇವಿಗೆ ಕೊಟ್ಟಿದಿಲ್ಲೆಯಾ? ಅಮ್ಮಾ ಹೇಳ್ತ ಶಬ್ದಕ್ಕೆ ಅರ್ಥಕ್ಕೆ ಅವಮಾನ ಮಾಡಿದ್ದಿಲ್ಲೆಯಾ? ಎಲ್ಲ ಬಿಟ್ಟು ಹೆತ್ತ ಅಮ್ಮನನ್ನೇ ಮನೆಂದ ಹೆರ ಹಾಕುವಲ್ಲಿಗೆ ಎತ್ತಿದ್ದು ನಮ್ಮ ಜೀವನ… 🙁

ಇದೇ ಅಮ್ಮ ..ನಮ್ಮ ಈ ಭೂಮಿಗೆ ತಪ್ಪಲೆ ಎಷ್ಟು ಕಷ್ಟಪಟ್ಟಿಕ್ಕು..ಎಂತೆಲ್ಲ ಅಪಾಯವ ಎದುರ್ಸಿಕ್ಕು…ಅಲ್ಲದಾ? ಹುಟ್ಟುದಕ್ಕಿಂತ ಮೊದಲೇ ನಾವು ’ಇಲ್ಲದ್ದೆ’ ಆವ್ತಿತು ! ಆದರೆ ಹಾಂಗೆ ಅಪ್ಪಲೆ ಬಿಟ್ಟಿದಿಲ್ಲೆ, ಅಮ್ಮ. ಆದರೂ ಕೆಲವು ಸರ್ತಿ ಕೆಲವು ತಿಂಗಳು ಕಳುದು ಮನೆಲಿ ಮನಸ್ಸಿಲಿ ನಗು ಸಂತೋಷ ತಪ್ಪ ಪುಟಾಣಿ ಜೀವಿ..ಜೀವ ಕಳಕ್ಕೊಂಡತ್ತು ಹೇಳಿಯಪ್ಪಗ ಎಷ್ಟು ದಿನಗಳ ವರೇಗೆ ಮೌನವಾಗಿ ರೋಧಿಸಿಕ್ಕು….ಅಲ್ಲದಾ? ಅಪ್ಪು, ಆನು ಹೇಳಿದ್ದು ಗರ್ಭಪಾತದ ಬಗ್ಗೆಯೇ…

ಕಳದವಾರವೇ ನಾವು ಈ ವಿಚಾರದ ಬಗ್ಗೆ ಮಾತಾಡಿದ್ದು. ಈ ವಾರ  spontaneous abortion- ತನ್ನಷ್ಟಕ್ಕೇ ಅಪ್ಪ ಗರ್ಭಪಾತದ ಬಗ್ಗೆ ವಿವರವಾಗಿ ತಿಳ್ಕೊಂಬ.

ಕಾರಣಂಗೊ:

 • Genetic factors/ಅನುವಂಶೀಯತೆ: ಶೇಕಡ 50ರಷ್ಟು ಗರ್ಭಪಾತಂಗೊಕ್ಕೆ ವರ್ಣತಂತುಗಳಲ್ಲಿ (chromosome) ಅಪ್ಪಂತಹ ಬದಲಾವಣೆಯೇ ಕಾರಣ.
 • Endocrine factors/ಹಾರ್ಮೋನುಗಳ ಏರುಪೇರು: ಥೈರಾಯ್ಡ್ ಗ್ರಂಥಿಯ ಸಮಸ್ಯೆ, ಡಯಾಬಿಟೀಸ್ ಇತ್ಯಾದಿ ಸಮಸ್ಯೆ ಇದ್ದಂತಹ ಸಂದರ್ಭಲ್ಲಿ ಗರ್ಭಪಾತ ಅಪ್ಪ ಸಾಧ್ಯತೆ ಇದ್ದು.
 • Anatomical abnormalities/ಶರೀರ ರಚನೆಲಿ ಇಪ್ಪ ತೊಂದರೆಗೊ : ಗರ್ಭಕೋಶ ಅಥವಾ ಗರ್ಭಕೋಶದ ದ್ವಾರದ (cervix) ರಚನೆ ಸರಿ ಇಲ್ಲದ್ದರೆ. ಅಥವಾ ಗರ್ಭಕೋಶಲ್ಲಿ ಯಾವುದೇ ಗಡ್ಡೆಗಳ ಹಾಂಗಿದ್ದ ಬೆಳವಣಿಗೆಗೊ ಇದ್ದರೆ.
 • Infections/ಸೋಂಕು: 5% ಗರ್ಭಪಾತಂಗೊಕ್ಕೆ ಸೋಂಕುಗಳೇ ಕಾರಣ.
 • Immunological factors/ದೇಹದ ರೋಗನಿರೋಧಕ ಶಕ್ತಿಲಿ ಇಪ್ಪಂತಹ ತೊಂದರೆಗೊ.
 • Maternal ill-health: ಅಮ್ಮಂಗೆ ಇಪ್ಪಂತಹ ಆರೋಗ್ಯದ ಸಮಸ್ಯೆಗೊ. ಉದಾಹರಣೆಗೆ  ಹೃದಯಕ್ಕೆ ನೆತ್ತರಿಂಗೆ ಸಂಬಂಧಪಟ್ಟ ಸಮಸ್ಯೆಗೊ.
 • Blood group incompatability/ನೆತ್ತರಿನ ಗುಂಪಿಲ್ಲಿ ಹೊಂದಾಣಿಕೆ ಆಗದ್ದೆ ಇಪ್ಪದು: ‘Rh’ factor- ನೆತ್ತರಿಲ್ಲಿ ನಾವು ’+’ ಅಥವಾ ’-’ ಹೇಳಿ ಹೇಳ್ತ ಅಂಶಂಗಳ ಹೊಂದಾಣಿಕೆ ಆಗದ್ದೆ ಇಪ್ಪದು. ಅಥವಾ A,B,O ಗುಂಪುಗಳ ಹೊಂದಾಣಿಕೆ ಆಗದ್ದೆ ಬಪ್ಪದು.
 • ಭ್ರೂಣ ಇಪ್ಪ ಚೀಲ ಛಿದ್ರ ಅಪ್ಪದು.
 • ಬಸರಿಗೆ ಮದ್ಯ ಸೇವನೆ,ಸಿಗರೇಟು ಎಳವ ಅಭ್ಯಾಸ ಇದ್ದರೆ.
 • ಅಗತ್ಯ ಪೋಷಕಾಂಶಂಗೊ ಬಸರಿಯಕ್ಕೊಗೆ ಸಿಕ್ಕದ್ದೆ ಇಪ್ಪದು.
 • Unexplained/ ವಿವರಣೆಯೇ ಇಲ್ಲದ್ದ ಕಾರಣ !! : ಕೆಲವು ಸರ್ತಿ ಮೇಲೆ ಹೇಳಿದ ಯಾವುದೇ ಕಾರಣ ಇರ್ತಿಲ್ಲೆ, ಅಥವಾ ಕಂಡು ಹಿಡಿವಲೆ ಎಡಿಯದ್ದ ಯಾವುದೋ ಕಾರಣಂದಾಗಿ ಗರ್ಭಪಾತ ಆವ್ತು.

ಮೊದಲನೇ ಮೂರು ತಿಂಗಳಿಲ್ಲಿ ಅಪ್ಪ ಗರ್ಭಪಾತಂಗೊಕ್ಕೆ ಕಾರಣಂಗೊ: Genetic factors, Endocrine factors, Immunological factors, Infections & Unexplained.

ನಾಲ್ಕರಿಂದ ಆರನೇ ತಿಂಗಳಿಲ್ಲಿ ಅಪ್ಪ ಗರ್ಭಪಾತಂಗೊಕ್ಕೆ ಕಾರಣಂಗೊ: Anatomical abnormalities, Maternal ill-health & Unexplained.

ವಿಧಂಗೊ:

1)      Threatened abortion: ಇದರ್ಲಿ ಗರ್ಭಪಾತದ ಪ್ರಕ್ರಿಯೆ ಶುರು ಆಗಿರ್ತು, ಆದರೆ ಅದರ ತಡವಲೆ ಸಾಧ್ಯ ಇರ್ತು. ಇದರ ಹೆಸರಿನ ಪ್ರಕಾರ ಅರ್ಥ ಮಾಡಿಗೊಂಡರೆ, ಹೆದರ್ಸುಲೆಬೇಕಾಗಿ ಶುರು ಅಪ್ಪಂತಹ ಲಕ್ಷಣಂಗೊ.

 • ಸಣ್ಣಕ್ಕೆ ಸೊಂಟಬೇನೆ, ಕಿಬ್ಬೊಟ್ಟೆ ಬೇನೆಯೂ ಇಕ್ಕು.
 • ಮುಖ್ಯವಾಗಿ ಯೋನಿದ್ವಾರವಾಗಿ ರಕ್ತಸ್ರಾವ ಶುರು ಆವ್ತು.
 • ರಕ್ತಸ್ರಾವ ಶುರುಆದಮತ್ತೆ ಹೊಟ್ಟೆಬೇನೆ ಜೋರಕ್ಕು.

ಹೀಂಗೆಂತಾರು ಆದಪ್ಪಗ ಕೂಡ್ಲೇ ವೈದ್ಯರ ಕಾಣೆಕಾದ್ದು ಅಗತ್ಯ.

ಇದಕ್ಕೆ ಮುಖ್ಯ ಕಾರಣ ಪೋಷಕಾಂಶಂಗಳ ಕೊರತೆ ಅಥವಾ ಸರಿಯಾಗಿ ವಿಶ್ರಾಂತಿ ಇಲ್ಲದ್ದೆ ಇಪ್ಪದು ಇತ್ಯಾದಿ. ಅಥವಾ unexplained ಆಗಿಪ್ಪಲೂ ಸಾಕು !

 • ಪರಿಹಾರಲ್ಲಿ ಮುಖ್ಯವಾಗಿ ಇಪ್ಪದು ’ವಿಶ್ರಾಂತಿ’. ರಕ್ತಸ್ರಾವ ನಿಲ್ಲುವನ್ನಾರ ವಿಶ್ರಾಂತಿ ತೆಕ್ಕೊಳ್ಳೆಕಾದ್ದು ಅಗತ್ಯ. ಮತ್ತುದೇ ತೆಕ್ಕೊಳ್ಳೆಕಾದ ಅಗತ್ಯ ಹೆಚ್ಚು ಇಲ್ಲೆ.
 • ಅದಲ್ಲದ್ದೆ ಸರಿಯಾದ ಪೋಷಕಾಂಶ ಸಹಿತವಾದ ಆಹಾರ ತೆಕ್ಕೊಳ್ಳೆಕು.
 • ಬೇನೆಗೆ ಮದ್ದು ಕೊಡ್ತ ಕ್ರಮ ಇದ್ದು.
 • ಇಂತಹ ಸಂದರ್ಭಲ್ಲಿ ಬಸರಿ ಯಾವುದೇ ಹೆಚ್ಚಿನ ಕೆಲಸ ಮಾಡುಲಾಗ, ಭಾರ ನೆಗ್ಗುದು, ಹೆಚ್ಚು ಹೆಚ್ಚು ವ್ಯಾಯಾಮ ಮಾಡುದು ಇತ್ಯಾದಿ ನಿಲ್ಲುಸೆಕು.

ಅರ್ಧಂದಲೂ ಕಮ್ಮಿ ಸಂದರ್ಭಲ್ಲಿ ಮುಂದೆ ತೊಂದರೆ ಬತ್ತಿಲ್ಲೆ.  ಉಳುದ ಸಂದರ್ಭಲ್ಲಿ ಗರ್ಭಪಾತ ಉಂಟಾವ್ತು. ಇನ್ನೂ ಕೆಲವು ಸಂದರ್ಭಲ್ಲಿ ಭ್ರೂಣಲ್ಲಿ ಬೆಳವಣಿಗೆ ಆಗದ್ದೆ ಇಪ್ಪದು, ಬುದ್ಧಿಮಾಂದ್ಯತೆ, ಅವಧಿಂದಮೊದಲೇ ಹೆರಿಗೆ ಅಪ್ಪದು ಇತ್ಯಾದಿ ಸಮಸ್ಯೆಗೊ ಉಂಟಪ್ಪ ಸಾಧ್ಯತೆಗೊ ಇದ್ದು.

2) Inevitable abortion: ಇಲ್ಲಿ ಗರ್ಭಪಾತದ ಪ್ರಕ್ರಿಯೆ ಸರಿಮಾಡುಲೆ ಎಡಿಯದ್ದಷ್ಟರಮಟ್ಟಿಂಗೆ ಮುಂದುವರೆದಿರ್ತು.

ಹೆಚ್ಚಾದ ರಕ್ತಸ್ರಾವ ಮತ್ತೆ ಹೊಟ್ಟೆ ಬೇನೆ ಇದರ ಮುಖ್ಯ ಲಕ್ಷಣಂಗೊ. ವೈದ್ಯಕೀಯ ಪರೀಕ್ಷೆ ಮಾಡುವಗ ಗರ್ಭಕೋಶದ ದ್ವಾರದ ಮೂಲಕ ಗರ್ಭ ಹೆರ ಬಂದದು ಗೊಂತಾವ್ತು.

 • ಇದು ಮೂರು ತಿಂಗಳಿಂದ ಮೊದಲೇ ಆದರೆ ವೈದ್ಯಕೀಯ ರೀತಿಲಿ ಗರ್ಭಪಾತವ ಮಾಡ್ಸುದರ ಮೂಲಕ ಹೆಚ್ಚಿನ ರಕ್ತಸ್ರಾವವ ತಡವಲಕ್ಕು.
 • ನಾಲ್ಕು ತಿಂಗಳು ಕಳದಮೇಲೆ ಹೀಂಗಿದ ಸಂದರ್ಭ ಉಂಟಾದರೆ ಸಹಜ ಹೆರಿಗೆ ಅಪ್ಪ ರೀತಿಲಿಯೇ ಭ್ರೂಣವ ಹೆರ ತೆಗೆಯಕಾವ್ತು.
 • ಇದರೊಟ್ಟಿಂಗೆ ಆರೋಗ್ಯವ ಲಾಯ್ಕಕ್ಕೆ ನೋಡಿಗೊಳ್ಳೆಕಾದ್ದೂ ತುಂಬಾ ಅಗತ್ಯ.

3)      Complete abortion:  ಹೆಸರೇ ಹೇಳ್ತ ಹಾಂಗೆ ಇದರ್ಲಿ ಗರ್ಭಪಾತ ಉಂಟಾವ್ತು. ಸಂಪೂರ್ಣವಾಗಿ ಗರ್ಭ ಮತ್ತೆ ಅದಕ್ಕೆ ಸಂಬಂಧಿಸಿದ ಅಂಶಂಗೊ ಗರ್ಭಕೋಶಂದ ಹೆರ ಬಂದಿರ್ತು.

ಗರ್ಭಪಾತ ಅಪ್ಪಗ ಬೇನೆ ಜೋರು ಇದ್ದರೂ ಕೂಡ, ಗರ್ಭಪಾತದ ಪ್ರಕ್ರಿಯೆ ಮುಗುದಪ್ಪಗ ಬೇನೆ ಕಮ್ಮಿ ಆವ್ತು. ಅಲ್ಲದ್ದೆ ರಕ್ತಸ್ರಾವವೂ ನಿಧಾನಕ್ಕೆ ನಿಲ್ಲುತ್ತು.

ಇದಲ್ಲದ್ದೆ ವೈದ್ಯಕೀಯವಾಗಿ ಪರೀಕ್ಷೆ ಮಾಡುದರ ಮೂಲಕ ಸಂಪೂರ್ಣವಾಗಿ ಗರ್ಭಪಾತ ಆದರ ತಿಳ್ಕೊಂಬಲಕ್ಕು.

ಗರ್ಭಪಾತಲ್ಲಿ ಇನ್ನೂ ಮೂರು ವಿಧಂಗೊ ಇದ್ದು, ಅದರ ನಾವು ಇನ್ನಾಣವಾರ ನೋಡುಂವ, ಆಗದಾ? ಗರ್ಭಪಾತ ಹೇಳ್ತ ಶಬ್ದವ ಕೇಳುವಗಲೇ ಮನಸ್ಸಿಲ್ಲಿ ಏನೋ ಒಂದು ರೀತಿಯ ಹೆದರಿಕೆ ಉಂಟಾವ್ತು..ಅಲ್ಲದಾ? ಹೀಂಗಿಪ್ಪಗ ಅದರ ಅನುಭವಿಸುವವಕ್ಕೆ ಎಷ್ಟರಮಟ್ಟಿಂಗೆ ಬೇನೆ ಆಗ? ಅನಿವಾರ್ಯವಾಗಿ ಇಂತಹ ಬೇನೆಯ ಅನುಭವಿಸೆಕಾಗಿ ಬಪ್ಪ ಎಲ್ಲ ಅಮ್ಮಂದ್ರಿಂಗೆ ದೇವರು ಶಕ್ತಿ ಕೊಡಲಿ. ಅದರೊಟ್ಟಿಂಗೆ ಮತ್ತೊಂದು ದೊಡ್ಡ ಆಘಾತಕ್ಕೆ ಒಳಪಟ್ಟ ಪುಟ್ಟ ದೇಶ ಜಪಾನಿಂಗುದೇ ಒಳ್ಳೆದಾಗಲಿ ..ಅಲ್ಲಿಯಾಣವಕ್ಕೆ ಧೈರ್ಯಂದ ಎಲ್ಲವನ್ನೂ ಎದುರ್ಸುವ ಶಕ್ತಿ ಸಿಕ್ಕಲಿ ಹೇಳಿ ದೇವರ ಹತ್ತರೆ ಕೇಳಿಗೊಂಬ.

-ನಿಂಗಳ

ಸುವರ್ಣಿನೀ ಕೊಣಲೆ.

ಸುವರ್ಣಿನೀ ಕೊಣಲೆ

   

You may also like...

5 Responses

 1. ಚೆನ್ನೈ ಭಾವ says:

  ಟ ಠ ಡ ಢ. ಗುಡ್ ಇನ್ಫೋರ್ಮೆಟಿವ್. ಇನ್ನಾಣ ನಿಂಗಳ ಶುದ್ಧಿಗೆ ಕಾಯ್ತು.

 2. ರಘುಮುಳಿಯ says:

  ಡಾಗುಟ್ರಕ್ಕಾ,
  ಲೇಖನದ ಪ್ರಾರ೦ಭದ ಮಾತುಗೊ ವಿಷತಯದ ಘನತೆಯ ಹೆಚ್ಚುಸಿದ್ದು. ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದ.

 3. ಸುವರ್ಣಿನಿ ಡಾಗುಟ್ರಕ್ಕಂಗೆ ನಮಸ್ಕಾರಂಗೊ..
  ನಿಜವಾಗಿ ಒಂದು ಡಾಗುಟ್ರ ಸ್ಥಾನಲ್ಲಿ ನಿಂದು ಸಮಾಜದ ಕಣ್ಣೊಡೆಶುತ್ತ ಕಾರ್ಯ ಮಾಡ್ತಾ ಇದ್ದಿ. ಒಳ್ಳೆದೇ!
  ಡಾಗುಟ್ರ ಜೆವಾಬ್ದಾರಿಯ ಸರಿಯಾಗಿ ಅರ್ತ ಮಾಡಿಗೊಂಡಿದಿ ನಿಂಗೊ. ಒಳ್ಳೆದಾಗಲಿ!

  ಶುದ್ದಿ ಸುರುಮಾಡಿದ ರೀತಿ ಭಾರೀ ಇಷ್ಟ ಆತು.
  ಶುದ್ದಿಲಿ ಬತ್ತ ವೈಜ್ಞಾನಿಕ ಮಾಹಿತಿ ಕಂಡು ಕೊಶಿ ಆತು..

  ಇನ್ನಾಣದ್ದು ಬತ್ತಾ ಇರಳಿ..

  • Suvarnini Konale says:

   ಧನ್ಯವಾದಂಗೊ 🙂 ನಿಂಗಳ ಎಲ್ಲರ ಸಹಕಾರಂದ..ಪ್ರೀತಿಂದ ಹೀಂಗೇ ಇರಲಿ 🙂 ಇನ್ನೂ ಲಾಯ್ಕಿನ ಶುದ್ದಿಗೊ ಬರೆವ ಶಕ್ತಿ ದೇವರು ಕೊಡಲಿ 🙂

 4. ಚೆನ್ನೈ ಭಾವ says:

  ಅಪ್ಪಪ್ಪು… ‘ಕೊಡಲಿ’ ನಿಂಗೊಗೇ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *