ನಮ್ಮ ಉಸಿರಾಟ-ನಮ್ಮ ಆರೋಗ್ಯ

October 24, 2010 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 25 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣನ ಮದುವೆಗೆ ಬರೆಕು ಹೇಳಿ ತುಂಬಾ ಆಶೆ ಇತ್ತು…ರಜೆ ಹಾಕಿತ್ತಿದ್ದೆ ಇಪ್ಪತ್ತೊಂದಕ್ಕೆ, ಆದರೆ ಎಂತ ಮಾಡುದು, ಎಲ್ಲದಕ್ಕೂ ಯೋಗ ಬೇಕು… ಅಲ್ಲದಾ? ಒಪ್ಪಣ್ಣಂಗೂ ಅತ್ತಿಗೆಗೂ ಶುಭಾಶಯಂಗೊ..ದೇವರ,ಗುರುಗಳ ಆಶೀರ್ವಾದ ಸದಾ ಇರಲಿ…ಬೈಲಿನೋರ ಹಾರೈಕೆಯಂತೂ ಇದ್ದೇ ಇದ್ದು…. ಅವರ ಜೀವನ ಹಸಿರು ಹಸಿರಾಗಿ ಸಿರಿ ತುಂಬಿ ನೆಮ್ಮದಿಯ ಬೆಳಕು ಮನೆ-ಮನ ತುಂಬಲಿ”.

ಯೋಗ ಹೇಳುವಗ ನೆಂಪಾತು..ಸುಮಾರು ದಿನಂದ ಯಾವುದೇ ಯೋಗಾಭ್ಯಾಸದ ಬಗ್ಗೆ ಮಾತಾಡಿದ್ದೇ ಇಲ್ಲೆ ನಾವು !! ಒಂದೆರಡು ಆಸನಾಭ್ಯಾಸದ ಬಗ್ಗೆ ನಾವು ಅಂದು ತಿಳ್ಕೊಂಡಿದು. ಇಂದು ಉಸಿರಾಟದ ಬಗ್ಗೆ ತಿಳ್ಕೊಂಬ. ಉಸಿರಾಟದ ಬಗ್ಗೆ ಹೊಸತ್ತು ಎಂತ ಇದ್ದು? ಶ್ವಾಸ ತೆಕ್ಕೊಂಬದು, ಬಿಡುದು…ಆರೂ ಹೇಳಿ ಕೊಡೆಕ್ಕಾದ ಅಗತ್ಯವೇ ಇಲ್ಲೆ !! ಹುಟ್ಟಿದಾರಭ್ಯ ಮಾಡ್ತು ಅಥವಾ ತನ್ನಷ್ಟಕ್ಕೇ ಆವ್ತು !! ಅದಪ್ಪು, ಆದರೆ ಉಸಿರಾಟ ಮಾಡುಲೆ ಕೂಡ ಒಂದು ಕ್ರಮ ಇದ್ದು ಹೇಳಿರೆ ಸುಮಾರು ಜೆನಕ್ಕೆ ಆಶ್ಚರ್ಯ ಅಕ್ಕು ! ಪ್ರಾಣಾಯಾಮ, ಉಸಿರಾಟದ ವ್ಯಾಯಾಮ ಎಲ್ಲ ಇನ್ನಾಣ ವಿಷಯ, ಸಾಮಾನ್ಯ ಉಸಿರಾಟದ ಬಗ್ಗೆ ತಿಳ್ಕೊಂಬಲೆ ಬೇಕಾಷ್ಟು ಇದ್ದು. ವೈದ್ಯಕೀಯ ಅಭ್ಯಾಸ ಮಾಡಿದವಕ್ಕೆ ಗೊಂತಿಕ್ಕು, respiratory system ನ ಬಗ್ಗೆ ಕಲ್ತಷ್ಟೂ ಇರ್ತು. ಆಧುನಿಕ ವೈಜ್ಞಾನಿಕ ವಿಚಾರಂಗೊ ಅದಾದರೆ, ಇನ್ನು ಯೋಗಲ್ಲಿ ಉಸಿರಾಟದ ಬಗ್ಗೆ ಮುಗಿಯದ್ದಷ್ಟು ವಿಷಯಂಗೊ ಇದ್ದು. ಎನಗೆ ತಿಳುದ ಮಟ್ಟಿಂಗೆ ನಿಂಗೊಗೆ ವಿಷಯವ ತಿಳ್ಸುವ ಪ್ರಯತ್ನ ಮಾಡ್ತೆ.

ಎಲ್ಲಕ್ಕಿಂತ ಮೊದಲು ನಮ್ಮ ಉಸಿರಾಟ ನಡಶುವ ಅಂಗ ’ಶ್ವಾಸಕೋಶ ‘ದ ಬಗ್ಗೆ ರಜ್ಜ ತಿಳ್ಕೊಂಡು ಮತ್ತೆ ಮುಂದಾಣದ್ದಕ್ಕೆ ಹೋಪ. ನಮ್ಮ ಶ್ವಾಸಕೋಶ ಹುಟ್ಟುವಗ ಹೆಚ್ಚು ಕಮ್ಮಿ ಪಿಂಕ್ ಬಣ್ಣದ್ದಾಗಿರ್ತು, ನಾವು ಬೆಳೆದ ಹಾಂಗೆ ಕಲ್ಮಶಂಗೊ ಸೇರಿ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತು. ಇದು ಒಂದು ಮೆತ್ತಂಗೆ ಇಪ್ಪ ಅಂಗಾಂಶ. ಎಲ್ಲೋರಿಂಗೂ ಗೊಂತಿಪ್ಪ ಹಾಂಗೆ ಎದೆಗೂಡಿಲ್ಲಿ ಪಕ್ಕೆಲುಬುಗಳ ಒಳ ಸುರಕ್ಷಿತವಾಗಿ ಇರ್ತು :). ಇದರ ಮುಖ್ಯ ಕೆಲಸ ಉಸಿರಾಟ ಆದರೂ ಬೇರೆ ಸುಮಾರು ಪ್ರಯೋಜನಂಗೊ ಇದ್ದು.

ನಾವು ಮೂಗಿಂದ ಗಾಳಿಯ ಒಳ ತೆಕ್ಕೊಂಡಲ್ಲಿಂದ ಅದು ಕೊಳವೆ ಹಾಂಗಿದ್ದ trachea ದ ಮೂಲಕ ಎಡ ಮತ್ತೆ ಬಲ ಶ್ವಾಸಕೋಶಕ್ಕೆ ಹೋವ್ತು, ಅಲ್ಲಿ bronchus ಮತ್ತೆ bronchioles  ಹೇಳ್ತ ಕವಲುಗಳ ಮೂಲಕ ಸಣ್ಣ ಸಣ್ಣ ಶಾಖೆಗೊಕ್ಕೆ ಹೋವ್ತು, ಅಕೇರಿಗೆ ಆಲ್ವಿಯೋಲಸ್ ಹೇಳ್ತ ಸಣ್ಣ ಸಣ್ಣ ಬುಗ್ಗೆಗಳ ಹಾಂಗಿಪ್ಪ ಚೀಲಂಗೊಕ್ಕೆ ಹೋವ್ತು. ಇಲ್ಲಿಗೆ ಎತ್ತಿದ ಗಾಳಿಲಿಪ್ಪ ಆಮ್ಲಜನಕ [O2] ಶರೀರ ಒಳಾಂಗೆ ಸೇರ್ತು, ಮತ್ತೆ [CO2] ಇಂಗಾಲದ ಡೈ ಆಕ್ಸೈಡ್ ಶರೀರಂದ ಆಲ್ವಿಯೋಲಸ್ಸುಗಳ ಒಳಾಂಗೆ ತುಂಬುತ್ತು. ಇಷ್ಟಾದಮೇಲೆ ನಾವು ಉಸಿರು ಹೆರ ಹಾಕುವಗ ದೇಹಂದ ಹೆರ ಹೋವ್ತು.

ಮುಖ್ಯ ವಿಷಯಕ್ಕೆ ಬಪ್ಪ, ನಾವು ಉಸಿರು ಒಳ ತೆಕ್ಕೊಳ್ಳೆಕಾರೆ ಎದೆ ಮತ್ತೆ ಹೊಟ್ಟೆಯ ಮಧ್ಯೆ ಇಪ್ಪ ವಫೆ (diaphragm) ಹೇಳ್ತ ಸ್ನಾಯು ಕೆಳಾಂಗೆ ಹೋಯಕಾತು ಅಂಬಗ ನಮ್ಮ ಹೊಟ್ಟೆ ರಜ್ಜ ಮುಂದಂಗೆ ಬತ್ತು, ಒಟ್ಟಿಂಗೇ ಪಕ್ಕೆಲುಬುಗಳ ನಡೂಕೆ ಇಪ್ಪ ಸ್ನಾಯುಗಳೂ ಹೆರಾಣ ಹೊಡೆಂಗೆ ಚಲಿಸುತ್ತು. ಹೀಂಗೆ ಎದೆಯ ಭಾಗ ಹಿಗ್ಗುವಗ ಶ್ವಾಸಕೋಶದ ಹೆಚ್ಚಿನ ಎಲ್ಲ ಆಲ್ವಿಯೋಲೈಗಳಲ್ಲಿಯೂ ಗಾಳಿ ತುಂಬುತ್ತು. ಮತ್ತೆ ನಿಧಾನಕ್ಕೆ ಉಸಿರು ಹೆರಹಾಕುವಗ ಶ್ವಾಸಕೋಶ ಕುಗ್ಗುತ್ತು. ಇದು ಸಾಮಾನ್ಯವಾಗಿ ಅಪ್ಪ ಪ್ರಕ್ರಿಯೆ. ಇದರಲ್ಲಿ ಸರಿ ತಪ್ಪು ಇದ್ದಾ? ಹೇಳಿ ಒಂದು ಪ್ರಶ್ನೆ ಹುಟ್ಟುತ್ತು. ಇದರ ವಿಷಯವೇ ಆನು ಹೇಳುಲೆ ಹೆರಟದು !

ನಾವು ಸಾಮಾನ್ಯವಾಗಿ ಉಸಿರಾಟ ಮಾಡುವಗ ಶ್ವಾಸಕೋಶಲ್ಲಿಪ್ಪ ಎಲ್ಲಾ ಆಲ್ವಿಯೊಲೈಗಳ ಉಪಯೋಗ್ಸುತ್ತಿಲ್ಲೆ ! ಈ ಕಾರಣಂದಾಗಿ ಆಮ್ಲಜನಕ ಮತ್ತೆ  CO2ಗಳ ವಿನಿಮಯ ಕಮ್ಮಿ ಪ್ರಮಾಣಲ್ಲಿ ಆವ್ತು. ಇದಕ್ಕೆ ಕಾರಣ ಎಂತರ ಹೇಳಿರೆ ನಾವು ತುಂಬಾ ಸಣ್ಣ ಸಣ್ಣ ಶ್ವಾಸ ತೆಕ್ಕೊಂಬದು. ದಿನನಿತ್ಯದ ಗಡಿಬಿಡಿಲಿ ನಾವು ಇದರ ಬಗ್ಗೆ ಗಮನ ಕೊಡ್ತೇ ಇಲ್ಲೆ ! ಹೀಂಗೆ ಅಪ್ಪದರಿಂದ ನಮ್ಮ ದೇಹಲ್ಲಿಪ್ಪ CO2 ಹೆರ ಹೋಪದು ಕಮ್ಮಿ ಮತ್ತೆ ನಿಧಾನ ಆವ್ತು. ಒಂದು ಅಂಗವ ಒಂದು ಕೆಲಸಕ್ಕೆ ಹೇಳಿ ದೇವರು ಕೊಟ್ಟಮೇಲೆ ಸರಿಯಾಗಿ ಉಪಯೋಗ್ಸೆಡದ? ಯೋಗಲ್ಲಿ ಒಂದು ಮುಖ್ಯ ವಿಚಾರವ ಹೇಳ್ತವು, ನಾವು ಎಷ್ಟು ಕಮ್ಮಿ ಸರ್ತಿ ಉಸಿರು ಒಳ ಹೆರ ಮಾಡ್ತೋ ಅಷ್ಟು ನಮ್ಮ ಆಯುಷ್ಯ-ಆರೋಗ್ಯ ವೃದ್ಧಿ ಆವ್ತು ಹೇಳಿ. ಅದರ ಅರ್ಥ…ಎಷ್ಟು ನಿಧಾನಕ್ಕೆ ಉಸಿರಾಟ ಮಾಡ್ತೋ ಅಷ್ಟು ಒಳ್ಳೆದು ಹೇಳಿ. ಉದಾಹರಣೆಗೆ ಆಮೆ ! ಅದು ತುಂಬಾ ನಿಧಾನಕ್ಕೆ ಉಸಿರಾಟ ಮಾಡ್ತು ಹಾಂಗಾಗಿ ಅದರ ಆಯಸ್ಸುದೇ ಹೆಚ್ಚು, ಸುಮಾರು ಇನ್ನೊರು ಮುನ್ನೂರು ವರ್ಷ. ಅದೇ ನಾವು ನಾಯಿ,ಪುಚ್ಚೆ ಅಥವಾ ಮೊಲವ ನೋಡಿರೆ ಅದು ಎಷ್ಟು ಜೋರಿಲ್ಲಿ ಸಣ್ಣ ಸಣ್ಣ ಪ್ರಮಾಣಲ್ಲಿ ಉಸಿರಾಟ ಮಾಡ್ತು, ಹಾಂಗಾಗಿ ಆಯುಷ್ಯವೂ ಕಮ್ಮಿ. [ಇನ್ನೊಂದು ವಿಚಾರ ಹೇಳ್ತವು, ಒಂದೊಂದು ಜೀವಿಗೂ ಇಂತಿಷ್ಟೇ ಉಸಿರಾಟ ಹೇಳಿ ನಿಶ್ಚಯ ಆಗಿರ್ತಡ ! ಹಾಂಗಾಗಿ ನಾವು ಎಷ್ಟು ನಿಧಾನಕ್ಕೆ ಉಸಿರಾಟ ಮಾಡ್ತು ಹೇಳುದರ ಮೇಲೆ ನಮ್ಮ ಜೀವಿತದ ಅವಧಿ ನಿಶ್ಚಿತ ಆವ್ತಡ !]

ನಿಧಾನಕ್ಕೆ ಉಸಿರಾಟ ಮಾಡುದರ ಬಗ್ಗೆ ಗಮನಕೊಡ್ತಾ ಇದ್ದರೆ ಬೇರೆ ಕೆಲಸ ಅಪ್ಪದು ಹೇಂಗೆ ಅಲ್ಲದಾ? ಆದರೆ ದಿನಕ್ಕೆ ಇಂತಿಷ್ಟು ಹೊತ್ತು ಪುರ್ಸೊತ್ತಿಪಗ ನಾವು ಸರಿಯಾದ ಉಸಿರಾಟದ ಕ್ರಮವ ಅಭ್ಯಾಸ ಮಾಡಿರೆ ಉಪಕಾರ ಅಕ್ಕು. ಅಲ್ಲದ್ದೆ ಕೂದುಗೊಂಡು ಮಾಡ್ತ ಕೆಲಸ ಇಪ್ಪಗ ಅಥವಾ ನಡವಗ ನಿಧಾನಕ್ಕೆ ಉಸಿರಾಟ ಮಾಡ್ಲಕ್ಕು. ಇದರ ಅಭ್ಯಾಸ ಮಾಡ್ಲೆ ಯೋಗಲ್ಲಿ ಪ್ರಾಣಾಯಾಮಂಗೊ ಇದ್ದು. ಅದರ ಅಭ್ಯಾಸಂಗೊ ಕೇಳುವಗ ಸುಲಭ ಹೇಳಿ ಕಂಡರೂ ಮಾಡುವ ಕ್ರಮ ಗೊಂತಿಪ್ಪೋರ ಸಮ್ಮುಖಲ್ಲಿ ಕಲಿಯಕಾದ್ದು ಅಗತ್ಯ. ಇಂದು ಇಲ್ಲಿ ನಿಧಾನಕ್ಕೆ ಉಸಿರಾಟ ಅಭ್ಯಾಸ ಮಾಡ್ತ ಕ್ರಮವ ಹೇಳಿ ಕೊಡ್ತೆ. ಇದರ ಎಲ್ಲೋರೂ ಮಾಡ್ಲಕ್ಕು.

ಮಾಡುವ ಕ್ರಮ:

 • ನೆಲಲ್ಲಿ ಹಸೆ ಅಥವಾ ವಸ್ತ್ರ ಹಾಸಿ ಬೆನ್ನು,ಕೊರಳು ಸರ್ತಲ್ಲಿ ಇದ್ದುಗೊಂಡು ಕೂರೆಕು. ಎಡಿಗಾದವ್ವು ಪದ್ಮಾಸನ ಅಥವಾ ವಜ್ರಾಸನಲ್ಲಿ ಕೂದರೆ ಇನ್ನೂ ಒಳ್ಳೆದು. ಅಲ್ಲದ್ದರೆ ಸುಖಾಸನ (ನಾವು ಸಾಮಾನ್ಯವಾಗಿ ನೆಲಕ್ಕೆ ಕೂಬ ಕ್ರಮಲ್ಲಿ) ಕೂಬಲಕ್ಕು. ಕೆಳ ಕೂಬಲೆ ಕಷ್ಟ ಅಪ್ಪವ್ವು ಕುರ್ಚಿಲಿ ಕೂಬಲಕ್ಕು. ಹೇಂಗೆ ಕೂದರೂ, ಎಲ್ಲಿ ಕೂದರೂ ಮುಖ್ಯ ವಿಷಯ ಗಮನಲ್ಲಿರೆಕಾದ್ದು ಬೆನ್ನುದೇ ಕೊರಳುದೇ ಸರ್ತ ಇರೆಕ್ಕು.
 • ಕಣ್ಣು ಮುಚ್ಚೆಕು.
 • ನಾವು ಮಾಡ್ತಾ ಇಪ್ಪ ಉಸಿರಾಟವ ಗಮನಿಸುತ್ತಾ ಇರೆಕ್ಕು ರಜ್ಜ ಹೊತ್ತು. ಉಸಿರು ಒಳ ತೆಕ್ಕೊಂಬಗ ತಣ್ಣಂಗಿದ್ದ ಗಾಳಿ ಒಳ ಹೋಪದರ ಅನುಭವ ಆವ್ತು, ಹಾಂಗೆಯೇ ಹೆರ ಬಪ್ಪ ಉಸಿರು ಬೆಶಿ ಇಪ್ಪದರ ಅನುಭವವೂ ಆವ್ತು. ಹತ್ತು ಸರ್ತಿ ಉಸಿರಾಟ ನಡವಷ್ಟು ಹೊತ್ತು ಹೀಂಗೆ ಗಮನ ಕೊಡಿ.
 • ಮತ್ತೆ, ಒಂದು ಕೈಯ ಹೊಟ್ಟೆಯ ಮೇಲೆ ಮಡುಗಿ ಉಸಿರಾಟವ ಗಮನಿಸಿ, ಉಸಿರು ತೆಕ್ಕೊಂಬಗ ಹೊಟ್ಟೆ ಹೆರಾಂಗೆ, ಉಸಿರು ಬಿಡುವಗ ಹೊಟ್ಟೆ ಒಳಾಂಗೆ ಚಲಿಸುದು ಗೊಂತಾವ್ತು. ಇನ್ನು ಹತ್ತು ಉಸಿರಾಟ ಹೀಂಗೇ ಮಾಡಿ.
 • ಕೈಯ ಎದೆಯ ಮೇಲೆ ಮಡುಗಿ, ಮತ್ತೆ ಎದೆಯ ಚಲನೆಗೆ ಗಮನ ಕೊಡಿ.
 • ಇಷ್ಟಾದಮೇಲೆ ನಿಧಾನಕ್ಕೆ ಉಸಿರು ತೆಕ್ಕೊಳ್ತಾ ಹೊಟ್ಟೆಯ, ಎದೆಯ ಹೆರಾಂಗುದೇ…. ಉಸಿರು ಹೆರ ಬಿಡ್ತಾ ಹೊಟ್ಟೆ,ಎದೆ ಒಳಾಂಗುದೇ ನಾವೇ ಚಲನೆ ಮಾಡೆಕು… ಹೀಂಗೆ ಹತ್ತರಿಂದ ಇಪ್ಪತ್ತು ಸರ್ತಿ ಅಭ್ಯಾಸ ಮಾಡಿ.
 • ಇಲ್ಲಿ ಗಮನಿಸುವ ಮುಖ್ಯ ಅಂಶ ಎಂತರ ಹೇಳಿರೆ ಉಸಿರು ಒಳ ತೆಕ್ಕೊಂಬ ಹೊತ್ತು ಎರಡು ಸೆಕೆಂಡ್ ಆದರೆ , ಉಸಿರು ಹೆರ ಹಾಕುವ ಸಮಯ ನಾಲ್ಕು ಸೆಕೆಂಡ್ ಆಗಿರೆಕ್ಕು. ಉಚ್ಛ್ವಾಸದ ಸಮಯ ಶ್ವಾಸ ತೆಕ್ಕೊಂಬ ಸಮಯದ ಎರಡರಷ್ಟಿರೆಕು.[ Inhalation:Exhalation=1:2]
 • ದಿನಂದ ದಿನಕ್ಕೆ ಈ ಸಮಯವ ಹೆಚ್ಚು ಮಾಡ್ತಾ ಹೋಯಕು, ಸುರುವಾಣ ದಿನ ಎರಡು ಸೆಕೆಂಡ್ ಶ್ವಾಸ ತೆಕ್ಕೊಂಡು ನಾಲ್ಕು ಸೆಕೆಂಡ್ ಶ್ವಾಸ ಬಿಟ್ಟರೆ, ಮತ್ತಾಣ ದಿನ ಇದರ 3:6, 4:8, 5:10, ಹೀಂಗೆ ಹೆಚ್ಚಿಸುತ್ತಾ ಹೋಗಿ, ಎಷ್ಟು ಹೆಚ್ಚು ದೀರ್ಘ ಉಸಿರಾಟ ಎಡಿತ್ತೋ ಅಭ್ಯಾಸ ಮಾಡಿ, ಅಕೇರಿಗೆ ಒಂದು ನಿಮಿಷದಷ್ಟು ದೀರ್ಘ ಉಸಿರಾಟ ಅಥವಾ ಇನ್ನೂ ಹೆಚ್ಚು ಮಾಡ್ಲಾವ್ತು !
 • ದಿನಕ್ಕೆ ಕಾಲು ಗಂಟೆ ಉದಿಯಪ್ಪಗ, ಹೊತ್ತೋಪಗ ಇದರ ಅಭ್ಯಾಸ ಮಾಡಿ. ಪುರ್ಸೊತ್ತಿಪ್ಪಗ ಎಲ್ಲ ಮಾಡಿರೂ ಒಳ್ಳೆದು.
 • ಇರುಳು ಮನುಗಿದಮೇಲೆ ಒಂದು ಹತ್ತು ನಿಮಿಷ ಇದನ್ನೇ ಮಾಡಿರೆದೇ ಒಳ್ಳೆದು, ಬೆನ್ನಿನಮೇಲೆ ಸರ್ತ ಮನುಗಿ[ತಲೆಕೊಂಬು ಇಲ್ಲದ್ದೆ] ಇದರ ಅಭ್ಯಾಸ ಮಾಡಿ.
 • ಅಂತೆ ಟಿವಿ ನೋಡಿಗೊಂಡು ಕೂದಿಪ್ಪಗಳೂ ನಿಧಾನ ಉಸಿರಾಟ ಅಭ್ಯಾಸ ಮಾಡ್ಲಕ್ಕು.

ಇದರ ಪ್ರಯೋಜನಂಗೊ:

 • ಒಂದು ಎಂತರ ಹೇಳಿ ಆನು ಆಗಳೇ ಹೇಳಿದ್ದೆ, ಹೆಚ್ಚಿನ ಪ್ರಮಾಣಲ್ಲಿ  O2 –CO2 ವಿನಿಮಯ ಅಪ್ಪದು.
 • ಉಸಿರಾಟದ ಕ್ರಮ ಸರಿ ಆವ್ತು.
 • ರಕ್ತ ಪರಿಚಲನೆಯೂ ಸರಿಯಾಗಿ ಅಪ್ಪಲೆ ಸಹಾಯ ಮಾಡ್ತು.
 • ಉಸಿರಾಟದ ತೊಂದರೆ ಇಪ್ಪೋರಿಂಗೆ ಉಪಕಾರ ಆವ್ತು.
 • ಏಕಾಗ್ರತೆ ಹೆಚ್ಚು ಮಾಡ್ತು.
 • ದೇಹಕ್ಕೆ, ಮನಸ್ಸಿಂಗೆ ವಿಶ್ರಾಂತಿ ಕೊಡ್ತು.
 • ಮಾನಸಿಕವಾಗಿ ನೆಮ್ಮದಿಯ ಕೊಡ್ತು. ಒಂದು ಶ್ಲೋಕ ಹೀಂಗಿದ್ದು ಚಲೆ ವಾತೆ ಚಲಂ ಚಿತ್ತಂ ನಿಶ್ಚಲೆ ನಿಶ್ಚಲಂ ಭವೇತ್” ಹೇಳಿರೆ -ಗಾಳಿಯ ಚಲನೆ ಇದ್ದರೆ ಮನಸ್ಸೂ ಚಲಿಸುತ್ತು, ಗಾಳಿಯ ಚಲನೆ ನಿಂದಪ್ಪಗ/ಕಮ್ಮಿ ಇಪ್ಪಗ ಮನಸ್ಸೂ ಶಾಂತಿಂದ ಇರ್ತು.
 • ಹೊಟ್ಟೆಯ ಆಪರೇಷನ್ ಆದವಕ್ಕೆ ದೀರ್ಘ ಉಸಿರಾಟ ಮಾಡುಲೆ ಕಷ್ಟ ಅಪ್ಪ ಕಾರಣ ಈ ಅಭ್ಯಾಸವ ನಿಧಾನಕ್ಕೆ ಮಾಡುದರಿಂದ ಸಹಾಯ ಆವ್ತು.

ಇನ್ನು ಮೇಲೆ ಬೈಲಿಲ್ಲಿ ಶುದ್ದಿ ಮಾತಾಡುವಗ, ಪಟ್ಟಾಂಗದ ಸಮಯಲ್ಲಿ, ಎಂತಾರು ಶುದ್ದಿ ಓದುವಗ ನಿಧಾನಕ್ಕೆ ಉಸಿರಾಡುವ ಅಭ್ಯಾಸ ಮಾಡುವ, ಆಗದಾ?

ಮಹೇಶಣ್ಣಂಗೂ ಶ್ವೇತತ್ತಿಗೆಗೂ ಇನ್ನೊಂದರಿ ಶುಭ ಹಾರೈಕೆಗಳ ಹೇಳ್ತಾ ಇಂದ್ರಾಣ ಶುದ್ದಿಯ ಮುಗುಶುತ್ತೆ :).

-ನಿಂಗಳ, ಸುವರ್ಣಿನೀ ಕೊಣಲೆ.

ನಮ್ಮ ಉಸಿರಾಟ-ನಮ್ಮ ಆರೋಗ್ಯ, 4.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 25 ಒಪ್ಪಂಗೊ

 1. vaishali avinash
  Vaishali Bedrady

  ee lekhana olledayidu.. innu koodalu uduruva samasyeya pariharavu,dandruf nivaraneya bagge tilisuviro?

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಕೂದಲು ಉದುರುದಕ್ಕೆ ಒಂದು ಕಾರಣ ಆಹಾರ ಕ್ರಮ ಸರಿ ಇಲ್ಲದ್ದೆ ಇಪ್ಪದು. ಆಹಾರಲ್ಲಿ ಹೆಚ್ಚು nutrients ತೆಕ್ಕೊಂಡ್ರೆ, balanced diet ತೆಕ್ಕೊಳ್ಳೆಕು, ಇದರಿಂದಾಗಿ ಕೂದಲು ಉದುರುದು ನಿಲ್ಲುತ್ತು. ಅಲ್ಲದ್ದೆ ಅದಕ್ಕೆ ಆರೈಕೆ ಮಾಡೆಕು.. ಎಣ್ಣೆ ಕಿಟ್ಟುದು.. ತಲೆಗೆ ಮಸಾಜ್ ಮಾಡುದರಿಂದಲೂ ಕೂದಲು ಉದುರುದರ ತಡವಲೆ ಆವ್ತು. ತಲೆಹೊಟ್ಟಿನ ಸಮಸ್ಯೆ ಇದ್ದರೆ , ಕೂದಲು ಉದುರುಲೆ ಅದುದೇ ಒಂದು ಕಾರಣ. ತಲೆಹೊಟ್ಟಿಂಗೆ ಮೊಸರು ಹಾಕಿ ಒಂದರ್ಧ ಗಂಟೆ ಬಿಟ್ಟು ನೀರಿಲ್ಲಿ ತೊಳದರೆ ಉಪಕಾರ ಆವ್ತು. ವಾರಲ್ಲಿ ಒಂದರಿ ಹೀಂಗೆ ಮಾಡ್ಲಕ್ಕು. ಅಥವಾ ನಿಂಬೆಹುಳಿ ಎಸರಿನ ತಲೆಗೆ ಎಣ್ಣೆಯೊಟ್ಟಿಂಗೆ ಕಿಟ್ಟಿರೂ ತಲೆಹೊಟ್ಟು ಕಮ್ಮಿ ಅಪ್ಪಲೆ ಸಹಾಯ ಆವ್ತು, ಇದನ್ನೂ ತಲೆಗೆ ಹಾಕಿ ಒಂದರ್ಧಗಂಟೆ ಬಿಟ್ಟು ತೊಳೆಯಕ್ಕು. ಶಾಂಪೂ ಅಥವಾ ಸಾಬೂನಿನ ಬದಲು ಪ್ರಾಕೃತಿಕವಾಗಿ ಸಿಕ್ಕುವ ವಸ್ತುಗಳ ತಲೆಗೆ ಹಾಕಿರೆ ತುಂಬಾ ಒಳ್ಳೆದು.

  [Reply]

  VN:F [1.9.22_1171]
  Rating: +1 (from 1 vote)
 2. vaishali avinash
  Vaishali Bedrady

  dhanyavada akka…. ninga kotta salahe anu madi nodte… :)

  [Reply]

  VA:F [1.9.22_1171]
  Rating: 0 (from 0 votes)
 3. Ree madam nim maatu nange artha aagtilla pleas swalpa hubli/bengaluru bhaasheli bariri… Pleas…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಶೀಲಾಲಕ್ಷ್ಮೀ ಕಾಸರಗೋಡುಸರ್ಪಮಲೆ ಮಾವ°ಡಾಗುಟ್ರಕ್ಕ°ಶ್ಯಾಮಣ್ಣಪುತ್ತೂರಿನ ಪುಟ್ಟಕ್ಕಬೊಳುಂಬು ಮಾವ°ಕೆದೂರು ಡಾಕ್ಟ್ರುಬಾವ°ಕಾವಿನಮೂಲೆ ಮಾಣಿಒಪ್ಪಕ್ಕಪ್ರಕಾಶಪ್ಪಚ್ಚಿದೊಡ್ಮನೆ ಭಾವನೀರ್ಕಜೆ ಮಹೇಶಅಕ್ಷರದಣ್ಣಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿನೆಗೆಗಾರ°ವೇಣಿಯಕ್ಕ°ತೆಕ್ಕುಂಜ ಕುಮಾರ ಮಾವ°ಬಂಡಾಡಿ ಅಜ್ಜಿಕೇಜಿಮಾವ°ಚೂರಿಬೈಲು ದೀಪಕ್ಕಶೇಡಿಗುಮ್ಮೆ ಪುಳ್ಳಿಗೋಪಾಲಣ್ಣವಾಣಿ ಚಿಕ್ಕಮ್ಮಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ